ಎಡಬಿಡದೆ ಕಾಡುವ ಕೆಮ್ಮು ಕಫದ ಸಮಸ್ಯೆಗೆ ಹೇಳಿ ಗುಡ್ ಬೈ

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ಚಳಿಗಾಲದಲ್ಲಿ ಕಾಡುವ ಶೀತ ಕೆಮ್ಮಿಗೆ ವೈದ್ಯರ ಬಳಿ ಹೋಗುವ ಬದಲು, ಮನೆಯಲ್ಲೇ ಮಾಡಿ ನೋಡಿ ಮನೆಮದ್ದುಗಳು. ಚಳಿಗಾಲ ಶುರು ಆಗುತ್ತಿದ್ದಂತೆ ನೆಗಡಿ ಕೆಮ್ಮು ಅದರಲ್ಲಿ ಕಫ ಎಂಬ ರೋಗಗಳು ತಾನು ಮುಂದೆ ನೀನು ಮುಂದೆ ಅಂತ ಒಂದೊಂದಾಗಿ ಬರುತ್ತಲೇ ಇರುತ್ತವೆ. ಕಫ ಮತ್ತು ಕೆಮ್ಮು ಚಳಿಗಾಲದಲ್ಲಿ ಕಾಡುವ ಸರ್ವೇ ಸಾಮಾನ್ಯ ರೋಗಗಳು ಆಗಿವೆ. ಇಂತಹ ಸಮಸ್ಯೆಗಳು ಕಾಣಿಸಿದ ಕೂಡ ನಾವು ಆಸ್ಪತ್ರೆಯ ಕಡೆಗೆ ಮುಖ ಮಾಡುತ್ತೇವೆ. ನೆಗಡಿ ಜ್ವರ ಕೆಮ್ಮು ಇನ್ನಿತರ ಸಮಸ್ಯೆಗಳಿಗೆ ಔಷಧವನ್ನು ನೀಡಿದರೆ ಒಂದು ವೇಳೆ ಗುಣಮುಖ ಆಗಬಹುದು ಆದರೆ ಈ ಕಫ ಅನ್ನುವುದು ಎಡಬಿಡದೆ ಕಾಡುತ್ತಲೇ ಇರುತ್ತದೆ. ಇದರ ಪ್ರಭಾವ ದೀರ್ಘಕಾಲದವರೆಗೆ ಹಾಗೆ ಇರುತ್ತದೆ. ಆದರೆ ಇದಕ್ಕೆಲ್ಲ ನೀವು ಗುಡ್ ಬೈ ಹೇಳಬಹುದು. ಮನೆಯಲ್ಲಿ ಸಿಗುವ ಪದಾರ್ಥಗಳನ್ನು ಬಳಕೆ ಮಾಡಿಕೊಂಡು ಪರಿಹಾರವನ್ನು ಕಂಡುಕೊಳ್ಳಬಹುದು. ಅಂಥಹ ಕೆಲವು ಮನೆಮದ್ದುಗಳನ್ನು ನಿಮಗೆ ತಿಳಿಸಿ ಕೊಡುತ್ತೇವೆ ಬನ್ನಿ. ಹೀಗಾಗಿ ಈ ಉಪಯುಕ್ತ ಮಾಹಿತಿಯನ್ನು ಕೊನೆವರೆಗೂ ಓದಿರಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಈ ಮನೆಮದ್ದು ಮಾಡಲು ಜೇನುತುಪ್ಪ ಕಲ್ಲುಪ್ಪು ಏಲಕ್ಕಿ ಮತ್ತು ತುಪ್ಪ. ಈ ನಾಲ್ಕು ವಸ್ತುಗಳನ್ನು ನೀವು ನಿಯಮಿತವಾಗಿ ಸೇವನೆ ಮಾಡುತ್ತಾ ಬಂದರೆ ಖಂಡಿತವಾಗಿ ನಿಮಗೆ ಕಫದ ಸಮಸ್ಯೆ ಬರುವುದಿಲ್ಲ. ಇದರಲ್ಲಿ ಬಳಕೆ ಮಾಡಿರುವ ಏಲಕ್ಕಿ ಗಂಟಲಿನ ಕಿರಿಕಿರಿ ಅನ್ನು ಹೋಗಲಾಡಿಸುತ್ತದೆ. ಇದೇ ಕಾರಣಕ್ಕೆ ಇದು ಕೆಮ್ಮು ಮತ್ತು ಕಫವನ್ನು ಕರಗಿಸಲೂ ರಾಮಬಾಣ ವಾಗಿ ಕೆಲಸವನ್ನು ಮಾಡುತ್ತದೆ. ಮೊದಲಿಗೆ ಏಲಕ್ಕಿ ಮತ್ತು ಜೇನುತುಪ್ಪವನ್ನು ಬೆರೆಸಿ ತಿನ್ನಬಹುದು. ಇಲ್ಲವಾದರೆ ಕಲ್ಲುಪ್ಪು ಮತ್ತು ತುಪ್ಪವನ್ನು ನೀರಿನಲ್ಲಿ ಕುದಿಸಿ ಅದರಲ್ಲಿ ಏಲಕ್ಕಿ ಹಾಕಿ ಕುದಿಸಿ ಕುಡಿದರೆ ಕೂಡ ಕಫ ಕಡಿಮೆ ಆಗುತ್ತದೆ. ಹಾಗೂ ನೀವು ಕೆಮ್ಮು ಮತ್ತು ಕಫಕ್ಕೆ ಗುಡ್ ಬೈ ಹೇಳಬಹುದು. ಹಾಗೂ ಇನ್ನಿತರ ಮನೆಮದ್ದು ನೋಡುವುದಾದರೆ ನಿಂಬೆ, ಕಲ್ಲು ಸಕ್ಕರೆ ಮತ್ತು ಕಾಳುಮೆಣಸನ್ನು ಸೇರಿಸಿ ಗಟ್ಟಿಯಾದ ಪಾಕವನ್ನು ಮಾಡಿಕೊಳ್ಳಬೇಕು. ಈ ಪಾಕವನ್ನು ದಿನವೂ 2 ಚಮಚ ಸೇವಿಸುತ್ತಾ ಬಂದರೆ ಕಫ ಕಡಿಮೆಯಾಗುವುದಲ್ಲದೇ ಕೆಮ್ಮಿನ ಸಮಸ್ಯೆ ದೂರವಾಗುತ್ತದೆ. ಉಪ್ಪಿನ ಜೊತೆ ಶುಂಠಿ ಮತ್ತು ಲವಂಗವನ್ನು ಸೇರಿಸಿ ಅಗಿಯುವುದರಿಂದ ಕಫ ಮತ್ತು ಗಂಟಲ ಕೆರೆತವನ್ನು ದೂರ ಮಾಡಬಹುದು.

ಶುಂಠಿಯ ಚಹಾವನ್ನು ಮಾಡಿ ಕುಡಿಯುವುದರಿಂದ ಸಹ ನೆಗಡಿ ಮತ್ತು ಕಫವನ್ನು ನಿವಾರಿಸಿಕೊಳ್ಳಬಹುದು. ಈ ವೇಳೆ ಬ್ಲ್ಯಾಕ್ ಟೀ ಮಾಡಿಕೊಳ್ಳುವುದು ಉತ್ತಮ. ಶೀತ ಕೆಮ್ಮಿನಿಂದ ಮಾತ್ರವಲ್ಲದೆ ಕೆಲವರಿಗೆ ಡಸ್ಟ್ ಅಲರ್ಜಿ ಯಿಂದ ಕೂಡ ಕಫದ ಸಮಸ್ಯೆ ಉಂಟಾಗುವುದು. ಅನೇಕರು ಕಫದ ಸಮಸ್ಯೆಗೆ ಸ್ಟೀಮ್ ತೆಗೆದುಕೊಳ್ಳುವುದು ಅಥವಾ ಇನ್ನೇನಾದರೂ ಪರಿಹಾರವನ್ನು ಮಾಡಿಕೊಳ್ಳುತ್ತಾರೆ. ಹೌದು ಇದು ಕೂಡ ರೀತಿಯಲ್ಲಿ ಉತ್ತಮ. ಎದೆಯಲ್ಲಿ ಕಫವಾದರೆ ಹಬೆಗೆ ಕರಗುತ್ತದೆ.

Leave a Reply

Your email address will not be published. Required fields are marked *