ಮೈಸೂರ್ ಸ್ಯಾಂಡಲ್ ಸೋಪ್ ಆರಂಭ ಆಗಿದ್ದು ಹೇಗೆ ಗೊತ್ತಾ ಮೈಸೂರು ಸ್ಯಾಂಡಲ್ ಸೋಪ್ ಪರಿಮಳಕ್ಕೆ ಶತಮಾನದ ಇತಿಹಾಸ

ಇತರೆ

ನಮಸ್ತೇ ಪ್ರಿಯ ಸ್ನೇಹಿತರೆ, ಮೈಸೂರು ಅಂದರೆ ನಮಗೆ ಮೊದಲಿಗೆ ನೆನಪಿಗೆ ಬರುವುದು ಈ ಮೈಸೂರ ಸ್ಯಾಂಡಲ್ ಸೋಪ್ ಎಂಬ ಹೆಸರು. ಹೌದು ನಮ್ಮ ಭಾರತ ದೇಶವನ್ನು ನೋಡಲು ಬರುವ ದೇಶ ವಿದೇಶಿಗರು ಕರ್ನಾಟಕಕ್ಕೆ ಬರಲು ನಮ್ಮ ಮೈಸೂರು ಕಾರಣವಾಗಿದೆ. ಅಷ್ಟೇ ಅಲ್ಲದೆ ಅವರು ಬರದೇ ಹೋಗುವುದಿಲ್ಲ. ಎಷ್ಟೋ ಜನರು ಮೈಸೂರು ಸ್ಯಾಂಡಲ್ ಸೋಪ್ ಅನ್ನು ಖರೀದಿಸಲು ಇಲ್ಲಿಗೆ ಹೆಚ್ಚಾಗಿ ಬರುತ್ತಾರೆ ಎಂಬ ಉದಾಹರಣೆಗಳು ಕೂಡ ಇವೆ. ಇನ್ನೂ ನಮ್ಮ ಕರ್ನಾಟಕ ರಾಜ್ಯದಲ್ಲಿ ಈ ಹೆಸರು ಕೇಳದೇ ಇರುವ ವ್ಯಕ್ತಿ ಯಾರು ಇಲ್ಲ. ಅಷ್ಟೊಂದು ಈ ಸೋಪು ಜನಪ್ರಿಯತೆಯನ್ನು ಗಳಿಸಿದೆ. ಅಷ್ಟೇ ಅಲ್ಲದೇ ಇದು ದೇಶ ವಿದೇಶಗಳಲ್ಲಿ ತಮ್ಮ ಕಂಪು ಸೂಸಿದೆ ಹಾಗೂ ಜನರ ಮೆಚ್ಚುಗೆಯನ್ನು ಪಡೆದಿದೆ. ಹಾಗೂ ಕರ್ನಾಟಕದ ಹೆಮ್ಮೆ ಎನ್ನಿಸಿಕೊಂಡ ಈ ಮೈಸೂರು ಸ್ಯಾಂಡಲ್ ಸೋಪ್ ಗೆ ನೂರು ವರ್ಷ ತುಂಬಿದೆ. ನಮ್ಮ ಭಾರತದಲ್ಲಿ ಅತಿ ದೊಡ್ಡ ಸೋಪು ನಿರ್ಮಾಣಗಳಲ್ಲಿ ಈ ಮೈಸೂರು ಸ್ಯಾಂಡಲ್ ಸೋಪ್ ಕೂಡ ಕಂಪನಿಯಲ್ಲಿ ಒಂದಾಗಿದೆ ಅಂತ ಹೇಳಬಹುದು.

ಇನ್ನೂ ಕರ್ನಾಟಕ ಸೋಪ್ ಆಂಡ್ ಡಿಟರ್ಜೆಂಟ್ ಕಂಪನಿಗಳನ್ನು ನಡೆಸುವ ನಮ್ಮ ಕರ್ನಾಟಕ ಸರ್ಕಾರ ಸಂಸ್ಥೆಯಲ್ಲಿ ಮೈಸೂರು ಮತ್ತು ದಕ್ಷಿಣ ಭಾರತದಲ್ಲಿ ಸದಾ ಕಾಲ ಉಲ್ಲೇಖಗೊಂಡಿದೆ. 1916 ರಲ್ಲಿ ಮೈಸೂರು ಸಂಸ್ಥಾನದ ರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಸರ್ಕಾರಿ ಸೋಪ್ ಫಾಕ್ಟರಿಯನ್ನು ಸ್ಥಾಪಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್, ವಿಶ್ವೇಶ್ವರಯ್ಯ, ಶ್ರೀ ಎಸ್ ಜಿ ಶಾಸ್ತಿ ಈ ಮೂವರು ಸ್ಯಾಂಡಲ್ ಸೋಪ್ ನ ಪ್ರವರ್ತಕರು. ಹೌದು ಈ ಸೋಪನ್ನು ಸಂಪೂರ್ಣವಾಗಿ ಗಂಧದ ಎಣ್ಣೆಯಿಂದ ತಯಾರಿಸಲಾಗುತ್ತದೆ. ಜಗತ್ತಿನ ಏಕೈಕ ಸಾಬೂನು ಎಂದು ಪ್ರಸಿದ್ಧತೆ ಪಡೆದುಕೊಂಡಿರುವ ಈ ಸೋಪು ನಮ್ಮ ಕರ್ನಾಟಕದ ಸರ್ಕಾರದಿಂದಲೆ ಸಿದ್ದ ಪಡಿಸುವ ಒಂದು ಸೂಪರ್ ಬ್ರಾಂಡ್ ಆಗಿದೆ. 1914 ರಲ್ಲಿ ಮೊದಲನೆಯ ಯುದ್ಧದ ಸಮಯದಲ್ಲಿ ನಮ್ಮ ಭಾರತದ ದೇಶದಿಂದ ಯುರೋಪ್ ಗೆ ಗಂಧವು ರಫ್ತು ಆಗದೇ ಇರುವ ಕಾರಣ ಹೇರಳವಾಗಿ ದೊರೆಯುತ್ತಿದ್ದ ಗಂಧದ ಮರ ಹಾಗೂ ಅಧಿಕವಾಗಿ ದೊರೆಯುತ್ತಿದ್ದ ಗಂಧದ ಮರ ದಾಸ್ತಾನು ಇದಕ್ಕೆ ಬಹುಮುಖ್ಯವಾಗಿ ಪ್ರೇರಣೆ ಆಯಿತು. ಇದನ್ನು ಸದುಪಯೋಗಪಡಿಸಿಕೊಳ್ಳಲು ಮೈಸೂರಿನ ರಾಜ ನಾಲ್ವಡಿ ಕೃಷ್ಣರಾಜ ಒಡೆಯರರು ಸರ್ಕಾರಿ ಸಾಬೂನು ಕಾರ್ಖಾನೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದರು. ಅದೇ ವರ್ಷ ಮೈಸೂರಿನಲ್ಲಿ ಗಂಧದ ಮರದಿಂದ ಎಣ್ಣೆ ತೆಗೆಯುವಂತಹ ಕಾರ್ಖಾನೆಯೂ ಸ್ಥಾಪಿಸಲ್ಪಟ್ಟಿತು.

ಹೌದು ಈ ಮೈಸೂರು ಸ್ಯಾಂಡಲ್ ಸೋಪ್ ತಯಾರಿಸಲು ಬೇಕಾಗಿರುವುದು ಮುಖ್ಯವಾಗಿ ಗಂಧದ ಎಣ್ಣೆ. ಶ್ರೀಗಂಧದೆಣ್ಣೆಯ ಸುಗಂಧವನ್ನು ಪ್ರಮುಖ ದ್ರವ್ಯ ವಸ್ತುವಾಗಿ ಬಳಸಿ, ಮೈಸೂರು ಸ್ಯಾಂಡಲ್ ಸಾಬೂನನ್ನು ವಿಶಿಷ್ಟ ಆಕಾರ, ಕವಚದಲ್ಲಿ ತಯಾರಿಸಿ, ಪ್ರಪ್ರಥಮವಾಗಿ 1918 ರ ನವಂಬರ್ ಮಾಹೆಯಲ್ಲಿ ಮಾರುಕಟ್ಟೆಗೆ ಪರಿಚಯಸಲಾಯಿತು. ಹಾಗೂ ಈ ಗಂಧದ ಎಣ್ಣೆ ತೆಗೆಯಲು ಬೇಕಾಗುವ ಎಲ್ಲಾ ರೀತಿಯ ಯಂತ್ರ ಸೌಲಭ್ಯಗಳು ಮೈಸೂರಿನ ಕಾರ್ಖಾನೆಯಲ್ಲಿ ದೊರೆಯುತ್ತಿದ್ದವು. ಇದು ಜಗತ್ತಿನ ಅತೀ ದೊಡ್ಡ ಹಾಗೂ ಸುಸಜ್ಜಿತ ಗಂಧದ ಎಣ್ಣೆಯ ಕಾರ್ಖಾನೆ ಎಂದು ಕರೆಸಿಕೊಂಡಿದೆ. ಅತ್ಯಂತ ಆಧುನಿಕವಾದ ಟೆಕ್ನಾಲಜಿ ಗುಣ ನಿಯಂತ್ರಣ ಪ್ರಯೋಗಾಲಯವು ಕೂಡ ಇಲ್ಲಿದೆ. ಮುಂಬೈ ಕಾಣ್ಪುರ, ಕುಪ್ಪಂ, ಮೆಟ್ಟೂರು, ಸೇಲಂ ಹೀಗೆ ಮೊದಲಾದ ಕಡೆಯಲ್ಲಿಯೂ ಸಣ್ಣ ಪ್ರಮಾಣದ ಕಾರ್ಖಾನೆಗಳಿವೆ. ಅದಕ್ಕಾಗಿ ಎಲ್ಲ ರೀತಿಯ ಸೌಲಭ್ಯಗಳು ಈ ಮೈಸೂರು ಜಿಲ್ಲೆಯಲ್ಲಿ ಆರಂಭಗೊಂಡಿದ್ದವು ಹೀಗಾಗಿ ಈ ಸೋಪ್ ಅನ್ನು ಅಧಿಕವಾಗಿ ಮೈಸೂರಿನಲ್ಲಿ ನಿರ್ಮಾಣ ಮಾಡಲಾಯಿತು. ಈ ಒಂದು ಕಾರಣದಿಂದ ಈ ಸೋಪಿಗೆ ಮೈಸೂರು ಸ್ಯಾಂಡಲ್ ಸೋಪ್ ಅಂತ ಜನಪ್ರಿಯವಾಗಿದೆ. ಅಷ್ಟೇ ಅಲ್ಲದೇ ಇದು ಅದ್ಭುತವಾದ ಗುಣಗಳನ್ನು ಕೂಡ ಹೊಂದಿದೆ ಯಾವುದೇ ರೀತಿಯ ಚರ್ಮಕ್ಕೆ ಹಾನಿಯನ್ನು ಮಾಡದೇ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಹೀಗಾಗಿ ಇದರ ಬೆಲೆಯೂ ಕೂಡ ಅಧಿಕವಾಗಿದೆ. 1980 ರಲ್ಲಿ ನಮ್ಮ ಕರ್ನಾಟಕದಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಕಂಪನಿಗಳನ್ನು ನಿರ್ಮಾಣ ಮಾಡಲಾಯಿತು. ತದನಂತರ ಸಾಬೂನಿನ ಹೊರತಾಗಿ, ಅಗರಬತ್ತಿ, ಮೈಪೌಡರ್, ಮಾರ್ಜಕಗಳು, ಶ್ರೀಗಂಧದೆಣ್ಣೆ, ಹಾಗೂ ಶ್ರೀಗಂಧದ ಕೊರಡು ಮುಂತಾದ ಉತ್ಪನ್ನಗಳ ತಯಾರಿಕೆ ಆರಂಭಿಸಿತು.

Leave a Reply

Your email address will not be published. Required fields are marked *