ನಿಜವಾಗಿಯೂ ನಿಮ್ಮ ಮನೆ ಹತ್ತಿರ ಯಾವ ಪಕ್ಷಿ ಬಂದರೆ ದರಿದ್ರ ಮತ್ತು ಅಶುಭ ಗೊತ್ತಾ

ಜ್ಯೋತಿಷ್ಯ ಧಾರ್ಮಿಕ

ನಮಸ್ತೇ ಪ್ರಿಯ ಓದುಗರೇ, ನಮ್ಮ ಹಿರಿಯರು ಕೆಲವು ವಿಷಯಗಳ ಮೇಲೆ ತುಂಬಾನೇ ನಂಬಿಕೆಯನ್ನು ಇಟ್ಟಿರುತ್ತಾರೆ. ನಮ್ಮ ವಾಸ್ತು ಶಾಸ್ತ್ರದಲ್ಲಿ ಈ ರೀತಿಯಾಗಿ ಉಲ್ಲೇಖಿಸಲಾಗಿದೆ. ಅಂದರೆ ಕೆಲವು ಪಕ್ಷಿಗಳ ಬಗ್ಗೆ ತಿಳಿಸಲಾಗಿದೆ. ಇವುಗಳು ಏನಾದ್ರೂ ನಿಮ್ಮ ಮನೆಗೆ ಬಂದರೆ ನಿಮ್ಮ ಇಡೀ ಕುಟುಂಬವನ್ನೇ ನಾಶ ಮಾಡಿ ಬಿಡುತ್ತವೆ. ಹೌದು ಇನ್ನೂ ಗರ್ಭಿಣಿಯರು ಇದ್ದ ಮನೆಗೆ ಅಂತೂ ಈ ಪಕ್ಷಿಗಳು ಎಂದಿಗೂ ಬರಬಾರದು. ಇಲ್ಲವಾದರೆ ನಿಮ್ಮ ಮನೆಯ ವಾತಾವರಣ ಗಂಭೀರವಾದ ಸ್ಥಿತಿಗೆ ತಲುಪುತ್ತದೆ. ಕೆಲವು ಪಕ್ಷಿಗಳು ಇಷ್ಟೊಂದು ಅಶುಭವಾಗಿ ಇರುತ್ತವೆ ಅಂದರೆ ಮನೆಯಲ್ಲಿ ಅನಾವಶ್ಯಕವಾದ ಖರ್ಚು ವೆಚ್ಚಗಳು ಶುರು ಆಗುತ್ತವೆ. ಹಣದ ಕೊರತೆ ಪ್ರಾರಂಭವಾಗಿ ಕಡು ಬಡತನ ಬರಲು ಶುರು ಆಗುತ್ತದೆ. ಇವುಗಳು ಮನೆಗೆ ಬಂದು ಹೋಗುವ ಸಂಕೇತವೇ ಹಣವನ್ನು ವ್ಯರ್ಥ ಮಾಡುವುದು ಎಂದು ಅರ್ಥವಾಗುತ್ತದೆ.

ನಮ್ಮ ಹಿರಿಯರು ಕೆಲವು ಆಚಾರ ವಿಚಾರಗಳಲ್ಲಿ ತುಂಬಾನೇ ನಂಬಿಕೆಯನ್ನು ಇಡುತ್ತಿದ್ದರು. ಹೀಗಾಗಿ ಕೆಲವು ಪಕ್ಷಿಗಳು ಮನೆಗೆ ಬರುವುದು ಶುಭ ಮತ್ತು ಅಶುಭ ಅಂತ ಕೂಡ ತಿಳಿದಿದ್ದಾರೆ. ಈ ಪಕ್ಷಿಗಳು ಮನೆಗೆ ಬಂದರೆ ನೀವು ತೀರ ಬಡವರು ಅಗುತ್ತೀರಿ. ನಿಮ್ಮಲ್ಲಿ ಹಣ ಉಳಿದಂತೆ ಸೂಚಿಸುತ್ತವೆ. ಕೆಲವು ಪಕ್ಷಿಗಳು ಆಶುಭದ ಸಂಕೇತವನ್ನು ನೀಡಿದರೆ ಇನ್ನೂ ಕೆಲವು ಶುಭದ ಸಂಕೇತವನ್ನು ನೀಡುತ್ತವೆ. ಹಾಗಾದರೆ ಬನ್ನಿ ಅವುಗಳು ಯಾವುವು ಅಂತ ತಿಳಿಯೋಣ. ಮೊದಲಿಗೆ ಅಶುಭವನ್ನು ಸೂಚಿಸುವ ಪಕ್ಷಿಗಳ ಬಗ್ಗೆ ತಿಳಿಯೋಣ. ಮೊದಲಿಗೆ ಪಾರಿವಾಳ ಪಕ್ಷಿಗಳು. ಈ ಹಕ್ಕಿಗಳು ನಿಮ್ಮ ಮನೆಯಲ್ಲಿ ಗೂಡುಗಳನ್ನು ಕಟ್ಟಿದರೆ ಅಶುಭವಾದ ಸಂಕೇತವಾಗಿದೆ. ಇದರ ಅರ್ಥ ಪಾರಿವಾಳಗಳು ದಾರಿದ್ರ್ಯ ಲಕ್ಷ್ಮೀದೇವಿ ಸಂಕೇತವಾಗಿದೆ. ಎಲ್ಲಿ ಪಾರಿವಾಳಗಳು ಇರುತ್ತವೆ ಅಲ್ಲಿ ತಾಯಿ ಲಕ್ಷ್ಮೀದೇವಿ ವಾಸ ಮಾಡುವುದಿಲ್ಲ. ಪಾರಿವಾಳಗಳು ತುಂಬಾನೇ ಗಲೀಜು ಮಾಡುತ್ತವೆ. ಗಲೀಜು ಇದ್ದ ಸ್ಥಳದಲ್ಲಿ ತಾಯಿ ಲಕ್ಷ್ಮೀದೇವಿ ವಾಸ ಮಾಡುವುದಿಲ್ಲ.

ಹೀಗಾಗಿ ಹಣವೂ ವ್ಯರ್ಥವಾಗುತ್ತಾ ಹೋಗುತ್ತದೆ. ಅನಾವಶ್ಯಕವಾಗಿ ಹಣವೂ ಖರ್ಚು ಆಗಿ ಹಣವೂ ವ್ಯರ್ಥ ಆಗಿ ಆಗಿ ನೀವು ಬರಿ ಕೈಯಲ್ಲಿ ಕುಳಿತುಕೊಳ್ಳುತ್ತೀರಿ. ಆದ್ದರಿಂದ ಅಕ್ಕ ಪಕ್ಕ ಪಾರಿವಾಳಗಳ ಗೂಡು ಮತ್ತು ಪಕ್ಷಿಗಳು ಇಲ್ಲದಂತೆ ನೋಡಿಕೊಳ್ಳಿ. ಇನ್ನೂ ಎರಡನೆಯದು ಬಾವಲಿಗಳು. ನಿಮ್ಮ ಮನೆಗೆ ಏನಾದರೂ ಬಾವಲಿಗಳು ಬರುತ್ತಿದ್ದರೆ ಇದರ ಅರ್ಥ ನಿಮ್ಮ ಮನೆಗೆ ರೋಗಗಳು ಬರುತ್ತವೆ ಸಾವುಗಳು ಆಗುತ್ತವೆ ನಾಶ ವಿನಾಶ ಆಗುತ್ತದೆ ಅಷ್ಟೇ ಅಲ್ಲದೇ ಕುಟುಂಬಗಳು ಕೂಡ ಒಡೆದು ಹೋಗುತ್ತವೆ ಎಂದು ಅರ್ಥ. ಇನ್ನೂ ಕಾಗೆಗಳು. ಹೌದು ಪದೇ ಪದೇ ಕಾಗೆಗಳು ಮನೆಗೆ ಬರುವುದು ಹಾಗೂ ಮನೆಯಲ್ಲಿ ಗೂಡು ಕಟ್ಟುವುದು ಅಶುಭ ಅಂತ ತಿಳಿಯಲಾಗಿದೆ. ಅಷ್ಟೇ ಅಲ್ಲದೇ ಕನಸಿನಲ್ಲಿ ಕೂಡ ಕಾಗೆಯ ಆಗಮನ ಆಗುವುದು ಅಶುಭದ ಸಂಕೇತವಾಗಿದೆ. ಇನ್ನೂ ಕನಸಿನಲ್ಲಿ ಕಾಗೆ ಬಂದರೆ ಅದು ದುರ್ಭಾಗ್ಯದ ಸಂಕೇತವಾಗಿದೆ. ಇನ್ನೂ ಕೌಜುಗ ಪಕ್ಷಿ.

ಇದು ಮರದ ಮೇಲೆ ಕುಳಿತು ಕೂಗಿದರೆ ಎಲ್ಲೋ ಆಗುವ ದುರ್ಘಟನೆಯ ಸೂಚನೆ ಆಗಿದೆ. ಈ ಪಕ್ಷಿಗಳ ವಿಶೇಷತೆ ಇವುಗಳು ಸಾಮಾನ್ಯವಾಗಿ ಭೂಮಿಯ ಮೇಲೆ ಹೆಚ್ಚಾಗಿರುತ್ತದೆ ಅಷ್ಟೇ ಅಲ್ಲದೆ ಭೂಮಿಯ ಮೇಲೆ ಮೊಟ್ಟೆಯನ್ನು ಹಾಕುತ್ತವೆ ಒಂದು ವೇಳೆ ಇವುಗಳು ಏನಾದ್ರೂ ಹಾರಾಡುವುದು ಹಾಗೂ ಮರದ ಮೇಲೆ ಕುಳಿತುಕೊಳ್ಳುವುದು ಹಾಗೂ ಮನೆಯ ಮೇಲೆ ಬಂದು ಕುಳಿತುಕೊಂಡರೆ ಇದು ಯಾವತ್ತಿಗೂ ಶುಭ ಶಕುನ ಅಲ್ಲ ಎಂದು ತಿಳಿಯಲಾಗಿದೆ. ಗೂಬೆಗಳು ಕೂಡ ಪದೇ ಪದೇ ಮನೆಗೆ ಹಾರಿ ಬರುವುದು ಶುಭವಲ್ಲ. ಗೂಬೆಗಳು ಮನೆಯ ಮುಂದೆ ಕುಳಿತು ಕೂಗಾಡಿದರೆ ವಿನಾಶವೂ ಕಟ್ಟಿಟ್ಟ ಬುತ್ತಿ ಅಂತ ಹೇಳಬಹುದು. ನೋಡಿದ್ರಲಾ ಈ ಪಕ್ಷಿಗಳು ಮನೆಗೆ ಬಂದರೆ ತುಂಬಾನೇ ಜಾಗರೂಕಾಗಿರಿ. ಹಾಗಾದರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಶುಭದಿನ.

Leave a Reply

Your email address will not be published. Required fields are marked *