ಹೊಟ್ಟೆಹುಣ್ಣು, ರಕ್ತಸ್ರಾವ, ಮಾನಸಿಕ ಒತ್ತಡ, ಮುಂತಾದ ಖಾಯಿಲೆಗಳಿಗೆ ಈ ಬೂದುಗುಂಬಳಕಾಯಿ ರಾಮಬಾಣ

ಆರೋಗ್ಯ

ನಮಗೆ ಸಿಗುವ ಹಲವಾರು ತರಕಾರಿಗಳಲ್ಲಿ ಬೂದುಗುಂಬಳಕಾಯಿ ಕೂಡ ಒಂದು ಇದರಲ್ಲಿ ಸಿಗುವ ಆರೋಗ್ಯ ಪ್ರಯೋಜನಗಳು ಮಾತ್ರ ಅಪಾರ, ನಾವು ತಯಾರು ಮಾಡುವ ಸಾಂಬಾರು, ಕಾಯಿಪಲ್ಯ, ಬೂದುಗುಂಬಳಕಾಯಿ ಸೂಪ್, ಬೂದು ಗುಂಬಳ ಜ್ಯೂಸ್ ನಮ್ಮ ಆಹಾರ ಪದ್ದತಿಯಲ್ಲಿವೆ. ಏಕೆಂದರೆ ಇಂದು ನಮ್ಮಲ್ಲಿ ಹಲವರಿಗೆ ಬೂದುಗುಂಬಳಕಾಯಿ ತಿನ್ನುವುದರಿಂದ ನಮ್ಮ ಆರೋಗ್ಯದ ಮೇಲೆ ಆಗುವ ಒಳ್ಳೆಯ ಬದಲಾವಣೆಗಳು ಯಾವುವು ಎಂಬ ಸತ್ಯ ತಿಳಿದಿಲ್ಲ ಹೆಚ್ಚು ಪೌಸ್ಟಿಕಾಂಶಗಳನ್ನು ಒಳಗೊಂಡಿರುವ ತರಕಾರಿ ಎಂದರೆ ಅದು ಬೂದುಗುಂಬಳಕಾಯಿ.

ಇದರಲ್ಲಿ ವಿಟಮಿನ್ – ಬಿ ಮತ್ತು ವಿಟಮಿನ್ – ಸಿ ಅಂಶ ಹೆಚ್ಚಾಗಿ ಕಂಡುಬರುತ್ತದೆ ಕ್ಯಾಲ್ಷಿಯಂ, ಪೊಟಾಶಿಯಂ, ಕಬ್ಬಿಣದ ಅಂಶ ಮತ್ತು ಪಾಸ್ಪರಸ್ ಅಂಶ ಜೊತೆಗೆ ನಾರಿನ ಅಂಶ ಕೂಡ ಇದರಲ್ಲಿ ಹೆಚ್ಚು ಸಿಗುತ್ತದೆ. ಬೂದುಗುಂಬಳಕಾಯಿಯಲ್ಲಿ ನೀರಿನ ಅಂಶ ಅಪಾರ ಪ್ರಮಾಣದಲ್ಲಿ ಇರುತ್ತದೆ ಹಾಗಾಗಿ ಹೊಟ್ಟೆಯ ಬಾಗದಲ್ಲಿ ಉಂಟಾಗುವ ಹುಣ್ಣುಗಳನ್ನು ಇದು ನಿವಾರಣೆ ಮಾಡುತ್ತದೆ ಎಂದು ಹೇಳಬಹುದು. ಹಾಗೆಯೇ ಹೊಟ್ಟೆಯಲ್ಲಿ ಕಂಡುಬರುವ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ದೂರಮಾಡಿ ಕರುಳಿನ ಬಾಗದಲ್ಲಿ ಆಂಟಿ ಮೈಕ್ರೋಬಿಯಲ್ ಏಜೆಂಟ್ ಆಗಿ ಕೆಲಸ ಮಾಡುತ್ತದೆ ಇದರಿಂದ ಹೊಟ್ಟೆಯ ಬಾಗದಲ್ಲಿ ಕಂಡು ಬರುವ ಜೀರ್ಣನಾಳದ ಸೋಂಕು ಕಡಿಮೆಯಾಗುವ ಸಾದ್ಯತೆ ಇರುತ್ತದೆ.

ಬೂದುಗುಂಬಳಕಾಯಿ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪೌಷ್ಠಿಕಾಂಶಗಳು ಸಿಗುವುದರ ಜೊತೆಗೆ ಕ್ರಮೇಣವಾಗಿ ದೇಹದ ತೂಕವನ್ನು ಅಚ್ಚುಕಟ್ಟಾಗಿ ಕಡಿಮೆ ಮಾಡುತ್ತದೆ. ಈಗಾಗಲೇ ಕಡಿಮೆ ದೇಹದ ತೂಕ ಹೊಂದಿರುವವರಿಗೆ ಅತ್ಯುತ್ತಮವಾದ ಮೇಟಬಾಲಿಸಂ ಪ್ರಕ್ರಿಯೆಯನ್ನು ಉಂಟಾಗುವಂತೆ ಮಾಡಿ ಎಲ್ಲರಂತೆ ಸಹಜವಾದ ದೈಹಿಕ ತೂಕವನ್ನು ಹೊಂದಿ ಆರೋಗ್ಯವಾಗಿ ಇರುವಂತೆ ನೋಡಿಕೊಳ್ಳುತ್ತದೆ. ಬೂದುಗುಂಬಳಕಾಯಿಯಲ್ಲಿ ಮಹಿಳೆಯರ ರಕ್ತಸ್ರಾವ ಸಮಸ್ಯೆಯನ್ನು ದೂರಮಾಡುವ ಗುಣವಿದೆ. ಹಾಗೆಯೇ ಬೂದುಗುಂಬಳಕಾಯಿ ಎಲೆಯಲ್ಲಿ ಗಾಯಗಳಿಂದ ಉಂಟಾಗುವ ರಕ್ತಸ್ರಾವವನ್ನು ತಡೆಯುವ ಗುಣವಿದೆ ಬಹಳಷ್ಟು ಜನರಿಗೆ ಮೂಗಿನಿಂದ ರಕ್ತ ಸುರಿಯುವ ಸಾದ್ಯತೆ ಇರುತ್ತದೆ ಅಂಥವರಿಗೆ ಅತ್ಯಂತ ಪ್ರಯೋಜನಕಾರಿಯಾಗಿ ಈ ಬೂದುಗುಂಬಳಕಾಯಿ ಕೆಲಸ ಮಾಡುತ್ತದೆ ಕೆಲವರಿಗೆ ಬೇಸಿಗೆ ಕಾಲದಲ್ಲಿ ಮೂತ್ರ ವಿಸರ್ಜನೆಯಲ್ಲಿ ರಕ್ತ ಕಂಡುಬರುವ ಸಾದ್ಯತೆ ಇರುತ್ತದೆ.

ಇನ್ನೂ ಕೆಲವರಿಗೆ ಪೈಲ್ಸ್, ಹೊಟ್ಟೆಯಲ್ಲಿ ಹುಣ್ಣು ಇತ್ಯಾದಿ ಸಮಸ್ಯೆಗಳಿಂದ ಮಲ ವಿಸರ್ಜನೆ ಸಂದರ್ಭದಲ್ಲಿ ರಕ್ತ ಬರುತ್ತದೆ ಈಗಿರುವಾಗ ಬೂದುಗುಂಬಳಕಾಯಿ ಜ್ಯೂಸ್ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ. ಬೂದುಗುಂಬಳಕಾಯಿ ವಿಶೇಷವಾಗಿ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ ಇದರ ರಸಕ್ಕೆ ಕೆಂಪು ಕಲ್ಲುಸಕ್ಕರೆ ಹಾಕಿ ಕುಡಿದರೆ ಪಿತ್ತದೋಷ ಕಡಿಮೆಯಾಗುತ್ತದೆ. ಇದರಲ್ಲಿ ಪೈಬರ್ ಅಂಶ ಹೆಚ್ಚಿರುವುದರಿಂದ ಮಲಬದ್ಧತೆ ನಿವಾರಿಸುತ್ತದೆ ಖಾಲಿ ಹೊಟ್ಟೆಗೆ ರಸ ಕುಡಿಯುವುದರಿಂದ ತುಂಬಾ ಒಳ್ಳೆಯದು. ಹಾಗೆಯೇ ಮಾನಸಿಕ ಆರೋಗ್ಯವನ್ನು ರಕ್ಷಣೆ ಮಾಡುತ್ತದೆ ನೈಸರ್ಗಿಕವಾಗಿ ಆತಂಕ, ನಿದ್ರಾಹೀನತೆ, ಸಮಸ್ಯೆಗಳು ಇರುವವರು ಒಂದು ಗ್ಲಾಸ್ ಬೂದುಗುಂಬಳಕಾಯಿ ಜ್ಯೂಸ್ ಕುಡಿಯುವುದರಿಂದ ಪರಿಹಾರ ಸಿಗುತ್ತದೆ ನಮ್ಮ ಒತ್ತಡವನ್ನು ದೂರಮಾಡಿ ನಮ್ಮ ಮನಸನ್ನು ಪ್ರಶಾಂತಗೊಳಿಸುವ ಗುಣ ಬೂದುಗುಂಬಳಕಾಯಿಯಲ್ಲಿ ಕಂಡುಬರುತ್ತದೆ.

ಇದನ್ನು ಮುಂಜಾನೆ ಖಾಲಿ ಒಟ್ಟೆಯಲ್ಲಿ ಕುಡಿಯಬೇಕು ಈ ಜ್ಯೂಸ್ ಕುಡಿದು ಒಂದು ಗಂಟೆಯವರೆಗೂ ಯಾವುದೇ ಆಹಾರವನ್ನು ತೆಗೆದುಕೊಳ್ಳಬಾರದು. ಬೂದುಗುಂಬಳಕಾಯಿ ಜ್ಯೂಸ್ ಮಾಡುವ ವಿಧಾನ ಬೂದುಗುಂಬಳಕಾಯಿಯನ್ನು ಎರಡುಭಾಗ ಮಾಡಿ ನಂತರ ಬೀಜವನ್ನು ತೆಗೆದು ಹಾಗೆ ಸಿಪ್ಪೆಯನ್ನು ತೆಗೆದು ಹಾಕಿ ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಬೇಕು ನಂತರ ಒಂದು ಬಟ್ಟೆಯಲ್ಲಿ ಈ ಮಿಶ್ರಣವನ್ನು ಹಾಕಿ ರಸವನ್ನು ತೆಗೆಯಬೇಕು ನಂತರ ಒಂದು ಲೋಟಕ್ಕೆ ಸೋಸಿಕೊಂಡು ಮುಂಜಾನೆ ಖಾಲಿ ಒಟ್ಟೆಯಲ್ಲಿ ಹಾಗೂ ರಾತ್ರಿ ತೆಗೆದುಕೊಳ್ಳಬೇಕು ಇದರಿಂದ ಬೊಜ್ಜು ಕರಗುವ ಸಾದ್ಯತೆ ಇರುತ್ತದೆ.

Leave a Reply

Your email address will not be published. Required fields are marked *