ಒಣದ್ರಾಕ್ಷಿ ಅಷ್ಟೇ ಅಲ್ಲದೇ ಅದನ್ನು ನೆನೆಸಿದ ನೀರು ಕೂಡ ಕುಡಿಯಿರಿ. ಅಚ್ಚರಿ ಆಗುವಿರಿ

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ ಒಣದ್ರಾಕ್ಷಿ ಎಲ್ಲರಿಗೂ ಗೊತ್ತು ಹಾಗೆಯೆ ಇದು ಆರೋಗ್ಯಕ್ಕೆ ಕೂಡ ಅಷ್ಟೇ ಒಳ್ಳೆಯದು. ಒಣಗಿದ ದ್ರಾಕ್ಷಿಯನ್ನು ಕಿಸ್ ಮಿಸ್ ಮಾಡುತ್ತಾರೆ. ಡ್ರೈ ಫ್ರೂಟ್ಸ್ ಗಳಲ್ಲಿ ಒಣದ್ರಾಕ್ಷಿ ಇರಲೇ ಬೇಕು. ಒಣಹಣ್ಣುಗಳಲ್ಲಿರುವ ಪ್ರಯೋಜನಗಳ ಬಗ್ಗೆ ವಿಷಯ ಬಂದಾಗ, ನಾವೆಲ್ಲಾ ಬಾದಾಮಿ, ಗೋಡಂಬಿ, ಪಿಸ್ತಾ ಇತ್ಯಾದಿಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೇವೆ, ಒಣದ್ರಾಕ್ಷಿಯನ್ನು ಮಾತ್ರ ಮರೆತೇ ಬಿಡುತ್ತೇವೆ. ಆದರೆ ಇದರಲ್ಲಿ ಆರೋಗ್ಯಕರ ಪ್ರಯೋಜನಗಳನ್ನು ತಿಳಿದರೆ ನೀವು ಒಣ ದ್ರಾಕ್ಷಿ ತಿನ್ನವುದನ್ನು ಎಂದಿಗೂ ಮರೆಯುವುದಿಲ್ಲ. ಇದರಲ್ಲಿ ಐರನ್ ಪೊಟ್ಯಾಶಿಯಂ ಫಾಸ್ಫರಸ್ ಕ್ಯಾಲ್ಷಿಯಂ ಇನ್ನಿತರ ಖನಿಜಾಂಶಗಳನ್ನು ಒಳಗೊಂಡಿರುತ್ತದೆ. ಒಣದ್ರಾಕ್ಷಿ ಆರೋಗ್ಯಕ್ಕೆ ಹೇಳಿ ಮಾಡಿಸಿದ ಸೂಪರ್ ಫುಡ್ ಅಂತ ಹೇಳಬಹುದು. ಅಷ್ಟೇ ಅಲ್ಲದೇ ನಿತ್ಯವೂ ಒಣದ್ರಾಕ್ಷಿ ಮತ್ತು ಅದರ ನೀರು ಸೇವನೆ ಇಂದ ತುಂಬಾನೇ ಲಾಭ ಮತ್ತು ಉಪಯುಕ್ತ ಅಂತ ಆಯುರ್ವೇದದಲ್ಲಿ ತಿಳಿಸಿದ್ದಾರೆ.

ರಾತ್ರಿ ಹೊತ್ತು ಮಲಗುವ ಮುನ್ನ ನೀರಿನಲ್ಲಿ ಒಂದು ಹಿಡಿಯಷ್ಟು ಒಣದ್ರಾಕ್ಷಿ ನೆನೆಸಿ ಮರುದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಣದ್ರಾಕ್ಷಿ ನೀರು ಕುಡಿಯುವುದರಿಂದ ಕಿಡ್ನಿ ಕಾರ್ಯಗಳು ಚೆನ್ನಾಗಿ ನಡೆಯುತ್ತವೆ. ಹಾಗೂ ಒಣದ್ರಾಕ್ಷಿ ಜಗಿದು ತಿನ್ನಬೇಕು. ಇದರಿಂದ ದೇಹದಲ್ಲಿರುವ ಎಲ್ಲ ಟಾಕ್ಸಿನ್ ಅನ್ನು ಹೊರ ತೆಗೆದು ಹಾಕುತ್ತದೆ. ಹಾಗೂ ಕಿಡ್ನಿ ಗೆ ಸಂಭಂದ ಕಟ್ಟ ಎಲ್ಲ ಸಮಸ್ಯೆಗಳನ್ನೂ ದೂರ ಮಾಡುತ್ತದೆ. ಹಾಗೂ ಒಣ ದ್ರಾಕ್ಷಿ ತಿನ್ನುವುದರಿಂದ ಲಿವರ್ ನಲ್ಲಿ ಅಡಗಿರುವ ಎಲ್ಲ ಕಲ್ಮಶಗಳನ್ನು ಹೊರಹಾಕುತ್ತದೆ. ಇದರಿಂದ ಲಿವರ್ ಚೆನ್ನಾಗಿ ಕಾರ್ಯ ನಿರ್ವಹಿಸುತ್ತದೆ. ಇದರಿಂದ ಲಿವರ್ ಡ್ಯಾಮೇಜ್ ಕೂಡ ಆಗುವುದಿಲ್ಲ. ಇನ್ನೂ ಒಣ ದ್ರಾಕ್ಷಿ ನೀರು ಕುಡಿಯುವುದರಿಂದ ಇನ್ಫೆಕ್ಷನ್ ಮಾತೇ ನಿಮ್ಮ ಹತ್ತಿರ ಬರುವುದಿಲ್ಲ.

ಇನ್ನೂ ಒಣ ದ್ರಾಕ್ಷಿ ನೀರು ಕುಡಿಯುವುದರಿಂದ ನಮ್ಮ ದೇಹದಲ್ಲಿ ರಕ್ತ ಶುದ್ಧಿ ಆಗುತ್ತದೆ. ಇದರಿಂದ ನಿಮ್ಮ ಮುಖದಲ್ಲಿ ಮೊಡವೆಗಳು ಮೂಡುವುದಿಲ್ಲ. ಮುಖವೂ ಅಂದವಾಗಿ ಸ್ವಚ್ಛವಾಗಿ ಸುಂದರವಾಗಿ ಕಾಣುತ್ತದೆ. ಯಾವುದೇ ರೀತಿಯ ಚರ್ಮದ ಕಾಯಿಲೆಗಳು ಬರುವುದಿಲ್ಲ ಇದಕ್ಕೆ ಕಾರಣ ರಕ್ತದ ಶುದ್ಧತೆ ಅದು ಒಣ ದ್ರಾಕ್ಷಿ ನೀರಿನಿಂದಾಗುತ್ತದೆ. ಆದ್ದರಿಂದ ನಿತ್ಯವೂ ಒಣ ದ್ರಾಕ್ಷಿ ನೀರಿನಲ್ಲಿ ನೆನೆಸಿ ಮರುದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ ಇನ್ನೂ ಯಾವುದೇ ಇನ್ನಿತರ ಸ್ಕಿನ್ ಅಲರ್ಜಿ ಕೂಡ ಕಾಡುವುದಿಲ್ಲ ಹಾಗೂ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ. ಒಣ ದ್ರಾಕ್ಷಿ ನೀರು ಕುಡಿಯುವುದರಿಂದ ಅಸಿಡಿಟಿ ಮಲಬದ್ಧತೆ ಇನ್ನಿತರ ಸಮಸ್ಯೆಗಳು ಬರುವುದಿಲ್ಲ. ಒಣ ದ್ರಾಕ್ಷಿ ಯಲ್ಲಿ ಆಂಟಿ ಬಯೋಟಿಕ್ ಆಂಟಿ ಫಂಗಲ್ ಆಂಟಿ ಆಕ್ಸಿಡೆಂಟ್ ಗುಣಗಳು ಇರುವುದರಿಂದ ಕೆರೆತ ಮತ್ತು ಚರ್ಮದ ಇನ್ನಿತರ ಸಮಸ್ಯೆಗಳನ್ನು ಹೋಗಲಾಡಿಸಲು ಅನುವಾಗುತ್ತದೆ.

ಒಣ ದ್ರಾಕ್ಷಿ ನೀರು ಕುಡಿಯುವುದರಿಂದ ಉಸಿರಾಟದ ಸಮಸ್ಯೆಗಳು ಬರುವುದಿಲ್ಲ. ಹೃದ್ರೋಗ ವನ್ನು ದೂರ ಮಾಡುವಲ್ಲಿ ಸಹಕಾರಿಯಾಗಿದೆ. ಏಕೆಂದರೆ ಇದು ಉತ್ತಮ ಮಟ್ಟದ ಕೊಲೆಸ್ಟ್ರಾಲ್ ಅನ್ನು ಬಿಡುಗಡೆ ಮಾಡುತ್ತದೆ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ ಇದರಿಂದ ಹೃದಯ ಆರೋಗ್ಯವಾಗಿರಿಸುತ್ತದೆ. ಒಣ ದ್ರಾಕ್ಷಿ ಯಲ್ಲಿ ವಿಟಮಿನ್ ಎ ಹಾಗೂ ಬೀಟಾ ಕೆರೋಟಿನ್ ಇರುವುದರಿಂದ ಕಣ್ಣಿನ ದೃಷ್ಟಿ ಹೆಚ್ಚಿಸುತ್ತದೆ. ಒಣ ದ್ರಾಕ್ಷಿ ನೀರು ಕುಡಿಯುವುದರಿಂದ ತೂಕವನ್ನು ಹೆಚ್ಚಿಸಿಕೊಳ್ಳಬಹುದು. ಕಾರಣ ಇದರಲ್ಲಿ ಗ್ಲೂಕೋಸ್ ಮತ್ತು ಕಾರ್ಬೋಹೈಡ್ರೇಟ್ ಅಧಿಕವಾಗಿದೆ. ಒಣ ದ್ರಾಕ್ಷಿಯಲ್ಲಿ ಪೊಟಾಶಿಯಂ ಅಂಶವಿದೆ ಮತ್ತು ಇದು ದೇಹದಲ್ಲಿ ಉಪ್ಪಿನ ಅಂಶವನ್ನು ಸಮತೋಲನದಲ್ಲಿ ಇಡುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡುವುದು. ನೋಡಿದ್ರಲಾ ಒಣ ದ್ರಾಕ್ಷಿ ಅಷ್ಟೇ ಅಲ್ಲದೇ ಅದರ ನೀರು ಕೂಡ ಕುಡಿಯುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಎಂದು. ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಶುಭದಿನ.

Leave a Reply

Your email address will not be published. Required fields are marked *