ನಿಮ್ಮ ಪಾದಗಳಿಂದ ನಿಮ್ಮ ಅದೃಷ್ಟ ತಿಳಿದುಕೊಳ್ಳಬಹದು ಹೇಗೆ ಗೊತ್ತಾ

ಜ್ಯೋತಿಷ್ಯ ಧಾರ್ಮಿಕ

ನಮಸ್ತೇ ಪ್ರಿಯ ಓದುಗರೇ, ವ್ಯಕ್ತಿ ಎಷ್ಟೇ ಸುಂದರವಾಗಿ ಇದ್ದರೂ ಕೂಡ ಆತನನ್ನು ಆತನ ಗುಣಗಳಿಂದ ಅಳೆಯಲಾಗುತ್ತದೆ. ಕೆಲವರಿಗೆ ಸೌಂದರ್ಯ ಮುಖ್ಯವಾದರೆ ಇನ್ನೂ ಕೆಲವರಿಗೆ ವ್ಯಕ್ತಿಯ ಗುಣಗಳು ವ್ಯಕ್ತಿತ್ವ ಇಷ್ಟವಾಗುತ್ತದೆ. ಆದರೆ ಇನ್ನುಳಿದ ಕೆಲವು ಜನರಿಗೆ ವ್ಯಕ್ತಿಗಳ ಅಂಗಗಳಿಂದ ಪರಿಚಯ ಆಗುತ್ತದೆ. ನಮ್ಮ ವ್ಯಕ್ತಿತ್ವವನ್ನು ಕೆಲವು ಭಾಗಗಳಿಂದ ಅಳೆಯಬಹುದು ಅಂತೆ ಅದು ಎಷ್ಟರ ಮಟ್ಟಿಗೆ ಅಂದ್ರೆ ಇದರ ಬಗ್ಗೆ ನಿಮಗೂ ಕೂಡ ಕಲ್ಪನೆ ಇರುವುದಿಲ್ಲ. ಹಾಗೂ ಕೆಲವು ಸೂಕ್ಷ್ಮವಾದ ವಿಚಾರಗಳನ್ನು ನಾವು ಅಲಕ್ಷ್ಯ ಮಾಡುತ್ತೇವೆ. ಇನ್ನೂ ನಮ್ಮ ಕಾಲಿನ ಬೆರಳುಗಳಿಂದ ನಮ್ಮ ವ್ಯಕ್ತಿತ್ವವನ್ನೂ ತಿಳಿಯಬಹುದು ಎಂದು. ನೀವು ಸಾಮಾನ್ಯವಾಗಿ ಗಮನಿಸಿರಬಹುದು. ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ವಿವಿಧ ಆಕಾರದಲ್ಲಿ ಕಾಲಿನ ಬೆರಳುಗಳು ಇರುತ್ತದೆ. ಕೆಲವು ಪದ್ಧತಿಯ ಪ್ರಕಾರ ಏನು ಹೇಳುತ್ತದೆ ಅಂತ ನಾವು ತಿಳಿಯೋಣ ಬನ್ನಿ.

ಈಜಿಪ್ತ್ ಫೀಟ್ ಶೇಪ್. ಇದರ ಪ್ರಕಾರ, ಹೆಬ್ಬೆರಳಿನಿಂದ ಕೊನೆಯ ಬೆರಳಿನವರೆಗು ಮೆಟ್ಟಿಲು ರೀತಿಯಾಗಿ ಇರುತ್ತದೆ. ಇಂತಹ ವ್ಯಕ್ತಿಗಳು ಮನುಷ್ಯರಲ್ಲಿ ಎಂದಿಗೂ ಬೆರೆಯುವುದಿಲ್ಲ. ಇವರು ಆದಷ್ಟು ಒಬ್ಬಂಟಿ ಯಾಗಿ ಏಕಾಂಗಿ ಯಾಗಿ ಇರಲು ಬಯಸುತ್ತಾರೆ. ಏಕೆಂದರೆ ಇವರು ಈ ವಿಷಯದಲ್ಲಿ ತುಂಬಾನೇ ನಂಬಿಕೆ ಇಟ್ಟಿರುತ್ತಾರೆ. ಅದುವೇ ಏಕಾಂಗಿ ಆಗಿ ಇರುವುದರಿಂದ ಯಾರೊಬ್ಬರೂ ನೋವು ಕೊಡುವುದಿಲ್ಲ ಹಾಗೆಯೇ ಅಲ್ಲಿ ಪ್ರಶ್ನೆಯೂ ನಮ್ಮದೇ ಆಗಿರುತ್ತದೆ ಹಾಗೆ ಉತ್ತರವೂ ಕೂಡ. ಹಾಗೂ ಇವರ ಮೂಡ್ ಪ್ರತಿ ಕ್ಷಣಕ್ಕೂ ಬದಲಾಗುತ್ತಲೇ ಇರುತ್ತದೆ. ಇವರು ಯಾವ ಕ್ಷಣದಲ್ಲಿ ಹೇಗೆ ಇರುತ್ತಾರೆ ಹಾಗೂ ಯಾವ ರೀತಿಯಾಗಿ ನಿರ್ಧಾರಗಳನ್ನು ಮಾಡುತ್ತಾರೆ ಅಂತ ಹೇಳಲು ಸಾಧ್ಯವಿಲ್ಲ. ಅಷ್ಟೊಂದು ಚಂಚಲತೆಯನ್ನು ಹೊಂದಿರುತ್ತಾರೆ. ಎರಡನೆಯದು ರೋಮನ್ ಫೀಟ್ ಶೇಪ್. ಇದರ ಪ್ರಕಾರ ಮೊದಲನೆಯ ಮೂರು ಬೆರಳುಗಳು ಸಮನಾಗಿ ಇರುತ್ತವೆ.

ಇವರು ಎಲ್ಲರಲ್ಲಿಯೂ ಬೆರೆಯುತ್ತಾರೆ. ತುಂಬಾನೇ ಫ್ರೆಂಡ್ಲಿ ಆಗಿ ಇರುತ್ತಾರೆ. ಎಲ್ಲರನ್ನೂ ಮನಸ್ಸಿಗೆ ಹಂಚಿಕೊಳ್ಳುತ್ತಾರೆ. ತಮ್ಮವರೆಂದು ಭಾವಿಸುತ್ತಾರೆ. ಇನ್ನೊಬ್ಬರ ಕಷ್ಟಗಳಿಗೆ ಸ್ಪಂದಿಸುವ ಮನಸ್ಸು ಗುಣ ಇವರದಾಗಿರುತ್ತದೆ. ಹಾಗೂ ಇವರು ತುಂಬಾನೇ ಪ್ರಸಿದ್ಧರು ಆಗುತ್ತಾರೆ. ಮೂರನೆಯದು, ಈ ಫೀಟ್ ಶೇಪ್ ನಲ್ಲಿ ಬೆರಳುಗಳು ಎಲ್ಲವೂ ಸಮನಾಗಿ ಇರುತ್ತವೆ. ಇವರು ಪ್ರಾಕ್ಟಿಕಲ್ ಆಗಿ ಯೋಚನೆಯನ್ನೂ ಮಾಡುತ್ತಾರೆ. ಸತ್ಯವನ್ನು ವರ್ತಮಾನವನ್ನು ಒಪ್ಪಿಕೊಳ್ಳುತ್ತಾರೆ. ಸತ್ಯ ಕಹಿಯಾದರೂ ಅದರಿಂದ ನೋವು ಆದರೂ ಕೂಡ ಅದನ್ನು ಚೆನ್ನಾಗಿ ಅನುಭವಿಸಿ ಅದರಿಂದ ಹೊರಗೆ ಬಂದು ಒಂದು ಪಾಠವನ್ನು ಕಲಿಯುತ್ತಾರೆ. ಅಷ್ಟೇ ಅಲ್ಲದೇ ಇವರು ತುಂಬಾನೇ ಪ್ರಶಾಂತವಾಗಿ ಇರಲು ಬಯಸುತ್ತಾರೆ. ಇವರಿಗೆ ಹೆಚ್ಚು ತೊಂದರೆಗಳು ಬರುವುದಿಲ್ಲ. ಇವರನ್ನು ಜನರು ತುಂಬಾನೇ ನಂಬುತ್ತಾರೆ. ಏಕೆಂದರೆ ಇವರು ಕೊಟ್ಟ ಮಾತಿಗೆ ಎಂದು ತಪ್ಪುವುದಿಲ್ಲ. ಇನ್ನೂ ಗ್ರೀಕ್ ಫೀಟ್ ಶೇಪ್. ಇದರಲ್ಲಿ ಎರಡನೆಯ ಬೆರಳು ಉಳಿದೆಲ್ಲ ಬೆರಳುಗಳಿಗಿಂತ ಉದ್ದವಾಗಿರುತ್ತದೆ. ಇವರು ತುಂಬಾನೇ ಭಾವನಾತ್ಮಕವಾಗೀ ಇರುವ ಜೀವಿಗಳು ಆಗಿರುತ್ತಾರೆ. ಇವರು ಆಟದಲ್ಲಿ ಹೆಚ್ಚಾಗಿ ಆಸಕ್ತಿಯನ್ನು ಹೊಂದಿರುತ್ತಾರೆ. ಇನ್ನೂ ಕೊನೆಯದಾಗಿ, ಕಿರು ಬೆರಳು ಅಳುಗಾಡುವುದಿಲ್ಲ ನಿಸಹಾಯವಾಗಿ ಬಾಗಿರುತ್ತದೆ. ಕೈಯಿಂದ ಅಲುಗಾಡಿಸಿದೆ ಮಾತ್ರವೇ ಅಲುಗಾಡುತ್ತದೆ

ಇದು ವಿಚಿತ್ರವಾದ ಸಂಗತಿ. ಇವರು ನಿಜ ಜೀವನಕ್ಕೆ ಬದುಕುತ್ತಾರೆ. ಹಾಗೂ ಜೀವನದಲ್ಲಿ ಹೀರೋ ಆಗಿ ಬದುಕಲು ತುಂಬಾನೇ ಕಷ್ಟ ಪಡುತ್ತಾರೆ. ಕಷ್ಟ ಪಡದೆ ಯಾವುದು ಸಿಗುವುದಿಲ್ಲ ಎಂದು ಭಾವಿಸಿ ಹೆಚ್ಚು ಕಷ್ಟ ಪಡುತ್ತಾರೆ. ಇವರು ಬದಲಾವಣೆಯನ್ನು ಕೋರುತ್ತಾರೆ. ಇವರು ಒಂದೇ ಜಾಗದಲ್ಲಿ ಕುಳಿತು ಕೊಳ್ಳುವುದಿಲ್ಲ. ಎಲ್ಲರನ್ನೂ ಆಕರ್ಷಣೆ ಮಾಡಲು ಸತತವಾಗಿ ಯೋಚನೆ ಮಾಡುತ್ತಾ ವಿಸ್ಮಯಗಳನ್ನು ಮಾಡುತ್ತಾರೆ. ಇನ್ನೂ ಕೊನೆಯದಾಗಿ ಕಿರು ಬೆರಳು ಎಲ್ಲ ಬೆರಳುಗಳನ್ನು ಬಿಟ್ಟು ದೂರ ಇರುತ್ತದೆ.ಇವರು ಜೀವನದಲ್ಲಿ ಖಳ ನಾಯಕರಾಗಿಸುತ್ತಾರೆ. ಯಾರ ಮಾತೂ ಇವರು ಕೇಳುವುದಿಲ್ಲ ಬದಲಾಗಿ ಎಲ್ಲರ ವಿರುದ್ದ ನಡೆದುಕೊಳ್ಳುತ್ತಾರೆ ನೋವು ಉಂಟು ಮಾಡುತ್ತಾರೆ. ಇದರಲ್ಲಿ ನಿಮ್ಮ ಬೆರಳು ಕೂಡ ಯಾವ ರೀತಿ ಇದೆ ಎಂದು ತಿಳಿಯಿರಿ.

Leave a Reply

Your email address will not be published. Required fields are marked *