ನಮಸ್ತೇ ಪ್ರಿಯ ಮಿತ್ರರೇ, ಪ್ರತಿಯೊಬ್ಬರಿಗೂ ಮೊಸರು ಅಂದರೆ ಇಷ್ಟ ಹಾಗೆಯೇ ಒಣದ್ರಾಕ್ಷಿ ಅಂದ್ರೂ ಕೂಡ ತುಂಬಾನೇ ಇಷ್ಟವಾಗುತ್ತದೆ. ಸಾಮಾನ್ಯವಾಗಿ ನಾವು ದಿನಕ್ಕೆ ಮೂರು ಹೊತ್ತು ಊಟವನ್ನು ಮಾಡುತ್ತೇವೆ ಆದರೂ ಕೂಡ ಮಧ್ಯ ಮಧ್ಯ ಹೊಟ್ಟೆ ಹಸಿವು ಆಗುತ್ತಲೇ ಇರುತ್ತದೆ. ಹೀಗಾಗಿ ಸಾಮಾನ್ಯವಾಗಿ ಜನರು ಕುರುಕಲು ತಿಂಡಿಗಳನ್ನು ತಿನ್ನಲು ಬಯಸುತ್ತಾರೆ. ಇನ್ನೂ ಕೆಲವರು ಸಂಜೆ ವೇಳೆಗೆ ಹಸಿವಾದರೆ ಸ್ನಾಕ್ಸ್ ತಿನ್ನುವುದು ಹವ್ಯಾಸ ಕೂಡ ಇರುತ್ತದೆ. ಇದು ಎಲ್ಲರ ಮನೆಯಲ್ಲಿ ಸರ್ವೇ ಸಾಮಾನ್ಯವಾಗಿದೆ. ನಮ್ಮ ಆರೋಗ್ಯಕ್ಕೆ ಯಾವುದು ಒಳಿತು ಯಾವುದು ಕೆಡಕು ಅಂತ ಗೊತ್ತಿದ್ದರೂ ನಾವು ನಿರ್ಲಕ್ಷ್ಯವನ್ನು ಮಾಡುತ್ತೇವೆ. ಕರಿದ ತಿಂಡಿಗಳು ನಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ ಎಂದು ತಿಳಿದರೂ ಕೂಡ ನಾವು ಅವುಗಳನ್ನು ಸೇವಿಸಲು ಮುಂದಾಗುತ್ತೇವೆ. ಆದರೆ ನಿಮಗೆ ಗೊತ್ತೇ, ಕರಿದ ತಿಂಡಿಗಳನ್ನು ತಿನ್ನುವುದರಿಂದ ನೇರವಾಗಿ ಹೃದಯಕ್ಕೆ ಹಾನಿ ಉಂಟು ಮಾಡುತ್ತದೆ. ಆದ್ದರಿಂದ ಇವುಗಳನ್ನು ನಾವು ತಕ್ಕ ಮಟ್ಟಿಗೆ ತ್ಯಜಿಸುತ್ತಾ ಬರಬೇಕು. ಬದಲಾಗಿ ಆರೋಗ್ಯಕರ ಪದಾರ್ಥಗಳನ್ನು ಹಾಗೂ ಹೃದಯಕ್ಕೆ ಉತ್ತಮವಾದ ಆಹಾರವನ್ನು ಸೇವಿಸಬೇಕು.
ಅದರಲ್ಲಿ ಮೊಸರು ಮತ್ತು ಒಣದ್ರಾಕ್ಷಿ. ಇವೆರಡೂ ಸೂಪರ್ ಕಾಂಬಿನೇಷನ್ ಅಂತ ಹೇಳಬಹುದು. ಮೊಸರು ಮತ್ತು ಒಣದ್ರಾಕ್ಷಿ ಆರೋಗ್ಯಕ್ಕೆ ವರದಾನವಾಗಿದೆ ಅಂತ ಹೇಳಿದರೆ ತಪ್ಪಾಗಲಾರದು. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ, ಒಣದ್ರಾಕ್ಷಿ ಮತ್ತು ಮೊಸರು ಇವೆರಡನ್ನೂ ಸೇರಿಸಿ ತಿನ್ನುವುದರಿಂದ ಆಗುವ ಲಾಭಗಳನ್ನು ತಿಳಿಯೋಣ. ಮೊಸರು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತದೆ. ಅದರಲ್ಲೂ ಬೇಸಿಗೇ ಕಾಲದಲ್ಲಿ ಮೊಸರು ಬೇಕೇ ಬೇಕು ಅನ್ನಿಸುತ್ತದೆ. ಮೊಸರನ್ನು ನಾವು ವಿವಿಧ ರೀತಿಯ ಲ್ಲಿ ಬಳಕೆ ಮಾಡಬಹುದು. ಮಜ್ಜಿಗೆ ಕೋಸಂಬರಿ ಪಾನಕ ವಿವಿಧ ರೀತಿಯಲ್ಲಿ ತಯಾರಿಸಿ ಉಪಯೋಗಿಸುತ್ತಾರೆ. ಮೊಸರಿನಲ್ಲಿ ಆರೋಗ್ಯಕರವಾದ ಬ್ಯಾಕ್ಟೀರಿಯಾಗಳು ಸಮೃದ್ಧವಾಗಿವೆ. ಸಾಮಾನ್ಯವಾಗಿ ಮೊಸರನ್ನು ಸೇವಿಸುವುವಾಗ ಜನರು ಉಪ್ಪು ಮತ್ತು ಸಕ್ಕರೆಯನ್ನು ಸೇರಿಸಿಕೊಂಡು ಸವಿಯುತ್ತಾರೆ. ಈ ವಿಧಾನವು ಉಚಿತವಾದುದ್ದಲ್ಲ. ಹಾಗೂ ಇದು ತಪ್ಪು ಕೂಡ ಮೊಸರು ಅತಿಯಾಗಿ ಸೆವಿದರೆ ನೆಗಡಿ, ಜ್ವರ, ಅಸ್ತಮ, ತ್ವಚೆಯಲ್ಲಿ ಕಿರಿಕಿರಿ, ಕೂದಲು ಉದುರುವ ಸಮಸ್ಯೆ, ಮಲಬದ್ಧತೆ, ಹೊಟ್ಟೆ ಉಬ್ಬರ, ಪಿತ್ತ, ಕಫದಂತಹ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಅದರ ಬದಲಾಗಿ ಮೊಸರಿನಲ್ಲಿ ಒಣದ್ರಾಕ್ಷಿ ಹಾಕಿಕೊಂಡು ಸೇವನೆ ಮಾಡಿದರೆ ನೀವು ಕಲ್ಪನೆಗೂ ಮೀರದ ಉಪಯೋಗಗಳು ನಿಮಗೆ ಉಂಟಾಗುತ್ತದೆ.
ಅಷ್ಟೇ ಅಲ್ಲದೇ ಇವೆರಡನ್ನೂ ಒಟ್ಟಿಗೆ ಯಾವ ಸಮಯದಲ್ಲಿ ಸೇವನೆ ಮಾಡಬೇಕು ಅನ್ನುವುದು ಕೂಡ ಅಷ್ಟೇ ಖಚಿತ ಪಡಿಸಿಕೊಳ್ಳಬೇಕು. ಮೊದಲಿಗೆ ಮೊಸರು ಮತ್ತು ಒಣದ್ರಾಕ್ಷಿ ಯಾವಾಗ ಸೇವನೆ ಮಾಡುವುದೆಂದು ಹೇಳುವುದಾದರೆ ಮಧ್ಯಾಹ್ನ ಮತ್ತು ಬೆಳಿಗ್ಗೆ ಉಪಹಾರದ ಸಮಯ ಉತ್ತಮ. ಮೊಸರು ಮತ್ತು ಒಣದ್ರಾಕ್ಷಿ ಸೇವನೆಯಿಂದ ಮುಖದಲ್ಲಿ ಕಾಂತಿ ಬರುತ್ತದೆ. ನಿಮ್ಮ ಚರ್ಮ ಹೊಳೆಯುತ್ತದೆ. ಚರ್ಮದ ಎಲ್ಲ ಸಮಸ್ಯೆಗಳಿಂದ ರಕ್ಷಣೆಯನ್ನು ಮಾಡುತ್ತದೆ. ನೀವು ಕಪ್ಪು ಒಣದ್ರಾಕ್ಷಿ ಬಳಕೆ ಮಾಡುವುದು ಸೂಕ್ತ. ಇದರಿಂದ ಕೂದಲಿಗೆ ಜೀವ ಬರುತ್ತದೆ ಹಾಗೂ ಕೂದಲು ನೀರ್ಜೀವ್ ಆಗದಂತೆ ತಡೆಯುತ್ತದೆ. ಹಾಗೂ ಋತುಚಕ್ರದ ಸಮಯದಲ್ಲಿ ಕಪ್ಪು ಒಣದ್ರಾಕ್ಷಿ ಹಾಗೂ ಮೊಸರು ಸೇವನೆ ಉತ್ತಮ. ಈ ಆರೋಗ್ಯಕರ ಉಪಯುಕ್ತ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ