ನಿಂಬೆ ಹಣ್ಣು ಮಾಂಸಾಹಾರದ ಜೊತೆಗೆ ಸೇವನೆ ಮಾಡುವುದು ತುಂಬಾನೇ ದೊಡ್ಡ ತಪ್ಪು. ಯಾಕೆ ಅನ್ನುತ್ತೀರಾ ಇಲ್ಲಿದೆ ಸತ್ಯ

ಆರೋಗ್ಯ

ನಮಸ್ತೇ ಪ್ರಿಯ ಸ್ನೇಹಿತರೆ, ನಾವು ಮಾಂಸಾಹಾರವನ್ನು ಸೇವನೆ ಮಾಡುವಾಗ ನಿಂಬೆ ರಸವನ್ನು ಸೇರಿಸಿ ತಿನ್ನುತ್ತೇವೆ. ಹೌದು ಇದನ್ನು ಸಾಮಾನ್ಯವಾಗಿ ಎಲ್ಲರೂ ಮಾಡುತ್ತಾರೆ. ಆದರೆ ಆಯುರ್ವೇದಲ್ಲಿ ಇದನ್ನು ತಪ್ಪು ಅಂತ ಪರಿಗಣಿಸಲಾಗಿದೆ. ಹೌದು ಬಾಯಿಯ ರುಚಿಗೆಂದು ನಿಂಬೆ ರಸವನ್ನು ಮಾಂಸಾಹಾರದ ಮೇಲೆ ಹಿಂಡಿಕೊಂಡು ಸೇವನೆ ಮಾಡುತ್ತಾರೆ. ಆದರೆ ಇದು ಆರೋಗ್ಯದ ದೃಷ್ಟಿಯಿಂದ ಹಿತವಲ್ಲ ಎಂಬ ಮಾಹಿತಿಯನ್ನು ನಾವು ಇಂದಿನ ಲೇಖನದಲ್ಲಿ ತಿಳಿಸಿ ಕೊಡುತ್ತೇವೆ ಬನ್ನಿ. ಮೊದಲಿಗೆ ಸ್ನೇಹಿತರೇ ನೀವು ಮುಖ್ಯವಾಗಿ ತಿಳಿದುಕೊಳ್ಳಬೇಕು. ಮಾಂಸಾಹಾರ ಮತ್ತು ನಿಂಬೆ ಹಣ್ಣು ವಿರುದ್ಧವಾದ ಆಹಾರವಾಗಿದೆ. ಯಾವುದೇ ಕಾರಣಕ್ಕೂ ನೀವು ನಿಂಬೆ ಹಣ್ಣು ನಾನ್ ವೆಜ್ ನಲ್ಲಿ ಒಟ್ಟೊಟ್ಟಿಗೆ ಬಳಕೆ ಮಾಡಬಾರದು. ನಿಮಗೆ ತಿನ್ನಲು ಅಷ್ಟೊಂದು ಇಷ್ಟವಾದರೆ ಮಾಂಸಾಹಾರ ಸೇವನೆ ಮಾಡಿದ ನಂತರ ಒಂದು ಗಂಟೆ ಬಿಟ್ಟು ನೀವು ಸಲಾಡ್ ನಲ್ಲಿ ಅಥವಾ ನಿಂಬೆ ಹಣ್ಣಿನ ಜ್ಯೂಸ್ ಅನ್ನು ಕುಡಿಯಬಹುದು.

ಆಯುರ್ವೇದದಲ್ಲಿ ಇವೆರಡೂ ವಿರುದ್ಧ ಆಹಾರ ಅಂತ ಸಾಬೀತು ಮಾಡಲಾಗಿದೆ ಮೊದಲಿಗೆ ನಿಂಬೆ ಹಣ್ಣಿನ ರಸವನ್ನು ಯಾವುದೇ ಕಾರಣಕ್ಕೂ ಬಿಸಿಯಾದ ಆಹಾರದಲ್ಲಿ ಮಿಕ್ಸ್ ಮಾಡಬಾರದು. ವೈಜ್ಞಾನಿಕವಾಗಿ ನಿಂಬೆ ಹಣ್ಣು ಯಾವತ್ತಿಗೂ ಬಿಸಿ ಮಾಡಬಾರದು. ಇದರಲ್ಲಿ ಇರುವ ಕಾರ್ಬನ್ ಕಾಫೂಸ್ ಟಾಕ್ಸಿನ್ ಆಗಿ ಬದಲಾವಣೆ ಆಗುತ್ತದೆ. ಇದರ ಅರ್ಥ ವಿಷವಾಗಿ ಬದಲಾಗುತ್ತದೆ. ನಿಂಬೆ ಹಣ್ಣಿನಲ್ಲಿ ಇರುವ ಕಾರ್ಬನ್ ಕಾಪೂಸ್ ಗಾಳಿಯಲ್ಲಿ ಸೇರಿದಾಗ ಅದು ಇಬ್ಭಾಗವಾಗಿ ಬಿಡುತ್ತದೆ.
ಒಂದೇ ಸಾಮಾನ್ಯವಾದ ಮಾತಿನಲ್ಲಿ ಹೇಳಬೇಕು ಅಂದರೆ ನಮಗೆ ನೈಸರ್ಗಿಕವಾಗಿ ಸಿಗುವ ಎಲ್ಲ ಅಂಶಗಳು ನಾಶವಾಗಿ ಬಿಡುತ್ತವೆ. ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿ ಇರುತ್ತದೆ ಇದು ಬಿಸಿ ಮಾಡಿದಾಗ ಅಥವಾ ಬಿಸಿ ಪದಾರ್ಥಗಳಲ್ಲಿ ಇದನ್ನು ಹಾಕಿದರೆ ಈ ವಿಟಮಿನ್ ಸಿ ಅಂಶವೂ ನಶಿಸಿ ಹೋಗುತ್ತದೆ. ಇದರಿಂದ ಇದರಲ್ಲಿರುವ ಅವಶ್ಯಕ ಗುಣಗಳು ಟಾಕ್ಸಿನ್ ಆಗಿ ಬದಲಾಗುತ್ತವೆ. ಸಿಟ್ರಿಕ್ ಆಸಿಡ್ ಇರುವ ಆಹಾರಗಳನ್ನು ಎಂದಿಗೂ ಬಿಸಿ ಮಾಡಬಾರದು. ಇವುಗಳು ಬಿಸಿ ಮಾಡುವ ಆಹಾರಗಳು ಅಲ್ಲ. ಬಿಸಿ ಆಹಾರದ ಮೇಲೆ ನಿಂಬೆ ರಸ ಹಾಕಿದರೆ ಅದು ಕಾರ್ಬನ್ ಅನ್ನು ಬ್ರೇಕ್ ಮಾಡುತ್ತದೆ.

ಇದು ದೇಹದಲ್ಲಿ ಸೇರಿಕೊಂಡರೆ ದೇಹದಲ್ಲಿ ಫ್ರೀ ರಾಡಿಕಲ್ ಹೆಚ್ಚಾಗುತ್ತದೆ.ಈ ಪ್ರೋಸೆಸ್ ನಿಂದ ನಮ್ಮ ದೇಹದಲ್ಲಿ ಏರುಪೇರು ಆಗುತ್ತದೆ.ಆದ್ದರಿಂದ ಬಿಸಿ ಆಹಾರದ ಮೇಲೆ ಹಾಗೂ ಮಾಂಸಾಹಾರದ ಮೇಲೆ ನಿಂಬೆ ರಸವನ್ನು ಬೆರೆಸಿ ತಿನ್ನಬೇಡಿ. ಇನ್ನೂ ನಿಮಗೆ ಪ್ರಶ್ನೆ ಮೂಡಬಹುದು. ನಿಂಬೆ ಹಣ್ಣಿನ ರಸವನ್ನು ನಾವು ಬಿಸಿ ನೀರಿನಲ್ಲಿ ಹಾಕಿ ಕುಡಿಯಬಹುದೇ? ಎಂದು. ಹೌದು ಕೇವಲ ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ ಮಾತ್ರ ಕುಡಿಯಬೇಕು. ಇದು ಆರೋಗ್ಯಕ್ಕೆ ಒಳ್ಳೆಯದು ಅಂತ ಆಯುರ್ವೇದದಲ್ಲಿ ತಿಳಿಸಿದ್ದಾರೆ. ನಿಂಬೆ ಹಣ್ಣು ಬಿಸಿ ಪದಾರ್ಥಗಳ ಜೊತೆಗೆ ಸೇರಿದಾಗ ಆಕ್ಸಿಡೇಷನ್ ಪ್ರೋಸೆಸ್ ನಡೆಯುತ್ತದೆ. ಆಗ ವಿಷಕಾರಿ ಅಂಶಗಳನ್ನು ಬಿಡುಗಡೆ ಮಾಡುತ್ತದೆ. ಅದೇ ಆಹಾರವನ್ನು ನಾವು ಸೇವಿಸಿದರೆ ನಮ್ಮ ದೇಹದಲ್ಲಿ ಕೂಡ ಆಕ್ಸಿಡೇಶನ್ ಸಿಸ್ಟಂ ಪ್ರಾರಂಭ ಆಗುತ್ತದೆ. ಇದರಿಂದಾಗಿ ದೇಹದಲ್ಲಿ ಫ್ರೀ ರಾಡಿಕಲ್ ಹೆಚ್ಚಾಗುತ್ತದೆ. ಇವುಗಳು ಅನೇಕ ರೀತಿಯ ಆರೋಗ್ಯವನ್ನು ಹಾಳು ಮಾಡಲು ಕಾರಣ ಆಗುತ್ತವೆ. ಇದರ ಜೊತೆಗೆ ಫುಡ್ ಪಾಯಿಸನ್ ಆಗುತ್ತದೆ, ಹೊಟ್ಟೆಗೆ ಸಂಭಂದಿಸಿದ ಅಜೀರ್ಣತೆ, ಮಲಬದ್ಧತೆ ಹೊಟ್ಟೆ ಉಬ್ಬರ ಕೆಟ್ಟ ವಾಸನೆಯ ಹುಳಿ ತೇಗು, ಆಯಾಸ ಸುಸ್ತು ವಾಂತಿ ಪಿತ್ತ ಹೆಚ್ಚಾಗುತ್ತದೆ. ನೋಡಿದ್ರಲಾ ನಿಂಬೆ ಹಣ್ಣು ಬಿಸಿ ಪದಾರ್ಥಗಳ ಜೊತೆಗೆ ಸೇರಿಸುವುದರಿಂದ ಆಗುವ ಅಡ್ಡ ಪರಿಣಾಮಗಳನ್ನು. ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.ಶುಭದಿನ.

Leave a Reply

Your email address will not be published. Required fields are marked *