ಬಿಳಿ ಈರುಳ್ಳಿ ತಿನ್ನುವುದರಿಂದ ಏನ್ ಆಗುತ್ತದೆ ಗೊತ್ತಾ

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ಬಿಳಿ ಈರುಳ್ಳಿಯ ಅಮೋಘ ಲಾಭಗಳನ್ನು ತಿಳಿದುಕೊಳ್ಳಿ. ಇಲ್ಲಿದೆ ಅದರ ಅದ್ಭುತವಾದ ಮಾಹಿತಿ.ಸಾಮಾನ್ಯವಾಗಿ ಈರುಳ್ಳಿಯಲ್ಲಿ ಹಲವಾರು ವಿಧಗಳಿವೆ. ಅದರಲ್ಲೂ ಬಿಳಿ ಈರುಳ್ಳಿ ಸೊಪ್ಪು ಅಂತ ಬರುತ್ತದೆ. ಈ ಬಿಳಿ ಈರುಳ್ಳಿ ಮಾರ್ಕೆಟ್ ಗೆ ಬಂದರೆ ಇದನ್ನು ಖರೀದಿ ಮಾಡಲು ಯಾರೂ ಅಂಗಡಿ ಹತ್ತಿರ ಸುಳಿಯುವುದಿಲ್ಲ. ಇದರಿಂದ ವ್ಯಾಪಾರ ಹಾನಿ ಆಗುತ್ತದೆ ಎಂದು ಅಂಗಡಿಯವನು ಬಿಳಿ ಈರುಳ್ಳಿಯನ್ನು ಮಾರಾಟಕ್ಕೆ ಇಡುವುದಿಲ್ಲ. ಆದರೆ ನಿಮಗೆ ಸತ್ಯವಾದ ವಿಚಾರ ಗೊತ್ತೇ? ಬಿಳಿ ಈರುಳ್ಳಿಯಲ್ಲಿ ಇರುವ ಪೋಷಕಾಂಶಗಳು ಕೆಂಪು ಈರುಳ್ಳಿಯಲ್ಲಿ ಸಿಗುವುದೇ ಇಲ್ಲ ಗೆಳೆಯರೇ.ಇದರಲ್ಲಿ ಪೋಷಕಾಂಶಗಳು ಅಗಾಧ ಪ್ರಮಾಣದಲ್ಲಿ ಇವೆ. ಅವುಗಳೆಂದರೆ ವಿಟಮಿನ್ ಸಿ, ಪ್ಲವನೈಡ್ ಖನಿಜಗಳು ಜೀವಸತ್ವಗಳು ಪೈಟೋ ನ್ಯುಟ್ರಿಯೆಂಟ್ ಗಳು ಸಾಕಷ್ಟಿವೆ ಗೆಳೆಯರೇ. ಬಿಳಿ ಈರುಳ್ಳಿ ಅನ್ನು ಹಲವು ಔಷಧ ರೂಪದಲ್ಲಿ ಬಳಕೆ ಮಾಡುತ್ತಾರೆ. ಅಷ್ಟೇ ಅಲ್ಲದೇ ಇದು ವ್ಯಕ್ತಿಯನ್ನು ಅನೇಕ ರೋಗಗಳಿಂದ ದೂರವಿರಿಸುತ್ತದೆ.

ಇದರಲ್ಲಿರುವ ಹೆಚ್ಚಿನ ಔಷಧೀಯ ಗುಣಗಳು ಇದಕ್ಕೆ ಕಾರಣ ಬಿಳಿ ಈರುಳ್ಳಿ ಇರುವ ಬ್ಯಾಕ್ಟೀರಿಯಾ ವಿರೋಧಿ ವಿಶೇಷ. ಹಾಗೂ ಜೀರ್ಣ ಕ್ರಿಯೆ ಸಂಭಂದ ಪಟ್ಟ ಕಾಯಿಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಬಿಳಿ ಈರುಳ್ಳಿ ಸೇವನೆ ಮಾಡುವುದರಿಂದ ದೇಹವು ತಂಪಾಗಿ ಇರುತ್ತದೆ. ಜೊತೆಗೆ ಬಿಳಿ ಈರುಳ್ಳಿ ಅನ್ನು ಸಲಾಡ್ ರೂಪದಲ್ಲಿ ಸೇವಿಸಬಹುದು. ಇದರಿಂದ ದೇಹದಲ್ಲಿ ಶಕ್ತಿ ದುಪ್ಪಟ್ಟು ಆಗುತ್ತದೆ. ರಾತ್ರಿ ನೀವು ಕೋಸಂಬರಿ ಪಾನಕ ತಿನ್ನುವ ಅಭ್ಯಾಸವಿದ್ದರೆ ಅದರಲ್ಲಿ ಇದನ್ನು ಸೇವಿಸಿ ರಾತ್ರಿ ವೇಳೆ ವಿಪರೀತ ಬೆವರು ಆಗುವುದನ್ನು ತಡೆಯುತ್ತದೆ. ಹೊಟ್ಟೆಯ ಉಬ್ಬರವನ್ನು ಕಡಿಮೆ ಮಾಡುತ್ತದೆ. ಹಾಗೂ ಮಕ್ಕಳಿಗೆ ಬಿಳಿ ಈರುಳ್ಳಿ ರಸವನ್ನು ಜೇನುತುಪ್ಪದೊಂದಿಗೆ ನೀಡಿದರೆ ಶೀತ ನೆಗಡಿ ಕೆಮ್ಮು ಎಲ್ಲವೂ ನಿವಾರಣೆ ಆಗುತ್ತದೆ. ಬಿಳಿ ಈರುಳ್ಳಿ ಸೇವನೆ ಇಂದ ದೃಷ್ಟಿ ಪ್ರಕಾಶಮಾನ ಆಗುತ್ತದೆ. ಬಿಳಿ ಈರುಳ್ಳಿ ಯಲ್ಲಿ ಆಂಟಿ ಆಕ್ಸಿಡೆಂಟ್, ಉರಿ ಊತ ಶಮನ ಗುಣ ಕಾರ್ಸಿನೋಜೇನಿಕ್ ಅಂಶವು ಹೇರಳವಾಗಿವೆ. ಬಿಳಿ ಈರುಳ್ಳಿ ಯ ಸೇವನೆ ಆರೋಗ್ಯಕ್ಕೆ ರಾಮಬಾಣ ಅಂತ ಹೇಳಬಹುದು.

ಬಿಳಿ ಈರುಳ್ಳಿ ಯಲ್ಲಿ ಕ್ಯಾನ್ಸರ್ ಜೀವಕೋಶಗಳನ್ನೂ ಕೊಲ್ಲುವ ಪ್ಲವನೈಡ್ ಅಂಶವಿದೆ. ಹಾಗೂ ವಿಟಮಿನ್ ಎ, ಕಬ್ಬಿಣ ಪೊಟ್ಯಾಶಿಯಂ ಸಲ್ಫರ್ ಹಾಗೂ ಉತ್ಕರ್ಷಕ ನಿರೋಧಕ ಗುಣಗಳನ್ನು ಹೊಂದಿವೆ. ಇಷ್ಟೆಲ್ಲ ಗುಣಗಳನ್ನು ಹೊಂದಿರುವ ಬಿಳಿ ಈರುಳ್ಳಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಅದಕ್ಕೆ ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣವಿದೆ. ಇದರಲ್ಲಿ ಬಿ6, ಬಿ ಕಾಂಪ್ಲೆಕ್ಸ್ ಗಳು ದೇಹದಲ್ಲಿ ಗಡ್ಡೆಗಳು ಬೆಳೆಯದಂತೆ ನೋಡಿಕೊಳ್ಳುತ್ತದೆ. ಬಿಳಿ ಈರುಳ್ಳಿ ಯಲ್ಲಿ ಫೈಬರ್ ಅಂಶ ಇರುವ ಕಾರಣ ಹೊಟ್ಟೆಯ ಬಗ್ಗೆ ವಿಶೇಷವಾದ ಕಾಳಜಿಯನ್ನು ತೋರಿಸುತ್ತದೆ. ಫ್ರೀ ಬಯೋಟಿಕ್ ಅಂಶ ಇರುವ ಕಾರಣ ದೊಡ್ಡ ಕರುಳು ಸಣ್ಣ ಕರುಳನ್ನು ನೋಡಿಕೊಳ್ಳುತ್ತದೆ. ಬಿಳಿ ಈರುಳ್ಳಿ ರಕ್ತವನ್ನು ತೆಳು ವಾಗಿಸುವಲ್ಲಿ ಆಂಟಿ ಏಜಿಂಗ್ ಆಗಿ ಕೆಲಸವನ್ನು ಮಾಡುತ್ತದೆ. ರಕ್ತ ಪರಿಚಲನೆ ಸುಧಾರಿಸುತ್ತದೆ ಹಾಗೂ ರಕ್ತ ಹೆಪ್ಪುಗಟ್ಟುವಿಕೆ ಅನ್ನು ತಡೆಯುತ್ತದೆ. ನಿದ್ರೆಯನ್ನು ಉತ್ತೇಜಿಸುತ್ತದೆ. ಮನಸ್ಸಿನ ಖಿನ್ನತೆಯನ್ನು ಶಾಂತ ಗೊಳಿಸುತ್ತದೆ. ಉತ್ತಮವಾದ ನಿದ್ರೆಯನ್ನು ತರಲು ಬಿಳಿ ಈರುಳ್ಳಿ ಸಹಾಯ ಮಾಡುತ್ತದೆ.

Leave a Reply

Your email address will not be published. Required fields are marked *