ನಮಸ್ತೇ ಪ್ರಿಯ ಓದುಗರೇ, ನಾವು ಸುಂದರವಾಗಿ ಕಾಣಲು ಮುಖಕ್ಕೆ ವಿವಿಧ ರೀತಿಯ ಸೌಂದರ್ಯ ವರ್ಧಕಗಳನ್ನು ಬಳಕೆ ಮಾಡುತ್ತೇವೆ ಹೌದು ಮುಖವನ್ನು ಸೌಂದರ್ಯವಾಗಿ ಕಾಣಲು ಹರ ಸಾಹಸ ಮಾಡುತ್ತೇವೆ ಆದರೆ ದೇಹದ ಇತರ ಭಾಗಗಳ ಬಗ್ಗೆ ನಾವು ಸ್ವಲ್ಪವೂ ಕಾಳಜಿ ವಹಿಸುವುದಿಲ್ಲ. ಅಷ್ಟೇ ಅಲ್ಲದೇ ಮುಖಕ್ಕೆ ಕೊಡುವ ಬೆಲೆ ಹಾಗೂ ಪ್ರಾಮುಖ್ಯತೆ ದೇಹದ ಇತರ ಅಂಗಗಳಿಗೆ ಕೊಡುವುದಿಲ್ಲ. ಸೌಂದರ್ಯ ಅನ್ನುವುದು ದೇವರು ಕೊಟ್ಟ ಒಂದು ಕೊಡುಗೆ ಅಂತ ಹೇಳಬಹುದು ಹಾಗೂ ಇದನ್ನು ನಾವು ಕಾಪಾಡಿಕೊಂಡು ಹೋಗುವುದು ನಮ್ಮ ಜವಾಬ್ದಾರಿಯೂ ಹೌದು ಕರ್ತವ್ಯ ಕೂಡ ಹೌದು. ಸಾಮಾನ್ಯವಾಗಿ ಗೊತ್ತಿರುವ ಹಾಗೆ ಮೊದಲಿಗೆ ಪ್ರಾಮುಖ್ಯತೆಯನ್ನು ಕೊಡುವುದು ಮುಖಕ್ಕೆ. ಜನರು ಮುಖವನ್ನೇ ಮೊದಲು ಗಮನಿಸುತ್ತಾರೆ. ಆದರೆ ನಿಮ್ಮ ಪಾದಗಳ ಹಿಮ್ಮಡಿಗಳು ನಿಮ್ಮ ಸೌಂದರ್ಯವನ್ನು ಅಣಕಿಸಬಾರದು ಅಥವಾ ಕಪ್ಪು ಚುಕ್ಕೆ ಆಗಬಾರದು. ಇದು ಸೌಂದರ್ಯಕ್ಕೆ ಅಷ್ಟೇ ಅಲ್ಲದೇ ಕಾಲುಗಳಲ್ಲಿ ಬಿರುಕು ಬಿಟ್ಟರೆ ನಿಮಗೆ ನಡೆಯಲು ಕೂಡ ಕಷ್ಟವಾಗುತ್ತದೆ ಹಾಗೂ ಕಾಲುಗಳಲ್ಲಿ ಉರಿ ಶುರು ಆಗುತ್ತದೆ. ಈ ಸಮಸ್ಯೆ ಹೆಚ್ಚಾಗಿ ಚಳಿಗಾಲದಲ್ಲಿ ಕಂಡು ಬರುತ್ತದೆ ಇದನ್ನು ಆಲಕ್ಷ್ಯ ಮಾಡುವುದು ತುಂಬಾನೇ ತಪ್ಪು.
ಕೆಲವರು ಈ ಕಾಲುಗಳಲ್ಲಿ ಬಿರುಕು ಆಗಿರುವುದನ್ನು ಸರಿ ಪಡಿಸುವಲ್ಲಿ ವಿಫಲರಾಗುತ್ತಾರೆ. ಹಾಗಾದರೆ ಬನ್ನಿ ಚಿಂತೆ ಯಾಕೆ ಮಾಡುತ್ತೀರಿ ನಿಮ್ಮ ಅಡುಗೆ ಮನೆಯಲ್ಲೇ ಸಿಗುವ ಸುಲಭವಾದ ವಸ್ತುಗಳನ್ನು ಬಳಕೆ ಮಾಡಿಕೊಂಡು ಮನೆಮದ್ದು ತಯಾರಿಸಿ ಬಿರುಕು ಬಿಟ್ಟ ಪಾದಗಳನ್ನು ಸರಿ ಮಾಡಿಕೊಳ್ಳಬಹುದು.
ಹಿಮ್ಮಡಿಗಳು ಯಾಕೆ ಒಡೆಯುತ್ತವೆ ಅಂದರೆ ಅವುಗಳಲ್ಲಿ ವಿಟಮಿನ್ ಎ ಹಾಗೂ ವಿಟಮಿನ್ ಡಿ ಕೊರತೆ ಇಂದ. ಅದಕ್ಕಾಗಿ ನೀವು ಅಧಿಕವಾಗಿ ವಿಟಮಿನ್ ಎ ಹಾಗೂ ಡಿ ಇರುವ ಆಹಾರವನ್ನು ಸೇವಿಸುತ್ತಾ ಬನ್ನಿ. ಇದರಿಂದ ಬಿರುಕು ಬಿಟ್ಟ ಪಾದಗಳು ಸರಿಯಾಗುತ್ತದೆ. ಇನ್ನೂ ಇದಕ್ಕೆ ಮತ್ತೊಂದು ಉಪಾಯ ಏನೆಂದರೆ ಮನೆಯಲ್ಲಿರುವ ಒಂದು ದೊಡ್ಡದಾದ ಬಕೆಟ್ ನಲ್ಲಿ ಬಿಸಿ ನೀರು ಹಾಕಿ ಅದರಲ್ಲಿ ನಿಂಬೆ ರಸ ಉಪ್ಪು ಹಾಕಿ ಚೆನ್ನಾಗಿ ಹತ್ತು ನಿಮಿಷ ಕಾಲ ಮಸಾಜ್ ಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ಎಲ್ಲ ರೀತಿಯ ಸೋಂಕುಗಳಿಂದ ಮುಕ್ತಿ ಸಿಗುತ್ತದೆ ಹಾಗೂ ಡೆತ್ ಸ್ಕಿನ್ ಅನ್ನು ರಿಕವರ್ ಮಾಡುತ್ತದೆ. ಎರಡನೆಯದು ಇನ್ನೂ ಕೆಲವರಿಗೆ ತೀವ್ರವಾಗಿ ಪಾದಗಳ ಹಿಮ್ಮಡಿ ಒಡೆದು ರಕ್ತಸ್ರಾವ ಆಗುತ್ತಿರುತ್ತದೆ ಅಂಥವರು ನಿಂಬೆ ಹಣ್ಣಿನಿಂದ ಚೆನ್ನಾಗಿ ಮಸಾಜ್ ಮಾಡಿಕೊಳ್ಳಬೇಕು. ನಿಂಬೆ ಹಣ್ಣಿನಲ್ಲಿ ಇರುವ ವಿಟಮಿನ್ ಸಿ ಅಂಶವೂ ಚರ್ಮ ಹಾಗೂ ಉಗುರುಗಳಿಗೆ ಕಾಂತಿಯನ್ನು ನೀಡುತ್ತದೆ. ಮೂರನೆಯದು ಬೇವಿನ ಎಲೆಗಳ ಲೇಪನ. ಹೌದು ಆಯುರ್ವೇದದಲ್ಲಿ ಬೇವು ಬಹಳ ಜನಪ್ರಿಯತೆ ಹಾಗೂ ಪ್ರಸಿದ್ಧತೆಯನ್ನು ಪಡೆದಿರುವ ಒಂದು ಅದ್ಭುತವಾದ ಮನೆಮದ್ದು ಆಗಿದೆ.
ಇದನ್ನು ಅರೆದು ಪೇಸ್ಟ್ ಮಾಡಿ ಲೇಪನ ರೀತಿಯಲ್ಲಿ ಮಾಡಿ ಸ್ವಲ್ಪ ನೀರು ಮಿಕ್ಸ್ ಮಾಡಿ ಅರಿಶಿನವನ್ನು ಹಾಕಿ ರಾತ್ರಿ ಮಲಗುವ ವೇಳೆಯಲ್ಲಿ ಬಿರುಕು ಬಿಟ್ಟ ಪಾದಗಳಿಗೆ ಹಚ್ಚಿ ಹತ್ತು ನಿಮಿಷ ಬಿಟ್ಟು ತೊಳೆಯಿರಿ. ಬೇವು ಹಾಗೂ ಅರಿಶಿನ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಇನ್ನೂ ಜೇನುತುಪ್ಪ ಕೂಡ ತುಂಬಾನೇ ಒಳ್ಳೆಯದು. ಒಂದು ದೊಡ್ಡ ಬಿಸಿಯಾದ ನೀರಿನ ಪಾತ್ರೆಯಲ್ಲಿ ಜೇನುತುಪ್ಪ ಹಾಗೂ ನಿಂಬೆ ಹಣ್ಣಿನ ರಸವನ್ನು ಹಾಕಿ ಸ್ವಲ್ಪ ಸಮಯದವರೆಗೆ ಕಾಲುಗಳನ್ನು ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ. ಇದರಿಂದ ಪಾದಗಳು ಕೋಮಲ ಹಾಗೂ ಮೃದು ಆಗುತ್ತದೆ ಅಷ್ಟೇ ಅಲ್ಲದೇ ಸುಲಭವಾದ ಉಪಾಯ ಅಂದರೆ ಅರಿಶಿನ ಪುಡಿಯಲ್ಲಿ ಸ್ವಲ್ಪ ಆಲಿವ್ ಆಯಿಲ್ ಹಾಕಿ ಪೇಸ್ಟ್ ಮಾಡಿ ಪಾದಗಳಿಗೆ ಹಚ್ಚಿ ಇದರಿಂದ ಪಾದಗಳ ಬಿರುಕು ಕಡಿಮೆ ಆಗುತ್ತದೆ. ಪಾದಗಳು ಸ್ಮೂತ್ ಆಗುತ್ತವೆ. ಮುಟ್ಟುತ್ತಲೆ ಇರಬೇಕೆನ್ನಿಸುತ್ತದೆ.