ನಮಸ್ತೆ ಪ್ರಿಯ ಸ್ನೇಹಿತರೆ, ಕನಸುಗಳನ್ನು ಪ್ರತಿಯೊಬ್ಬರೂ ಕಾಣುತ್ತಾರೆ. ಆದರೆ ಆ ಕನಸುಗಳು ಬೇರೆ. ಅದಕ್ಕೆ ಯಶಸ್ಸು ಹುಡುಕುವ ದಾರಿ ಅಂತ ಕರೆಯುತ್ತಾರೆ. ಇನ್ನೂ ನಿದ್ದೆಯಲ್ಲಿ ಕಾಣುವ ಕನಸುಗಳು ಕೂಡ ಇವೆ. ರಾತ್ರಿ ನಿದ್ದೆಯಲ್ಲಿ ಅಥವಾ ಹಗಲಿನ ವೇಳೆಯಲ್ಲಿ ಮಲಗಿದಾಗ ಕನಸುಗಳು ಬೀಳುತ್ತಲೇ ಇರುತ್ತವೆ. ಅವುಗಳು ನಮ್ಮ ಆಲೋಚನೆಗಳ ಆಧಾರವನ್ನು ಅವಲಂಬಿಸುತ್ತದೆ. ಕೆಲವೊಂದು ಕನಸುಗಳು ಕೆಲವೊಂದು ಅರ್ಥವನ್ನು ಸೂಚಿಸುತ್ತವೆ. ಆದರೆ ಈ ಬಗೆಯ ಕನಸುಗಳು ನಿಮಗೆ ಬೆಳಗಿನ ಜಾವ ಬಿದ್ದರೆ ನೀವು ಕೋಟ್ಯಾಧಿಪತಿಗೆ ಗಳು ಆಗುತ್ತೀರಿ. ನಿಮಗೆ ಗೊತ್ತೇ ಪ್ರತಿಯೊಂದು ಬೀಳುವ ಸ್ವಪ್ನವು ಒಂದೊಂದು ಅರ್ಥವನ್ನು ನೀಡುತ್ತವೆ. ಇವುಗಳು ಅರ್ಥವನ್ನು ನೀಡುವುದರ ಜೊತೆಗೆ ಮುಂದೆ ಆಗು ಹೋಗುಗಳ ಬಗ್ಗೆ ನಮಗೆ ಮುನ್ಸೂಚನೆಯನ್ನು ನೀಡುತ್ತದೆ. ಅಷ್ಟೇ ಅಲ್ಲದೇ ರಾತ್ರಿ ಬೀಳುವ ಕನಸುಗಳಿಗಿಂತ ಬೆಳಗಿನ ಜಾವ ಕನಸುಗಳು ಆದಷ್ಟು ಈಡೇರುತ್ತವೆ ಅಂತ ನಂಬಿಕೆಯೂ ಕೂಡ ಇದೆ ಗೆಳೆಯರೇ. ಅಂತ ನಮ್ಮ ಹಿರಿಯರು ಅಜ್ಜ ಅಜ್ಜಿ ಹೇಳುತ್ತಾ ಬಂದಿದ್ದಾರೆ ಕನಸುಗಳು ಒಳ್ಳೆಯದೇ ಬೀಳುತ್ತವೆ ಅಂತ ಹೇಳಲಾಗುವುದಿಲ್ಲ. ಕೆಲವು ಕನಸುಗಳು ಒಳ್ಳೆಯದರ ಬಗ್ಗೆ ನಮಗೆ ದಾರಿಯನ್ನು ತೋರಿದರೆ ಇನ್ನೂ ಕೆಟ್ಟ ಕನಸುಗಳು ಮನಸ್ಸಿಗೆ ಆಗಾಧವನ್ನು ಮೂಡಿಸುತ್ತವೆ.
ಇದರಿಂದ ನಾವು ಆ ಕನಸಿನ ಬಗ್ಗೆ ಯೋಚಿಸುತ್ತಾ ದಿನವನ್ನು ಕಳೆಯುತ್ತೇವೆ. ಆದರೆ ನಿಮಗೆ ಈ ಬಗೆಯ ಕನಸುಗಳು ಬಿದ್ದರೆ ನೀವು ಖಂಡಿತವಾಗಿ ಆಗರ್ಭ ಶ್ರೀಮಂತ ಆಗುವ ಸಾಧ್ಯತೆ ಇದೆ ಹಾಗೂ ಇದು ಖಚಿತವು ಕೂಡ ಆಗಿದೆ. ಕನಸುಗಳು ಬಿದ್ದಿರುವುದು ಕೆಲವರಿಗೆ ನೆನಪು ಇರುತ್ತದೆ ಇನ್ನೂ ಕೆಲವರಿಗೆ ನೆನಪು ಇರುವುದಿಲ್ಲ. ಆದರೆ ಕನಸುಗಳು ಯಾವ ಸಮಯದಲ್ಲಿ ಬಿದ್ದಿದೆ ಅನ್ನುವುದು ತುಂಬಾನೇ ಮಹತ್ವವನ್ನು ಹೊಂದಿರುತ್ತದೆ. ಅದನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಕೆಲವು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯೋದಯ ವೇಳೆ ಬಿದ್ದ ಕನಸುಗಳು ಅದೇ ದಿವಸ ನಿಜವಾಗುತ್ತದೆ ಅಂತ ನಂಬಲಾಗಿದೆ. ಮಧ್ಯರಾತ್ರಿ ಅಂದರೆ ಬ್ರಹ್ಮ ಮೂಹೂರ್ತದ ಮೊದಲು ಬಿದ್ದ ಕನಸುಗಳ ಪರಿಣಾಮ ಒಂದು ಸಣ್ಣ ತಿಂಗಳಿನೊಳಗೆ ತಿಳಿಯುತ್ತದೆ. ಅಷ್ಟೇ ಅಲ್ಲದೇ ಇದಕ್ಕಿಂತಲೂ ಮುಂಚಿತವಾಗಿ ಬ್ರಹ್ಮ ಮೂಹೂರ್ತದಲ್ಲಿ ಕಂಡ ಕನಸುಗಳು 10 ದಿನದಲ್ಲಿ ನಿಜವಾಗುತ್ತದೆ ಎಂದು ತಿಳಿಯಲಾಗಿದೆ. ನೀವು ರಾತ್ರಿ ಮಲಗಿದ ವೇಳೆ ನಿಮ್ಮ ಹೆಂಡತಿ ಸುಳ್ಳು ಹೇಳುವ ಹಾಗೆ ಸ್ವಪ್ನ ಬಿದ್ದರೆ ಅದು ಶುಭ ಶಕುನ ಅಂತ ಹೇಳಬಹುದು. ಹೌದು ಈ ರೀತಿಯ ಕನಸು ನಿಮ್ಮನ್ನು ಕೋಟ್ಯಾಧಿಪತಿ ಅನ್ನಾಗಿ ಮಾಡುತ್ತದೆ. ಅತೀ ಶೀಘ್ರದಲ್ಲಿ ನೀವು ಶ್ರೀಮಂತರು ಆಗುತ್ತೀರಿ ಎಂದರ್ಥ.
ಎರಡನೆಯದು, ಕನಸಿನಲ್ಲಿ ಇರುವೆಗಳು ಸಾಲು ಸಾಲಾಗಿ ಹೋಗುವುದನ್ನು ಕಾಣುವ ದೃಶ್ಯ ನಿಮ್ಮ ಕನಸಿನಲ್ಲಿ ಕಂಡರೆ ನೀವು ಭಾಗ್ಯವಂತರು ಹಾಗೂ ಇದು ಶುಭಶಕುನ ಕೂಡ ಅಂತ ತಿಳಿಯಲಾಗಿದೆ. ಇನ್ನೂ ಮೂರನೆಯದು ಯಾವುದಾದರೂ ಹುಡುಗಿ ತನ್ನ ಪ್ರಿಯತಮನ ಜೊತೆಗೆ ಭೇಟಿ ಮಾಡಲು ಹೋಗುವ ಕನಸುಗಳು ಬಿದ್ದರೆ ನಿಮ್ಮ ಮದುವೆಯೂ ಆಗರ್ಭ ಶ್ರೀಮಂತ ವ್ಯಕ್ತಿಯ ಜೊತೆಗೆ ಆಗುತ್ತದೆ. ಇಲ್ಲವೇ ಮದುವೆ ಅದ ಮೇಲೆ ನೀವು ಲಕ್ಷಾಧಿಪತಿ ಆಗಿತ್ತೀರಿ. ಇನ್ನೂ ಚಿಕ್ಕ ಚಿಕ್ಕ ಮಕ್ಕಳು ಪುಟ್ಟ ಪುಟ್ಟ ಹೆಜ್ಜೆ ಆಗುವುದು ಕನಸಿನಲ್ಲಿ ಕಂಡರೆ ಕೆಲವೇ ದಿನಗಳಲ್ಲಿ ನಿಮ್ಮ ಜೇಬು ಖಜಾನೆ ಯಿಂದ ತುಂಬುತ್ತದೆ. ಇನ್ನೂ ದೇವಾಲಯಗಳು ದೇವಾಲಯದ ಕಲಶ ಏನಾದರೂ ಕನಸಿನಲ್ಲಿ ಬಂದರೆ ನಿಮ್ಮ ಮನೆಗೆ ಸಾಕ್ಷಾತ್ ಲಕ್ಷ್ಮೀ ದೇವಿಯ ಆಗಮನ ಆಗಲಿದೆ ಎಂದು ಅರ್ಥ. ಗೋಮಾತೆಯನ್ನೂ ದೇವರು ಅಂತ ನಮ್ಮ ಹಿಂದೂ ಸಂಪ್ರದಾಯದಲ್ಲಿ ನಂಬಲಾಗಿದೆ. ಇನ್ನೂ ಕನಸಿನಲ್ಲಿ ಹಸು ಮತ್ತು ಹಸುವಿನ ಕರು ಬಂದರೆ ಅಥವಾ ಹಾಲುಣಿಸುವ ದೃಶ್ಯ ಕಂಡರೆ ಇದು ನೀವು ಬೇಗನೆ ಶ್ರೀಮಂತರು ಆಗುವ ಚಿನ್ಹೆ ಆಗಿದೆ.