ಎಂಥಹ ಹಳೆಯದಾದ ಕೆಮ್ಮು ಗಂಟಲು ಕೆರೆತ ಎಲ್ಲವೂ ನಿವಾರಣೆ ಆಗುತ್ತದೆ. ಕೇವಲ ಹಿಪ್ಪಳಿ ಬಳಕೆ ಮಾಡಿ ನೋಡಿ.

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ಮನೆಯಲ್ಲಿ ಶೀತ ನೆಗಡಿ ಕೆಮ್ಮು ಜ್ವರ ಯಾರಿಗಾದರೂ ಬಂದರೆ ಸಾಕು ಮನೆಯ ಎಲ್ಲ ಸದಸ್ಯರಿಗೂ ಅದು ಹರಡುತ್ತಾ ಹೋಗುತ್ತದೆ. ಈಗಿನ ವಾತಾವರಣವನ್ನು ನಾವು ಹೇಳಲು ಸಾಧ್ಯವಿಲ್ಲ ಯಾವ ಸಮಯದಲ್ಲಿ ಏನಾಗುತ್ತದೆ ಎಂದು. ಅದಕ್ಕಾಗಿ ನಾವು ತುಂಬಾನೇ ಜಾಗ್ರತೆಯಿಂದ ಇರಬೇಕು. ನಮಗೆ ಜ್ವರ ಬಂದಾಗ ಶೀತ ಆದಾಗ ನಾವು ತಕ್ಷಣವೇ ವೈದ್ಯರಲ್ಲಿ ತೋರಿಸುತ್ತೇವೆ. ನಿಮಗೆ ಕೊಂಚ ಸಮಯ ಅದರಿಂದ ವಿಶ್ರಾಂತಿ ನೀಡಿದರು ಕೂಡ ಶಾಶ್ವತವಾಗಿ ಪರಿಹಾರ ಸಿಗುವುದಿಲ್ಲ. ಆದ್ದರಿಂದ ನಾವು ತಿಳಿಸುವ ಈ ಮನೆಮದ್ದು ಬಳಕೆ ಮಾಡಿ. ಈ ಮನೆಮದ್ದು ನೀವು ಉಪಯೋಗಿಸುವುದರಿಂದ ನಿಮಗೆ ಎಷ್ಟೇ ಹಳೆದಾದ ಕೆಮ್ಮು ಇದ್ದರೂ ಕೂಡ ಕಡಿಮೆ ಆಗುತ್ತದೆ ಹಾಗೂ ಕೆಮ್ಮಿ ಕೆಮ್ಮಿ ನಿಮಗೆ ಎದೆನೋವು ಬರುತ್ತಿದ್ದರೆ ಹೊಟ್ಟೆ ನೋವು ಬರುತ್ತಿದ್ದರೆ ಅದೆಲ್ಲವೂ ನಿವಾರಣೆ ಆಗುತ್ತದೆ. ಹಾಗೂ ಎದೆಯಲ್ಲಿ ಕಫ ಕಟ್ಟಿದ್ದರು ಕೂಡ ಅದು ಬೇಗನೆ ನಿವಾರಣೆ ಆಗುತ್ತದೆ. ಅಷ್ಟೇ ಅಲ್ಲದೇ ಶೀತ ನೆಗಡಿ ಜ್ವರ ಇದ್ದರೂ ಕೂಡ ಉಪಶಮನ ಆಗುತ್ತದೆ.

ಹಾಗಾದರೆ ಬನ್ನಿ ಯಾವ ರೀತಿಯಲ್ಲಿ ಮಾಡುವುದು ಅಂತ ತಿಳಿಯೋಣ. ಮೊದಲಿಗೆ ಹಿಪ್ಪಳಿಯನ್ನು ತೆಗೆದುಕೊಳ್ಳಿ. ಇದನ್ನು ಲಾಂಗ್ ಪೆಪ್ಪರ್ ಅಂತ ಕರೆಯುತ್ತಾರೆ. ಇದು ರುಚಿಯಲ್ಲಿ ತುಂಬಾನೇ ಖಾರವಾಗಿ ಇರುತ್ತದೆ. ಇದನ್ನು ಹೊಟ್ಟೆ ನೋವಿನ ಎಲ್ಲ ಸಮಸ್ಯೆಗಳಲ್ಲಿ ಉಪಯೋಗಿಸುತ್ತಾರೆ, ಅಜೀರ್ಣತೆ, ಹೊಟ್ಟೆ ಉಬ್ಬರ ಹೊಟ್ಟೆ ಉರಿ ಗ್ಯಾಸ್ಟ್ರಿಕ್ ಎಲ್ಲವನ್ನು ಹೋಗಲಾಡಿಸುತ್ತದೆ. ಹಾಗೂ ಅಸ್ತಮಾ ರೋಗಿಗಳಿಗೆ ಇದು ರಾಮಬಾಣ ಆಗಿ ಕೆಲಸವನ್ನು ಮಾಡುತ್ತದೆ. ಎದೆಯಲ್ಲಿ ಕಫ ಕಟ್ಟಿದರೆ ಹಿಪ್ಪಲಿಯನ್ನು ಚಾಚೂ ತಪ್ಪದೆ ಉಪಯೋಗಿಸಿ. ಮತ್ತು ಇದನ್ನು ಹಲ್ಲು ನೋವಿನ ಸಮಸ್ಯೆಗೆ ಜ್ವರದ ಸಮಸ್ಯೆಗೆ ನೆಗಡಿ ಹೋಗಲಾಡಿಸಲು ಕೂಡ ಇದನ್ನು ಬಳಕೆ ಮಾಡುತ್ತಾರೆ. ಚಿಕ್ಕ ಮಕ್ಕಳಿಗೆ ಜೇನುತುಪ್ಪವನ್ನು ಹಿಪ್ಪಳಿಗೆ ಹಚ್ಚಿ ಮಕ್ಕಳಿಗೆ ನೆಕ್ಕಿಸಿದರೆ ಕೆಮ್ಮು ಕಡಿಮೆ ಆಗುತ್ತದೆ. ಇನ್ನೂ ದೊಡ್ಡವರು ಇದನ್ನು ಯಾವ ರೀತಿಯಾಗಿ ಬಳಕೆ ಮಾಡುವುದೆಂದರೆ, ಈ ಹಿಪ್ಪಳಿ ಅನ್ನು ಸ್ವಲ್ಪ ಹುರಿದುಕೊಳ್ಳಿ. ಅದು ಮುಟ್ಟಿದ ತಕ್ಷಣ ಮುರಿಯುವ ಹಾಗೆ ಸ್ವಲ್ಪ ಬಿಸಿ ಮಾಡಿಕೊಳ್ಳಿ. ತದ ನಂತರ ಅದನ್ನು ನಿಮಗೆ ಎಷ್ಟು ಬೇಕು ಅಷ್ಟು ಪ್ರಮಾಣದಲ್ಲಿ ತೆಗೆದುಕೊಂಡು ಸ್ವಲ್ಪ ಕುಟ್ಟಿಕೊಳ್ಳಿ.

ಬಳಿಕ ಒಂದು ಇಂಚು ಶುಂಠಿ ಅನ್ನು ತೆಗೆದುಕೊಂಡು ಅದರ ರಸವನ್ನು ಒಂದು ಚಮಚದಷ್ಟು ತೆಗೆದುಕೊಳ್ಳಿ. ಆಮೇಲೆ ಅವುಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಅದರಲ್ಲಿ ರುಚಿಗೆ ತಕ್ಕಷ್ಟು ಜೇನುತುಪ್ಪವನ್ನು ಹಾಕಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ನೀವು ಬೆಳಿಗ್ಗೆ ಒಂದು ಚಮಚ ಹಾಗೂ ಸಂಜೆಗೆ ಒಂದು ಚಮಚ ಸೇವಿಸಿದರೆ ಸಾಕಾಗುತ್ತದೆ. ಇದರಿಂದ ಎದೆಯಲ್ಲಿ ಕಟ್ಟಿರುವ ಕಫ ಹಾಗೂ ಪಿತ್ತವು ಎಲ್ಲವೂ ಕಡಿಮೆ ಆಗುತ್ತದೆ. ಹಾಗೂ ಎಷ್ಟೇ ಹಳೆಯದಾದ ಕೆಮ್ಮು ಇದ್ದರೂ ಕೂಡ ವಾಸಿ ಆಗುತ್ತದೆ. ಆದಷ್ಟು ಕೆಮ್ಮಿನಿಂದ ನೀವು ವಿಶ್ರಾಂತಿಯನ್ನು ಪಡೆಯಬಹುದು. ಗಂಟಲು ನೋವು ಗಂಟಲು ಕೆರೆತ ಎಲ್ಲವೂ ಕ್ರಮೇಣ ಕಡಿಮೆ ಆಗುತ್ತದೆ. ಇನ್ನೂ ಕೆಲವರಿಗೆ ಮಲಗಿದಾಗ ಹಾಗೂ ಮಾತನಾಡುವಾಗ ಹೆಚ್ಚಾಗಿ ಕೆಮ್ಮು ಬರುತ್ತದೆ ಅಂಥವರು ಈ ಹಿಪ್ಪಳಿ ಮತ್ತು ಶುಂಠಿ ಜೇನುತುಪ್ಪದ ಮನೆಮದ್ದು ಮಾಡಿಕೊಂಡು ಆಗಾಗ ಸೇವನೆ ಮಾಡುತ್ತಾ ಬನ್ನಿ. ಇದರಿಂದ ನಿಮ್ಮ ಎಲ್ಲ ಸಮಸ್ಯೆಗಳು ದೂರವಾಗುತ್ತವೆ. ಇದೆಲ್ಲವನ್ನೂ ಮಾಡಲು ನಿಮ್ಮ ಬಳಿ ಸಮಯವಿಲ್ಲದೆ ಇದ್ದಾಗ ನೀವು ಕೇವಲ ಹಿಪ್ಪಳಿ ಮೂರು ಚಿಟಿಕೆ ತೆಗೆದುಕೊಂಡು ಅದನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಟೀ ರೂಪದಲ್ಲಿ ಸೇವನೆ ಮಾಡಿದರೆ ನಿಮ್ಮ ಗಂಟಲಿನಲ್ಲಿ ಸಿಕ್ಕಿರುವ ಎಲ್ಲ ಬ್ಯಾಕ್ಟೀರಿಯಾ ನಾಶವಾಗುತ್ತದೆ. ಹಾಗೂ ಕೆಮ್ಮು ಜ್ವರ ನೆಗಡಿ ಎಲ್ಲವೂ ವಾಸಿ ಆಗುತ್ತದೆ.

Leave a Reply

Your email address will not be published. Required fields are marked *