ತಲೆ ಸ್ನಾನ ಮಾಡುವಾಗ ಶಾಂಪೂವಿನಲ್ಲಿ ಸ್ವಲ್ಪ ಉಪ್ಪು ಬೆರೆಸಿದರೆ ಏನಾಗುತ್ತದೆ ಗೊತ್ತೇ ಬೇರೆ ಏನು ಬೇಡವೇ ಬೇಡ

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ಉಪ್ಪು ಅನೇಕ ರೋಗಗಳಿಗೆ ಪರಿಹಾರ ನೀಡಿದರು ಅದನ್ನು ಅಧಿಕವಾಗಿ ಸೇವನೆ ಮಾಡಿದರೆ ಹೆಚ್ಚೆಚ್ಚು ಸಮಸ್ಯೆಗಳು ಉದ್ಭವಿಸುತ್ತವೆ. ಉಪ್ಪು ಬಹಳ ಡೇಂಜರ್. ನಮ್ಮ ದೇಹಕ್ಕೆ ಕೇವಲ ನಿಯಮಿತ ಪ್ರಮಾಣದಲ್ಲಿ ಮಾತ್ರ ಸೇವನೆ ಮಾಡಬೇಕು.ಮನೆಯಲ್ಲಿ ತಯಾರು ಮಾಡುವ ಅಡುಗೆಯಲ್ಲಿ ಸ್ವಲ್ಪ ಉಪ್ಪು ಕಡಿಮೆಯಾದರೆ ಅದಕ್ಕೆ ಜಗಳ ತೆಗೆಯುವುದು. ಹೌದು ಉಪ್ಪು ಅಷ್ಟೊಂದು ಮಹತ್ವ ತೆಯನ್ನು ಒಳಗೊಂಡಿದೆ. ಉಪ್ಪು ಅಡುಗೆಗೆ ಬಹಳ ಸಹಕಾರಿ ಅಂತ ಹೇಳಿದರೆ ತಪ್ಪಾಗಲಾರದು. ನಮ್ಮ ಆರೋಗ್ಯಕ್ಕೆ ಅತಿಯಾದರೆ ಹಾನಿ ಮಿತವಾದರೆ ಲಾಭ. ಹಾಗಾದರೆ ಉಪ್ಪಿನ ಸ್ವಲ್ಪ ಲಾಭಗಳ ಬಗ್ಗೆ ತಿಳಿಯೋಣ. ಮೊದಲಿಗೆ ನೀವು ತಲೆ ಸ್ನಾನ ಮಾಡುವಾಗ ಶಾಂಪೂವಿನಲ್ಲಿ ಚಿಟಿಕೆ ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸ್ನಾನ ಮಾಡಿ. ಇದರಿಂದ ನಿಮ್ಮ ತಲೆಯಲ್ಲಿರುವ ಎಲ್ಲ ಕೊಳೆ ಜಿಡ್ಡು ಮಾಯವಾಗುತ್ತದೆ. ಜೊತೆಗೆ ನಿಮಗೆ ಕಂಡಿಷರ್ ಅವಶ್ಯಕತೆ ಇರುವುದಿಲ್ಲ. ಈ ಮಿಶ್ರಣವೇ ಒಂದು ಕಂಡೀಷನರ್ ರೀತಿಯಲ್ಲಿ ಕೆಲಸವನ್ನು ಮಾಡುತ್ತದೆ. ಜೊತೆಗೆ ನಿಮ್ಮ ಕೂದಲು ಉದುರುವುದಿಲ್ಲ ಸೊಂಪಾಗಿ ದಟ್ಟವಾಗಿ ಉದ್ದವಾಗಿ ಬೆಳೆಯುವುದನ್ನು ನೀವು ಗಮನಿಸಬಹುದು.

ಇನ್ನೂ ಉಪ್ಪು ಒಂದು ಸ್ಕ್ರಬ್ ರೀತಿಯಲ್ಲಿ ಕೆಲಸವನ್ನು ಮಾಡುತ್ತದೆ. ನೀವು ಬಳಸುವ ಫೇಶಿಯಲ್ ನಲ್ಲಿ ಸ್ವಲ್ಪ ಉಪ್ಪು ಹಾಕಿ ಬಳಕೆ ಮಾಡಿ. ಇದರಿಂದ ರಂಧ್ರಗಳು ತೆರೆದು ಕೊಳ್ಳುತ್ತವೆ. ಹೀಗಾಗಿ ಮುಖದಲ್ಲಿ ಗ್ಲೋ ಅಥವ ಕಾಂತಿ ಹೆಚ್ಚುತ್ತದೆ. ಇನ್ನೂ ನಿಮಗೆ ತಲೆನೋವು ಪದೇ ಪದೆ ಕಾಡುತ್ತಿದ್ದರೆ ಮೆಡಿಕಲ್ ಅಥವಾ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವುದು ಬೇಡ ಬದಲಾಗಿ ನೀವು ನೀರಿನಲ್ಲಿ ಸ್ವಲ್ಪ ಉಪ್ಪು ಹಾಕಿ ಸೇವನೆ ಮಾಡಿದರೆ ಸಾಕು ನಿಮ್ಮ ತಲೆನೋವು ಮಾಯವಾಗಿ ಬಿಡುತ್ತದೆ. ಪಾದಗಳು ಬಿರುಕು ಬಿಟ್ಟಿದ್ದಾರೆ ಚರ್ಮದಲ್ಲಿ ರಕ್ತವೂ ಬರುತ್ತಿದ್ದರೆ ಆಯಿಲ್ ಎಣ್ಣೆಯಲ್ಲಿ ಸ್ವಲ್ಪ ಉಪ್ಪು ಬೆರೆಸಿ ಲೇಪನ ಮಾಡುವುದರಿಂದ ಚರ್ಮದ ಬಿರುಕು ಮತ್ತೆ ಸೇರಿಕೊಳ್ಳುತ್ತವೆ. ಇದರಿಂದ ನಿಮ್ಮ ಪಾದಗಳು ಸುಂದರವಾಗಿ ಕಾಣುತ್ತವೆ. ಇನ್ನೂ ನೀವು ಬಿದ್ದು ಪೆಟ್ಟು ಮಾಡಿಕೊಂಡಾಗ ಅಥವಾ ಅಪಘಾತವಾದಾಗ ನೋವು ಆದಾಗ ಗಾಯವಾಗಿ ರಕ್ತ ಬರುವಾಗ ನೀರಿನಲ್ಲಿ ಉಪ್ಪು ಬೆರೆಸಿ ಲೇಪನ ಮಾಡಿ. ಇದರಿಂದ ಗಾಯವೂ ಕ್ರಮೇಣ ಕಡಿಮೆ ಆಗುತ್ತದೆ. ಉರಿ ಉಪಶಮನ ಆಗುತ್ತದೆ.

ಉಪ್ಪು ಪಾತ್ರೆಗಳ ಮೇಲಿನ ಎಲ್ಲಾ ಜಿಡ್ಡು ಕಲೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ಗುಳ್ಳೆಗಳು ಆದರೆ ಹಾಗೂ ಮನಸ್ಸಿಗೆ ನೆಮ್ಮದಿ ಸಿಗದೇ ಇದ್ದಲ್ಲಿ, ಒತ್ತಡ ಇದ್ದಲ್ಲಿ ನೀರಿನಲ್ಲಿ ಸ್ವಲ್ಪ ಉಪ್ಪು ಕಲಸಿ ಕುಡಿಯಿರಿ. ನಿಮ್ಮ ಮನಸ್ಸು ಹಗುರವಾಗುತ್ತದೆ. ಒತ್ತಡ ಕಡಿಮೆ ಆದಂತೆ ಭಾಸವಾಗುತ್ತದೆ. ಅಷ್ಟೇ ಅಲ್ಲದೇ ಉಪ್ಪು ನೀರು ಕುಡಿಯುವುದರಿಂದ ಸೌಂದರ್ಯವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಅದಕ್ಕಾಗಿ ನೀವು ಒಂದು ಲೋಟ ನೀರಿನಲ್ಲಿ ಸ್ವಲ್ಪ ಉಪ್ಪು ಹಾಕಿ ಕುಡಿದರೆ ದೇಹದ ಒಳಗಿನ ಅಂಗಗಳಿಗೆ ದೀರ್ಘ ಕಾಲದ ತನಕ ಹಾನಿಯನ್ನು ಉಂಟು ಮಾಡುವ ವಿಷವನ್ನು ಹೊರಹಾಕುವಲ್ಲಿ ಉಪ್ಪುನೀರು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಹಾಗೂ ಯಕೃತ್ ಕಾಯಿಲೆಗಳನ್ನು ಕೂಡ ದೂರವಿಡುವದರಲ್ಲಿ ಉಪ್ಪು ಸಹಾಯ ಮಾಡುತ್ತದೆ. ಅದಕ್ಕಾಗಿ ಕೂಡ ನೀವು ಒಂದು ಲೋಟ ನೀರಿನಲ್ಲಿ ಚಿಟಿಕೆ ಉಪ್ಪು ಹಾಕಿ ಕುಡಿಯಿರಿ. ಈ ಮೂಲಕ ತಿಳಿಸುವ ಉದ್ದೇಶವೆಂದರೆ ಉಪ್ಪು ಅತಿಯಾದರೆ ಆರೋಗ್ಯಕ್ಕೆ ಹಾನಿ ಅದಕ್ಕಾಗಿ ಅದನ್ನು ನಿಯಮಿತವಾಗಿ ಬಳಕೆ ಮಾಡಿದರೆ ನೂರೆಂಟು ಲಾಭಗಳು. ಹೀಗಾಗಿ ಬಳಕೆ ಮಾಡುವಲ್ಲಿ ಅಪಾರವಾದ ಜ್ಞಾನವಿರಲಿ. ಶುಭದಿನ

Leave a Reply

Your email address will not be published. Required fields are marked *