ನಮಸ್ತೇ ಪ್ರಿಯ ಸ್ನೇಹಿತರೆ, ನಮಗೆ ಕಷ್ಟಗಳು ಅಂತ ಬಂದಾಗ ನಾವು ಮೊದಲಿಗೆ ಮೊರೆ ಹೋಗುವುದು ದೇವರನ್ನು ಮತ್ತು ದೇವಾಲಯವನ್ನು ಅಲ್ವಾ ಗೆಳೆಯರೇ. ಹೌದು ಇದು ನಿಜವಾದ ಮಾತು. ನಮ್ಮ ಭಾರತ ದೇಶದಲ್ಲಿ ಹಲವಾರು ಬಗೆಯ ದೊಡ್ಡದಾದ ದೇವಾಲಯಗಳನ್ನು ನಾವು ನೋಡಿದ್ದೇವೆ. ದೇವಾಲಯವನ್ನು ನಿರ್ಮಾಣ ಮಾಡುವ ಸ್ಥಳ, ವಾಸ್ತು ಮತ್ತು ಪೀಠೋಪಕರಣಗಳು ಇನ್ನಿತರ ದೇವರಿಗೆ ಸಂಭಂದ ಪಟ್ಟ ಆಯಾಮಗಳು ಎಲ್ಲವೂ ಧಾರ್ಮಿಕ ಸಾಂಪ್ರದಾಯಿಕ ರೀತಿ ನೀತಿಗಳಿಗೆ ಅನುಗುಣವಾಗಿ ಇರಬೇಕು ಹಾಗೆಯೇ ಇರುತ್ತವೆಯೂ ಕೂಡ ಗೆಳೆಯರೇ. ದೇವಾಲಯದ ಸುತ್ತಲೂ ಭಧ್ರವಾದ ಬಾಗಿಲುಗಳು ಕಿಟಕಿಗಳು ಹಾಗೆಯೇ ದೊಡ್ಡದಾದ ಪ್ರಾಂಗಣ ಗರ್ಭಗುಡಿ ಅಂತ ಎಲ್ಲವನ್ನು ನಿರ್ಮಾಣ ಮಾಡಿರುತ್ತಾರೆ. ಕಾರಣ ಒಂದು ನಿರ್ಧಿಷ್ಟವಾದ ಸ್ಥಳದಲ್ಲಿ ದೇವರು ಮತ್ತು ದೇವರ ಶಕ್ತಿ ದೊರೆಯಬೇಕೆಂದು. ಇಲ್ಲವಾದರೆ ಆ ಸ್ಥಳದಲ್ಲಿ ಯಾವುದೇ ದೈವ ಶಕ್ತಿ ವಾಸ ಮಾಡುವುದಿಲ್ಲ. ಸಾಮಾನ್ಯವಾಗಿ ನಾವೆಲ್ಲರೂ ಎಲ್ಲ ದೇವಾಲಯದಲ್ಲಿ ತೂಗಿ ಬಿಟ್ಟಿರುವ ಗಂಟೆಗಳನ್ನು ನೋಡಿರುತ್ತೇವೆ.
ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ದೇವಾಲಯದಲ್ಲಿ ಗಂಟೆಯನ್ನು ಬಾರಿಸಿದರೆ ಏನೆಲ್ಲ ಪ್ರಯೋಜನಗಳು ದೊರೆಯುತ್ತವೆ ಅಂತ ತಿಳಿಯೋಣ.
ದೇವಾಲಯಕ್ಕೆ ಭೇಟಿ ನೀಡಿದರೆ ಅಥವಾ ದೇವಾಲಯದ ಒಳಗೆ ಪ್ರವೇಶ ಮಾಡುತ್ತಿದ್ದಂತೆ ದೇವರ ವಿಗ್ರಹ ಮುಂದೆ ನೇತು ಹಾಕಿರುವ ಗಂಟೆಯನ್ನು ಬಡಿದು ದೇವರಿಗೆ ನಂತರ ನಾವು ನಮಸ್ಕಾರ ಮಾಡುತ್ತೇವೆ. ಅಲ್ಲದೆ ಆರತಿಯನ್ನು ಮಾಡುವಾಗ ನಿರಂತರ ಗಂಟೆ ಸಪ್ಪಳ ಕೇಳುತ್ತಾ ಇರುತ್ತದೆ. ದೇವಾಲಯದಲ್ಲಿ ಗಂಟೆಯನ್ನು ನೇತು ಹಾಕುವುದರ ಉದ್ದೇಶ ಇಲ್ಲಿದೆ ತಿಳಿದುಕೊಳ್ಳಿ. ಗಂಟೆಯನ್ನು ಸಾಮಾನ್ಯವಾಗಿ ಹಿತ್ತಾಳೆಯಿಂದ ತಯಾರಿಸುತ್ತಾರೆ. ಮೇಲೆ ಹೇಳಿದ ಹಾಗೇ ದೇವಾಲಯದಲ್ಲಿ ಭಕ್ತರು ಗಂಟೆಯನ್ನು ಬಾರಿಸಿದರೆ ಅವರಲ್ಲಿ ಮತ್ತಷ್ಟು ಭಕ್ತಿಭಾವ ಹೆಚ್ಚುತ್ತದೆ. ಇನ್ನೂ ಯಾಕೆ ಮುಖ್ಯವಾಗಿ ಗಂಟೆಯನ್ನು ಸತತವಾಗಿ ಆರತಿ ವೇಳೆಗೆ ಬಾರಿಸುತ್ತಾರೆ ಅಂದರೆ ಇದರಿಂದ ಭಕ್ತರಲ್ಲಿ ಏಕಾಗ್ರತೆ ಮತ್ತಷ್ಟು ಹೆಚ್ಚುತ್ತದೆ. ಅಷ್ಟೇ ಅಲ್ಲದೇ ನಾವು ಬಾರಿಸುವ ಪ್ರತಿ ಗಂಟೆಯ ಸಪ್ಪಳವೂ ಓಂ ಎಂಬ ನಾದದಿಂದ ಹೊರ ಬರುತ್ತದೆ. ಹೀಗಾಗಿ ದೇವಾಲಯಕ್ಕೆ ಬಂದ ಭಕ್ತರ ಮನಸ್ಸು ಮತ್ತಷ್ಟು ಶಾಂತತೆ ಇಂದ ಕೂಡಿರುತ್ತದೆ. ಅನಾದಿ ಕಾಲದಿಂದಲೂ ಈ ದೇವಾಲಯಗಳಲ್ಲಿ ಗಂಟೆ ನೇತು ಹಾಕುವುದು ಪದ್ಧತಿ ಇದೆ ಅಷ್ಟೇ ಅಲ್ಲದೇ ಇದರ ಹಿಂದೆ ಇರುವ ಕಾರಣ ಭಕ್ತರ ಮನಸ್ಸಿಗೆ ಶಾಂತಿ ನೆಮ್ಮದಿ ಸಂತೋಷ ಏಕಾಗ್ರತೆ ಸಿಗಬೇಕೆಂದು ಗಂಟೆಯನ್ನು ದೇವಾಲಯದಲ್ಲಿ ನೇತು ಹಾಕಲಾಗಿದೆ.
ಪ್ರತಿಯೊಂದಕ್ಕೂ ಒಂದೊಂದು ಗಂಟೆಯನ್ನು ಆಯೋಜಿಸಿರುತ್ತಾರೆ. ಮಂಗಳಾರತಿ ಗೆ ಒಂದು ಗಂಟೆ ದೇವರ ವಿಗ್ರಹದ ಮುಂದೆ ಒಂದು ಗಂಟೆ ಹೀಗೆ ಪ್ರತಿಯೊಂದಕ್ಕೂ ಗಂಟೆಯನ್ನು ಕಟ್ಟಿರುತ್ತಾರೆ. ಮತ್ತು ಗಂಟೆ ಕಟ್ಟುವ ಮುಖ್ಯ ಉದ್ದೇಶ ನಂಬಿಕೆ ಹಾಗೂ ಪದ್ಧತಿಯ ಆಧಾರದ ಮೇಲೆ ಘಂಟೆಯನ್ನು ಬಾರಿಸುವ ಕೆಲಸವನ್ನು ಮಾಡುತ್ತೇವೆ ಅಂತ ತಿಳಿಯಲಾಗಿದೆ. ಗಂಟೆಯ ನಾದ ನಮ್ಮ ಕಿವಿಗೆ ಹಾಗೂ ಮಾನಸಿಕ ಚಿಂತನೆಗಳ ಮೇಲೆ ಸಾಕಷ್ಟು ಉತ್ತಮ ಪರಿಣಾಮವನ್ನು ಬೀರುತ್ತದೆ. ಮತ್ತು ಸಂಜೆಯ ತನಕ ನಮ್ಮಲ್ಲಿ ಉಂಟಾಗುವ ಒತ್ತಡ ಹಾಗೂ ಭಾವನಾತ್ಮಕ ಹಿಡಿತವನ್ನು ಸಾಧಿಸುವ ಶಕ್ತಿಯನ್ನು ಕ್ರಿಯಾಶೀಲಗೊಳಿಸುವುದು ಎಂದು ಹೇಳಲಾಗುವುದು. ಹೌದು ದೇವರ ಬಳಿ ಗಂಟೆ ನಮ್ಮ ಮನಸ್ಸಿನ ಎಲ್ಲ ಭಾರವನ್ನು ದೂರ ಮಾಡುತ್ತದೆ. ಮನಸ್ಸಿನಲ್ಲಿ ಯಾವುದೇ ಭಯ ಆತಂಕ ಉಂಟಾಗದಂತೆ ಮನಸ್ಸಿನಲ್ಲಿ ಸಮಾಧಾನದ ವಾತಾವರಣ ಸೃಷ್ಟಿ ಆಗುತ್ತದೆ. ಆದ್ದರಿಂದ ಪ್ರತಿ ದೇವಾಲಯದಲ್ಲಿ ಗಂಟೆಯನ್ನು ನೇತು ಹಾಕಿರುತ್ತಾರೆ. ಇದೇ ಒಂದು ಉದ್ದೇಶಕ್ಕಾಗಿ. ಈ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ