ಊಟವಾದ ಮೇಲೆ ಮಜ್ಜಿಗೆ ಕುಡಿಬೇಕಾ ಅಥವಾ ಊಟಕ್ಕಿಂತ ಮುಂಚೆ ಕುಡಿದರೆ ಒಳ್ಳೆದ ಇಲ್ಲಿದೆ ನೋಡಿ

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ ಮಜ್ಜಿಗೆ ಭೂಲೋಕದ ಒಂದು ಅಮೃತವಾಗಿದೆ. ಬೇಸಿಗೆಯ ದಣಿವನ್ನು ನಿವಾರಿಸಲು ಮಜ್ಜಿಗೆ ಸೇವಿಸಬೇಕೆಂದು ಹಿರಿಯಲು ಸಲಹೆ ನೀಡುತ್ತಾರೆ. ಇದನ್ನು ಜೀರ್ಣಕ್ರಿಯೆಗೆ ಮದ್ದು ಎಂದೇ ಪರಿಗಣಿಸಲಾಗುತ್ತದೆ. ಹಾಗೂ ಮಜ್ಜಿಗೆಯನ್ನು ನಮ್ಮ ತಾತ ಮುತ್ತಾತನ ಕಾಲದಿಂದಲೂ ಬಳಕೆಯನ್ನು ಮಾಡುತ್ತಾ ಬಂದಿದ್ದಾರೆ. ಇದನ್ನು ಬಡವರ ಅಮೃತ ಎಂದು ಕೂಡ ಕರೆಯುತ್ತಾರೆ. ಅದರಲ್ಲೂ ಈ ಬೇಸಿಗೆ ಕಾಲದಲ್ಲಿ ಮಜ್ಜಿಗೆ ಹೇಳಿ ಮಾಡಿಸಿದ ಪಾನಕ ಆಗಿದೆ. ಮದುವೆ ಸಮಾರಂಭ ಕಾರ್ಯಕ್ರಮಗಳಲ್ಲಿ ಅಷ್ಟೇ ಅಲ್ಲದೇ ಸಾಮಾನ್ಯವಾಗಿ ಇದನ್ನು ಊಟವಾದ ಮೇಲೆ ಕೂಡ ಕುಡಿಯುವ ಅಭ್ಯಾಸವನ್ನು ಕೆಲವು ಜನರು ಹೊಂದಿದ್ದಾರೆ. ಸಾಮಾನ್ಯವಾಗಿ ಮದುವೆಯಲ್ಲಿ ಊಟವಾದ ಮೇಲೆ ಮಜ್ಜಿಗೆ ಕೊಡುವುದು ಪದ್ಧತಿ ಕೂಡ ಇದೆ. ಹೌದು, ಮಜ್ಜಿಗೆ ಇಲ್ಲದೆ ಮದುವೆ ಊಟವೂ ಅಪರಿಪೂರ್ಣ ಅಂತ ಹೇಳಿದರೆ ತಪ್ಪಾಗಲಾರದು. ಮಜ್ಜಿಗೆಯಲ್ಲಿ ಬಹಳಷ್ಟು ಆರೋಗ್ಯಕರ ಲಾಭಗಳು ಅಡಗಿವೆ. ಇದು ಕೇವಲ ಪಾನೀಯವಲ್ಲದೆ ಇದು ಅಮೃತಕ್ಕೆ ಸಮ ಅಂತ ಹೇಳಬಹುದು. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ, ಮಜ್ಜಿಗೆ ಆರೋಗ್ಯಕ್ಕೆ ಹೇಗೆ ಉತ್ತಮ ಅಂತ ತಿಳಿಸಿ ಕೊಡುತ್ತೇವೆ.

ಮೊದಲಿಗೆ ಮಜ್ಜಿಗೆಯಲ್ಲಿ ಯಾವೆಲ್ಲ ಪೌಷ್ಟಿಕತೆ ಇಂದ ತುಂಬಿರುತ್ತದೆ ಅಂದರೆ, ಕ್ಯಾಲ್ಷಿಯಂ, ಕಾರ್ಬೋಹೈಡ್ರೇಟ್ ಫ್ಯಾಟ್ ಪ್ರೊಟೀನ್, ವಿಟಮಿನ್ಸ್ ಖನಿಜಗಳು ರೈಬೋಪ್ಲೋವಿನ್ ಹೇರಳವಾಗಿದೆ. ಇದು ನಮ್ಮ ಮೂಳೆಗಳನ್ನು ಸಾಕಷ್ಟು ಪ್ರಮಾಣದಲ್ಲಿ ಬಲ ಪಡಿಸುತ್ತದೆ. ಇದರಲ್ಲಿರುವ ಅಧಿಕವಾದ ಕ್ಯಾಲ್ಷಿಯಂ ಪ್ರಮಾಣವೂ ಮೂಳೆಗಳಿಗೆ ರಕ್ಷಣೆಯನ್ನು ನೀಡುತ್ತದೆ. ಹಾಗೂ ಮೂಳೆಗಳು ಬಹು ಕಾಲದವರೆಗೆ ಬಾಳುವಂತೆ ಮೂಳೆಗಳಿಗೆ ವಯಸ್ಸು ತಂದು ಕೊಡುವ ಶಕ್ತಿಯನ್ನು ಈ ಮಜ್ಜಿಗೆ ಹೊಂದಿದೆ.
ಇನ್ನೂ ಜೀರ್ಣಕ್ರಿಯೆ ಸರಿಯಾಗಿ ಆಗಲಿ ಮಜ್ಜಿಗೆಯಲ್ಲಿ ಸ್ವಲ್ಪ ಉಪ್ಪು ಮತ್ತು ಜೀರಿಗೆ ಪುಡಿ ಹಾಕಿಕೊಂಡು ಕುಡಿದರೆ ನಿಮ್ಮ ಜೀರ್ಣ ಕ್ರಿಯೆ ಸರಿಯಾಗಿ ನಡೆಯುತ್ತದೆ. ಇದರಿಂದ ಹೊಟ್ಟೆಗೆ ಸಂಭಂದಿಸಿದ ಅಜೀರ್ಣತೆ ಅಸಿಡಿಟಿ ಎಲ್ಲವೂ ನಿವಾರಣೆ ಆಗುತ್ತದೆ. ಹಾಗೆಯೇ ಮಜ್ಜಿಗೆಯಲ್ಲಿ ಉಪ್ಪು ಮತ್ತು ಹಸಿ ಶುಂಠಿ ಹಾಕಿ ಕುಡಿಯುವುದರಿಂದ ವಾಂತಿ ಕೂಡ ಕಡಿಮೆ ಆಗುತ್ತದೆ. ಪಿತ್ತ ಹಾಗೂ ಹುಳಿತೇಗು ಸಮಸ್ಯೆಯಿಂದ ದೂರವಾಗಲು ಮಜ್ಜಿಗೆಯಲ್ಲಿ ಸ್ವಲ್ಪ ಕಲ್ಲುಪ್ಪು ಹಾಕಿ ಕುಡಿದರೆ ಕ್ರಮೇಣ ವಾಸಿ ಆಗುತ್ತದೆ. ಅಷ್ಟೇ ಅಲ್ಲದೇ ಆಧುನಿಕ ಕಾಲದಲ್ಲಿ ಕಾಡುವ ತೀವ್ರವಾದ ಸಮಸ್ಯೆಯಾದ ಖಿನ್ನತೆಯನ್ನು ಹೋಗಲಾಡಿಸುವಲ್ಲಿ ಸಹಕಾರಿಯಾಗಿದೆ ಈ ಮಜ್ಜಿಗೆ.

ಇನ್ನೂ ಅರ್ಧ ಲೋಟ ಮಜ್ಜಿಗೆಗೆ ಇಂಗು ಉಪ್ಪು ಮೆಣಸಿನ ಕಾಯಿ ಬೆರೆಸಿ ಕುಡಿಯುವುದರಿಂದ ಕೆಲವೇ ನಿಮಿಷಗಳಲ್ಲಿ ಹೊಟ್ಟೆ ನೋವು ಕಡಿಮೆ ಆಗುತ್ತದೆ. ಇದರಲ್ಲಿರುವ ಪೊಟ್ಯಾಶಿಯಂ ಅಂಶವೂ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಕಾರಿ ಆಗಿದೆ. ಹಾಗೂ ಮೂಳೆಗಳಿಗೆ ಅಗತ್ಯವಾದ ಶಕ್ತಿ ಸಾಮರ್ಥ್ಯವನ್ನು ಮಜ್ಜಿಗೆಯಲ್ಲಿರುವ ಕ್ಯಾಲ್ಷಿಯಂ ಒದಗಿಸಿ ಕೊಡುತ್ತದೆ. ರಕ್ತನಾಳದಲ್ಲಿ ಅಡಗಿರುವ ಕೊಬ್ಬಿನ ಅಂಶವನ್ನು ಹೊರ ಹಾಕುತ್ತದೆ. ಬೆಣ್ಣೆ ತೆಗೆದ ಮಜ್ಜಿಗೆ ತೂಕವನ್ನು ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಇನ್ನೂ ಉರಿ ಮೂತ್ರದ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ಮಜ್ಜಿಗೆಯಲ್ಲಿ ಬೆಲ್ಲವನ್ನು ಹಾಕಿ ಕುಡಿದರೆ ಈ ಉರಿ ಮೂತ್ರ ಸಮಸ್ಯೆಯಿಂದ ಪಾರಾಗಬಹುದು. ಈ ಆರೋಗ್ಯಕರ ಉಪಯುಕ್ತವಾದ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ಶುಭದಿನ.

Leave a Reply

Your email address will not be published. Required fields are marked *