ಕಾಡು ಈರುಳ್ಳಿ ಬಗ್ಗೆ ನಿಮಗೆ ಗೊತ್ತೇ ಅಂಗಾಲು ಇರಿ ಕಾಲಿನಲ್ಲಿ ಆಣೆ ಹೀಗೆ ಇನ್ನು ಹಲವು ಕಾಯಿಲೆಗಳಿಗೆ ರಾಮಬಾಣ

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ಈರುಳ್ಳಿ ಅಂದರೆ ಮೊದಲಿಗೆ ನಮಗೆ ನೆನಪಿಗೆ ಬರುವುದು ಕಣ್ಣೀರು. ಈರುಳ್ಳಿ ಹೆಚ್ಚಿದರೆ ಕಣ್ಣಿನಲ್ಲಿ ನೀರು ಬರುತ್ತದೆ ಎಂಬುದು ಹಳೆಯ ಮಾತು. ಸಾಮಾನ್ಯವಾಗಿ ಈರುಳ್ಳಿಯನ್ನು ಎಲ್ಲ ಬಗೆಯ ಅಡುಗೆಯಲ್ಲಿ ಉಪಯೋಗಿಸುತ್ತೇವೆ. ಹಾಗೂ ಹಲವಾರು ಬಗೆಯ ಔಷಧಗಳನ್ನು ತಯಾರಿಸಲು ಬಳಕೆ ಮಾಡುತ್ತೇವೆ. ಈರುಳ್ಳಿ ಬಹಳಷ್ಟು ವಿಶಿಷ್ಟವಾದ ಸ್ಥಾನದಲ್ಲಿ ನಿಲ್ಲುತ್ತವೆ ಎಂಬುದನ್ನು ಮೊದಲು ತಿಳಿಯಬೇಕು. ಅದರಲ್ಲಿ ಈರುಳ್ಳಿ ಪಾತ್ರ ಬಹಳ ಮಹತ್ವವಾಗಿದೆ.
ನಿಮಗೆ ಗೊತ್ತೇ ನಾವು ಉಪಯೋಗಿಸುವ ಈರುಳ್ಳಿಯನ್ನು ಬಿಟ್ಟು ನಮಗೆ ಕಾಡು ಈರುಳ್ಳಿ ಅಂತ ಕೂಡ ಪ್ರಕೃತಿಯಲ್ಲಿ ದೊರೆಯುತ್ತದೆ. ಹೌದು ಇದು ಈರುಳ್ಳಿಯಂತೆ ಕಾಣುವುದಿಲ್ಲ ಬದಲಾಗಿ ಇದಕ್ಕೆ ಕಾಡು ಈರುಳ್ಳಿ ಅಂತ ಕರೆಯುತ್ತಾರೆ. ಇದನ್ನು ಹಲವಾರು ಔಷಧಗಳನ್ನು ತಯಾರಿಸಲು ಬಳಕೆ ಮಾಡುತ್ತಾರೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ. ಕಾಡು ಈರುಳ್ಳಿ ಬಣ್ಣದಲ್ಲಿ ಸ್ವಲ್ಪ ಬೇರೆಯಾಗಿರುತ್ತದೆ ಹಾಗೂ ಸ್ವಲ್ಪ ಈರುಳ್ಳಿ ಆಕಾರವನ್ನು ಹೊಂದಿರುತ್ತದೆ. ಕರಾವಳಿ ಪ್ರದೇಶದಲ್ಲಿ ಇವುಗಳು ಅಧಿಕವಾಗಿ ಲಭ್ಯವಿರುತ್ತವೆ.

ಈ ಕಾಡು ಈರುಳ್ಳಿಯ ಕೆಲವು ಪ್ರಭೇದಗಳನ್ನು ಅಲಂಕಾರಿಕ ಉದ್ದೇಶಗಳಿಗಾಗಿ ಬಳಸಲಾಗುತ್ತದೆ, ಇತರವುಗಳನ್ನು ಆಹಾರಕ್ಕಾಗಿ ಬಳಸಲಾಗುತ್ತದೆ, ಮತ್ತು ಹೆಚ್ಚಿನ ಭಾಗವನ್ನು ಔಷಧೀಯ ಸಸ್ಯಗಳೆಂದು ಪರಿಗಣಿಸಲಾಗುತ್ತದೆ. ಕಾಡು ಈರುಳ್ಳಿಯನ್ನು ನಾಯಿ ಎಳ್ಳು ಗಿಡ, ಫುಲ ಕಾಂಡ ಕೋಲ ಕಾಂಡ ಎಂಬ ಹೆಸರಿನಿಂದ ಕರೆಯುತ್ತಾರೆ. ಕಾಡು ಈರುಳ್ಳಿಯನ್ನು ಹಲವಾರು ಔಷಧಗಳನ್ನು ತಯಾರಿಸಲು ಉಪಯೋಗಿಸುತ್ತಾರೆ. ಮೊದಲಿನ ಕಾಲದ ಜನರು ಇದನ್ನು ಹಿತ್ತಲಿನಲ್ಲಿ ಬೆಳೆಸಿ ಬಳಕೆ ಮಾಡುತ್ತಿದ್ದರು. ಇದರಿಂದ ಅವರು ಯಾವುದೇ ಗಾಯಗಳು ಕಾಯಿಲೆಗಳು ಬಂದರೂ ಕೂಡ ಆಸ್ಪತ್ರೆಗೆ ಹೋಗುತ್ತಿರಲಿಲ್ಲ. ಮನೆಯಲ್ಲಿ ಈ ಕಾಡು ಈರುಳ್ಳಿಯನ್ನು ಉಪಯೋಗಿಸುತ್ತಿದ್ದರು. ಇದರಿಂದ ಎಲ್ಲ ಬಗೆಯ ಸಮಸ್ಯೆಗಳು ದೂರವಾಗುತ್ತಿದ್ದವು ಅಷ್ಟೊಂದು ಪರಿಣಾಮಕಾರಿ ಆಗಿದೆ ಈ ಕಾಡು ಈರುಳ್ಳಿ. ಕಾಲಿನಲ್ಲಿ ಆಣೆ ಬಿದ್ದರೆ ಈ ಕಾಡು ಈರುಳ್ಳಿಯನ್ನು ಹೇಗೆ ಬಳಕೆ ಮಾಡುವುದು ಅಂದರೆ, ಈರುಳ್ಳಿಯನ್ನು ಚೆನ್ನಾಗಿ ಜಜ್ಜಿಕೊಂಡು ಅದರ ಎಲ್ಲ ಭಾಗಗಳನ್ನು ಚೆನ್ನಾಗಿ ಬಿಡಿಸಿಕೊಳ್ಳಿ.

ಅದರಲ್ಲಿ ಸ್ವಲ್ಪ ಉಪ್ಪು ಹಾಕಿ ಬಿಸಿ ಮಾಡಿಕೊಳ್ಳಿ. ನಂತರ ನಿಮ್ಮ ಕಾಲುಗಳಲ್ಲಿ ಆಣೆ ಆಗಿದ್ದರೆ ಒಂದು ಬಟ್ಟೆಯಲ್ಲಿ ಈ ಈರುಳ್ಳಿಯನ್ನು ಹಾಕಿ ಕಟ್ಟಿಕೊಳ್ಳಿ. ಇವು ಹಳೆಯ ಕಾಲದ ಮನೆಮದ್ದು ಗಳಾಗಿವೆ. ಇವುಗಳಿಂದ ನಮಗೆ ನೂರಕ್ಕೆ ನೂರರಷ್ಟು ಫಲಿತಾಂಶ ದೊರೆಯುತ್ತದೆ. ಹಾಗೂ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಬೀರುವುದಿಲ್ಲ. ನಿಮ್ಮ ಪಾದಗಳು ಉರಿಯುತ್ತಿದ್ದರೆ ಕಾಲಿಗೆ ಈ ಕಾಡು ಈರುಳ್ಳಿಯನ್ನು ಜಜ್ಜಿ ಲೇಪನ ಮಾಡಿಕೊಂಡರೆ ಕಾಲಿನ ಉರಿ ಕಡಿಮೆ ಆಗುತ್ತದೆ. ಕಾಡು ಈರುಳ್ಳಿಯಲ್ಲಿ ಔಷಧೀಯ ಗುಣಪಡಿಸುವ ಗುಣಲಕ್ಷಣಗಳಿಂದಾಗಿ, ಈ ಸಸ್ಯವನ್ನು ಬಹಳ ಹಿಂದೆಯೇ ಅಡುಗೆಯಲ್ಲಿ ಸಲಾಡ್, ಉಪ್ಪಿನಕಾಯಿ, ಇತ್ಯಾದಿ, ಮತ್ತು ವೈದ್ಯಕೀಯ ಉದ್ದೇಶಗಳಿಗಾಗಿ ಜಠರ ಕರುಳಿನ ಪ್ರದೇಶ, ಉಸಿರಾಟದ ವ್ಯವಸ್ಥೆ, ಥೈರಾಯ್ಡ್, ಇತ್ಯಾದಿ ಕಾಯಿಲೆಗಳ ಚಿಕಿತ್ಸೆ ಯಶಸ್ವಿಯಾಗಿ ಬಳಸಲಾಗುತ್ತದೆ. ಕುದುರೆಗಳ ಮೂತ್ರ ರೋಗಕ್ಕೂ, ಹೊಟ್ಟೆ ನೋವಿಗೂ ಇದು ಉಪಯುಕ್ತ. ಚರ್ಮದ ಮೇಲಿನ ಗಂಟು ಅಥವಾ ನಾರುಲಿಗಳನ್ನು ನಾಶಪಡಿಸಲು ಕಾಡುಗೆಡ್ಡೆಯ ಪುಡಿಯನ್ನು ಲೇಪಿಸುವುದುಂಟು.

Leave a Reply

Your email address will not be published. Required fields are marked *