ಕಿಡ್ನಿ ಕಲ್ಲು ಕರಗಿಸುವುದಲ್ಲದೆ ಈ ಐದು ಬಹು ದೊಡ್ಡ ರೋಗಗಳಿಗೆ ರಾಮಬಾಣ ಈ ಐದು ಕರಿಬೇವಿನ ಎಲೆಗಳು

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ನಮ್ಮ ಆರೋಗ್ಯವನ್ನು ಕಾಪಾಡುವ ಹಾಗೂ ರಕ್ಷಣೆ ಮಾಡುವ ನೈಸರ್ಗಿಕ ಉತ್ಪನ್ನಗಳು ನಮ್ಮ ಪ್ರಕೃತಿಯಲ್ಲಿ ದೊರೆಯುತ್ತವೆ. ಪ್ರತಿಯೊಂದು ಆಹಾರ ಪದಾರ್ಥವು ತನ್ನದೇ ಆದ ಮಹತ್ವವನ್ನು ಒಳಗೊಂಡಿರುತ್ತದೆ ಅಷ್ಟೇ ಅಲ್ಲದೇ ವಿಶೇಷವಾದ ರುಚಿ ಮತ್ತು ಅದ್ಭುತವಾದ ಅನುಭವಗಳನ್ನು ನೀಡುತ್ತದೆ. ಅಂಥಹ ಕೆಲವು ಆಹಾರ ಪದಾರ್ಥಗಳನ್ನು ನಾವು ದಿನನಿತ್ಯವೂ ಆಹಾರದಲ್ಲಿ ಸೇರಿಸಿಕೊಂಡರೆ ಬಹಳಷ್ಟು ಅನಾರೋಗ್ಯದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಅಡುಗೆಯ ರುಚಿ ಹಾಗೂ ಪರಿಮಳವನ್ನು ಹೆಚ್ಚಿಸುವ ಹಾಗೂ ಆರೋಗ್ಯವನ್ನು ಪ್ರತಿ ಕ್ಷಣದಲ್ಲಿ ಕಾಪಾಡುವ ಅದ್ಭುತವಾದ ಆಹಾರ ಅಂದರೆ ಅದುವೇ ಕರಿಬೇವಿನ ಎಲೆಗಳು. ನೈಸರ್ಗಿಕ ಗಿಡಮೂಲಿಕೆಯಾದ ಕರಿಬೇವಿನ ಎಲೆಯು ಸಮೃದ್ಧವಾದ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಹಾಗಾಗಿ ಇದನ್ನು ಪೋಷಕಾಂಶಗಳ ಆಗರ, ಶಕ್ತಿ ಮನೆ ಎಂದೆಲ್ಲಾ ಕರೆಯಲಾಗುವುದು. ದಿನಕ್ಕೆ ಐದೇ ಐದು ಕರಿಬೇವಿನ ಎಲೆಯನ್ನು ತಿಂದರೆ ಅನೇಕ ಬಗೆಯ ಸಮಸ್ಯೆಗಳಿಂದ ದೂರವಿರಬಹುದು. ಸಾಮಾನ್ಯವಾಗಿ ನೀವು ಕರಿಬೇವು ಎಲೆಗಳನ್ನು ನೋಡಿಯೇ ಇರುತ್ತೀರಿ.

ಆದರೆ ಅದರ ಆರೋಗ್ಯಕರ ಗುಣಗಳನ್ನು ನೀವು ಕಡಿಮೆ ಅರಿತು ಕೊಂಡಿರುತ್ತೀರಿ. ಈ ಮಾತು ನಿಜಕ್ಕೂ ಸತ್ಯವಾಗಿದೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಕರಿಬೇವು ಎಲೆಗಳನ್ನು ತಿನ್ನುವುದರಿಂದ ಯಾವೆಲ್ಲ ಸಮಸ್ಯೆಗಳನ್ನು ನಾವು ದೂರ ಮಾಡಿಕೊಳ್ಳಬಹುದು ಅಂತ ತಿಳಿಸಿ ಕೊಡುತ್ತೇವೆ ಬನ್ನಿ. ದೇಹದ ಅನಗತ್ಯವಾದ ಬೊಜ್ಜು ಕರಗಿಸಲು ನಿತ್ಯವೂ ಬೆಳಿಗ್ಗೆ ಎದ್ದು ತಕ್ಷಣ ತಾಜಾ ಕರಿಬೇವಿನ ಎಲೆಯನ್ನು ಸೇವಿದರೆ ನಿಮ್ಮ ದೇಹದಲ್ಲಿ ಶೇಖರಣೆ ಆದ ಕೊಬ್ಬನ್ನು ಕರಗಿಸಿ ಕೊಳ್ಳಬಹುದು. ಮತ್ತು ನಿಮ್ಮ ತೂಕವು ಕಡಿಮೆ ಆಗುತ್ತದೆ. ಅಷ್ಟೇ ಅಲ್ಲದೇ ಮಧುಮೇಹಿಗಳಿಗೆ ಕರಿಬೇವು ಹೇಳಿ ಮಾಡಿಸಿದ ಸೂಪರ್ ಫುಡ್ ಅಂತ ಹೇಳಬಹುದು. ಕರಿಬೇವು ಮಧುಮೇಹಿ ರೋಗಿಗಳಿಗೆ ದಿವ್ಯ ಔಷಧ ಅಂತ ಹೇಳಿದರೆ ತಪ್ಪಾಗಲಾರದು. ಕರಿಬೇವಿನಲ್ಲಿ ಕಬ್ಬಿನ ಮತ್ತು ಪೋಲಿಕ್ ಆಸಿಡ್ ಇರುವುದರಿಂದ ಗರ್ಭಿಣಿಯರಿಗೆ ತುಂಬಾನೇ ಒಳ್ಳೆಯದು. ಕರಿಬೇವಿನ ಎಲೆಯಿಂದ ಗರ್ಭಿಣಿಯರು ನೈಸರ್ಗಿಕವಾಗಿ ಉತ್ತಮ ಆರೈಕೆಯನ್ನು ಪಡೆಯಬಹುದು.

ಇನ್ನೂ ರಕ್ತ ಹೀನತೆ ಸಮಸ್ಯೆಯನ್ನು ಹೋಗಲಾಡಿಸಲು ಕರಿಬೇವು ತುಂಬಾನೇ ಸಹಾಯ ಮಾಡುತ್ತದೆ. ಅನೀಮಿಯಾ ಸಮಸ್ಯೆ ದೇಹದಲ್ಲಿ ಉಂಟಾದರೆ ಅನೇಕ ಬಗೆಯ ಮತ್ತಷ್ಟು ಅನಾರೋಗ್ಯದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಒಂದು ಚಮಚ ಕರಿಬೇವಿನ ಪುಡಿ ಹಾಗೂ ನಿಂಬೆ ರಸ ಮತ್ತು ಅದರಲ್ಲಿ ಸ್ವಲ್ಪ ಉಪ್ಪು ಬೆರೆಸಿ ಕುಡಿಯುವುದರಿಂದ, ಅಜೀರ್ಣತೆ ಮತ್ತು ದೇಹದಲ್ಲಿ ಜಿಡ್ದು ಪದಾರ್ಥಗಳ ಸೇವನೆಯಿಂದಾಗಿ ಉಂಟಾಗುವ ತೊಂದರೆಗಳು ತತ್ಕ್ಷಣದಲ್ಲಿ ನಿವಾರಣೆ ಮಾಡುತ್ತದೆ ಸಾಮಾನ್ಯವಾಗಿ ಚಿಕ್ಕ ಮಕ್ಕಳೆಲ್ಲರೂ ಊಟವನ್ನು ಮಾಡುವಾಗ ಊಟದಲ್ಲಿ ಕರಿಬೇವು ಕಂಡು ಬಂದರೆ ಅದನ್ನು ಪಕ್ಕಕ್ಕೆ ಇಡುತ್ತಾರೆ. ಆದರೆ ಹೀಗೆ ಮಾಡುವುದು ತಪ್ಪು. ಆದ್ದರಿಂದ ಊಟದಲ್ಲಿ ಕರಿಬೇವು ಸಿಕ್ಕರೆ ಕಂಡಿತವಾಗಿ ಪಕ್ಕಕ್ಕೆ ಇಡಬೇಡಿ. ಬದಲಾಗಿ ಅದನ್ನು ಸೇವನೆ ಮಾಡಿ. ಕರಿಬೇವಿನ ಎಲೆಗಳನ್ನು ಚೆನ್ನಾಗಿ ತಿನ್ನುವುದರಿಂದ ಕಿಡ್ನಿ ಸಮಸ್ಯೆಗಳನ್ನು ಹೋಗಲಾಡಿಸಿಕೊಳ್ಳಬಹುದಾಗಿದೆ. ಜೊತೆಗೆ ಕರಿಬೇವು ತಿನ್ನುವುದರಿಂದ ರಕ್ತ ಶುದ್ಧೀಕರಿಸಿ, ಆರೋಗ್ಯಕರ ಹಿಮಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಕೂದಲುದುರುವುದು, ಉಗುರುಳಲ್ಲಿ ಉಂಟಾಗುವ ನ್ಯೂನತೆಗಳನ್ನು ತೆಗೆದುಹಾಕುತ್ತದೆ.

Leave a Reply

Your email address will not be published. Required fields are marked *