ನಮಸ್ತೇ ಪ್ರಿಯ ಓದುಗರೇ, ಚಾಣಕ್ಯ ಮಹಾ ಬುದ್ದಿಶಾಲಿ ಜೀವಿ. ಇವರು ಒಂದು ನೀತಿ ಗ್ರಂಥವನ್ನೂ ರಚಿಸಿದ್ದಾರೆ. ಸಾಲವನ್ನು ಮಾಡಿ ಮಾಡಿ ಸಾಕಾಗಿದೆಯೇ. ಸಾಲದಿಂದ ಮುಕ್ತಿ ಪಡೆಯಲು ನೀವು ಈ ಐದು ಕೆಲಸವನ್ನು ಮಾಡಬೇಕು. ನೀವು ನೋಡಿರಬಹುದು ಈ ಜಗತ್ತಿನಲ್ಲಿ ಈ ಬಗೆಯ ಜನರು ಇರುತ್ತಾರೆ ಅಂದರೆ ತಮ್ಮ ಸುಖಕ್ಕಾಗಿ ಮನರಂಜನೆಗಾಗಿ ಐಷಾರಾಮಿ ಜೀವನಕ್ಕಾಗೀ ಏನೆಲ್ಲಾ ಕೆಲಸಗಳನ್ನು ಮಾಡುತ್ತಾರೆ ಅದಕ್ಕಾಗಿ ದುಡ್ಡು ಬೇಕಾಗಿರುತ್ತದೆ. ಹೀಗಾಗಿ ಅವರು ಸಾಲದ ಮೇಲೆ ಸಾಲ ಮಾಡುತ್ತಾರೆ ಇಲ್ಲಿಯವರೆಗೆ ಮನೆಯನ್ನು ಕೂಡ ಒತ್ತೆ ಇಡಲು ಮುಂದಾಗುತ್ತಾರೆ. ನೀವು ಇದನ್ನು ಅರಿತುಕೊಳ್ಳಬೇಕು. ಸಾಲಕ್ಕಿಂತ ದೊಡ್ಡ ಶತ್ರು ಇನ್ನೊಂದಿಲ್ಲ ಅಷ್ಟೇ ಅಲ್ಲದೇ ಇನ್ನೊಂದು ಕಷ್ಟ ಕೂಡ ಇಲ್ಲ ಗೆಳೆಯರೇ. ನಾವು ತಿಳಿಸುವ ಈ ಪ್ರಯೋಗಗಳನ್ನು ನೀವು ಮಾಡಿ ನೋಡಿ ಹತ್ತು ದಿನಗಳೊಳಗೆ ಖಂಡಿತವಾಗಿ ನೀವು ಸಾಲದಿಂದ ಮುಕ್ತಿ ಪಡೆಯುವಿರಿ. ಮೊದಲಿಗೆ, ನೀವು ಪಕ್ಷಿಗಳಿಗೆ ಧಾನ್ಯಗಳನ್ನು ಅಥವಾ ಆಹಾರವನ್ನು ತಿನ್ನಿಸುವುದು. ಹೌದು ಪಕ್ಷಿಗಳು ಅಂದ್ರೆ ಕೆಲವರಿಗೆ ತುಂಬಾನೇ ಇಷ್ಟ ಹಾಗೂ ಪ್ರಿಯ. ಪಕ್ಷಿಗಳಿಗೆ ನೀವು ಧಾನ್ಯಗಳನ್ನು ತಿನ್ನಿಸಿದರೆ ಅವುಗಳಿಂದ ಸಿಗುವ ಸುಖ ನೆಮ್ಮದಿ ಮತ್ತೆಲ್ಲೂ ಇಲ್ಲ ಗೆಳೆಯರೇ. ಅಷ್ಟೊಂದು ಮನಸ್ಸಿಗೆ ತೃಪ್ತಿ ಆನಂದ ಆಗುತ್ತದೆ.
ಪ್ರತಿ ಮಂಗಳವಾರ ಮತ್ತು ಶನಿವಾರ ಪಕ್ಷಿಗಳಿಗೆ ಆಹಾರವನ್ನು ಮತ್ತು ಧಾನ್ಯಗಳನ್ನು ತಿನ್ನಿಸಿ. ಇದರಿಂದ ನಿಮ್ಮ ಸಾಲವೂ ತೀರುತ್ತಾ ಬರುತ್ತದೆ. ನಿಮಗೆ ಆರ್ಥಿಕ ಸ್ಥಿತಿಯಲ್ಲಿ ಅಭಿವೃದ್ದಿ ಆಗುತ್ತದೆ ಇನ್ನೂ ಎರಡನೆಯದು ಕೋತಿಗಳು. ಮಂಗಳವಾರ ದಿನ ನೀವು ಕೋತಿಗಳಿಗೆ ಹಣ್ಣು ಹಂಪಲುಗಳನ್ನು ತಿನ್ನಿಸಿದರೆ ನೀವು ಊಹಿಸಿ ಕೊಳ್ಳಲು ಸಾಧ್ಯವಾಗದಷ್ಟು ನಿಮ್ಮ ಎಲ್ಲ ಸಮಸ್ಯೆಗಳು ಚಿಟಿಕೆ ಹೊಡೆಯುವಷ್ಟರಲ್ಲಿ ಮಾಯವಾಗುತ್ತವೆ. ಕೋತಿಗಳು ಆಂಜನೇಯ ಸ್ವರೂಪ ಅವುಗಳು ಕಾಣಿಸಿ ಕೊಂಡರೆ ಅವುಗಳನ್ನು ಹೊಡೆದು ಹಾಕಬಾರದು. ತೊಂದರೆಯನ್ನು ಕೊಡಬಾರದು. ಬದಲಾಗಿ ಕೈಲಾದಷ್ಟು ಅವುಗಳಿಗೆ ಹಣ್ಣು ಹಂಪಲುಗಳನ್ನು ತಿನ್ನಿಸಬೇಕು. ಭಜರಂಗ ಬಲಿ ಆಶೀರ್ವಾದ ನಿಮ್ಮ ಮೇಲೆ ಸದಾ ಕಾಲ ಇರುತ್ತದೆ ಹಾಗೂ ನಿಮ್ಮ ಎಲ್ಲ ಕೋರಿಕೆಗಳು ಈಡೇರುತ್ತವೆ. ಮೂರನೆಯದು ಇರುವೆಗಳು. ಮನೆಯಲ್ಲಿ ಕಪ್ಪು ಇರುವೆಗಳು ಅಧಿಕವಾಗಿ ಕಾಣಿಸಿ ಕೊಂಡರೆ ಅದು ಶುಭದ ಸಂಕೇತ ಆಗಿದೆ. ಇರುವೆಗಳಿಗೆ ಸಿಹಿ ಆಹಾರ ಅಂದರೆ ಇಷ್ಟವಾಗುತ್ತದೆ.
ಹೀಗಾಗಿ ಇರುವೆ ಗಳು ನಿಮಗೆ ಕಾಣಿಸಿ ಕೊಂಡರೆ ಖಂಡಿತವಾಗಿ ಅವುಗಳಿಗೆ ಆಹಾರವನ್ನು ನೀಡಿ. ಇದರಿಂದ ನಿಮಗೆ ದುಪ್ಪಟ್ಟು ಲಾಭಗಳು ಉಂಟಾಗುತ್ತವೆ ಹಾಗೆಯೇ ನಿಮ್ಮ ಸಾಲದ ಬಾಧೆ ಕಡಿಮೆ ಆಗುತ್ತದೆ. ಜೊತೆಗೆ ನಿಮ್ಮ ಮನಸ್ಸಿಚ್ಛೆಗಳು ನೆರವೇರುತ್ತವೆ. ಆದ್ದರಿಂದ ಸಾಧ್ಯವಾದಷ್ಟು ಇರುವೆಗಳಿಗೆ ಸಿಹಿ ಆಹಾರ ನೀಡಿ. ಇನ್ನೂ ನಾಯಿಗಳು. ನಾಯಿಗಳಿಗೆ ಸಿಹಿಯಾದ ಬಿಸ್ಕಿಟ್ ಗಳನ್ನು ನೀವು ನೀಡಬೇಕು. ಇದರಿಂದ ನಿಮ್ಮ ಮನೆಯಲ್ಲಿ ಜಗಳಗಳು ಆಗುವುದಿಲ್ಲ ಜೊತೆಗೆ ನಕಾರಾತ್ಮಕ ಶಕ್ತಿಗಳು ದೂರವಾಗಿ ಬಿಡುತ್ತವೆ. ಯಾವುದೇ ತೊಂದರೆಗಳು ಬರುವುದಿಲ್ಲ ಇನ್ನೂ ನಿಮಗೆ ಯಾವುದಾದರೂ ವಿಷಯಗಳ ಬಗ್ಗೆ ಚಿಂತೆಗೀಡಾಗಿದ್ದರೆ ಅಥವಾ ಭಯ ಪಡುತ್ತಿದ್ದರೆ ಗೋಮಾತೆಯ ನೀವು ಮಾಡಿರುವ ಮೊದಲ ರೊಟ್ಟಿಯನ್ನು ತಿನ್ನಿಸಿ. ಹಾಗೆಯೇ ಐದು ಅಥವಾ ಏಳು ಬೇಸನ ಲಾಡು ಮಾಡಿ ಕಪ್ಪು ಗೋಮಾತೆಯ ತಿನ್ನಿಸಿ. ಹೀಗೆ ಮಾಡುವುದರಿಂದ ನಿಮ್ಮ ಪಾಪಗಳು ಕಷ್ಟಗಳು ದುಃಖ ದುಮ್ಮಾನಗಳು ದೂರವಾಗುತ್ತವೆ.