ನಮಸ್ತೇ ಪ್ರಿಯ ಓದುಗರೇ, ಬ್ರಹ್ಮ ಕಮಲ ನಮ್ಮ ಹಿಂದೂ ಧರ್ಮದಲ್ಲಿ ಬಹಳ ಮಹತ್ವದ ಹೂವು ಆಗಿದೆ. ಬ್ರಹ್ಮ ಕಮಲ ಹೆಸರನ್ನು ಸಾಮಾನ್ಯವಾಗಿ ಕೇಳಿಯೇ ಇರುತ್ತೀರಿ. ಇದು ವಿಶೇಷವಾಗಿ ಭಾರತದ ಉತ್ತರಾಖಂಡದ ಸ್ಥಳೀಯ ಹೂವು, ವೈಜ್ಞಾನಿಕವಾಗಿ ಸಸೆರಿಯಾ ಒಬೊವೆಲ್ಟಾ ಎಂಬ ಹೆಸರಿದೆ. ಬ್ರಹ್ಮ ಕಮಲ ಸಾಮಾನ್ಯವಾಗಿ ವರ್ಷದಲ್ಲಿ ಒಂದೇ ಬಾರಿ ರಾತ್ರಿ ಸಮಯದಲ್ಲಿ ಅರಳುವ ಹೂವು ಆಗಿದೆ. ಈ ಬ್ರಹ್ಮ ಕಮಲ ಶಾಸ್ತ್ರದಲ್ಲಿ ಉಲ್ಲೇಖಗೊಂಡ ಹೂವಾಗಿದೆ. ಹಿಂದೂ ಹೆಸರು ಪಡೆದಿರುವ ಈ ಬ್ರಹ್ಮ ಕಮಲ ಬ್ರಹ್ಮನ ಜನನಕ್ಕೆ ಕಾರಣವಾಗಿದೆ. ಅಥವಾ ಈ ಹೂವಿನಿಂದಲೇ ಬ್ರಹ್ಮ ದೇವನ ಜನನ ಆಗಿದೆ ಅಂತ ಹೇಳಲಾಗುತ್ತದೆ. ಇನ್ನೂ ನೀವು ಶಾಸ್ತ್ರದಲ್ಲಿ ಈ ಒಂದು ಶಿವ ಪಾರ್ವತಿಯ ಕಥೆಯನ್ನು ನೀವು ಕೇಳಿರಬಹುದು. ಒಂದು ದಿನ ಪಾರ್ವತಿ ದೇವಿಯು ಸ್ನಾನ ಮಾಡಲು ಹೋಗುವಾಗ ಗಣಪತಿಯ ಮೂರ್ತಿಯನ್ನು ಮಾಡಿ ಅದಕ್ಕೆ ಜೀವವನ್ನು ಕೊಟ್ಟು ನಾನು ಸ್ನಾನ ಮಾಡಿ ಬರುವವರೆಗೂ ಯಾರಿಗೂ ಕೈಲಾಸದಲ್ಲಿ ಒಳಗಡೆ ಪ್ರವೇಶಿಸಲು ಅನುಮತಿ ಕೊಡಬೇಡ ಎಂದು ಗಣೇಶನಿಗೆ ಹೇಳಿ ಹೋಗುತ್ತಾಳೆ.
ತಾಯಿಯ ಮಾತನ್ನು ಚಾಚೂ ತಪ್ಪದೇ ಪಾಲನೆ ಮಾಡುತ್ತಿರುವ ಗಣೇಶನೂ ಶಿವನ ಕೋಪಕ್ಕೆ ತುತ್ತಾಗುತ್ತಾನೆ. ಕೋಪದಲ್ಲಿ ಶಿವನು ಗಣಪತಿಯ ರುಂಡವನ್ನು ಛೇಧಿಸುತ್ತಾನೆ. ಇದನ್ನು ಕಂಡ ಪಾರ್ವತಿ ದೇವಿಯು ತುಂಬಾನೇ ದುಃಖವನ್ನು ವ್ಯಕ್ತ ಪಡಿಸುತ್ತಾಳೆ. ಹೀಗಾಗಿ ಆಕೆಯ ದುಃಖವನ್ನು ತಾಳಲಾರದೆ ಉತ್ತರ ದಿಕ್ಕಿನಲ್ಲಿ ಇರುವ ಗಜೇಂದ್ರ ಎಂಬ ಆನೆಯ ಮುಖವನ್ನು ತಂದು ಗಣಪತಿಯ ಮುಖಕ್ಕೆ ಜೋಡಣೆ ಮಾಡಲಾಗುತ್ತದೆ. ಮುಖವನ್ನು ಜೋಡಣೆ ಮಾಡಲಾಯಿತು ಆದರೆ ಜೀವವನ್ನು ತುಂಬಲು ಸ್ವಾಮೀಜಿಗಳು ಬ್ರಹ್ಮ ಕಮಲವನ್ನು ಬಳಕೆ ಮಾಡಲಾಯಿತು ಅಂತ ಶಾಸ್ತ್ರದಲ್ಲಿ ಉಲ್ಲೇಖಗಳು ತಿಳಿಸುತ್ತವೆ. ಇದು ಒಂದು ರೀತಿಯಾಗಿ ಶಾಸ್ತ್ರದ ಮೂಲಕ ನಾವು ತಿಳಿದುಕೊಂಡರೆ ಇದರಲ್ಲಿ ವೈದ್ಯಕೀಯ ಅಂಶ ಅಡಗಿದೆ ಎಂದು ಸಹ ಹೇಳಲಾಗುತ್ತದೆ. ಇನ್ನೂ ಪಾಂಡವರು ವನವಾಸದಲ್ಲಿ ಇರುವಾಗ ದ್ರೌಪದಿಯ ಕಣ್ಣಿಗೆ ಸುಂದರವಾದ ಒಂದು ಬ್ರಹ್ಮ ಕಮಲ ಹೂವು ಕಾಣಿಸುತ್ತದೆ. ಅದನ್ನು ಇಷ್ಟ ಪಟ್ಟ ದ್ರೌಪದಿ ತೆಗೆದುಕೊಳ್ಳುವಷ್ಟರಲ್ಲಿ ಸುಂದರವಾದ ಕಮಲದ ಹೂವು ಜಾರಿ ಉದುರಿ ಹೋಗುತ್ತವೆ. ಹೀಗಾಗಿ ಬಲು ಮೆಚ್ಚಿದ ಈ ಬ್ರಹ್ಮ ಕಮಲ ಬೇಕೆಂದು ದ್ರೌಪದಿ ಇಚ್ಛಿಸಿ ಭೀಮನಿಗೆ ತಂದುಕೊಡಲು ಹೇಳುತ್ತಾಳೆ. ಅದಕ್ಕಾಗಿ ಭೀಮನು ಕಾಡಿಗೆ ಹೋಗುತ್ತಾನೆ.
ಈ ರೀತಿ ಹಲವಾರು ಪುರಾಣಗಳು ಕಥೆಗಳು ಉಲ್ಲೇಖಗೊಂಡಿದೆ ಅಂತ ತಿಳಿದು ಬಂದಿದೆ. ಈ ಬ್ರಹ್ಮ ಕಮಲ ಹಿಮಾಲಯದ ತಪ್ಪಲಿನಲ್ಲಿ 14 ವರ್ಷಗಳಿಗೊಮ್ಮೆ ಅರಳುವ ಹೂವು ಆಗಿದೆ. ಆದರೆ ವರ್ಷಕ್ಕೊಮ್ಮೆ ಅರಳುವ ಈ ಸಾಮಾನ್ಯ ಹೂವು ಆಗಿದ್ದರು ಕೂಡ ಇದರಲ್ಲಿ ಆರೋಗ್ಯಕರ ಗುಣಗಳನ್ನು ಹೊಂದಿದೆ. ಇನ್ನೂ ಈ ಹೂವು ಅರಳುವುದನ್ನು ರಾತ್ರಿ ಸಮಯದಲ್ಲಿ ಯಾರು ನೋಡುತ್ತಾರೆ ಅವರಿಗೆ ಅದೃಷ್ಟವೂ ಒಲಿದು ಬರುತ್ತದೆ. ಇದು ರಾತ್ರಿ ಸಮಯದಲ್ಲಿ ಅರಳಿ ಮತ್ತೆ ಸ್ವಲ್ಪ ಸಮಯದಲ್ಲಿ ಮುದುಡಿ ಹೋಗುತ್ತದೆ. ಇದನ್ನು ಸಾಮಾನ್ಯವಾಗಿ ಎಲ್ಲರೂ ಮನೆಯ ಹತ್ತಿರ ಬೆಳೆಯುತ್ತಾರೆ. ಆಷಾಢ ಮಾಸದಲ್ಲಿ ಈ ಹೂವು ಅರಳುವುದನ್ನು ನಾವು ಕಾಣಬಹುದು.
ಇದರ ಬಣ್ಣವು ತಿಳಿ ಬಿಳಿ ಗುಲಾಬಿ ಹೂವುಗಳನ್ನು ಹೊಂದಿರುತ್ತದೆ. ಇದು ಲಕ್ಷ್ಮೀದೇವಿ ಗೆ ಬಲು ಪ್ರಿಯ. ಈ ಹೂವಿನ ವಿಶೇಷವಾದ ಗುಣ ಎಂದರೆ, ಇದು ಕೇವಲ ಮಧ್ಯ ರಾತ್ರಿಯಲ್ಲಿ ಅರಳಿ ಸ್ವಲ್ಪ ಸಮಯ ಸಲ್ಲಿ ಮಾತ್ರ ಮುದುಡಿ ಹೋಗುತ್ತದೆ. ಈ ಹೂವು ಅರಳುವುದನ್ನು ಯಾರು ನೋಡುತ್ತಾರೆ ಯೋ ಅವರ ಅದೃಷ್ಟವೂ ಬದಲಾಗುತ್ತದೆ. ಅವರ ಆಸೆಗಳು ಕನಸುಗಳು ಈಡೇರುತ್ತವೆ. ಆರೋಗ್ಯಕ್ಕೆ ಕೂಡ ಇದು ಒಳ್ಳೆಯದು ಬ್ರಹ್ಮ ಕಮಲದ ಹೂವು ಯಕೃತ್ತಿಗೆ ಅತ್ಯುತ್ತಮ ಟಾನಿಕ್. ಇದು ಯಕೃತ್ತಿನ ಮೇಲೆ ಫ್ರೀ ರಾಡಿಕಲ್ ಹಾನಿಕಾರಕ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ನೋಡಿದ್ರಲಾ ಬ್ರಹ್ಮ ಕಮಲದ ಅದ್ಭುತವಾದ ಮಾಹಿತಿಯನ್ನು. ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಶುಭದಿನ.