ಹೆಣ್ಣು ಮಕ್ಕಳಿಗೆ ಕಾಡುವ ಅತಿಯಾದ ಹೊಟ್ಟೆ ನೋವಿಗೆ ಮುಟ್ಟಿನ ಸಮಸ್ಯೆಗೆ ಇಲ್ಲಿದೆ ಈ ಗಿಡದ ಕಷಾಯ ದಿವ್ಯ ಔಷಧ

ಆರೋಗ್ಯ

ನಮಸ್ತೇ ಪ್ರಿಯ ಮಿತ್ರರೇ, ಮಹಿಳೆಯರಲ್ಲಿ ಹೊಟ್ಟೆ ನೋವು ಕಾಣಿಸಿಕೊಳ್ಳುವುದು ಸಹಜ ಅದರಲ್ಲೂ ತಿಂಗಳಿಗೊಮ್ಮೆ ಆಗುವ ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ಹೊಟ್ಟೆ ನೋವು ಬರುವುದು ಇನ್ನೂ ಸಹಜವಾದ ಮಾತು ಅಂತ ಹೇಳಬಹುದು. ಈ ಸಮಸ್ಯೆಯನ್ನು ನಾವು ಪ್ರತಿ ಮಹಿಳೆಯರಲ್ಲಿಯೂ ಕಾಣಬಹುದು. ತಿಂಗಳಿಗೊಮ್ಮೆ ಆಗುವ ಮುಟ್ಟು ಬಂದರೆ ಸಾಕಪ್ಪ ಸಾಕು ಎನ್ನಿಸುತ್ತದೆ. ಏಕೆಂದ್ರೆ ಇಂತಹ ಸಮಯದಲ್ಲಿ ಆಗುವ ಹೊಟ್ಟೆ ನೋವು ತಡೆಯಲು ಆಗುವುದಿಲ್ಲ ಬಹಳ ಕಷ್ಟವಾಗುತ್ತದೆ. ಕೆಲವರಿಗೆ ಅಂತೂ ಮುಟ್ಟಿನ ಸಮಯದಲ್ಲಿ ಆಗುವ ಈ ನೋವಿನಿಂದ ಜ್ವರ ಬಂದು ಅನಾರೋಗ್ಯವೆ ಹಾಳಾಗುತ್ತದೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಈ ನೋವನ್ನು ಹೇಗೆ ಉಪಶಮನ ಮಾಡಿಕೊಳ್ಳುವುದು ಅಂತ ತಿಳಿಸಿ ಕೊಡುತ್ತೇವೆ ಬನ್ನಿ.

ತುಂಬಾನೇ ಸರಳವಾದ ಸುಲಭವಾದ ಮನೆಮದ್ದು ಇದಾಗಿದೆ. ಖಂಡಿತವಾಗಿ ನೀವು ಈ ಮನೆಮದ್ದನ್ನು ಪ್ರಯತ್ನ ಮಾಡುವುದರಿಂದ ಹೊಟ್ಟೆ ನೋವಿಗೆ ವಿರಾಮ ನೀಡಬಹುದು. ಈ ಮನೆಮದ್ದು ತಯಾರಿಸಲು ಯಾವುದೇ ಹಣದ ಖರ್ಚು ಮಾಡುವ ಅವಶ್ಯಕತೆ ಇಲ್ಲ ಗೆಳೆಯರೇ. ಬದಲಾಗಿ ನೈಸರ್ಗಿಕವಾಗಿ ಸಿಗುವ ಗಿಡಮೂಲಿಕೆಗಳಿಂದ ನೀವು ತಯಾರಿಸಿಕೊಂಡು ಬಳಕೆ ಮಾಡಬಹುದು ಗೆಳೆಯರೇ. ಸಾಮಾನ್ಯವಾಗಿ ಪೀರಿಯಡ್ ಸಮಯದಲ್ಲಿ ಹೊಟ್ಟೆ ನೋವು ತಾಳಲಾರದೆ ವೈದ್ಯರಲ್ಲಿ ಹೋಗಿ ಮಾತ್ರೆಗಳನ್ನು ಮತ್ತು ಇಂಜೆಕ್ಷನ್ ಗಳನ್ನು ತೆಗೆದುಕೊಂಡು ಬರುತ್ತೇವೆ. ಹೌದು ಈ ರೀತಿ ಮಾಡುವುದರಿಂದ ಹೊಟ್ಟೆ ನೋವು ಕಡಿಮೆ ಆಗುವುದು ನಿಜವಾದರೂ ಕೂಡ ಮುಂದಿನ ತಿಂಗಳು ಮುಟ್ಟು ಆಗುವುದಕ್ಕೆ ತೊಂದರೆ ಅನುಭವಿಸಬೇಕಾಗುತ್ತದೆ. ಇದರ ಜೊತೆಗೆ ದೇಹದ ಮೇಲೆ ಭಾರೀ ಅಡ್ಡ ಪರಿಣಾಮಗಳೂ ಬೀರುವ ಸಾಧ್ಯತೆ ಕೂಡ ಇರುತ್ತದೆ ಹೀಗೆ ಮಾತ್ರೆಗಳನ್ನು ತೆಗೆದು ಕೊಳ್ಳುವುದರಿಂದ. ಅದಕ್ಕಾಗಿ ನೈಸರ್ಗಿಕವಾಗಿ ಪ್ರಕೃತಿ ನೀಡಿರುವ ಗಿಡಮೂಲಿಕೆಯಲ್ಲಿ ನಾಚಿಕೆ ಮುಳ್ಳು ಅಥವಾ ಮುಟ್ಟಿದರೆ ಮುನಿ ಎಂಬ ಸಸ್ಯ ಒಂದಾಗಿದೆ.

ಹೌದು ಇದರ ಗುಣಲಕ್ಷಣ ಎಷ್ಟು ಅದ್ಭುತವಾಗಿದೆ ನೋಡಿ. ಮುಟ್ಟಿದರೆ ಸಾಕು ಮುದುಡಿಕೊಳ್ಳುತ್ತದೆ. ಸಾಮಾನ್ಯವಾಗಿ ಈ ಸಸ್ಯ ಹಳ್ಳಿಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಈ ಸಸ್ಯವನ್ನು ಚಿಕ್ಕವರಿದ್ದಾಗ ಪ್ರತಿಯೊಬ್ಬರೂ ನೋಡಿಯೇ ಇರುತ್ತೀರಿ. ಹೀಗಾಗಿ ಇವತ್ತು ಈ ಸಸ್ಯದಿಂದ ಹೇಗೆ ಮನೆಮದ್ದು ತಯಾರಿಸುವುದು ಅಂತ ನೋಡೋಣ. ಮೊದಲಿಗೆ ಮುಟ್ಟಿದರೆ ಮುನಿ ಸಸ್ಯವನ್ನು ಬೇರು ಸಮೇತವಾಗಿ ತೆಗೆದುಕೊಂಡು ಬನ್ನಿ ಅದನ್ನು ಚೆನ್ನಾಗಿ ತೊಳೆದುಕೊಳ್ಳಿ. ಚಿಕ್ಕ ಚಿಕ್ಕದಾಗಿ ಮಾಡಿಕೊಂಡು ಪಾತ್ರೆಯಲ್ಲಿ ಹಾಕಿ. ಅದಕ್ಕೆ ಅರ್ಧ ಚಮಚ ಕಾಳು ಮೆಣಸು ಪುಡಿ ಅರ್ಧ ಚಮಚ ಜೀರಿಗೆ ಮತ್ತು ಒಂದು ಲೀಟರ್ ನೀರು ಹಾಕಿ ಹತ್ತು ನಿಮಿಷಗಳ ಕಾಲ ಕುದಿಸಬೇಕು. ಈಗ ಇದನ್ನು ಪಕ್ಕದಲ್ಲಿ ಇಟ್ಟುಕೊಳ್ಳಿ. ಆಮೇಲೆ ಒಂದು ಪಾತ್ರೆಯಲ್ಲಿ ಹಾಲನ್ನು ಹಾಕಿ ಕಾಯಿಸಿಕೊಳ್ಳಿ. ಅದರಲ್ಲಿ ಚಿಕ್ಕ ಗಾತ್ರದ ಚಮಚದಷ್ಟು ಸಕ್ಕರೆಯನ್ನೂ ಹಾಕಿ ಮಿಕ್ಸ್ ಮಾಡಿಕೊಳ್ಳಿ. ತದ ನಂತರ ನೀವು ಮಾಡಿರುವ ಮುಟ್ಟಿದರೆ ಮುನಿ ಸೊಪ್ಪಿನ ಕಷಾಯವನ್ನೂ ಹಾಕಿ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯಿರಿ.ಹೌದು ಮಿತ್ರರೇ ಹೀಗೆ ಮಾಡುವುದರಿಂದ ಖಂಡಿತವಾಗಿ ನಿಮಗೆ ಹೊಟ್ಟೆ ನೋವು ಕಡಿಮೆ ಆಗುತ್ತದೆ. ಹಾಗೂ ಮುಟ್ಟಿನ ಸಮಯದಲ್ಲಿ ಪ್ರತಿ ಬಾರಿ ಅನುಭವಿಸುವ ಹೊಟ್ಟೆ ನೋವು ಬರು ಬರುತ್ತಾ ಕಡಿಮೆ ಆಗುತ್ತಾ ಬರುತ್ತದೆ. ಒಮ್ಮೆ ಟ್ರೈ ಮಾಡಿ ನೋಡಿ. ಲಾಭವನ್ನು ಪಡೆದುಕೊಳ್ಳಿ. ಶುಭದಿನ.

Leave a Reply

Your email address will not be published. Required fields are marked *