ನಮಸ್ತೇ ಪ್ರಿಯ ಓದುಗರೇ, ಕ್ಯಾರೆಟ್ ಒಂದು ಶಾಖಾಹಾರಿ ಆಹಾರವಾಗಿದೆ. ಇದು ಚಳಿಗಾಲದಲ್ಲಿ ದೊರೆಯುವ ಒಂದು ಆಹಾರವಾಗಿದೆ. ಪ್ರತಿದಿನವೂ ಕ್ಯಾರೆಟ್ ಅನ್ನು ತಿನ್ನುವುದರಿಂದ ಅನೇಕ ರೀತಿಯ ಲಾಭಗಳನ್ನು ಪಡೆದು ಕೊಳ್ಳಬಹುದು. ಮದುಕರಿಂದ ಮಕ್ಕಳವರೆಗೆ ಕ್ಯಾರೆಟ್ ಅಂದರೆ ಬಲು ಇಷ್ಟ. ಹಾಗೂ ಸೌಂದರ್ಯ ಮತ್ತು ಆರೋಗ್ಯಕ್ಕೆ ಕೂಡ ತುಂಬಾನೇ ಒಳ್ಳೆಯದು. ಮಕ್ಕಳ ಆರೋಗ್ಯಕ್ಕೆ ಕ್ಯಾರೆಟ್ ಹೇಳಿ ಮಾಡಿಸಿದ ಸೂಪರ್ ಫುಡ್ ಆಗಿದೆ. ಕ್ಯಾರೆಟ್ ಬಣ್ಣದಲ್ಲಿ ಕೆಂಪಾಗಿದ್ದು ನೋಡಲು ಉದ್ದಗೆ ಇದ್ದು ರುಚಿಯಲ್ಲಿ ಸಿಹಿಯಾಗಿದ್ದು ಪೋಷಕಾಂಶಗಳ ಆಗರವಾಗಿದೆ. ಇನ್ನೇನು ಬೇಕು ಕ್ಯಾರೆಟ್ ಅನ್ನು ಇಷ್ಟ ಪಡಲೂ ಅಲ್ಲವೇ? ನಮ್ಮ ಆರೋಗ್ಯಕ್ಕೆ ಕ್ಯಾರೆಟ್ ಸದಾ ಸಹಾಯಕಾರಿ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಕ್ಯಾರೆಟ್ ತಿನ್ನುವುದರಿಂದ ಎಷ್ಟೆಲ್ಲಾ ಲಾಭಗಳು ಉಂಟಾಗುತ್ತವೆ ಅಂತ ಎಳೆ ಎಳೆಯಾಗಿ ತಿಳಿಸಿ ಕೊಡುತ್ತೇವೆ ಬನ್ನಿ. ಮೊದಲಿಗೆ ಕ್ಯಾರೆಟಿನಲ್ಲಿ ಮಕ್ಕಳ ಬೆಳವಣಿಗೆಗೆ ಅಗತ್ಯ ಪೋಷಕಾಂಶವಾಗಿರುವ ಬೀಟಾ-ಕೆರೋಟಿನ್ ಇದೆ. ಅದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಮಾತ್ರವಲ್ಲ ಅದರಲ್ಲಿ ಆ್ಯಂಟಿ ಏಜಿಂಗ್ ಅಂಶಗಳು ಕೂಡ ಇವೆ.
ಇದರಲ್ಲಿ ವಿಟಮಿನ್ ಎ ಮತ್ತು ಸಿ ಇರುವುದರಿಂದ ಇದು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಕ್ಯಾರೆಟ್‌ನಲ್ಲಿ ವಿಟಮಿನ್ ಎ ಅಧಿಕವಾಗಿರುವುದರಿಂದ ಇದನ್ನು ನಿಯಮಿತವಾಗಿ ಸೇವಿಸುವುದರಿಂದ ದೃಷ್ಟಿ ಸುಧಾರಿಸುತ್ತದೆ.ಪ್ರತಿನಿತ್ಯ ಕ್ಯಾರೆಟ್ ತಿನ್ನುವುದರಿಂದ ವಸಡಿನ ರಕ್ತಸ್ರಾವವನ್ನು ನಿಲ್ಲಿಸಬಹುದು ಮತ್ತು ಇದರಿಂದ ನೀವು ಹೊಳೆಯುವ ಹಲ್ಲುಗಳನ್ನು ಪಡೆಯಬಹುದು. ಕ್ಯಾರೆಟ್ ಅನ್ನು ಕ್ಯಾನ್ಸರ್ ಜೀವಕೋಶಗಳು ಸಾಯುವಂತೆ ಮಾಡುವಲ್ಲಿ ಗಮನಿಸಬಹುದು. ಅಷ್ಟೇ ಅಲ್ಲದೇ ಮಧುಮೇಹಿಗಳಿಗೆ ಇದು ರಾಮಬಾಣವಾಗಿ ಕೆಲಸಗಳನ್ನು ಮಾಡುತ್ತದೆ. ಡಯಾಬಿಟಿಸ್ ರೋಗದ ವಿರುದ್ಧ ಹೋರಾಡಲು ತುಂಬಾನೇ ಕ್ಯಾರೆಟ್ ಸಹಾಯ ಮಾಡುತ್ತದೆ. ಕ್ಯಾರೆಟ್ನಲ್ಲಿ ಶೇ. 10ರಷ್ಟು ಕಾರ್ಬೊಹೈಡ್ರೇಟ್ ಇದೆ. ಅಷ್ಟೇ ಅಲ್ಲದೇ ವಿಟಮಿನ್ ಎ, ಡಿ, ಇ, ಕೆ, ಪಿಪಿ, ಆಸ್ಕಾರ್ಬಿಕ್ ಆಸಿಡ್, ಸ್ಟೆರಾಲ್ ಮತ್ತು ಲೆಸಿತಿನ್ ಅಂಶವಿದೆ. ಅಷ್ಟೇ ಅಲ್ಲದೆ, ಕ್ಯಾರೆಟ್‍ನಲ್ಲಿ ವಿಟಮಿನ್ ಸಿ, ಕೆ ಮತ್ತು ಮ್ಯಾಂಗನೀಸ್ ಹಾಗೂ ಕ್ಯಾಲ್ಸಿಯಂ, ಕಬ್ಬಿಣಾಂಶ, ಪೊಟಾಶಿಯಂ, ಕಾಪರ್, ಪ್ರಾಸ್ಪರಸ್‍ನಂತಹ ಮಿನರಲ್ಸ್‍ಗಳು ಇವೆ.
ಇನ್ನೂ ಊಟವಾದ ಬಳಿಕ ಹಸಿ ಕ್ಯಾರೆಟ್ ಜಗಿಯಿರಿ, ಹಲ್ಲನ್ನು ಅವು ಸ್ವಚ್ಚಗೊಳಿಸುತ್ತವೆ ಮತ್ತು ದುರ್ವಾಸನೆಯನ್ನು ನಿವಾರಿಸುತ್ತವೆ. ಹಲ್ಲು ಹುಳುಕಾಗಂತೆ ತಡೆಯುತ್ತವೆ. ಹಾಗೂ ಊಟವಾದ ಮೇಲೆ ಆಹಾರವನ್ನು ಸೇವನೆ ಮಾಡುವುದರಿಂದ ಜೀರ್ಣ ಕ್ರಿಯೆ ಕೂಡ ಸರಿಯಾಗಿ ಆಗುತ್ತದೆ. ಇದರಿಂದ ಮಲಬದ್ಧತೆ ಕೂಡ ಬರುವುದಿಲ್ಲ. ಇನ್ನೂ ಮುಖ್ಯವಾಗಿ ಆರೋಗ್ಯಕರ ಗುಣ ಹೇಳಬೇಕು ಅಂದರೆ ಕ್ಯಾರೆಟ್ ತಿನ್ನುವುದರಿಂದ ದೇಹದಲ್ಲಿ ರಕ್ತವೂ ಶುದ್ಧಿಯಾಗುತ್ತದೆ. ಇದರಿಂದ ನಿಮ್ಮ ಮುಖದಲ್ಲಿ ಮೊಡವೆಗಳಿಗೆ ಜಾಗವೇ ಇರುವುದಿಲ್ಲ. ಎಲ್ಲ ಮೊಡವೆಗಳು ಕಣ್ಮರೆಯಾಗುತ್ತದೆ. ಹಾಗೂ ಹಿಮೋಗ್ಲೋಬಿನ್ ಮಟ್ಟವು ಹೆಚ್ಚುವುದು.ಕ್ಯಾರೆಟ್‍ನಲ್ಲಿರುವ ಬೀಟಾ ಕ್ಯಾರೋಟಿನ್ ಚರ್ಮಕ್ಕೆ ಹೊಳಪನ್ನು ನೀಡಿದರೆ, ಅದರಲ್ಲಿರುವ ವಿಟಮಿನ್ ಎ ಮತ್ತು ಆ್ಯಂಟಿ ಆಕ್ಸಿಡೆಂಟ್‍ಗಳು ಸೂರ್ಯನ ಕಿರಣಗಳಿಂದ ನಮ್ಮ ಚರ್ಮಕ್ಕಾಗುವ ಅಪಾಯಗಳಿಂದ ರಕ್ಷಿಸುತ್ತದೆ. ಅದರಲ್ಲೂ ಮುಖ್ಯವಾಗಿ ನೇರಳಾತೀತ ಕಿರಣಗಳಿಂದ ರಕ್ಷಣೆಯನ್ನು ಮಾಡಿ ಚರ್ಮಕ್ಕೆ ಒಳ್ಳೆಯ ಹೊಳಪು ನೀಡುತ್ತದೆ. ಕ್ಯಾರೆಟ್ ತಿನ್ನುವುದರಿಂದ, ಕರುಳಿನ ಜಂತು ಹುಳಗಳಿಂದ ಹೊಟ್ಟೆಯಲ್ಲಿ ಉಂಟಾಗುವ ಸಮಸ್ಯೆಗಳಿಂದ ಪಾರಾಗಬಹುದು. ಅಷ್ಟೇ ಅಲ್ಲ, ಕ್ಯಾರೆಟ್ ತಿನ್ನುವುದರಿಂದ, ಕ್ಯಾನ್ಸರ್, ಹೃದ್ರೋಗಗಳು ಮತ್ತು ಪಾರ್ಶ್ವವಾಯುವಿನಂತಹ ಅಪಾಯಗಳಿಂದ ರಕ್ಷಿಸಿಕೊಳ್ಳಬಹುದು.