ನಿಮ್ಮ ಮನೆ ಅಥವಾ ಯಾವುದೇ ಆಸ್ತಿಯ ಪತ್ರಗಳು ಅಸಲೀನಾ ಅಥವಾ ನಕಲಿನಾ ಅಂತ ನೀವೇ ಸುಲಭವಾಗಿ ಚೆಕ್ ಮಾಡಿಕೊಳ್ಳಬವುದು

ಉಪಯುಕ್ತ ಮಾಹಿತಿ

ನಮಸ್ತೇ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ನಾವು ನಿಮಗೆ ಸೇಲ್ ಡೀಡ್ ಅಸಲಿಯೋ ಅಥವಾ ನಕಲಿಯೋ ಅನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಬನ್ನಿ. ರಿಜಿಸ್ಟರ್ ಇಲಾಖೆಯಲ್ಲಿ ನೋಂದಣಿ ಆಗಿರುವ ಕರಪತ್ರ ಅಸಲಿ ನಕಲಿ ಅಂತ ತಿಳಿಯಲು ನಿಮ್ಮ ಹತ್ತಿರ ಇರುವ ಮೊಬೈಲ್ ನಲ್ಲಿ ಗೂಗಲ್ ಅನ್ನು ತೆರೆಯಬೇಕು. ಅಲ್ಲಿ ನೀವು ಕಾವೇರಿ ಆನ್ಲೈನ್ ಅಂತ ಟೈಪ್ ಮಾಡಿ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು. ಸರ್ಚ್ ಮಾಡಿದ ನಂತರ ನಿಮಗೆ ಕೆಳಗಡೆ ಕೆಲವು ಲಿಂಕ್ ಗಳು ಅಥವಾ ವೆಬ್ ಸೈಟ್ ಗಳು ಲಭ್ಯವಾಗುತ್ತವೆ. ಅದರಲ್ಲಿ ಮೊದಲಿಗೆ ಬರುವ ಲಿಂಕ್ ಮೇಲೆ ಕ್ಲಿಕ್ ಮಾಡಿರಿ. ಈ ರೀತಿಯಾಗಿ ನೀವು ನಿಮ್ಮ ಮನೆಯಲ್ಲಿ ಕಂಪ್ಯೂಟರ್ ಇದ್ದರೆ ಅದರಲ್ಲಿಯೂ ಕೂಡ ನೀವು ಈ ರೀತಿ ಗೂಗಲ್ ನಲ್ಲಿ ಹಾಕಿ ಸರ್ಚ್ ಮಾಡಬಹುದು. ನೀವು ವೆಬ್ ಸೈಟ್ ಗೆ ಹೋದಾಗ ನಿಮಗೆ ಅಲ್ಲಿ ಒಂದು ಪುಟ ಸಿಗುತ್ತದೆ. ಆಗ ನೀವು ಮೊದಲಿಗೆ ರಿಜಿಸ್ಟರ್ ಆಗಿದ್ದರೆ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಹಾಕಿ ಲಾಗಿನ್ ಮಾಡಿಕೊಳ್ಳಬಹುದು.

ಇಲ್ಲವಾದರೆ ನೀವು ರಿಜಿಸ್ಟ್ರೇಷನ್ ಮತ್ತು ಯೂಸರ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಒಂದು ಪುಟದ ಜೊತೆಗೆ ನಿಮ್ಮ ಎಲ್ಲ ಮಾಹಿತಿಯನ್ನು ಕೇಳುತ್ತದೆ. ಆಗ ನೀವು ಅದರಲ್ಲಿ ಕೇಳಿರುವ ಎಲ್ಲ ಮಾಹಿತಿಯನ್ನು ಒಂದೊಂದಾಗಿ ಸರಿಯಾಗಿ ತುಂಬಿ. ಈ ರೀತಿ ತುಂಬಿದ ನಂತರ ನಿಮಗೆ ಪಾಸ್ವರ್ಡ್ ಸಿಗುತ್ತದೆ. ಮತ್ತೆ ನೀವು ಮೊದಲಿನ ಪೇಜ್ ಗೆ ಹೋಗಿ ಪಾಸ್ವರ್ಡ್ ಮತ್ತು ಯೂಸರ್ ನೇಮ್ ಹಾಕಿ ಲಾಗಿನ್ ಮಾಡಬೇಕು. ಲಾಗಿನ್ ಮಾಡಿದ ತಕ್ಷಣವೇ ನಿಮ್ಮ ಮೊಬೈಲ್ ಗೆ ಒಂದು ಓಟಿಪಿ ಬರುತ್ತದೆ ಅದನ್ನು ಹಾಕಿ ನೀವು ಮತ್ತೆ ಲಾಗಿನ್ ಮಾಡಬೇಕು. ಲಾಗಿನ್ ಮಾಡಿದ ಮೇಲೆ ನಿಮಗೆ ಕಾವೇರಿ ಆನ್ಲೈನ್ ಸರ್ವಿಸ್ ಗಳ ಸಂಪೂರ್ಣ ಪಟ್ಟಿ ಸಿಗುತ್ತದೆ. ಅಲ್ಲಿ ನಿಮಗೆ ಸರ್ವಿಸ್ ಗಳು ಅನ್ನುವ ಒಂದು ಆಪ್ಷನ್ ಸಿಗುತ್ತದೆ. ಅದರ ಕೆಳಗಡೆ ಆನ್ಲೈನ್ ಸಿಸಿ ಅಂತ ಕೂಡ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ. ಕ್ಲಿಕ್ ಮಾಡಿದ ಮೇಲೆ ನಿಮ್ಮ ಮೊಬೈಲ್ ನಲ್ಲಿ ಒಂದು ಪುಟ ತೆರೆಯುತ್ತದೆ. ಅಲ್ಲಿ ಕೆಲವು ಮಾಹಿತಿಯನ್ನು ನೀವು ಭರ್ತಿ ಮಾಡಬೇಕಾಗುತ್ತದೆ. ನೀವು ನಿಮ್ಮ ಬಳಿ ಇರುವ ಯಾವುದಾದರೂ ರಿಜಿಸ್ಟ್ರೇಷನ್ ಆಗಿರುವ ನಕಲು ಪ್ರತಿಯನ್ನು ತೆಗೆದುಕೊಂಡು ಕೇಳಿರುವ ಮಾಹಿತಿಯನ್ನು ತುಂಬಬೇಕು.

ಅಲ್ಲಿ ಮೊದಲು ಡಾಕ್ಯುಮೆಂಟ್ ರಿಜಿಸ್ಟ್ರೇಷನ್ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ತದ ನಂತರ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಮಾಹಿತಿಯನ್ನು ತುಂಬಬೇಕು.ನಂತರ ನಿಮ್ಮ ಡಾಕ್ಯುಮೆಂಟ್ ನಂಬರ್ ಕೇಳುತ್ತದೆ. ಯಾವ ದಿನ ನೀವು ರಿಜಿಸ್ಟ್ರೇಷನ್ ಮಾಡಿರಿತ್ತೀರಿ ಆಗ ನಿಮಗೆ ಒಂದು ನಂಬರ್ ಅನ್ನು ನೀಡಲಾಗಿರುತ್ತದೆ. ಆ ನಂಬರ್ ಅನ್ನು ಹಾಕಿ ನಂಬರ್ 1 ಬುಕ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು. ತದ ನಂತರ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ರಿಜಿಸ್ಟ್ರೇಷನ್ ಕಾಣಿಸುತ್ತದೆ ಅದನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬೇಕು. ಅಥವಾ ಪ್ರಿಂಟ್ ತೆಗೆದುಕೊಳ್ಳಿ. ಈಗ ನೀವು ನಿಮ್ಮ ಬಳಿ ಇರುವ ಕರ ಪತ್ರಕ್ಕೇ ಮತ್ತು ರಿಜಿಸ್ಟ್ರೇಷನ್ ಮಾಡಿರುವ ಪಾತ್ರವನ್ನು ಹೋಲಿಕೆ ಮಾಡಿ ನೋಡಬಹುದು. ಇದರಿಂದ ಮೋಸ ಆಗುವುದಕ್ಕೆ ಅವಕಾಶಗಳು ಇರುವುದಿಲ್ಲ. ಈ ರೀತಿ ನೀವು ರೆಜಿಸ್ಟರ್ ಇಲಾಖೆಯಲ್ಲಿ ಕರ ಪಾತ್ರ ಅಸಲಿಯೋ ನಕಲಿಯೋ ಅಂತ ಪತ್ತೆ ಹಚ್ಚಬಹುದು.

Leave a Reply

Your email address will not be published. Required fields are marked *