ಚರ್ಮ ರೋಗ ಸೇರಿದಂತೆ ಹಲವು ರೋಗಗಳಿಗೆ ರಾಮಬಾಣ ಈ ಕಹಿ ಬೇವು

ಆರೋಗ್ಯ

ನಮಸ್ತೇ ಪ್ರಿಯ ಸ್ನೇಹಿತರೆ, ಸದಾ ಹಚ್ಚ ಹಸಿರಾಗಿ ಭಾರತದ ಉಪ ಖಂಡಗಳಲ್ಲಿ ಕಂಡು ಬರುವ ಸಸ್ಯ ರಾಶಿಗಳಲ್ಲಿ ಬೇವು ಕೂಡ ಒಂದು. ಬಹು ಉಪಯೋಗಿ ಬೇವಿನ ಗುಣ ಹಾಗೂ ಉಪಯೋಗದ ಕುರಿತು ನೀವು ಅರಿತರೆ ಅಚ್ಚರಿಪಡುತ್ತೀರಿ. ಭಾರತದ ಸಾಂಪ್ರದಾಯಿಕ ಸಂಸ್ಕೃತಿಯಲ್ಲಿ ಬೇವಿಗೆ ಅಪಾರವಾದ ಪ್ರಾಮುಖ್ಯತೆ ನೀಡಿದೆ. ಬೇವಿನ ಎಲೆ, ಬೇವಿನ ಹೂವು, ಬೇವಿನ ಎಣ್ಣೆ, ಬೇವಿನ ತೊಗಟೆ. ಹೀಗೆ ಎಲ್ಲಾ ರೀತಿಯಲ್ಲೂ ಬೇವಿನ ಮರದಿಂದ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಕಹಿ ಬೇವು ರುಚಿಯಲ್ಲಿ ಮಾತ್ರ ಅವಗುಣಗಳನ್ನು ಹೊಂದಿದೆ. ಅದು ಬಿಟ್ಟರೆ ಇದು ಆರೋಗ್ಯಕ್ಕೆ ಖನಿಜ ಅಂತ ಹೇಳಬಹುದು ಹಾಗೂ ಇದನ್ನು ತಿನ್ನುವುದರಿಂದ ದೇಹಕ್ಕೆ ಅನೇಕ ಲಾಭಗಳಿವೆ. ಕಹಿಬೇವು ಅಂದರೆ ರುಚಿಯಲ್ಲಿ ಕಹಿ ಇರುವ ಕಾರಣ ಇದನ್ನು ಯಾರು ತಿನ್ನುವುದಿಲ್ಲ ಆದರೆ ನಮ್ಮ ಹಿರಿಯರು ಇದರ ಪ್ರಾಮುಖ್ಯತೆಯನ್ನು ಹೇಳುತ್ತಲೇ ಬಂದಿದ್ದಾರೆ ನಮಗೆ ಕೇಳಲು ಇಷ್ಟವಾಗದೆ ಇದ್ದರೂ ಕೂಡ ನಾವು ಇದರ ಗುಣಸ್ವಭಾವಕ್ಕೆ ನಾವು ಮೊರೆ ಹೋಗಲೇ ಬೇಕು. ಕಹಿ ಬೇವು ಅಂದರೆ ನಮಗೆ ಮೊದಲಿಗೆ ನೆನಪಿಗೆ ಬರುವುದು ಯುಗಾದಿ ಹಬ್ಬ.

ಒಂದೇ ಒಂದು ಬಾರಿ ಇದನ್ನು ಈ ಯುಗಾದಿ ಹಬ್ಬದಲ್ಲಿ ಕಹಿ ಬೇವು ಎಲೆಗಳನ್ನು ತಿಂದರೆ ಮುಗಿಯಿತು ಮುಂದಿನ ವರ್ಷವೇ ಇದರ ನೆನಪು ಆಗುವುದು. ಆದರೆ ಕಹಿ ಬೇವಿನ ಗುಣಗಳನ್ನು ನೀವು ಅರಿತು ಕೊಂಡರೆ ಅದನ್ನು ಯಾವಾಗ ಬೇಕಾದರೂ ತಂದು ಉಪಯೋಗಿಸಬಹುದು. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಕಹಿ ಬೇವಿನ ಗುಣಗಳನ್ನು ತಿಳಿಸಿ ಕೊಡುತ್ತೇವೆ ಬನ್ನಿ. ಮೊದಲಿಗೆ ಕಹಿ ಬೇವಿನ ಎಲೆಗಳನ್ನು ಚೆನ್ನಾಗಿ ಜಜ್ಜಿ ಮೊಸರಿನಲ್ಲಿ ಹಾಕಿ ಹುಳು ಕಡ್ಡಿ ಮೇಲೆ ಲೇಪನ ಮಾಡಿದರೆ ಹುಳು ಕಡ್ಡಿ ನಿವಾರಣೆ ಆಗುತ್ತದೆ.ಕಹಿಬೇವಿನಲ್ಲಿ ಅತ್ಯುತ್ತಮ ಬ್ಯಾಕ್ಟೀರಿಯಾ ನಿವಾರಕ ಗುಣ, ಉರಿಯೂತ ನಿವಾರಕ ಗುಣ, ಪ್ರತಿಜೀವಕ ಗುಣ ಮತ್ತು ಶಿಲೀಂಧ್ರ ನಿವಾರಕ ಗುಣಗಳಿವೆ. ಬೇವಿನ ಎಣ್ಣೆಯನ್ನು ತಂದು ರೋಗಗ್ರಸ್ತ ಚರ್ಮದ ಮೇಲೆ ಲೇಪಿಸಿದರೆ ಚರ್ಮ ವ್ಯಾಧಿ ಎಲ್ಲ ಸಮಸ್ಯೆಗಳು ದೂರವಾಗುತ್ತವೆ. ಇನ್ನೂ ನಿಮಗೆ ಗಾಯವಾದರೆ ಬೇವಿನ ಮರದ ಕಾಂಡವನ್ನು ತಂದು ಅದನ್ನು ಕಲ್ಲಿನ ಮೇಲೆ ಚೆನ್ನಾಗಿ ತೇದು ಅದರ ಗಂಧವನ್ನು ತೆಗೆದುಕೊಳ್ಳಬೇಕು. ಆಮೇಲೆ ನಿಮ್ಮ ಗಾಯವನ್ನು ಬೇವಿನ ಕಷಾಯದಿಂದ ತೊಳೆಯಬೇಕು. ತದ ನಂತರ ಗಂಧವನ್ನು ಲೇಪನ ಮಾಡಬೇಕು. ಇದರಿಂದ ಗಾಯಗಳು ದೂರವಾಗುತ್ತವೆ.

ಬೇವಿನ ಕಷಾಯದಿಂದ ಕೂದಲನ್ನು ತೊಳೆದರೆ ಕೂದಲು ಉದುರುವುದಿಲ್ಲ ಸೊಂಪಾಗಿ ದಟ್ಟವಾಗಿ ಬೆಳೆಯುತ್ತವೆ. ಅಷ್ಟೇ ಅಲ್ಲದೇ ಕೂದಲು ಬೆಳ್ಳಗೆ ಆಗುವುದಿಲ್ಲ. ಇನ್ನೂ ನಿಮಗೆ ತಲೆಯಲ್ಲಿ ಹೇನು ಆದರೆ ಕಹಿ ಬೇವಿನ ಬೀಜವನ್ನು ಅಥವಾ ಕಾಯಿಯನ್ನು ತಂದು ಚೆನ್ನಾಗಿ ನೀರಿನಲ್ಲಿ ರುಬ್ಬಿ ತಲೆಗೆ ಹಚ್ಚಿ ಎಂಟು ತಾಸು ಹಾಗೆಯೇ ಬಿಡಬೇಕು ಬಳಿಕ ಬೇವಿನ ಕಷಾಯದಿಂದ ಕೂದಲನ್ನು ತೊಳೆದರೆ ಹೇನುಗಳು ಸಾಯುತ್ತವೆ. ಇನ್ನೂ ನಿಮಗೆ ಗಂಟಲು ಹುಣ್ಣು ಆದರೆ ಕಹಿ ಬೇವಿನ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಬಾಯಿಯಲ್ಲಿ ಮುಕ್ಕಳಿಸಬೇಕು. ಇದರಿಂದ ಗಂಟಲು ಬೇನೆ ಗಂಟಲು ಹುಣ್ಣು ಶಮನವಾಗುವುದು. ಬೇವಿನ ಕಡ್ಡಿಯಿಂದ ಹಲ್ಲು ಉಜ್ಜಿದರೆ ಹಲ್ಲು ನೋವು ನಿವಾರಣೆ ಆಗುತ್ತದೆ ಹಾಗೂ ಹಲ್ಲುಗಳು ಶುಭ್ರ ಆಗುತ್ತವೆ. ಎಲೆ ಕಹಿ ಬೇವಿನ ಎಲೆಗಳನ್ನು ತಂದು ಕುದಿಸಿ ಟೀ ಮಾಡಿ ಕುಡಿಯುವುದರಿಂದ ತಲೆನೋವು ಕಡಿಮೆಯಾಗುತ್ತದೆ. ಬೇವಿನ ಎಲೆಯ ಹೊಗೆಯಿಂದ ಸೊಳ್ಳೆ ಮುಂತಾದ ಕೀಟಗಳನ್ನು ಓಡಿಸಬಹುದು. ಬೇವು ಬ್ಯಾಕ್ಟೀರಿಯಾ ವಿರೋಧಿ, ಉರಿಯೂತದ ಗುಣಗಳನ್ನು ಹೊಂದಿದೆ. ಇದು ಗುಳ್ಳೆಗಳನ್ನು ಉತ್ಪಾದಿಸುವ ಬ್ಯಾಕ್ಟೀರಿಯಾವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

Leave a Reply

Your email address will not be published. Required fields are marked *