ನಮಸ್ತೇ ಪ್ರಿಯ ಓದುಗರೇ, ಮೊದಲಿನ ಕಾಲದ ಜನರು ಮನೆಯಲ್ಲಿ ಹೆಚ್ಚಾಗಿ ರೊಟ್ಟಿಯನ್ನು ತಟ್ಟುತ್ತಿದ್ದರು. ಈ ರೊಟ್ಟಿಯನ್ನು ತಿಂದು ಮೊದಲಿನ ಕಾಲದ ಜನರು ತುಂಬಾನೇ ಬಲಶಾಲಿ ಕೂಡ ಆಗಿ ಇರುತ್ತಿದ್ದರು. ಹಾಗೂ ಇವರಿಗೆ ಯಾವುದೇ ಕಾಯಿಲೆ ಕೂಡ ಬರುತ್ತಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಚಪಾತಿ ಹೆಚ್ಚಾಗಿ ಮಾಡುತ್ತಿದ್ದಾರೆ ಹೌದು ನೀವು ಗಮನಿಸಿರಬಹುದು ಹಾಸ್ಟೆಲ್ ಮಕ್ಕಳಿಗೆ ರೊಟ್ಟಿಯನ್ನು ಮಾಡಿ ಕೊಡುವುದಿಲ್ಲ ಬದಲಾಗಿ ಚಪಾತಿಯನ್ನು ಆಹಾರವಾಗಿ ನೀಡುತ್ತಾರೆ. ಹಾಗೂ ಇತ್ತೀಚಿನ ದಿನಗಳಲ್ಲಿ ರೊಟ್ಟಿಗಿಂತ ಚಪಾತಿಗೆ ಮಕ್ಕಳು ಅಧಿಕವಾಗಿ ಮೊರೆ ಹೋಗುತ್ತಿದ್ದಾರೆ. ಚಪಾತಿ ತಿನ್ನಲು ಮೆತ್ತಗೆ ಇರುತ್ತದೆ. ಚಪಾತಿಯನ್ನು ನಿತ್ಯವೂ ಸೇವಿಸುತ್ತಾ ಬಂದರೆ ಖಂಡಿತವಾಗಿ ಅದರ ಲಾಭಗಳನ್ನು ನಾವು ಮುಂದಿನ ದಿನಗಳಲ್ಲಿ ಕಾಣಬಹುದು. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಪ್ರತಿದಿನವೂ ಚಪಾತಿಯನ್ನು ತಿನ್ನುತ್ತಾ ಬಂದರೆ ಆರೋಗ್ಯದ ಮೇಲೆ ಆಗುವ ಲಾಭಗಳ ಬಗ್ಗೆ ತಿಳಿಯೋಣ. ಪ್ರತಿಯೊಬ್ಬರ ಮನೆಯಲ್ಲಿ ಚಪಾತಿಯನ್ನು ಮಾಡುತ್ತಾರೆ. ಅದರಲ್ಲೂ ನಗರಗಳಲ್ಲಿ ಹೆಚ್ಚಾಗಿ ರೊಟ್ಟಿಗಿಂತ ಚಪಾತಿಯನ್ನು ಹೆಚ್ಚಾಗಿ ಮಾಡುತ್ತಾರೆ. ಅದರಲ್ಲೂ ಮನೆಯಲ್ಲಿ ಮಧುಮೇಹಿಗಳು ಇದ್ದರೆ ಚಪಾತಿಯನ್ನೆ ಮಾಡಬೇಕು. ಏಕೆಂದರೆ ಗೋಧಿಯಲ್ಲಿ ಹಲವಾರು ಪೋಷಕಾಂಶಗಳು ಇದ್ದು ಆರೋಗ್ಯಕ್ಕೆ ಒಳ್ಳೆಯದು ಎನ್ನಲಾಗುತ್ತದೆ.
ಇನ್ನೂ ಚಪಾತಿಯನ್ನು ವಿಟಮಿನ್ ಅಯೋಡಿನ್ ಸಿಲೇನಿಯಂ ಸಿಲಿಕಾನ್ ಪೊಟ್ಯಾಶಿಯಂ ಕ್ಯಾಲ್ಷಿಯಂ ಮತ್ತು ಇನ್ನಿತರ ಅಂಶಗಳು ಅಡಗಿವೆ. ಇವು ಮನುಷ್ಯನು ಆರೋಗ್ಯವಾಗಿ ಇರಲು ತುಂಬಾನೇ ಸಹಾಯ ಮಾಡುತ್ತದೆ. ಇನ್ನೂ ಚರ್ಮದ ಆರೋಗ್ಯಕ್ಕೆ ಗೋಧೀಯಲ್ಲಿ ಇರುವ ಅನೇಕ ಪೋಷಕಾಂಶಗಳು ಕಾರಣವಾಗುತ್ತವೆ. ಹೌದು ಚಪಾತಿ ತಿನ್ನುವುದರಿಂದ ಸ್ಕಿನ್ ಒಳ್ಳೆಯ ಟೆಕ್ಸ್ಚರ್ ಬರುತ್ತದೆ. ಚರ್ಮದಲ್ಲಿ ಒಳ್ಳೆಯ ಕಾಂತಿ ಹೆಚ್ಚುತ್ತದೆ. ಪ್ರತಿದಿನ ಚಪಾತಿ ತಿನ್ನುವುದನ್ನು ರೂಢಿ ಮಾಡಿಕೊಂಡರೆ ಯಾವುದೇ ರಾಸಾಯನಿಕ ಕ್ರೀಮ್ ನಿಂದ ಮಾಡಲು ಅಸಾಧ್ಯವಾದ ಎಲ್ಲ ರೀತಿಯಲ್ಲಿ ನಿಮ್ಮ ಚರ್ಮದ ಹೊಳಪು ಹೆಚ್ಚಾಗುತ್ತದೆ. ಇನ್ನೂ ರಾತ್ರಿ ಉಳಿದ ಚಪಾತಿಯನ್ನು ಮರುದಿನ ಬೆಳಿಗ್ಗೆ ಹಾಲಿನಲ್ಲಿ ಬೆರೆಸಿ ತಿನ್ನುವುದರಿಂದ ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಾಯಕ ಮಾಡುತ್ತದೆ. ಚಪಾತಿ ಮತ್ತು ಹಾಲು ಗ್ಯಾಸ್ಟ್ರಿಕ್ ಗೆ ಒಳ್ಳೆಯ ಮನೆಮದ್ದು. ಚಪಾತಿ ತಿನ್ನುವುದರಿಂದ ನಾವು ತುಂಬಾ ಪಿಟ್ ಆಗಿ ಇರಬಹುದು. ಅಷ್ಟೇ ಅಲ್ಲದೇ ಹೆಚ್ಚು ಸುಸ್ತು ಆಯಾಸ ಉಂಟಾಗುವುದಿಲ್ಲ.
ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಚಪಾತಿ ತಿನ್ನುವುದರಿಂದ ಬೇಗನೆ ಹಸಿವು ಆಗುವುದಿಲ್ಲ. ಹಾಗೂ ಕೊಲೆಸ್ಟ್ರಾಲ್ ಮಟ್ಟವು ದೇಹದೊಳಗೆ ಸೇರುವುದಿಲ್ಲ. ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ ಹಾಗೂ ಉತ್ತಮವಾದ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಮೊದಲೇ ಹೇಳಿದಂತೆ ಚಪಾತಿಯಲ್ಲಿ ಕಾರ್ಬೋಹೈಡ್ರೇಟ್ ಗಳ ಮಹಾಪೂರವೇ ಇದೆ. ಹಾಗೂ ಇದು ಶಕ್ತಿ ಕೇಂದ್ರವಾಗಿ ಕೆಲಸವನ್ನು ಮಾಡುತ್ತದೆ.ಕೇವಲ ಇದು ನಿಮ್ಮ ದೇಹಕ್ಕೆ ಶಕ್ತಿ ವಿಷಯವೇ ಅಲ್ಲದೆ ನಿಮ್ಮ ಮೆದುಳಿನ ಬುದ್ಧಿ ಶಕ್ತಿಯನ್ನು ಸಹ ಉತ್ತಮಗೊಳ್ಳುವಂತೆ ಮಾಡುತ್ತದೆ. ಚಪಾತಿಯನ್ನು ಪೋಷಕಾಂಶಗಳ ತವರು ಅಂತ ಕೂಡ ಕರೆಯುತ್ತಾರೆ. ಚಪಾತಿಯನ್ನು ನಾವು ಹಾಗೆ ತಿನ್ನಬಹುದು ಅಥವಾ ಯಾವುದೇ ಬಗೆಯ ಚಟ್ನಿ, ಪಲ್ಯ, ಸಾರು, ಸಾಗು, ಒಣಗಿದ ತರಕಾರಿಗಳ ಖಾದ್ಯ ಮತ್ತು ಮಾಂಸಾಹಾರಗಳ ಜೊತೆಗೆ ಸುಲಭವಾಗಿ ಹೊಂದಿಕೊಳ್ಳುತ್ತದೆ ಮತ್ತು ನೀವು ಮಾಡಿಟ್ಟ ಚಪಾತಿ ಬೇಗನೆ ಹಾಳಾಗುವುದಿಲ್ಲ. ನೋಡಿದ್ರಲಾ ಚಪಾತಿಯನ್ನು ನಿತ್ಯವೂ ಸೇವನೆ ಮಾಡುವುದರಿಂದ ಆಗುವ ಲಾಭಗಳನ್ನು. ಈ ಉಪಯುಕ್ತ ಮಾಹಿತಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಶುಭದಿನ.