ತೆಂಗಿನ ಕಾಯಿ ಎಣ್ಣೆಯನ್ನು ದೇಹದ ಈ ಭಾಗಕ್ಕೆ ಹಾಕಿಕೊಂಡರೆ ಏನಾಗುತ್ತದೆ ಗೊತ್ತೇ

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ತೆಂಗಿನ ಕಾಯಿ, ತೆಂಗಿನ ಮರ, ತೆಂಗಿನಎಣ್ಣೆ ಎಲ್ಲರಿಗೂ ಚೆನ್ನಾಗಿ ಗೊತ್ತಿದೆ ಅಷ್ಟೇ ಅಲ್ಲದೆ ಅದನ್ನು ನೋಡಿಯೂ ಕೂಡ ಇರುತ್ತೀರಿ. ತೆಂಗಿನಕಾಯಿ ಮಾತ್ರ ಉಪಯೋಗಕ್ಕೆ ಬರದೆ ಅದರ ತೆಂಗಿನ ಮರವೂ ಕೂಡ ಬಹಳ ಉಪಯೋಗಕಾರಿ ಅಂತ ಹೇಳಿದರೆ ತಪ್ಪಾಗಲಾರದು. ಆದ್ದರಿಂದ ಈ ತೆಂಗಿನ ಕಾಯಿ ಒಂದಲ್ಲ ಒಂದು ರೀತಿಯಾಗಿ ನಮಗೆ ಉಪಯೋಗಕ್ಕೆ ಬರುತ್ತದೆ. ನಮ್ಮ ಹಿರಿಯರು ತೆಂಗಿನ ಕಾಯಿ ಎಣ್ಣೆಗೆ ಬಹಳ ಪ್ರಾಮುಖ್ಯತೆಯನ್ನು ಕೊಡುತ್ತಿದ್ದರು. ನಿಮಗೆ ಗೊತ್ತೇ ತೆಂಗಿನ ಕಾಯಿಯಿಂದ ನಮಗೆ ದೊರೆಯುವ ತೆಂಗಿನ ಎಣ್ಣೆಯಲ್ಲಿ ಹಲವಾರು ರೋಗಗಳನ್ನು ವಾಸಿ ಮಾಡಬಹುದು ಎಂದು. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ತೆಂಗಿನ ಕಾಯಿ, ಎಣ್ಣೆಯನ್ನು ಹೇಗೆ ಹಚ್ಚಿಕೊಳ್ಳಬೇಕು ಎನ್ನುವ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ ಬನ್ನಿ. ಈ ಉಪಯುಕ್ತವಾದ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ನಮ್ಮ ಭಾರತ ದೇಶದಲ್ಲಿ ಬ್ಯೂಟಿ ಪಾರ್ಲರ್ ಗೆ ಬ್ಯೂಟಿ ಸಲೂನ್ ಗೆ ಬರ ಇಲ್ಲ ಗೆಳೆಯರೇ ಹೌದು ಯಾವುದೇ ಸಮಾರಂಭ ಮದುವೆ ಕಾರ್ಯಕ್ರಮ ಯಾವುದೇ ಇರಲಿ ಮೊದಲಿಗೆ ಪಾರ್ಲರ್ ಗೆ ಸಲೂನ್ ಗೆ ಯುವಜನತೆ ಹೋಗುವುದು ಸಾಮಾನ್ಯವಾಗಿದೆ. ಹೌದು ಇನ್ನೂ ಕೆಲವು ದೊಡ್ಡ ದೊಡ್ಡ ಬ್ಯೂಟಿ ಶಾಪ್ ಗಳಲ್ಲಿ ಬೋಡಿ ಮಸಾಜ್ ಕೂಡ ಮಾಡುತ್ತಾರೆ.

ಈಗಂತೂ ಇದು ಸರ್ವೇ ಸಾಮಾನ್ಯ ಆಗಿದೆ ಅಂತ ಕೂಡ ಹೇಳಬಹುದು. ಅಲ್ಲಿ ನೀವು ಗಮನಿಸಿರಬಹುದು ಗೆಳೆಯರೇ, ಸಲೂನ್ ಗಳಲ್ಲಿ ಮುಖ್ಯವಾಗಿ ಗಂಡಸರಿಗೆ ಬೊಡಿ ಮಸಾಜ್ ಮಾಡುತ್ತಾರೆ ಆಗ ಅವರು ಸಾಮಾನ್ಯವಾಗಿ ಎಣ್ಣೆಗಳನ್ನು ಬಳಕೆ ಮಾಡುವುದನ್ನು ನೀವು ಗಮಸಿರಬಹುದು. ಹಾಗಾದ್ರೆ ಈ ಎಣ್ಣೆಯನ್ನೂ ಬಳಕೆ ಮಾಡಿಕೊಂಡು ಬೋಡಿ ಮಸಾಜ್ ಮಾಡುವುದರಿಂದ ಆಗುವ ಲಾಭಗಳ ಪಟ್ಟಿಯನ್ನು ಹೇಳುವುದಾದರೆ ನಮ್ಮ ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಆಗುತ್ತದೆ. ರಕ್ತ ಪರಿಚಲನೆ ಚೆನ್ನಾಗಿ ಆದರೆ ನಮ್ಮ ದೇಹವು ಆರೋಗ್ಯವಾಗಿ ಇರುವುದರಲ್ಲಿ ಎರಡು ಮಾತಿಲ್ಲ ಗೆಳೆಯರೇ. ಜೊತೆಗೆ ಚರ್ಮದ ಮೇಲೆ ಕುಳಿತುಕೊಂಡಿರುವ ಅಂಟಿಕೊಂಡಿರುವ ಡೆಡ್ ಸ್ಕಿನ್ ಅನ್ನು ಹೊರಗೆ ಹಾಕುತ್ತದೆ. ಇದು ಒಂದು ಸಾಮಾನ್ಯವಾದ ದೃಷ್ಟಿಯಿಂದ ನೋಡಿದರೆ ಇನ್ನೂ ಹೊಟ್ಟೆಯ ನಾಭಿಗೆ ಎಣ್ಣೆಯನ್ನೂ ಹಾಕುವುದರಿಂದ ಏನೆಲ್ಲ ಪ್ರಯೋಜನಗಳು ಆಗುತ್ತವೆ ಅಂತ ಇಂದಿನ ಲೇಖನದಲ್ಲಿ ತಿಳಿಯೋಣ. ಅದಕ್ಕೂ ಮುನ್ನವೇ ನಾವು ನಾಭಿಯ ಬಗ್ಗೆ ತಿಳಿಯೋಣ. ನಿಮಗಿದು ಗೊತ್ತೇ? ಸತ್ತ ವ್ಯಕ್ತಿಯ ದೇಹದ ಉಷ್ಣಾಂಶ ತಕ್ಷಣವೇ ಕಡಿಮೆ ಆಗುತ್ತದೆ ಎಂದು. ಆದರೆ ಮರಣ ಹೊಂದಿದ ವ್ಯಕ್ತಿಯ ನಾಭಿ ಸುಮಾರು ಮೂರು ಗಂಟೆಗಳವರೆಗೆ ಕೂಡ ಬೆಚ್ಚಗೆ ಇರುತ್ತದೆ.

ಇನ್ನೂ ಗರ್ಭದಲ್ಲಿ ಇರುವ ಮಗುವಿಗೆ ತಾಯಿಯ ನಾಭಿಯ ಮೂಲಕವೇ ಮಗುವಿಗೆ ಆಹಾರ ಪೋಷಕಾಂಶಗಳು ದೊರೆಯುತ್ತವೆ ಅಂತೆ ಹಾಗಾದರೆ ಇಷ್ಟೆಲ್ಲಾ ಲಾಭಗಳನ್ನು ಅಂಶಗಳನ್ನು ಹೊಂದಿರುವ ನಾಭಿಯನ್ನು ನಾವು ನಮ್ಮ ದೇಹದ ಎಲ್ಲಾ ಅಂಗಗಳಿಗೂ ಚಿಕ್ಕ ಹಾಗೂ ಸೂಕ್ಷ್ಮ ವಾದ ಅಂಗ ಎಂದು ಪರಿಗಣಿಸಿದರೆ ತಪ್ಪಾಗುತ್ತದೆ. ಕೊಬ್ಬರಿ ಎಣ್ಣೆ ಪರಿಶುದ್ಧವಾದ ಆಂಟಿ ಆಕ್ಸಿಡೆಂಟ್ ಗಳನ್ನು ಹೊಂದಿರುವ ಪದಾರ್ಥವಾಗಿದೆ. ಈ ಪರಿಶುದ್ಧವಾದ ಎಣ್ಣೆಯನ್ನು ನೀವು ಹೊಟ್ಟೆಯ ನಾಭಿಗೆ ಲೇಪನ ಮಾಡಿಕೊಳ್ಳಬೇಕು. ಶುದ್ಧವಾದ ಕೊಬ್ಬರಿ ಎಣ್ಣೆಯನ್ನೆ ಬಳಕೆ ಮಾಡಬೇಕು. ಈ ರೀತಿ ಹೊಟ್ಟೆಗೆ ಕೊಬ್ಬರಿ ಎಣ್ಣೆ ಹಾಕುವುದರಿಂದ ನಮ್ಮ ನಾರನಾಡಿಗಳು ಜೀವಂತವಾಗುತ್ತದೆ. ಹೆಚ್ಚು ಆಕ್ಟಿವ್ ಆಗುತ್ತವೆ. ಮತ್ತು ನಿಮಗೆ ಹೊಟ್ಟೆಯ ಸುತ್ತಲೂ ಸ್ಟ್ರೆಚ್ ಮಾರ್ಕ್ಸ್ ಗಳು ಆಗಿದ್ದರೆ ಈ ಎಣ್ಣೆಯ ಲೇಪನದಿಂದ ಈ ಸ್ಟ್ರೆಚ್ ಮಾರ್ಕ್ ಗಳು ನಿವಾರಣೆ ಆಗುತ್ತವೆ.

ಮತ್ತು ಚರ್ಮವನ್ನು ಮೋಯಿಷ್ಚರ್ ಮಾಡುತ್ತದೆ. ಅಷ್ಟೇ ಅಲ್ಲದೇ ನಿಮ್ಮ ದೇಹದ ಯಾವುದೇ ಭಾಗದಲ್ಲಿ ನೀವು ತುರಿಕೆಯನ್ನು ಕಂಡರೆ ಕೊಬ್ಬರಿ ಎಣ್ಣೆಯಲ್ಲಿ ಸ್ವಲ್ಪ ನಿಂಬೆ ರಸವನ್ನು ಹಾಕಿ ಚೆನ್ನಾಗಿ ತುರಿಕೆ ಇರುವ ಜಾಗದಲ್ಲಿ ಹಚ್ಚಿ ಮಸಾಜ್ ಮಾಡಿದರೆ ತುರಿಕೆ ಕಚ್ಚಿ ಎಲ್ಲವೂ ಮಾಯವಾಗುತ್ತದೆ. ಒಂದು ಚಮಚ ಎಣ್ಣೆಯಲ್ಲಿ ಒಂದು ಚಮಚ ನೀರನ್ನು ಹಾಕಿ ಕಲಕಿ ಪಾದದ ಕೆಳಗೆ ಹಚ್ಚುವುದರಿಂದ ದೇಹದ ಉಷ್ಣಾಂಶ ಕಡಿಮೆ ಆಗುತ್ತದೆ. ಡಿ ಹೈಡ್ರೇಟ್ ಕಡಿಮೆ ಆಗುತ್ತದೆ. ಕೊಬ್ಬರಿ ಎಣ್ಣೆಯನ್ನೂ ಅಡುಗೆಯಲ್ಲಿ ಬಳಕೆ ಮಾಡುವುದರಿಂದ ಸಕ್ಕರೆ ಕಾಯಿಲೆಯನ್ನು ದೂರ ಮಾಡಬಹುದು. ಕೂದಲಿನ ಬುಡಕ್ಕೆ ಕೊಬ್ಬರಿ ಎಣ್ಣೆ ಮಸಾಜ್ ಅತ್ಯುತ್ತಮ. ನೋಡಿದ್ರಲಾ ಕೊಬ್ಬರಿ ಎಣ್ಣೆಯನ್ನು ಹೇಗೆ ಬಳಕೆ ಮಾಡಬೇಕೆಂದು. ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ.

Leave a Reply

Your email address will not be published. Required fields are marked *