ನಮಸ್ತೇ ಪ್ರಿಯ ಓದುಗರೇ, ನಾಯಿಯನ್ನು ನಾವು ಬಹಳ ನಿಯತ್ತಿನ ಪ್ರಾಣಿ ಹಾಗೂ ಪ್ರಾಮಾಣಿಕವಾದ ಪ್ರಾಣಿ ಅಂತ ನಂಬುತ್ತೇವೆ. ಹೌದು ಈ ಮಾತು ಅಷ್ಟೇ ಸತ್ಯ ಕೂಡ ಆಗಿರುತ್ತದೆ ನಂಬಿಕೆಯ ಇನ್ನೊಂದು ಹೆಸರೇ ನಾಯಿ ಅಂತ ಹೇಳಿದರೆ ತಪ್ಪಾಗಲಾರದು. ನಾಯಿ ಒಂದು ಸಾಕು ಪ್ರಾಣಿ. ನಾಯಿ ಅಂದರೆ ಕೆಲವರಿಗೆ ಪಂಚಪ್ರಾಣ. ಇನ್ನೂ ಕೆಲವರು ನಾಯಿ ಅಂದರೆ ಓಡಿ ಹೋಗುತ್ತಾರೆ. ಅಷ್ಟೇ ಅಲ್ಲದೇ ನಾಯಿ ಎಂಬ ಪ್ರಾಣಿಯನ್ನು ತುಂಬಾ ಇಷ್ಟ ಪಡುವವರು ಮನೆಯಲ್ಲಿ ತಂದು ಸಾಕಿಕೊಳ್ಳುತ್ತಾರೆ. ಅದರಲ್ಲೂ ನಾವು ನೋಡಿರಬಹುದು ದೊಡ್ಡ ದೊಡ್ಡ ಫಿಲ್ಮ್ ಸ್ಟಾರ್ ಹಾಗೂ ಗಣ್ಯ ವ್ಯಕ್ತಿಗಳ ಮನೆಯಲ್ಲಿ ದುಬಾರಿ ನಾಯಿಗಳನ್ನು ಸಾಕಿರುತ್ತಾರೆ. ನಿಮಗೆ ಗೊತ್ತೇ ಮನೆಯಲ್ಲಿ ಸಾಕುವ ಪ್ರಾಣಿಗಳಿಗಿಂತ ಬೀದಿ ನಾಯಿಗಳು ಅಧಿಕವಾಗಿವೆ ಅಂತ ವರದಿ ಪ್ರಕಾರ ತಿಳಿದು ಬಂದಿದೆ. ಮನೆಯಲ್ಲಿ ಸಾಕುವ ನಾಯಿಗಳಿಗೆ ರೇಬಿಸ್ ಎಂಬ ಚುಚ್ಚು ಮದ್ದು ನೀಡಿರುತ್ತಾರೆ. ಏಕೆಂದರೆ ಅವುಗಳು ಮನೆಯ ಜನರಿಗೆ ಕಚ್ಚಿದರೆ ಯಾವುದೇ ರೀತಿಯ ಜೀವಾಪಾಯ ಆಗಬಾರದು ಎಂದು. ಆದರೆ ಬೀಡಾಡಿ ಅಥವಾ ಬೀದಿ ನಾಯಿಗಳು ಕಚ್ಚಿದರೆ ತಕ್ಷಣವೇ ಏನು ಮಾಡಬೇಕು ಅನ್ನುವ ಮಾಹಿತಿಯನ್ನು ನಾವು ನಿಮಗೆ ಇಂದಿನ ಲೇಖನದಲ್ಲಿ ತಿಳಿಸಿ ಕೊಡುತ್ತೇವೆ ಬನ್ನಿ.
ನಂಬಿಕೆಯ ಪ್ರಾಣಿ ಅಂದರೆ ಅದು ನಾಯಿ. ಆದರೆ ಎಲ್ಲ ನಾಯಿಗಳು ಮನೆಯ ನಾಯಿಗಳು ಆಗಿರುವುದಿಲ್ಲ. ನಮ್ಮ ದೇಶದಲ್ಲಿ ಎರಡರಿಂದ ಮೂರು ಕೋಟಿ ನಾಯಿಗಳು ಇವೆ ಅಂತ ಸರಿಸುಮಾರು ಅಂದಾಜು ಮಾಡಲಾಗಿದೆ. ಇದರಿಂದ ಬೀದಿ ನಾಯಿಗಳು ಅಧಿಕವಾಗಿವೆ ಅಂತ ತಿಳಿದು ಬಂದಿದೆ. ಅಷ್ಟೇ ಅಲ್ಲದೇ ಬೀದಿ ನಾಯಿಗಳು ಅಕ್ಕ ಪಕ್ಕ ಬಂದರೆ ಅವುಗಳಿಗೆ ಕಲ್ಲು ಹೊಡೆದು ಗಾಯ ಮಾಡುತ್ತಾರೆ. ಹಾಗೂ ಇಂತಹ ನಾಯಿಗಳನ್ನು ಯಾರು ಕಾಳಜಿ ಮಾಡುವುದಿಲ್ಲ. ಹಾಗೂ ಹಿಂಸೆ ನೀಡುತ್ತಾರೆ ಮತ್ತು ಮುಖ್ಯವಾಗಿ ಹೇಳಬೇಕೆಂದರೆ ಇವುಗಳಿಗೆ ರೇಬಿಸ್ ಎಂಬ ಲಸಿಕೆಯನ್ನು ನೀಡಿರುವುದಿಲ್ಲ. ಹಾಗೂ ನಾಯಿಗಳ ಕಾಟ ಬೆಳಿಗ್ಗೆ ಪೇಪರ್ ಹಾಕುವವರಿಗೆ ಹಾಲು ಮಾರುವವರಿಗೆ ಕಸ ಗುಡಿಸುವವರಿಗೆ ಗೊತ್ತಿರುತ್ತದೆ. ಯಾವಾಗ ಈ ನಾಯಿಗಳು ಬಂದು ಕಚ್ಚುತ್ತವೆ ಅಂತ ಹೇಳಲಾಗುವುದಿಲ್ಲ. ನಮ್ಮ ಭಾರತ ದೇಶದಲ್ಲಿ ಒಂದು ವರದಿ ಪ್ರಕಾರ ಎರಡು ಸೆಕೆಂಡ್ ಗೆ ನಾಯಿ ಕಡಿತಕ್ಕೆ ಮನುಷ್ಯ ತುತ್ತಾಗುತ್ತಿದ್ದಾರೆ ಅಂತ ಹೇಳಲಾಗಿದೆ ಹಾಗೂ ಪ್ರತಿ ಮೂವತ್ತು ನಿಮಿಷಕ್ಕೆ ರೇಬಿಸ್ ಎಂಬ ರೋಗ ಬಂದು ಮನುಷ್ಯ ಸಾವನ್ನಪ್ಪುತ್ತಿದ್ದಾರೆ ಅಂತ ತಿಳಿದು ಬಂದಿದೆ.
ಹಾಗಾದರೆ ನಾಯಿ ಕಚ್ಚಿದ ಕೂಡಲೇ ತಕ್ಷಣವೇ ಏನು ಮಾಡಬೇಕು? ಇದಕ್ಕೆ ಪ್ರಥಮ ಚಿಕಿತ್ಸೆ ಏನು ಮಾಡಬೇಕು ಅಂತ ತಿಳಿಯುವುದಾದರೆ ಮೊದಲಿಗೆ ನಾಯಿ ಕಚ್ಚಿದ ಭಾಗವನ್ನು ಸರಿ ಸುಮಾರು 4-5 ಬಾರಿ ಸೋಪ್ ನಿಂದ ಚೆನ್ನಾಗಿ ತೊಳೆಯಬೇಕು ಹಾಗೂ ರಕ್ತ ಬಾರದಂತೆ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಬೇಕು. ಇದರಿಂದ ನಾಯಿ ಕಡಿತದಿಂದ ಉಂಟಾಗುವ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಮನೆಯಲ್ಲಿ ಇರುವ ಬ್ಯಾಂಡೇಜ್ ಅನ್ನು ಗಾಯದ ಮೇಲೆ ಕಟ್ಟಿ ಗಾಯದಿಂದ ರಕ್ತವೂ ಸೋರದಂತೆ ನೋಡಿಕೊಳ್ಳಿ. ತದ ನಂತರ ವೈದ್ಯರ ಹತ್ತಿರ ಹೋಗಿ ರೇಬಿಸ್ ಚುಚ್ಚು ಮದ್ದು ಹಾಕಿಸಿಕೊಳ್ಳಿ. ಸ್ನೇಹಿತರೆ ನಾಯಿ ಕಡಿತವನ್ನು ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ. ಇದರಿಂದ ಸಾವು ಕೂಡ ಆಗಬಹುದು. ಈ ರೀತಿ ಮಾಡಲು ನಿಮಗೆ ಸಮಯ ಇಲ್ಲದೆ ಇದ್ದಾಗ ನಾಯಿ ಕಡಿತಕ್ಕೆ ಅರಿಶಿನ ಹಾಗೂ ಬೇವಿನ ಮರದ ಎಲೆಗಳ ಪೇಸ್ಟ್ ಅನ್ನು ಮನೆಮದ್ದು ಆಗಿ ಬಳಕೆ ಮಾಡಬಹುದು. ಮೊದಲಿಗೆ ಬೇವಿನ ಎಲೆಗಳನ್ನು ಚೆನ್ನಾಗಿ ಜಜ್ಜಿ ಅದರಲ್ಲಿ ಅರಿಶಿನ ಹಾಕಿ ಗಾಯವಾದ ಜಾಗದಲ್ಲಿ ಹಚ್ಚಿ ಇದರಿಂದ ಗಾಯ ಕಡಿಮೆ ಆಗುತ್ತದೆ ಜೊತೆಗೆ ನಂಜು ಏರುವುದಿಲ್ಲ ಆದಷ್ಟು ಬೇಗನೆ ಗುಣಮುಖವಾಗುತ್ತದೆ.