ಥೈರಾಯಿಡ್ ಸಮಸ್ಯೆ ಇದ್ದವರು ಆಲೂಗಡ್ಡೆ ತಿನ್ನಬೇಡಿ

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ತರಕಾರಿಯಲ್ಲಿ ಆಲೂಗಡ್ಡೆ ಅಂದರೆ ಎಲ್ಲರಿಗೂ ಇಷ್ಟವಾಗುತ್ತದೆ. ಆಲೂಗಡ್ಡೆ ಇಂದ ಪಲ್ಯ, ಚಿಪ್ಸ್ ಇತ್ಯಾದಿ ವಿಭಿನ್ನವಾದ ಆಹಾರ ಚಾಟ್ಸ್ ಗಳನ್ನು ಮಾಡಿ ಸೇವನೆ ಮಾಡುತ್ತಾರೆ. ಇದು ರುಚಿಯಲ್ಲಿ ತಿನ್ನಲು ಬಲು ಚೆನ್ನಾಗಿರುತ್ತದೆ. ಆಲೂಗಡ್ಡೆಯನ್ನು ಉಪಯೋಗಿಸಿ ಬಹಳ ತಿಂಡಿ ತಿನಿಸುಗಳನ್ನು ತಯಾರಿಸುತ್ತಾರೆ. ಆಲೂಗಡ್ಡೆ ತಿನ್ನಲು ತುಂಬಾನೇ ರುಚಿಯಾಗಿರುತ್ತದೆ ಕಾರಣ ಇದರಲ್ಲಿರುವ ಅಮೈನೋ ಆಮ್ಲಗಳು. ಆಲೂಗಡ್ಡೆಯನ್ನು ಮೂರು ಭಾಗಗಳು ಆಗಿ ವಿಂಗಡನೆ ಮಾಡಬಹುದು. ಮೊದಲಿಗೆ ಸಿಪ್ಪೆ, ಸಿಪ್ಪೆ ಕೆಳಗೆ ಇರುವ ತೆಳುವಾದ ಪೊರೆ, ಮತ್ತು ಮೂರನೆಯದು, ಒಳ ಪಿಸ್ಟ ಭಾಗ ಅಂತ ವಿಂಗಡನೆ ಮಾಡಲಾಗಿದೆ. ಮೊದಲನೇ ಭಾಗದಲ್ಲಿ ಖನಿಜಗಳು ಮತ್ತು ಜೀವ ಸತ್ವಗಳು ಇರುತ್ತವೆ ಎರಡನೆಯದು ಪದರಿನಲ್ಲಿ ಸಸಾರಜನಕ ಮತ್ತು ವರ್ಣ ದ್ರವ್ಯ ಇರುತ್ತದೆ. ಸಸಾರಜನಕ ದ ಅರ್ಥ ಏನೆಂದರೆ, ನಮ್ಮ ದೇಹಕ್ಕೆ ಅಗತ್ಯವಾದ ಪ್ರೊಟೀನ್ ಅನ್ನು ಒದಗಿಸುತ್ತದೆ.

ನಮ್ಮ ದೇಹದ ಬೆಳವಣಿಗೆಗೆ ಬೇಕಾದ ಪ್ರೊಟೀನ್ ಅನ್ನು ಸಸಾರಜನಕ ಅಂತ ಕರೆಯುತ್ತಾರೆ. ವರ್ಣ ದ್ರವ್ಯ ಅಂದರೆ ಆಲೂಗಡ್ಡೆಯನ್ನು ನಾವು ಕಟ್ಟರಿಸಿ ಅದನ್ನು ಗಾಳಿಗೆ ಬಿಟ್ಟಾಗ ಅದರ ಬಣ್ಣವು ಬದಲಾಗುತ್ತದೆ. ಇದಕ್ಕೆ ವರ್ಣ ದ್ರವ್ಯ ಅನ್ನುತ್ತಾರೆ. ಇದು ಆಲೂಗಡ್ಡೆಯ ಎರಡನೆಯ ಭಾಗದ ವಿವರಣೆ ಆಗಿದೆ ಇನ್ನೂ ಮೂರನೆಯ ಭಾಗದ ಬಗ್ಗೆ ಹೇಳುವುದಾದರೆ, ಇದು ಕೇವಲ ನೀರಿನಿಂದ ಕೂಡಿರುತ್ತದೆ. ಇನ್ನೂ ಮುಖದ ಸೌಂದರ್ಯಕ್ಕೆ ಆಲೂಗಡ್ಡೆಯ ಫೇಸ್ ಮಾಸ್ಕ್ ಬಳಕೆ ಮಾಡಬಹುದು. ಇದು ನಿಮ್ಮ ತ್ವಚೆಯ ಬಣ್ಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದಕ್ಕೆ ನೀವು ಆಲೂಗಡ್ಡೆಯನ್ನು ಚಿಕ್ಕದಾಗಿ ಕತ್ತರಿಸಿ ಅದರಲ್ಲಿ ಅರಿಶಿನವನ್ನು ಹಾಕಿ ಮಿಕ್ಸ್ ಮಾಡಿ ಅದನ್ನು ಮುಖಕ್ಕೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಬೇಕು. ಹೀಗೆ ಮಾಡುವುದರಿಂದ ನಿಮ್ಮ ತ್ವಚೆಯ ಕಾಂತಿ ಹೆಚ್ಚುತ್ತದೆ. ಹಾಗೂ ಮುಖದಲ್ಲಿ ಆ ಬದಲಾವಣೆ ಅನ್ನು ನೀವೇ ಕಾಣಬಹುದು.

ಅಷ್ಟೇ ಅಲ್ಲದೇ ಕಡಿಮೆ ರಕ್ತದೊತ್ತಡ ಇರುವವರಿಗೆ ಸಹಾಯ ಮಾಡುತ್ತದೆ.ಇದರಲ್ಲಿ ಇರುವ ಪೊಟ್ಯಾಶಿಯಂ ಅಂಶವು ಕಡಿಮೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇದರ ಗುಣಲಕ್ಷಣಗಳ ಬಗ್ಗೆ ಹೇಳುವುದಾದರೆ, ಇದರಲ್ಲಿ ವಿಟಮಿನ್ ಸಿ ಅಂಶ ಅಧಿಕವಾಗಿದೆ. ಅದು ಸಿಪ್ಪೆಯ ಒಳಭಾಗದಲ್ಲಿ ಹುದುಗಿದೆ. ಇನ್ನೂ ನೀವೇನಾದರೂ ವಿಟಮಿನ್ ಸಿ ಕೊರತೆಯಿಂದ ನರಳುತ್ತಿದ್ದರೆ ನಿತ್ಯವೂ ಆಲೂಗಡ್ಡೆ ಸೇವಿಸಿ. ಕ್ಯಾಲ್ಷಿಯಂ ಮತ್ತು ವಿಟಮಿನ್ ಸಿ ಗಳ ಆಗರ ಆಗಿರುವ ಕಾರಣ, ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೂ ಫೈಬರ್ ಅಂಶವು ಹೇರಳವಾಗಿ ಇರುತ್ತದೆ ಇದೆ ಒಂದು ಅದ್ಭುತವಾದ ಗುಣದಿಂದ ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸಲು ಸಹಕಾರಿಯಾಗಿದೆ.

ಹಾಗೂ ಹೊಟ್ಟೆ ಉಬ್ಬರ ಹೊಟ್ಟೆ ನೋವು ಅಸಿಡಿಟಿ ಕಡಿಮೆ ಮಾಡುತ್ತದೆ. ಇದರಲ್ಲಿ ವಿಟಮಿನ್ ಬಿ6 ಅಂಶವು, ಮೆದುಳಿನ ಕಾರ್ಯ ಕ್ಷಮತೆಯನ್ನು ಹೆಚ್ಚಿಸುತ್ತದೆ. ಮುಖ್ಯವಾಗಿ ಹೇಳಬೇಕಾದ ಅಂಶವೆನೆಂದರೆ, ಆಲೂಗಡ್ಡೆ ಕೆಲವರಿಗೆ ಆಗಿ ಬರುವುದಿಲ್ಲ. ಕೆಲವರಿಗೆ ಇದು ತಿಂದರೆ ಅಸಿಡಿಟಿ ಸಮಸ್ಯೆ ಶುರು ಆಗುತ್ತದೆ. ಆದ್ದರಿಂದ ನಿಮ್ಮ ದೇಹಕ್ಕೆ ಆಲೂಗಡ್ಡೆ ಸರಿಯಾಗಿ ಕೆಲಸವನ್ನು ಮಾಡುತ್ತದೆ ಅಂತ ಅನ್ನಿಸಿದರೆ ಮಾತ್ರ ಸೇವಿಸಿ ಇಲ್ಲವಾದರೆ ಇದನ್ನು ಆದಷ್ಟು ಸೇವನೆ ಮಾಡುವಲ್ಲಿ ನಿಯಂತ್ರಣ ಮಾಡಿ. ಅಷ್ಟೇ ಅಲ್ಲದೇ ಥೈರಾಯಿಡ್ ಸಮಸ್ಯೆ ಇರುವವರು ಮಾತ್ರ ಇದನ್ನು ಅಧಿಕವಾಗಿ ಸೇವನೆ ಮಾಡಲೇ ಬಾರದು. ಹೌದು ಇದರಿಂದ ಥೈರಾಯಿಡ್ ಸಮಸ್ಯೆ ಮತ್ತಷ್ಟು ಹೆಚ್ಚುತ್ತದೆ. ಆದ್ದರಿಂದ ಹುಷಾರಾಗಿರಿ. ಉತ್ತಮವಾದ ಆರೋಗ್ಯ ನಿಮ್ಮದಾಗಿಸಿ ಕೊಳ್ಳಿ. ಶುಭದಿನ.

Leave a Reply

Your email address will not be published. Required fields are marked *