ವಿಶೇಷವಾಗಿ ಭೆಸಿಗೆಯಲ್ಲಿ ಈರುಳ್ಳಿ ತಿನ್ನುವುದರಿಂದ ಶಾಖದ ಹೊಡೆತ ಉಂಟಾಗುವುದಿಲ್ಲ ಎಂದು ಹೇಳಲಾಗುತ್ತದೆ. ಈರುಳ್ಳಿ ಶಾಖದ ಹೊಡೆತದಿಂದ ಮಾತ್ರವಲ್ಲದೆ ಮಧುಮೇಹ ಮತ್ತು ಕ್ಯಾನ್ಸರ್ ಹೃದಯಾಘಾತ ದಂತಹ ರೋಗಗಳಿಂದಲೂ ರಕ್ಷಿಸುತ್ತದೆ. ಪ್ರಸ್ತುತ ನಾವು ಜಂಕ್ ಫುಡ್ ಪಾಸ್ಟ್ ಪುಡ್ ಹೆಚ್ಚಾಗಿ ತಿನ್ನುವುದರಿಂದ ನಾವು ಅಂದುಕೊಂಡ ರೀತಿಯಲ್ಲಿ ಮಲವಿಸರ್ಜನೆ ಆಗುವುದಿಲ್ಲ ಹೆಚ್ಚು ಸಮಯ ಕಷ್ಟಪಟ್ಟು ಮಾಡಬೇಕಾಗುತ್ತದೆ. ಕರುಳಿನಲ್ಲಿ ಮಲ, ಟಾಕ್ಸಿನ್ ನಿಂದ ತುಂಬಿಕೊಂಡಿರುವುದರಿಂದ ದೀರ್ಘಕಾಲ ಇಂತಹ ಸಮಸ್ಯೆಗಳು ಇದ್ದರೆ ಕರುಳಿನ ಕ್ಯಾನ್ಸರ್ ಬರುವ ಅವಕಾಶ ಇರುತ್ತದೆ. ದೇಶದಲ್ಲಿ ಹೆಚ್ಚಾಗಿ ಕರುಳು ಕ್ಯಾನ್ಸರ್ನಿಂದ ಸಾಯುತ್ತಿದ್ದಾರೆ ಎರಡು ದಿನಕ್ಕೆ ಒಂದು ಬಾರಿ ಮಲವಿಸರ್ಜನೆ ಮಾಡುವುದರಿಂದ ನನ್ವೆಜ್ ಹೆಚ್ಚಾಗಿ ತಿನ್ನುವುದರಿಂದ ಕರುಳಿನಲ್ಲಿ ಮಲ ಹೆಚ್ಚಾಗಿ ನಿಲ್ಲುವುದರಿಂದ ಕರುಳಿನ ಕ್ಯಾನ್ಸರ್ ಬರುವ ಅವಕಾಶಗಳು ಹೆಚ್ಚಾಗಿರುತ್ತವೆ.
ಆದರೆ ಈರುಳ್ಳಿ ತೆಗೆದುಕೊಳ್ಳುವುದರಿಂದ ಕರುಳಿನ ಕ್ಯಾನ್ಸರ್ ಕಡಿಮೆ ಆಗುವ ಅವಕಾಶವಿದೆ ಈರುಳ್ಳಿಯಲ್ಲಿ ಆನಿಯನ್-A ಎನ್ನುವ ಕೆಮಿಕಲ್ ಕಾಂಪೊಂಡ್ ಇರುವುದರಿಂದ ಇದು ದೇಹದಲ್ಲಿ ಕ್ಯಾನ್ಸರ್ ಕಣಗಳನ್ನು ನಾಶ ಮಾಡುವುದಕ್ಕೆ ಸಹಾಯ ಮಾಡುತ್ತದೆ. ಮಲ ಕರುಳಿನಲ್ಲಿ ಇರುವ ಕ್ಯಾನ್ಸರ್ ಕಣಗಳನ್ನು ,40 ಶಾತ ನಾಶ ಮಾಡುವುದಕ್ಕೆ ಉಪಯೋಗವಾಗುತ್ತದೆ ಆನಿಯನ್ ಕ್ಯಾನ್ಸರ್ ಬರದ ಹಾಗೆ ರಕ್ಷಣೆ ಮಾಡುತ್ತದೆ ಎಂದು 2016 ನೇ ವರ್ಷದಲ್ಲಿ ಆರ್ವಿಚ್ ಮೆಡಿಕಲ್ ಸ್ಕೂಲ್ ನವರು ಪರಿಶೋಧನೆ ಮಾಡಿ ತೋರಿಸಿದ್ದಾರೆ ಈ ಪರಿಶೋದನೆಯ ಮೂಲಕ ಕರುಳಿನ ಕ್ಯಾನ್ಸರ್ ಕಣಗಳನ್ನು ನಾಶ ಮಾಡುವುದಕ್ಕೆ ಕ್ಯಾನ್ಸರ್ ಬರದ ಹಾಗೆ ರಕ್ಷಣೆ ಮಾಡುವುದಕ್ಕೆ ಈರುಳ್ಳಿ ತುಂಬಾ ಚನ್ನಾಗಿ ಉಪಯೋಗವಾಗುತ್ತದೆ ಎಂದು ನಿರೂಪಿಸಿದ್ದಾರೆ.
ದಿನಕ್ಕೆ 30 ಅಥವಾ 40 ಗ್ರಾಂ ನಸ್ಟು ಈರುಳ್ಳಿ ತೆಗೆದುಕೊಳ್ಳುವುದರಿಂದ ನಮ್ಮ ಕರುಳಿನಲ್ಲಿ ಕ್ಯಾನ್ಸರ್ ಕಣಗಳು ಡೆವಲಪ್ ಹಾಗದ ರೀತಿಯಲ್ಲಿ ಮತ್ತು ಕ್ಯಾನ್ಸರ್ ಬಾರದ ಹಾಗೆ ರಕ್ಷಿಸುತ್ತದೆ. ಈರುಳ್ಳಿ ತೆಗೆದುಕೊಳ್ಳುವುದರಿಂದ 15 ರಷ್ಟು ಹೃದಘಾತ ಸಮಸ್ಯೆಯಿಂದ ರಕ್ಷಣೆ ಮಾಡಿಕೊಳ್ಳಬಹುದು. ಈರುಳ್ಳಿ ಪ್ರತಿದಿನ ತಿನ್ನುತ್ತಾರೆ ಆದರೂ ಕ್ಯಾನ್ಸರ್ ಯಾಕೆ ಬರುತ್ತದೆ ಎನ್ನುವ ಸಂದೇಹ ನಿಮ್ಮಲ್ಲಿ ಬಂದಿರಬಹುದು ಈರುಳ್ಳಿಯನ್ನು 260 ಡಿಗ್ರೀಯಷ್ಟು ಬೇಹಿಸಿ ತಿನ್ನುತ್ತಾರೆ 260 ಡಿಗ್ರಿಯಸ್ಟು ಈರುಳ್ಳಿಯನ್ನು ಬಿಸಿ ಮಾಡುವುದರಿಂದ ಅದರಲ್ಲಿರುವ ಆನಿಯನ್ – A ಎನ್ನುವ ಕಾಂಪೌಂಡ್ ಡ್ಯಾಮೇಜ್ ಆಗುತ್ತದೆ. ಆದ್ದರಿಂದ ಈರುಳ್ಳಿಯನ್ನು ಮೆತ್ತಗೆ ಪೇಸ್ಟ್ ಮಾಡಿ ಅಥವಾ ಹಸಿ ಈರುಳ್ಳಿಯನ್ನು ಸಣ್ಣದಾಗಿ ಕಟ್ ಮಾಡಿ ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈರುಳ್ಳಿಯನ್ನು ಸಾಂಬಾರ್, ಪಲ್ಯದಲ್ಲಿ ಪೇಸ್ಟ್ ಮಾಡಿ ಹಾಕುವುದರಿಂದ ಅದರಲ್ಲಿ ಇರುವ ಪೋಷಕಾಂಶಗಳು ಹೋಗುವುದಿಲ್ಲ ಹಾಗೆಯೇ ಈರುಳ್ಳಿಯನ್ನು ಉರಿಯುವಾಗ ಕಡಿಮೆ ಎಣ್ಣೆ ಹಾಕಿ ಉರಿಯುವುದರಿಂದ ಯಾವುದೇ ರೀತಿಯ ನಸ್ಟವಿರುವುದಿಲ್ಲ ಈರುಳ್ಳಿಯನ್ನು ಚಕ್ರದ ರೀತಿಯಲ್ಲಿ ಕಟ್ ಮಾಡಿ ತಿನ್ನುವುದು, ಮೊಸರು ಈರುಳ್ಳಿ ಬೆರೆಸಿ ತಿನ್ನುವುದರಿಂದ ಕೂಡ ಹೆಚ್ಚು ಪ್ರಯೋಜನೆಗಳಿರುತ್ತವೆ.
ಈರುಳ್ಳಿ ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ.ಈರುಳ್ಳಿಯಿಂದ ತೆಗೆದ ಎಣ್ಣೆ ಕೂಡ ತುಂಬಾ ಪ್ರಯೋಜನಕಾರಿ ಈ ಎಣ್ಣೆಯಲ್ಲಿ ಉತ್ಕರ್ಷಣ ನಿರೋಧಕ, ನಂಜು ನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಸಹ ಕಂಡು ಬರುತ್ತವೆ. ವಿಜ್ಞಾನಿಗಳ ಪ್ರಕಾರ ಈರುಳ್ಳಿ ಸ್ತನ ಕ್ಯಾನ್ಸರ್ ಉಂಟುಮಾಡುವ ಕೋಶಗಳ ಬೆಳವಣಿಗೆಯನ್ನು ನಿಲ್ಲಿಸುವ ಸಾಮರ್ಥ್ಯವನ್ನು ಹೊಂದಿದೆ ಹಾಗೆ ಕ್ಯಾನ್ಸರ್ ಬ್ಯಾಕ್ಟೀರಿಯಾಗಳು ದೇಹದಲ್ಲಿ ಬೆಳೆಯುವ ಅವಕಾಶವನ್ನು ನೀಡುವುದಿಲ್ಲ. ಈರುಳ್ಳಿ ರಕ್ತದಲ್ಲಿನ ಪ್ಲೇಟ್ಲೆಟ್ ಗಳು ಒಂದಕ್ಕೊಂದು ಅಂಟಿಕೊಳ್ಳದಂತೆ ತಡೆಯಬಹುದು ಇದರಿಂದ ರಕ್ತ ಹೆಪ್ಪುಗಟ್ಟುವಿಕೆ ಉಂಟಾಗುವುದಿಲ್ಲ ಮತ್ತು ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ ಇದಲ್ಲದೆ ಈರುಳ್ಳಿಯು ಅಧಿಕ ರಕ್ತದೊತ್ತಡವನ್ನು ಸಹ ನಿಯಂತ್ರಿಸುತ್ತದೆ.