ಗೋರಂಟಿ ಹಚ್ಚಿಕೊಂಡರೆ ಸರ್ಪಸುತ್ತು ಸಕ್ಕರೆ ಕಾಯಿಲೆ ದೇಹದ ಉಷ್ಣತೆ ಸಮಸ್ಯೆಗಳು ದೂರವಾಗುತ್ತವೆ

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ಮೆಹಂದಿ ಅಥವಾ ಮದರಂಗಿ ಅಂದರೆ ಮಹಿಳೆಯರಿಗೆ ಅಚ್ಚು ಮೆಚ್ಚು. ಇದನ್ನು ಇಂಗ್ಲಿಷ್ ನಲ್ಲಿ ಹೆನ್ನಾ ಮೆಹಂದಿ ಅಂತ ಕರೆಯುತ್ತಾರೆ. ಈ ಮೆಹಂದಿ ಅನ್ನು ಕೈ ಕಾಲುಗಳಿಗೆ ಹಚ್ಚಿಕೊಳ್ಳುವುದಲ್ಲದೆ ಇದು ಒಂದು ಮೆಡಿಸಿನ್ ಆಗಿ ಕೂಡ ಬಳಕೆ ಮಾಡಬಹುದು. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ಮದರಂಗಿಯ ಆರೋಗ್ಯಕರ ಲಾಭಗಳ ಬಗ್ಗೆ ತಿಳಿಯೋಣ. ಮೆಹಂದಿಯನ್ನು ಸೌಂದರ್ಯ ವರ್ಧಕ ಅಂತ ಕರೆದರೆ ತಪ್ಪಾಗಲಾರದು. ಮೆಹಂದಿಯನ್ನು ನಾವು ಸಾಮಾನ್ಯವಾಗಿ ಕೈಗಳಿಗೆ ಕಾಲುಗಳಿಗೆ ಜಾತ್ರೆಯಲ್ಲಿ ಮದುವೆ ಸಮಾರಂಭದಲ್ಲಿ ಹಬ್ಬ ಹರಿದಿನಗಳಲ್ಲಿ ಹೆಚ್ಚಾಗಿ ಮಹಿಳೆಯರು ಹಚ್ಚಿಕೊಳ್ಳುತ್ತಾರೆ. ಅಷ್ಟೇ ಅಲ್ಲದೇ ಕೂದಲಿಗೂ ಕೂಡ ನಾವು ಮೆಹಂದಿ ಅನ್ನು ಹಚ್ಚಿಕೊಳ್ಳುತ್ತೇವೆ. ಹೌದು ಇದರಿಂದ ತಲೆಯಲ್ಲಿ ಹೊಟ್ಟು, ತಲೆಯಲ್ಲಿ ತುರಿಕೆ, ಹೇನು ಕೆರೆತ ಎಲ್ಲವೂ ಕಡಿಮೆ ಆಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಕೂದಲು ಉದುರುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ತಿಂಗಳಿಗೆ ಒಂದು ಬಾರಿ ಅಥವಾ ತಿಂಗಳಿನಲ್ಲಿ ಎರಡು ಬಾರಿಯಾದರೂ ಈ ಮೆಹಂದಿ ಪ್ಯಾಕ್ ಹಾಕಿಕೊಳ್ಳಿ. ಇದರಿಂದ ನಿಮ್ಮ ಕೂದಲು ದಷ್ಟ ಪುಷ್ಟವಾಗುತ್ತವೆ ದಟ್ಟವಾಗಿ ಬೆಳೆಯುತ್ತವೆ.

ಅಷ್ಟೇ ಅಲ್ಲದೇ ತಲೆನೋವು ಮೈಗ್ರೇನ್ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ ಈ ಮೆಹಂದಿ. ಇನ್ನೂ ನೀವು ಮನೆಯಲ್ಲಿ ಏನಾದರೂ ನೈಸರ್ಗಿಕವಾದ ಎಣ್ಣೆಯನ್ನು ತಯಾರಿಸಿ ಬಳಕೆ ಮಾಡುತ್ತಿದ್ದರೆ ಆಗ ನೀವು ಮೆಹಂದಿ ಗಿಡದ ಎಲೆಗಳನ್ನು ಹಾಕಿದರೆ ನಿಮಗೆ ನಿದ್ರಾ ಹೀನತೆ ಅನ್ನುವ ಸಮಸ್ಯೆ ಬರುವುದಿಲ್ಲ. ಹೌದು ಇನ್ ಸೈನೋಮಿಯ ಸಮಸ್ಯೆಗೆ ಮೆಹಂದಿ ಎಲೆಗಳು ರಾಮಬಾಣ. ಕೆಲವರ ದೇಹವು ಬಹಳ ಉಷ್ಣತೆಯಿಂದ ಕೂಡಿರುತ್ತದೆ. ಇದರಿಂದ ಅವರ ಕೈ ಕಾಲುಗಳಲ್ಲಿ ಉರಿ ಬರುತ್ತದೆ. ಇದಕ್ಕೆ ಡಿಹೈಡ್ರೇಟ್ ಅಂತ ಕೂಡ ಕರೆಯುತ್ತಾರೆ. ಇದರಿಂದ ಅವರು ಬೇಗನೆ ಸುಸ್ತು ಆಯಾಸಕ್ಕೆ ಒಳಗಾಗುತ್ತಾರೆ.
ಇವೆಲ್ಲವೂ ದೇಹದಲ್ಲಿ ಉಷ್ಣತೆ ಅಧಿಕವಾದಾಗ ಕಾಣಿಸಿಕೊಳ್ಳುವ ಲಕ್ಷಣಗಳು. ಅದಕ್ಕಾಗಿ ನೀವು ಈ ಮೆಹಂದಿ ಎಲೆಗಳನ್ನು ಚೆನ್ನಾಗಿ ಜಜ್ಜಿ ಅದರ ಪೇಸ್ಟ್ ಅನ್ನು ನಿಮ್ಮ ಪಾದಕ್ಕೆ ಹಚ್ಚಿಕೊಳ್ಳಿ. ಇದರಿಂದ ಉರಿ ಕಡಿಮೆ ಆಗಿ ದೇಹವನ್ನು ವಿಶ್ರಾಂತಿಯಿಂದ ಕಾಪಾಡುತ್ತದೆ. ದೇಹಕ್ಕೆ ನೈಸರ್ಗಿಕವಾಗಿ ತಂಪು ನೀಡುತ್ತದೆ. ಜೊತೆಗೆ ನಮ್ಮ ದೇಹದಲ್ಲಿ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಮಧುಮೇಹಿಗಳಿಗೆ ಗೋರಂಟಿ ಹೇಳಿ ಮಾಡಿಸಿರುವ ಸೂಪರ್ ಮನೆಮದ್ದು ಅಂತ ಹೇಳಬಹುದು. ದೇಹದಲ್ಲಿ ಇನ್ಸುಲಿನ್ ಕೊರತೆ ಆದರೆ ದೇಹದಲ್ಲಿ ತುರಿಕೆ ಕಜ್ಜಿ ಶುರು ಆಗುತ್ತದೆ.

ಅದಕ್ಕಾಗಿ ಮಧುಮೇಹಿಗಳು ತಮ್ಮ ಕೈಕಾಲುಗಳಿಗೆ ಮೆಹಂದಿ ಹಚ್ಚುವುದರಿಂದ ಯಾವುದೇ ರೀತಿಯ ಸ್ಕಿನ್ ಅಲರ್ಜಿಯನ್ನು ಹೋಗಲಾಡಿಸಿಕೊಳ್ಳಬಹುದು. ಹಾಗೂ ದೇಹದಲ್ಲಿ ಸರಿಯಾಗಿ ರಕ್ತ ಪರಿಚಲನೆ ಚೆನ್ನಾಗಿ ಆಗುವಂತೆ ನೋಡಿಕೊಳ್ಳುತ್ತದೆ ಈ ಮೆಹಂದಿ ಬಳಕೆಯಿಂದ.ಇನ್ನೂ ನಿಮ್ಮ ಮೈ ತುಂಬಾ ನರಹುಲಿಗಳು ಆಗುತ್ತಿದ್ದರೆ ಮೆಹಂದಿ ಪೇಸ್ಟ್ ಅನ್ನು ಸತತವಾಗಿ ಹಚ್ಚಿರಿ. ಇದರಿಂದ ಅವುಗಳು ಉದುರಿ ಹೋಗುತ್ತವೆ ಜೊತೆಗೆ ಮತ್ತೆ ನರಹುಲಿ ಆಗದಂತೆ ತಡೆಯುತ್ತದೆ. ಇನ್ನೂ ಕಾಲು ಬೆರಳಿನಲ್ಲಿ ಆಗುವ ಫಂಗಸ್ ಇನ್ಫೆಕ್ಷನ್ ಸಂಧಿಗಳಲ್ಲಿ ತುರಿಕೆ, ಹಿಮ್ಮಡಿಯಲ್ಲಿ ತುರಿಕೆ ಆದರೆ ಈ ಮೆಹಂದಿ ಎಲೆಗಳು ದೂರ ಮಾಡುತ್ತದೆ. ಮೆಹಂದಿಯಲ್ಲಿ ಆಂಟಿ ಇನ್ಫ್ಲಾಮೆಟರಿ ಗುಣಗಳು ನಮ್ಮ ನರಕೋಶಗಳಿಗೆ ಉತ್ತಮ. ಸರ್ಪ ಸುತ್ತು ಕಾಯಿಲೆಯನ್ನು ಕೂಡ ಗುಣಪಡಿಸುವ ಶಕ್ತಿ ಸಾಮರ್ಥ್ಯವನ್ನು ಈ ಮದರಂಗಿ ಹೊಂದಿದೆ. ಇದನ್ನು ನೀವು ಜಜ್ಜಿ ನೋವು ಇರುವ ಜಾಗದಲ್ಲಿ ಹಚ್ಚಿದರೆ ನೋವು ನಿವಾರಕ ಆಗುತ್ತದೆ ಜೊತೆಗೆ ದೇಹದ ಮತ್ತಷ್ಟು ಭಾಗಕ್ಕೆ ಹರಡದಂತೆ ನೋಡಿಕೊಳ್ಳುತ್ತದೆ. ಇದರಲ್ಲಿರುವ ಆಂಟಿ ಬಯೋಟಿಕ್ ಗುಣಗಳು ಸುಟ್ಟ ಗಾಯವನ್ನು ಗುಣಪಡಿಸುತ್ತದೆ.

Leave a Reply

Your email address will not be published. Required fields are marked *