ಆಯುರ್ವೇದದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುವ ಕಾಡುಬಸಳೆ ಸಸ್ಯವು ನೂರ ಐವತ್ತಕ್ಕೂ ಹೆಚ್ಚು ರೋಗಗಳನ್ನು ಗುಣಪಡಿಸುವ ಶಕ್ತಿ ಹೊಂದಿದೆ. ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಅನಾಪಿಲ್ಯಾಕ್ಟಿಕ್ ಗುಣಗಳನ್ನು ಹೊಂದಿದೆ ಈ ಸಸ್ಯದ ಎಲೆಗಳು ಸ್ವಲ್ಪ ದಪ್ಪ ಮತ್ತು ಹುಳಿಯಾಗಿರುತ್ತವೆ ಹಾಗಿದ್ದರೆ ಕಾಡುಬಸಳೆ ಎಳೆಯ ಪ್ರಯೋಜನಗಳನ್ನು ತಿಳಿಯೋಣ ಬನ್ನಿ.
ಕಾಡುಬಸಳೆ ಎಲೆ ಮಧುಮೇಹ, ಡಯಾಬಿಟಿಸ್, ಮೂತ್ರಪಿಂಡದಲ್ಲಿ ಇರುವ ಕಲ್ಲನ್ನು ಕರಗಿಸುವುದು, ಶ್ವಾಸಕೋಶ ಇನ್ಫೆಕ್ಷನ್ ಹಾಗೆಯೇ ಗಾಯಗಳು ಮತ್ತು ಕೀಟಗಳ ಕೆರೆತ ಹೋಗುವುದಕ್ಕೆ ಈ ಎಲೆಯನ್ನು ತಿನ್ನುತ್ತಾರೆ. ಹಾಗೆ ಮಚ್ಚೆಗಳು, ಬಾವು ಕಡಿಮೆಯಾಗುವುದಕ್ಕೆ ಸಹಾಯ ಮಾಡುತ್ತವೆ ಆದರೆ ಕಿಡ್ನಿಯ ಕಲ್ಲನ್ನು ಕರಗಿಸುವುದಕ್ಕೆ ಈ ಎಲೆಯನ್ನು ಉಪಯೋಗ ಮಾಡುವುದು ತುಂಬಾ ಮುಕ್ಯವಾಗಿದೆ. ಇದಕ್ಕಾಗಿ ಒಂದು ನಾಲ್ಕರಿಂದ ಐದು ಎಲೆಯನ್ನು ತೆಗೆದುಕೊಂಡು ಒಂದು ಗ್ಲಾಸ್ ನೀರಿನಲ್ಲಿ ಬೆರೆಸಿ ಚೆನ್ನಾಗಿ ಕುದಿಸಿ ಮುಂಜಾನೆ ಕುಡಿಯಬೇಕು ಈಗೆ ಎರಡು ತಿಂಗಳು ತೆಗೆದುಕೊಳ್ಳುವುದರಿಂದ ಕಿಡ್ನಿಯಲ್ಲಿ ಇರುವ ಕಲ್ಲು ಕರಗಿ ಹೋಗುವುದರ ಜೊತೆಗೆ ದೇಹದಲ್ಲಿ ಲಿವರ್ ಮತ್ತು ರಕ್ತದಲ್ಲಿ ಸೇರಿಕೊಂಡ ಕಲ್ಮಶಗಳನ್ನು ಕೂಡ ಹೊರಹಾಕುತ್ತದೆ.
ಈ ಎಲೆಯನ್ನು ಪ್ರತಿದಿನ ಒಂದು ತೆಗೆದುಕೊಳ್ಳುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಅತೋಟಿಯಲ್ಲಿ ಇಡುವುದಲ್ಲದೆ ಮಧುಮೇಹವನ್ನು ಸಹ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಈ ಎಲೆ ಔಷದಿ ಗುಣಗಳ ಕಾರಣದಿಂದ ಪ್ರಪಂಚದಾದ್ಯಂತ ವಿವಿಧ ಸಂಪ್ರದಾಯ ಮೂಲಿಕೆ ವೈದ್ಯದಲ್ಲಿ ಔಷಧಿಯಾಗಿ ಉಪಯೋಗಿಸುತ್ತಾರೆ ಇದರಲ್ಲಿ ಯಾಂಟಿಲ್ಮಿಂಟಿಕ್, ಇಮ್ಯೂನೋಸಪ್ರಸಿವ್, ಯಾಂಟಿ ಇನ್ಪ್ಲುಮೆಟರಿ, ಯಾಂಟಿ ಡಯಾಬಿಟಿಕ್, ಯಾಂಟಿ ಆಕ್ಸಿಡೆಂಟ್, ಯಾಂಟಿ ಮೈಕ್ರೋಬ್ಲಯಲ್, ಅನಾಲ್ಜೆಸಿಕ್, ಯಾಂಟಿ ವೈರೆಟಿಕ್ ಲಕ್ಷಣಗಳನ್ನು ಹೊಳಗೊಂಡಿದೆ.
ಕಾಡುಬಸಳೆ ಎಲೆ ರಕ್ತದಲ್ಲಿನ ಕ್ರಿಯೇಟಿವ್ ಮಟ್ಟವನ್ನು ಕಡಿಮೆ ಮಾಡುತ್ತದೆ ಇದರ ಎರಡು ಎಲೆಯನ್ನು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ತಿನ್ನುವುದರಿಂದ ಮಧುಮೇಹ ಕಡಿಮೆಯಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಹಾಗೆಯೇ ಶೀತ, ಕೆಮ್ಮು, ಮತ್ತು ಅತಿಸಾರದಿಂದ ಬಳಲುತ್ತಿರುವವರಿಗೆ ಕಾಡುಬಸಳೆ ಎಲೆ ಉತ್ತಮ ಔಷಧಿಯಾಗಿದೆ ಈ ಎಲೆಯನ್ನು ಮಲೇರಿಯಾ ಮತ್ತು ಟೈಫಾಯಿಡ್ ಜ್ವರಕ್ಕೆ ಉತ್ತಮ ಈ ಎಲೆಯನ್ನು ತಿನ್ನುವುದರಿಂದ ಕೂದಲು ಉದುರುವುದು ಸಹ ಕಡಿಮೆಯಾಗುತ್ತದೆ ಮತ್ತು ಬಿಳಿ ಕೂದಲಿನ ಸಮಸ್ಯೆಯನ್ನು ಕಾಡುಬಸಳೆ ಕಡಿಮೆಮಾಡುತ್ತದೆ.
ಕಾಮಾಲೆ ಇರುವವರು ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಈ ಎಳೆಯ ರಸವನ್ನು ಮೂವತ್ತು ಮಿಲಿ ತೆಗೆದುಕೊಳ್ಳಬೇಕು ಇದು ರೋಗವನ್ನು ಗುಣಪಡಿಸುತ್ತದೆ ಅಲ್ಲದೆ ಉರಿಯೂತದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಮಹಿಳೆಯರಲ್ಲಿ ಯೋನಿ ಸೋಂಕು ಹೆಚ್ಚಾಗಿ ಕಂಡುಬರುತ್ತದೆ ಅಂತಹ ಜನರು ಜೇನುತುಪ್ಪದೊಂದಿಗೆ ಕಾಡುಬಸಳೆ ಎಲೆ ಬೆರೆಸಿ ಸೇವಿಸುವುದು ಉತ್ತಮ ಈಗೆ ಮಾಡುವುದರಿಂದ ಪರಿಹಾರ ಸಿಗುತ್ತದೆ. ಕಾಡುಬಸಳೆ ಎಲೆಯನ್ನು ಹಣೆಗೆ ಹಚ್ಚುವುದರಿಂದ ತಲೆನೋವು ಕಡಿಮೆಯಾಗುತ್ತದೆ ಇದಲ್ಲದೆ ಹೃದಯವು ಆರೋಗ್ಯಕರವಾಗಿರುತ್ತದೆ.
ಮೂತ್ರದಲ್ಲಿನ ರಕ್ತ ಮತ್ತು ಕೀವು ಮುಂತಾದ ಸಮಸ್ಯೆಗಳು ಕಡಿಮೆಯಾಗುತ್ತವೆ ಅಲ್ಲದೆ ಕುವುಡುತನವು ದೂರವಾಗುತ್ತದೆ ಕಣ್ಣುಉರಿ, ಕಾಲುಉರಿ, ಉರಿಮೂತ್ರ, ಈ ರೀತಿಯ ಸಮಸ್ಯೆ ಇರುವವರು ಈ ಬಸಳೆ ಸೊಪ್ಪಿನ ರಸವನ್ನು ಏಳನೀರಿನೊಂದಿಗೆ ಸೇವನೆ ಮಾಡುವುದರಿಂದ ನಿಮ್ಮ ಉರಿ ಮೂತ್ರದ ಸಮಸ್ಯೆ ಕಣ್ಣುರಿ ಪಾದದಉರಿ ಸಮಸ್ಯೆ ದೂರ ಹೋಗುತ್ತದೆ. ಒಂದು ಲೋಟ ಏಳನೀರಿಗೆ ನಾಲ್ಕರಿಂದ ಆರು ಚಮಚ ಇದರ ರಸವನ್ನು ಹಾಕಿ ಕುಡಿಯಬೇಕು ಜೀರ್ಣಾಂಗದಲ್ಲಿ ಏನಾದರೂ ಸಮಸ್ಯೆ ಇದ್ದರೆ ಅದನ್ನು ಕೂಡ ಕಡಿಮೆಮಾಡುತ್ತದೆ. ಇದನ್ನು ನಿತ್ಯ ಸೇವನೆ ಮಾಡುವುದರಿಂದ ಪಿತ್ತ ವಿಕಾರದ ವ್ಯಾಧಿಗಳು ದೂರವಾಗುತ್ತವೆ ನೀವುಕೂಡ ಈ ಕಾಡುಬಸಳೆಯನ್ನು ಬಳಸುವ ಮೂಲಕ ನಿಮ್ಮ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಬಹುದು.