ಬಾಳೆಹಣ್ಣು ಮಾತ್ರ ಸೇವನೆ ಮಾಡುತ್ತೀರಿ ಏಕೆ? ಬಾಳೆ ಹೂವು ರೆಸಿಪಿ ಮಾಡಿಕೊಂಡು ಸೇವನೆ ಮಾಡಿ. ಎಷ್ಟು ಲಾಭ ಸಿಗುತ್ತದೆ ಅಂದರೆ ಊಹಿಸಲು ಸಾಧ್ಯವಿಲ್ಲ

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ಬಾಳೆಗಿಡ ಅಂದರೆ ನಮಗೆ ಮೊದಲಿಗೆ ತಕ್ಷಣವೇ ನೆನಪಿಗೆ ಬರುವುದು ಬಾಳೆಹಣ್ಣು. ಸಾಮಾನ್ಯವಾಗಿ ಪ್ರತಿಯೊಬ್ಬರೂ ಬಾಳೆಹಣ್ಣು ತಿಂದಿರುತ್ತೀರಿ ಹಾಗೂ ನೋಡಿಯೂ ಇರುತ್ತೀರಿ ಅಲ್ಲವೇ. ಆದರೆ ನೀವು ಈ ಒಂದು ಮಾತು ತಿಳಿದುಕೊಂಡಿರುವುದು ತುಂಬಾ ಮುಖ್ಯ ಹೌದು ನಾವು ಬಾಳೆಹಣ್ಣು ಮಾತ್ರ ಉಪಯೋಗಿಸುತ್ತೇವೆ. ಆದರೆ ನಿಮಗೆ ಗೊತ್ತೇ? ಬಾಳೆಹಣ್ಣಿನ ಪ್ರತಿ ಹೂವು ಹಣ್ಣು ಕಾಯಿ ಕಾಂಡ ಬಾಳೆ ಎಲೆ ಎಷ್ಟೊಂದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದೆಂದು!!
ಪ್ರತಿಯೊಂದು ಪೂಜೆ ಮಾಡುವಾಗ ಹೂವುಗಳ ಜೊತೆಗೆ ಬಾಳೆಹಣ್ಣು ಯಾವಾಗ್ಲೂ ಇದ್ದೇ ಇರುತ್ತದೆ. ಅವುಗಳಿದ್ದೇ ದೇವರ ಪೂಜೆ ಅಪರಿಪೂರ್ಣ. ಆದರೆ ಆರೋಗ್ಯದ ದೃಷ್ಟಿಯಿಂದ ಬಾಳೆಹಣ್ಣಿಗಿಂತ ಬಾಳೆ ಹೂವಿನ ಬಳಕೆ ಹೆಚ್ಚಾಗಿ ಮಾಡಲಾಗುತ್ತದೆ.

ಈ ಮಾತು ನಿಮಗೆ ಅಚ್ಚರಿ ಅನ್ನಿಸಬಹುದು ಆದರೆ ಇದು ನಿಜವಾದ ಮಾತು. ನಮ್ಮ ಹಿರಿಯರು ಹೇಳುತ್ತಿದ್ದರು ಬಾಳೆಗೊಂದು ಗೊನೆ ಹಾಗೂ ರಾಗಿಗೊಂದು ತೆನೆ ಎಂದು. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಬಾಳೆಹೂವಿನ ಲಾಭಗಳ ಬಗ್ಗೆ ತಿಳಿಸಿ ಕೊಡುತ್ತೇವೆ. ಮೊದಲನೆಯ ಲಾಭವೆಂದರೆ ಮಧುಮೇಹ ರೋಗಕ್ಕೆ ಮುಕ್ತಿ ಸಿಗುತ್ತದೆ. ಮಧುಮೇಹ ಎಂಬ ಕಾಯಿಲೆಯು ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಲ್ಲಿಯೂ ಕಾಣಿಸುತ್ತಿದೆ. ಹೀಗಾಗಿ ಸಿಹಿ ಪದಾರ್ಥವನ್ನು ಸಕ್ಕರೆ ಕಾಯಿಲೆ ರೋಗಿಗಳು ಮುಟ್ಟುವ ಹಾಗಿಲ್ಲ. ಅದಕ್ಕಾಗಿ ಅವರು ಅನೇಕ ಬಗೆಯ ಇನ್ಸುಲಿನ್ ಹಾಗೂ ಮಾತ್ರೆಗಳನ್ನು ನಿತ್ಯವೂ ಸೇವನೆ ಮಾಡುತ್ತಾರೆ. ಆದರೆ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುವುದಿಲ್ಲ. ಅಷ್ಟೊಂದು ಕಷ್ಟ ಪಡುವ ಬದಲು ನೈಸರ್ಗಿಕವಾಗಿ ಸಿಗುವ ಬಾಳೆ ಹೂವಿನ ರೆಸಿಪಿ ಮಾಡಿ ಸೇವನೆ ಮಾಡಬಹುದು. ಇದು ಮಧುಮೇಹ ಹಾಗೂ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ತಗ್ಗಿಸುತ್ತದೆ ಎಂದು ಅಧ್ಯಯನಗಳು ಹೇಳಿವೆ. ಇದೆಲ್ಲ ಕಾರಣ ಇದರಲ್ಲಿ ಇರುವ ನಾರಿನ ಅಂಶಗಳು ಹಾಗೂ ಆಂಟಿ ಆಕ್ಸಿಡೆಂಟ್ ಅಂಶಗಳು ಕಾರಣಗಳಾಗಿವೆ.

ಇನ್ನೂ ಅಧಿಕವಾದ ರಕ್ತಸ್ರಾವ ಆಗುವುದನ್ನೂ ತಡೆಯುತ್ತದೆ. ಹೌದು ಈಗಿನ ಯುವಜನತೆಯಲ್ಲಿ ಕಾಡುವ ಸರ್ವೇ ಸಾಮಾನ್ಯ ರೋಗ ಅಂದರೆ ಅದು ರಕ್ತ ಹೀನತೆ ಸಮಸ್ಯೆ ಇದು ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಅದರಲ್ಲಿ ಋತುಚಕ್ರದ ಸಮಯದಲ್ಲಿ ಮಹಿಳೆಯರಲ್ಲಿ ರಕ್ತಸ್ರಾವ ಆಗುತ್ತಿರುತ್ತದೆ. ರಕ್ತಸ್ರಾವ ಆದರೆ ಮಹಿಳೆಯೂ ದೈಹಿಕವಾಗಿ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಅಂಥಹ ಸಮಯದಲ್ಲಿ ನೀವು ವಾರದಲ್ಲಿ ಕನಿಷ್ಠ ಒಂದು ಬಾರಿಯಾದರೂ ಬಾಳೆ ಹೂವಿನ ಪಲ್ಯ ಚಟ್ನಿ ಮಾಡಿಕೊಂಡು ಸೇವನೆ ಮಾಡಿದರೆ ಅಧಿಕ ರಕ್ತಸ್ರಾವ ನಿವಾರಣೆಗೆ ಆಗುತ್ತದೆ ಜೊತೆಗೆ ಮುಂದೆ ರಕ್ತಹೀನತೆ ಸಮಸ್ಯೆ ಬರದಂತೆ ತಡೆಯುತ್ತದೆ.

ಇನ್ನೂ ಬಾಣಂತಿಯರಲ್ಲೀ ಎದೆ ಹಾಲು ಹೆಚ್ಚಿಸಲು ತಿಂಗಳಿನಲ್ಲಿ ಎರಡು ಬಾರಿ ಬಾಳೆ ಹೂವಿನ ಪಲ್ಯ ಚಟ್ನಿ ಮಾಡಿಕೊಂಡು ಸೇವನೆ ಮಾಡಿದರೆ ಸ್ತನಗಳಲ್ಲಿ ಎದೆ ಹಾಲಿನ ಉತ್ಪತ್ತಿ ಹೆಚ್ಚುತ್ತದೆ ಅಂತ ತಿಳಿದು ಬಂದಿದೆ. ಇನ್ನೂ ಯಾರು ಮಾನಸಿಕ ಒತ್ತಡ ಖಿನ್ನತೆಯಿಂದ ಬಳಲುತ್ತಿರುತ್ತಾರೆ ಹಾಗೂ ಭಯ ಆತಂಕ ವಿಪರೀತ ನರಳಾಟದಿಂದಾಗಿ ಒದ್ದಾಡುತ್ತಿರುತ್ತಾರೆಯೋ ಅಂಥವರು ಬಾಳೆಹೂವಿನ ರೆಸಿಪಿ ಮಾಡಿಕೊಂಡು ಸೇವನೆ ಮಾಡುವುದರಿಂದ ಇಂತಹ ಸಮಸ್ಯೆಗಳಿಂದ ಪಾರಾಗಬಹುದು. ಮಾನಸಿಕ ಸ್ಥಿತಿಯನ್ನು ಸರಿಪಡಿಸುವ ದಿವ್ಯ ಔಷಧ ಅಂತ ಹೇಳಬಹುದು. ಇನ್ನೂ ಫ್ರೀ ರಾಡಿಕಲ್ ಹಾಗೂ ಕ್ಯಾನ್ಸರ್ ವಿರುದ್ಧ ಹೋರಾಡಲು ಹೃದ್ರೋಗದ ಸಮಸ್ಯೆಗಳನ್ನು ಎದುರಿಸಲು ಬಾಳೆಹೂ ಬಹಳ ಉಪಯುಕ್ತ. ಇನ್ನೂ ಬಾಳೆ ಹೂವಿನಲ್ಲಿ ಅಧಿಕವಾದ ನಾರಿನ ಅಂಶ ಇರುವುದರಿಂದ ಮಲಬದ್ಧತೆ ಸಮಸ್ಯೆಯಿಂದ ಪಾರು ಮಾಡುತ್ತದೆ. ನೋಡಿದ್ರಲಾ ಕೇವಲ ಬಾಳೆಹಣ್ಣು ಮಾತ್ರವಲ್ಲದೆ ಬಾಳೆ ಹೂವು ಕೂಡ ಆರೋಗ್ಯಕ್ಕೆ ಒಳ್ಳೆಯದು. ನಿಮಗೆ ವಾರದಲ್ಲಿ ತಿನ್ನಲು ಆಗದೇ ಇದ್ದರೂ ಕೂಡ ತಿಂಗಳಿನಲ್ಲಿ ಒಮ್ಮೆಯಾದರು ಎರಡು ಬಾರಿಯಾದರೂ ಸೇವನೆ ಮಾಡಿ.

Leave a Reply

Your email address will not be published. Required fields are marked *