ಚೆಕ್ ಬೌನ್ಸ್ ಅಥವಾ ಚೆಕ್ ಬ್ಯಾಂಕ್ ನಿಂದ ರಿಟರ್ನ್ ಪಡೆದರೆ ಏನೆಲ್ಲ ಕಾನೂನು ಕ್ರಮ ಇದೆ ತಿಳಿಯಿರಿ

ಉಪಯುಕ್ತ ಮಾಹಿತಿ

ನಮಸ್ತೆ ಪ್ರಿಯ ಸ್ನೇಹಿತರೆ, ನಮ್ಮ ಬಳಿ ಅತಿಯಾಗಿ ಹಣ ಇದ್ದಾಗ ಅದನ್ನು ನಾವು ಬ್ಯಾಂಕ್ ನಲ್ಲಿ ಸಂಗ್ರಹಣೆ ಮಾಡುತ್ತೇವೆ. ಇನ್ನೂ ದೊಡ್ಡದಾದ ಮಟ್ಟದಲ್ಲಿ ಹಣವನ್ನು ನಾವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಾಗದೆ ಇರುವ ಕಾರಣ ಅವುಗಳನ್ನು ನಾವು ಚೆಕ್ ಬರೆಯುವ ಮೂಲಕ ಹಣವನ್ನು ನೀಡಬಹುದು ಅಥವಾ ತೆಗೆದುಕೊಳ್ಳಬಹುದು. ಇನ್ನೂ ನೀವು ಕೆಲವೊಂದು ಬಾರಿ ಕೇಳಿರಬಹುದು, ಚೆಕ್ ಬೌನ್ಸ್ ಎಂಬ ಹೆಸರನ್ನು ಗೆಳೆಯರೇ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ಚೆಕ್ ಬೌನ್ಸ್ ಮತ್ತು ಅದಕ್ಕೆ ಪಾಲನೆ ಮಾಡಬೇಕಾದ ನಿಯಮಗಳು ನಿಮಗೆ ಯಾರದಾದರೂ ಚೆಕ್ ಅನ್ನು ಕೊಟ್ಟಿದ್ದರೆ ಯಾವ ರೀತಿಯಲ್ಲಿ ಬಳಕೆ ಮಾಡಬೇಕು ಮತ್ತು ಚೆಕ್ ಅನ್ನು ಬ್ಯಾಂಕ್ ನಲ್ಲಿ ನೀಡಿದಾಗ ಹಣ ಬರದೇ ಇದ್ದಾಗ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ಬ್ಯಾಂಕ್ ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ ಆಕ್ಟ್ 138 ನಲ್ಲಿ ಏನೆಂದು ಮಾಹಿತಿಯನ್ನು ತಿಳಿಸುತ್ತದೆ ಅಂತ ತಿಳಿಯೋಣ.

ನಿಮಗೆ ಬರುವ ಹಣವನ್ನು ಬೇರೆಯವರು ನಿಮಗೆ ಚೆಕ್ ಮೂಲಕ ನೀಡಿರುತ್ತಾರೆ, ಅದನ್ನು ನೀವು ಬ್ಯಾಂಕ್ ಮೂಲಕ ಪಡೆದುಕೊಳ್ಳಬೇಕು. ಇನ್ನೂ ಚೆಕ್ ಸ್ಲಿಪ್ ಅನ್ನು ಎಲ್ಲರೂ ನೋಡಿಯೇ ಇರುತ್ತೀರಿ ಅಲ್ವಾ ಗೆಳೆಯರೇ, ಅದರಲ್ಲಿ ಹೆಸರು ದಿನಾಂಕ ಎಲ್ಲ ರೀತಿಯ ಮಾಹಿತಿ ಮುಖ್ಯವಾಗಿ ಎಷ್ಟು ದುಡ್ಡು ನಿಮಗೆ ಬೇಕಾಗಿರುತ್ತದೆ ಅದನ್ನು ಅದರಲ್ಲಿ ಬರೆಯಲಾಗಿರುತ್ತದೆ. ಅದನ್ನು ನೀವು ಬ್ಯಾಂಕ್ ನಲ್ಲಿ ನೀಡಿದಾಗ ಅದರಲ್ಲಿ ಎಷ್ಟು ಹಣವನ್ನು ಬರೆದಿರುತ್ತೀರಿ ಅಷ್ಟು ಹಣವನ್ನು ಬ್ಯಾಂಕ್ ನವರು ನಿಮಗೆ ನೀಡಬೇಕಾಗುತ್ತದೆ. ಒಂದುವೇಳೆ ನಿಮ್ಮ ಚೆಕ್ ಅನ್ನು ಬ್ಯಾಂಕ್ ಸಿಬ್ಬಂದಿಯವರು ನಿರಾಕರಿಸಿ ಅದನ್ನು ವಾಪಸ್ಸು ಕೊಟ್ಟರೆ ಏನು ಮಾಡಬೇಕು. ಅಂಥಹ ಸಮಯದಲ್ಲಿ ಬ್ಯಾಂಕ್ ಸಿಬ್ಬಂದಿಯವರು ನಿಮಗೆ ಒಂದು ರಿಟರ್ನ್ ಮೆಮೊ ಅಥವಾ ಚೆಕ್ ರಿಟರ್ನ್ ಮೆಮೊ ಅನ್ನುವುದನ್ನು ನೀವು ಪಡೆದುಕೊಳ್ಳಬೇಕು. ಈ ಮೆಮೊದಲ್ಲಿ ಯಾವ ಕಾರಣಕ್ಕಾಗಿ ಚೆಕ್ ರಿಟರ್ನ್ ಆಗಿದೆ ಅನ್ನುವ ಕಾರಣವನ್ನು ನೀಡಲಾಗಿರುತ್ತದೆ ಉದಾಹರಣೆ, ಸರಿಯಾದ ಸಂಖ್ಯೆಯನ್ನು ಬರೆಯುವುದರಲ್ಲಿ ವ್ಯತ್ಯಾಸ ಆಗಿರಬಹುದು, ದಿನಾಂಕ ನೀವು ತಪ್ಪಾಗಿ ಹಾಕಿರಬಹುದು ಮತ್ತು ನಿಮ್ಮ ಅಕೌಂಟ್ ನಲ್ಲಿ ಅಷ್ಟೊಂದು ದುಡ್ಡು ಇನ್ ಸಫಿಷಿಯೆಂಟ್ ಬ್ಯಾಲೆನ್ಸ್ ಅಂತ ತೋರಿಸುತ್ತದೆ ಅಥವಾ ಕಸ್ಟಮರ್ ಸರಿಯಾಗಿ ರುಜುವನ್ನೂ ಮಾಡದೇ ಇರುವುದು ಕೂಡ ಕಾರಣ ಆಗಿರುತ್ತದೆ.

ನಿಮ್ಮ ಅಕೌಂಟ್ ನಲ್ಲಿ ಹಣ ಕಡಿಮೆ ಇದ್ದು ನೀವು ಚೆಕ್ ನಲ್ಲಿ ಅಧಿಕವಾದ ಮೊತ್ತವನ್ನು ಬರೆದು ಬ್ಯಾಂಕ್ ನಲ್ಲಿ ನೀಡಿದರೆ ಅದನ್ನು ಕೂಡ ನಿರಾಕರಿಸಲಾಗುತ್ತದೆ. ಇನ್ನೂ ಚೆಕ್ ಮೇಲೆ ಮಾಡಿರುವ ಅಕೌಂಟ್ ಹೋಲ್ಡರ್ ರುಜುವಿಗೆ ಮತ್ತು ಬ್ಯಾಂಕ್ ನಲ್ಲಿ ಮಾಡಿರುವ ಸಹಿಗೆ ವ್ಯತ್ಯಾಸವಾದರು ಕೂಡ ಚೆಕ್ ನಿರಾಕರಿಸುತ್ತಾರೆ. ಇನ್ನೂ ಬ್ಯಾಂಕ್ ಕೆಲಸಗಳಿಗೆ ಹೋದಾಗ ಮುಖ್ಯವಾಗಿ ನಾವು ದಿನಾಂಕವನ್ನು ಸರಿಯಾಗಿ ಹಾಕಬೇಕಾಗುತ್ತದೆ. ಚೆಕ್ ಕೊಡುವಾಗ ನೀವು ಹಾಕಿದ ದಿನಾಂಕ ನಿಂದ 90 ದಿನಗಳವರೆಗೆ ನಿಮಗೆ ಸಮಯವಕಾಶ ಇರುತ್ತದೆ. ಈ ಅವಧಿಯಲ್ಲಿ ಮಾತ್ರ ನೀವು ಚೆಕ್ ಅನ್ನು ಪ್ರೆಸೆಂಟ್ ಮಾಡಬೇಕು. 90 ದಿನಗಳ ನಂತರ ನೀವು ಚೆಕ್ ಬ್ಯಾಂಕ್ ನಲ್ಲಿ ನೀಡಿದರೆ ಅದನ್ನು ನಿರಾಕರಣೆ ಮಾಡಲಾಗುತ್ತದೆ. ಈ ರಿಟರ್ನ್ ಮೆಮೋ ಸ್ಲಿಪ್ ಪಡೆಯಲು ಬ್ಯಾಂಕ್ ಕೆಲವೊಂದು ಚಾರ್ಜ್ ಗಳನ್ನು ಹಾಕುತ್ತದೆ. ಅದನ್ನು ಪಡೆದುಕೊಂಡು ನೀವು ಕಾನೂನು ಕ್ರಮದಲ್ಲಿ ಆಕ್ಷನ್ ತೆಗೆದುಕೊಳ್ಳಬಹುದು.

ವಕೀಲರನ್ನು ಭೇಟಿ ನೀಡಿ ನಿಮಗೆ ಹಣವನ್ನು ಕೊಡುವ ವ್ಯಕ್ತಿಗೆ ಲೀಗಲ್ ನೋಟಿಸ್ ಕಳುಹಿಸಬೇಕಾಗುತ್ತದೆ. ಒಂದು ನಿಗದಿತ ದಿನಾಂಕ ವ್ಯಾನ್ನು ಗೊತ್ತು ಪಡಿಸಿ ನೋಟಿಸ್ ಕಳುಹಿಸಬೇಕು ಇಲ್ಲವಾದರೆ ನೀವು ಚೆಕ್ ಬೌನ್ಸ್ ಕೇಸ್ ಹಾಕಲು ಮುಂದಾಗಬಹುದು. ನೋಗಿಷಿಯೆಬಲ್ ಇಷ್ಟ್ರುಮೆಂಟ್ ಆಕ್ಟ್ ನಿಮಗೆ ಸಹಾಯ ಮಾಡುತ್ತದೆ ಎಲ್ಲ ರೀತಿಯಲ್ಲಿ ಸಹಕರಿಸುತ್ತದೆ. ಹಣವನ್ನು ಕೊಟ್ಟ ದಿನಾಂಕ ಮತ್ತು ಯಾವ ಉದ್ದೇಶಕ್ಕೆ ನೀಡಲಾಗಿದೆ ಬಡ್ಡಿ ಎಷ್ಟು ಬರಬೇಕು ಎಲ್ಲ ಮಾಹಿತಿಯನ್ನು ನೀಡಬೇಕಾಗುತ್ತದೆ. ತದ ನಂತರ ಕೋರ್ಟ್ ನಿಂದ ವ್ಯಕ್ತಿಗೆ ಜೈಲು ಶಿಕ್ಷೆಗೆ ಆಗುತ್ತದೆ ಹಾಗೂ ನಿಮಗೆ ಬರುವ ಒಟ್ಟು ಹಣ ಬರುತ್ತದೆ ಜೊತೆಗೆ ಕೋರ್ಟು ಕಚೇರಿ ಅಂತ ಅಳೆದಾಡಿರುವ ಹಣವನ್ನು ಕೂಡ ಆ ವ್ಯಕ್ತಿ ಭರಿಸಬೇಕಾಗುತ್ತದೆ.

Leave a Reply

Your email address will not be published. Required fields are marked *