ಸಕ್ಕರೆ ಕಾಯಿಲೆ ಹಾಗೂ ಡಯಾಬಿಟಿಸ್ ಕಾಯಿಲೆ ಹೋಗಲಾಡಿಸುವ ದಾಸವಾಳ ಹೂವಿನ ಟೀ ಹೇಗೆ ಮಾಡಬೇಕು ಗೊತ್ತಾ

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ನಾವೆಲ್ಲರೂ ಸಂಜೀವಿನಿ ಎಂಬ ಹೆಸರನ್ನು ಕೇಳಿದ್ದೇವೆ. ಈ ಸಂಜೀವಿನಿ ನಮಗೆ ಸಿಗುವುದು ಅಪರೂಪ ಅದರಲ್ಲೂ ಇದನ್ನು ತಿಂದರೆ ನಮಗೆ ಮುಪ್ಪು ಬರುವುದಿಲ್ಲ ಎಲ್ಲದಕ್ಕಿಂತ ಹೆಚ್ಚಾಗಿ ಸಾವೇ ಬರುವುದಿಲ್ಲ ಅಂತ ಒಂದು ಕಾಲದಲ್ಲಿ ಹೇಳುತ್ತಿದ್ದರು. ಹೌದು ಇದು ನಿಜವಾದ ಮಾತು. ಆದರೆ ಇದು ಈಗಿನ ಆಧುನಿಕ ಕಾಲದಲ್ಲಿ ಸಿಗುವುದು ತುಂಬಾನೇ ವಿರಳ. ಈ ಎಲ್ಲ ಗುಣಾಂಶಗಳನ್ನು ಹೊಂದಿರುವ ಒಂದು ಅದ್ಭುತವಾದ ಒಂದು ಸಸ್ಯದ ಬಗ್ಗೆ ತಿಳಿಸಿ ಕೊಡುತ್ತೇವೆ ಬನ್ನಿ. ಸಂಜೀವಿನಿ ಅಂತಹ ಔಷಧೀಯ ಗುಣಗಳನ್ನು ಹೊಂದಿರುವ ಗಿಡಮೂಲಿಕೆಗಳು ನಮ್ಮ ಪ್ರಕೃತಿಯಲ್ಲಿ ದೊರೆಯುತ್ತವೆ. ಅಂಥಹ ಸಸ್ಯ ಅಂದರೆ ಅದು ದಾಸವಾಳದ ಸಸ್ಯ. ಇದು ನೋಡಲು ಬಿಳಿ ಹಾಗೂ ಕೆಂಪು ಬಣ್ಣದ ಹೂವಿನಿಂದ ಕೂಡಿರುವ ಸಸ್ಯವಾಗಿದೆ. ಇದು ಸಾಮಾನ್ಯವಾಗಿ ಕೈತೋಟದಲ್ಲಿ ಮನೆಯ ಮಹಡಿಯಲ್ಲಿ ಸುಲಭವಾಗಿ ಬೆಳೆಸಬಹುದು. ಈ ದಾಸವಾಳದ ಹೂವನ್ನು ನಾವು ಕೇವಲ ಪೂಜೆಗೆ ಬಳಕೆ ಮಾಡುವುದು ಮಾತ್ರವಲ್ಲದೆ ಇದು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಹಾಗಾದ್ರೆ ಅವುಗಳ ಪಟ್ಟಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ ಬನ್ನಿ.

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಬಿಪಿ ಹಾಗೂ ಸಕ್ಕರೆ ಕಾಯಿಲೆ ಅನ್ನುವುದು ತುಂಬಾನೇ ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ಈ ಕಾಯಿಲೆ ಉಳ್ಳವರು ಪ್ರತಿಯೊಬ್ಬರ ಮನೆಯಲ್ಲಿ ಇದ್ದೇ ಇರುತ್ತಾರೆ. ಹೌದು ಅಂಥಹ ರೋಗಿಗಳಿಗೆ ಈ ದಾಸವಾಳದ ಟೀ ಹೇಳಿ ಮಾಡಿಸಿದ ಸೂಪರ್ ಟೀ ಅಂತ ಹೇಳಬಹುದು. ಅಷ್ಟೇ ಅಲ್ಲದೇ ಇವುಗಳನ್ನು ನಿಯಂತ್ರಣ ಮಾಡುವುದರ ಜೊತೆಗೆ ದೇಹದೊಳಗೆ ಸೇರಿರುವ ಎಲ್ಲ ಕಲ್ಮಶಗಳನ್ನು ಹೊರಹಾಕುತ್ತದೆ. ದೇಹವನ್ನು ಸ್ವಚ್ಛಗೊಳಿಸುತ್ತದೆ ಹಾಗೂ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ದಾಸವಾಳ ಹೂವು ವಿವಿಧ ಬಣ್ಣದಲ್ಲಿ ನಮಗೆ ಸಿಗುತ್ತದೆ. ಬಿಳಿ ಕೆಂಪು ಹಾಗೂ ಹಳದಿ ಬಣ್ಣದ ದಾಸವಾಳ ಹೂವುಗಳು ದೊರೆಯುತ್ತವೆ. ಬಿಳಿ ಬಣ್ಣದ ದಾಸವಾಳದ ಹೂವಿನ ಟೀ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಇದನ್ನು ಔಷಧೀಯವಾಗಿ ಕೂಡ ಬಳಕೆ ಮಾಡುತ್ತಾರೆ. ಇದರಲ್ಲಿ ಹಲವಾರು ಅಂಶಗಳು ಅಂದ್ರೆ ವಿಟಮಿನ್ ಸಿ ಹಾಗೂ ಕಬ್ಬಿನ ಅಂಶಗಳು ದೇಹವನ್ನು ಗಟ್ಟಿ ಮುಟ್ಟಾಗಿಸಲು ಸಹಾಯ ಮಾಡುತ್ತದೆ.

ಹಾಗಾದರೆ ಈ ದಾಸವಾಳ ಟೀ ಹೇಗೆ ತಯಾರಿಸುವುದು ಅಂತ ಹೇಳುವುದಾದರೆ ಒಂದು ಪಾತ್ರೆಯಲ್ಲಿ ಚೆನ್ನಾಗಿ ನೀರು ಕುಡಿಸಿ ಅದರಲ್ಲಿ ದಾಸವಾಳದ ಹೂವಿನ ದಳಗಳನ್ನು ಹಾಕಿ 5-10 ನಿಮಿಷದವರೆಗೆ ಚೆನ್ನಾಗಿ ಕುದಿಸಿ ನಂತರ ಸೋಸಿಕೊಂಡು ಕುಡಿಯಬೇಕು. ಅದರಲ್ಲೂ ಬೆಳಿಗ್ಗೆ ಎದ್ದು ತಕ್ಷಣ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ದುಪ್ಪಟ್ಟು ಲಾಭಗಳು ಉಂಟಾಗುತ್ತವೆ. ಹಾಗೂ ಇದನ್ನು ಕುಡಿಯುವುದರಿಂದ ನಿಮ್ಮ ಮಾನಸಿಕ ಒತ್ತಡ ಕಡಿಮೆ ಆಗಿ ನೀವು ಪೂರ್ತಿ ದಿನ ಆರೋಗ್ಯವಾಗಿ ಚೈತನ್ಯವಾಗಿ ಇರುತ್ತೀರಿ. ಅಷ್ಟೇ ಅಲ್ಲದೇ ಬಿಳಿ ದಾಸವಾಳ ಹೂವಿನಲ್ಲಿ ಕಲ್ಲುಪ್ಪು ಮತ್ತು ಹಾಲು ಬೆರೆಸಿ ಕುಡಿಯುವುದರಿಂದ ಉರಿ ಮೂತ್ರ ಸಮಸ್ಯೆ ಉಪಶಮನ ಆಗುತ್ತದೆ.

ಇನ್ನೂ ರಕ್ತ ಹೀನತೆ ಸಮಸ್ಯೆ ಇದ್ದರೆ ಕೆಂಪು ದಾಸವಾಳ ಹೂವಿನ ದಳಗಳನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ ಅದನ್ನು ಪುಡಿ ಮಾಡಿ ಚೂರ್ಣದ ರೂಪದಲ್ಲಿ ಬಳಸಿ. ಇದರಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಹೆಚ್ಚುತ್ತದೆ ಹಾಗೂ ರಕ್ತ ಹೀನತೆ ಕಾಯಿಲೆ ಕೂಡ ನಿಯಂತ್ರಣದಲ್ಲಿ ಬರುತ್ತದೆ. ತಲೆ ಹೊಟ್ಟು ತಲೆ ಕೂದಲು ಉದುರುವ ಸಮಸ್ಯೆ ಇದ್ದರೆ ದಾಸವಾಳ ಪುಡಿಯನ್ನು ಮನೆಮದ್ದು ಆಗಿ ಬಳಕೆ ಮಾಡಿ ಕೂದಲಿನ ಹಲವಾರು ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ನೋಡಿದ್ರಲಾ ದಾಸವಾಳ ಹೂವಿನ ನೂರೆಂಟು ಲಾಭಗಳನ್ನು. ಸುಲಭವಾಗಿ ಸಿಗುವ ಈ ಹೂವಿನ ಪ್ರಯೋಜನಗಳನ್ನು ನೀವು ಒಮ್ಮೆಯಾದರೂ ಪಡೆಯಲೇ ಬೇಕು.

Leave a Reply

Your email address will not be published. Required fields are marked *