ಕೀಲು ಮೈ ಕೈ ನೋವು ಮೊಣಕಾಲು ಊರಿ ಮೂಲವ್ಯಾಧಿ, ಚರ್ಮ ದೃಷ್ಟಿ ಕಿವಿಗಳ ಸಮಸ್ಯೆ ಇನ್ನಿತರ ಅನೇಕ ಸಮಸ್ಯೆಗಳಿಗೆ ಈ ಅಗ್ನಿ ಬಳ್ಳಿ ರಾಮಬಾಣ

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ನಾವು ಇಂದಿನ ಲೇಖನದಲ್ಲಿ ಒಂದು ಅಚಿರ ಪರಿಚಿತವಾದ ಸಸ್ಯದ ಬಗ್ಗೆ ತಿಳಿಸಿಕೊಡುತ್ತೇವೆ. ಸಾಮಾನ್ಯವಾಗಿ ಈ ಬಳ್ಳಿಯ ನಿಮಗೆ ಗೊತ್ತಿರದ ಇದ್ದರೂ ಕೂಡ ಹಳ್ಳಿಯ ಜನರಿಗೆ ಇದು ಚಿರಪರಿಚಿತವಾದ ಬಳ್ಳಿ. ಏಕೆಂದ್ರೆ ಇವರು ಚಿಕ್ಕವರು ಇದ್ದಾಗ ಈ ಗಿಡದಿಂದ ಆಟವನ್ನು ಆಡಿಕೊಂಡು ಬಂದಿರುತ್ತಾರೆ. ಹೌದು ಈ ಗಿಡದ ಕಾಯಿಯು ನೋಡಲು ಬಲೂನ್ ರೀತಿಯಲ್ಲಿ ಇರುತ್ತದೆ ಹೀಗಾಗಿ ಇದನ್ನು ನೀವು ಹಿಚುಕಿದಾಗ ಇದರಲ್ಲಿ ಕಾಯಿ ಸಿಗುತ್ತದೆ. ಇದನ್ನು ಓಡೆಯುವಾಗ ಪಟ್ ಪಟ್ ಅಂತ ಶಬ್ದ ಬರುತ್ತದೆ. ಇದರಿಂದ ಖುಷಿ ಕೂಡ ಆಗುತ್ತಿತ್ತು. ಈ ಬಳ್ಳಿ ಅನ್ನು ಅಗ್ನಿ ಬಳ್ಳಿ ಅಥವಾ ಮಿಂಚಿನ ಬಳ್ಳಿ ಎಂದು ಕರೆಯುತ್ತಾರೆ. ಹಾಗೂ ಆಂಗ್ಲ ಭಾಷೆಯಲ್ಲಿ ಇದನ್ನು ಬಲೂನ್ ವೈನ್ ಹಾಗೂ ಹಾರ್ಟ್ ಸೀಡ್ ಎಂದು ಕೂಡ ಕರೆಯುತ್ತಾರೆ.

ಇನ್ನೂ ಈ ಬಳ್ಳಿ ಹೊಲ ಗದ್ದೆ ತೋಟ ಹಾಳು ಬಿದ್ದ ಜಾಗದಲ್ಲಿ ಹಾಗೂ ಉಷ್ಣವಲಯದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಅಮೆರಿಕಾ ಆಫ್ರಿಕಾ ಪೂರ್ವ ಏಷ್ಯಾ ಭಾರತದ ಮುಂತಾದ ಸ್ಥಳದಲ್ಲಿ ಇದು ಕಂಡು ಬರುತ್ತದೆ. ಈ ಸಸ್ಯದ ಪ್ರತಿಯೊಂದು ಭಾಗವೂ ಕಾಂಡ ಹೂವು ಹಣ್ಣು ಎಲೆಗಳು ಒಂದಲ್ಲ ಒಂದು ಔಷಧ ರೂಪದಲ್ಲಿ ಕಂಡು ಬರುತ್ತದೆ. ಸಂಪ್ರದಾಯ ಪದ್ಧತಿಯಲ್ಲಿ ಆಯುರ್ವೇದ ಪದ್ಧತಿಯಲ್ಲಿ ಈ ಗಿಡದ ಕಾಂಡ ಬೇರು ಬೀಜಗಳನ್ನು ಔಷಧೀಯ ಉದ್ದೇಶಕ್ಕಾಗಿ ಬಳಕೆ ಮಾಡಲಾಗುತ್ತದೆ. ಅಗ್ನಿ ಬಳ್ಳಿ ಕೀಟ ನಿರೋಧಕ ಗುಣಗಳನ್ನು ಹೊಂದಿವೆ. ಹಾಗೂ ಸಂಧಿವಾತ ಸಮಸ್ಯೆಗಳು ಬರುವುದಿಲ್ಲ ಮತ್ತೆ ನರಗಳಿಗೆ ಸಂಭಂದ ಪಟ್ಟ ಕಾಯಿಲೆಗಳು ಮತ್ತು ಮೂಲವ್ಯಾಧಿ, ಚರ್ಮದ ರೋಗಗಳು ಕಣ್ಣುಗಳು ದೃಷ್ಟಿ ಮಾಂದ್ಯತೆ ಕಾಲು ಬಿಗಿತ ಕಿವಿಗಳ ಸಮಸ್ಯೆಗಳಲ್ಲಿ, ಇನ್ನಿತರ ಅನೇಕ ಸಮಸ್ಯೆಗಳಿಗೆ ಈ ಮಿಂಚಿನ ಬಳ್ಳಿ ಉಪಯೋಗಿಸಲಾಗುತ್ತದೆ. ಹಾಗೂ ಶ್ವಾಸನಾಳದ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುತ್ತದೆ. ಈ ಅಗ್ನಿ ಎಲೆಗಳನ್ನು ತರಕಾರಿ ಆಗಿ ಕೂಡ ಬಳಕೆ ಮಾಡುತ್ತಾರೆ.ಅಗ್ನಿ ಬಳ್ಳಿ ಕೇಶ ವರ್ಧಕ ಔಷಧ ಆಗಿದ್ದು ಇದನ್ನು ಬುಡಕಟ್ಟು ಜನರು ತಲೆ ಕೂದಲನ್ನು ತೊಳೆಯಲು ಬಳಕೆ ಮಾಡುತ್ತಿದ್ದರು. ಇನ್ನೂ ನಿಮಗೆ ಮಂಡಿ ನೋವು ಕೀಲು ನೋವು ಇದ್ದರೆ, ಈ ಗಿಡದ ಎಲೆಗಳನ್ನು ಜಜ್ಜಿ ಅದರಲ್ಲಿ ಉಪ್ಪು ಹಾಕಿ ಪ್ಲ್ಯಾಸ್ಟರ್ ರೀತಿಯಲ್ಲಿ ಬಳಕೆ ಮಾಡಲಾಗುತ್ತದೆ.

ಇನ್ನೂ ಈ ಗಿಡದ ಎಲೆಗಳಿಂದ ಸಾಂಪ್ರದಾಯಕವಾಗಿ ಚಹಾ ಕಾಫಿ ಟೀ ಮಾಡಿಕೊಂಡು ಕುಡಿಯುತ್ತಾರೆ. ಅಷ್ಟೇ ಅಲ್ಲದೇ ಈ ಗಿಡದಿಂದ ಸಿದ್ದ ಪಡಿಸಿದ ಎಣ್ಣೆಯನ್ನು ನಿಮ್ಮ ಕೈ ಕಾಲುಗಳಿಗೆ ಹಚ್ಚಿ ಮಸಾಜ್ ಮಾಡುವುದರಿಂದ ಕೀಲು ನೋವು ಮೈ ಕೈ ನೋವು ಮೊಣಕಾಲು ಊರಿ ಬರುವುದಿಲ್ಲ. ಹಾಗೂ ಆಯಾಸವೂ ಕೂಡ ಆಗುವುದಿಲ್ಲ. ಮತ್ತೆ ನಿಮ್ಮ ಎಲುಬುಗಳಲ್ಲಿ ಚೈತನ್ಯ ಹಾಗೂ ಶಕ್ತಿ ಸಾಮರ್ಥ್ಯವನ್ನು ದುಪ್ಪಟ್ಟು ಮಾಡುತ್ತದೆ. ಹೌದು ಗೆಳೆಯರೇ ಈ ಅಗ್ನಿ ಬಳ್ಳಿಯ ಹಲವಾರು ಪ್ರಯೋಜನಗಳನ್ನು ತಿಳಿದು ಕೊಂಡಿರುವಿರಿ. ಆದರೆ ನೀವು ಇದನ್ನು ಉಪಯೋಗಿಸುವ ಮುನ್ನ ಆಯುರ್ವೇದದ ವೈದ್ಯರ ಸಲಹೆ ಮೇರೆಗೆ ಇದನ್ನು ಉಪಯೋಗಿಸುವುದು ಸೂಕ್ತ ಎಂದು ತಿಳಿಯಲಾಗಿದೆ. ಹಾಗಾದ್ರೆ ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಶುಭದಿನ.

Leave a Reply

Your email address will not be published. Required fields are marked *