ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ಜೋಳದ ರೊಟ್ಟಿ ಅಂತ ಅಂದ ತಕ್ಷಣವೇ ನಮಗೆ ನೆನಪಿಗೆ ಬರುವುದು ಉತ್ತರ ಕನ್ನಡ ನಾಡಿನ ಜನರು. ಇನ್ನೂ ಉತ್ತರ ಕರ್ನಾಟಕದವರು ನೋಡಲು ಏಕೆ ಎಷ್ಟೊಂದು ಗಟ್ಟಿ ಇರುತ್ತಾರೆ ಗೊತ್ತಾ? ಅವರ ಹಿಂದಿರುವುದು ಜೋಳದ ರೊಟ್ಟಿಯ ಕರಾಮತ್ತು! ಅವರ ಆಹಾರದ ಸೊಗಡು ಹೆಚ್ಚುವುದು ಈ ಜೋಳದ ರೊಟ್ಟಿ ಇಂದಲೇ ಅಂತ ಹೇಳಿದರೆ ತಪ್ಪಾಗಲಾರದು. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಗಿ ಗೆ ಹೇಗೆ ಪ್ರಾಮುಖ್ಯತೆಯನ್ನು ಹಾಗೆಯೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಜೋಳದ ರೊಟ್ಟಿಗೆ ಬಹಳ ಮಹತ್ವವಿದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಯಾವುದೇ ಭೇದಭಾವ ಇಲ್ಲದೇ ಈ ಜೋಳದ ರೊಟ್ಟಿ ಯನ್ನು ಸೇವನೆ ಮಾಡುತ್ತಾರೆ. ಊಟದಲ್ಲಿ ಜೋಳದ ರೊಟ್ಟಿ ಇದ್ದರೆ ಸಾಕು ಬಡವರಿಗೆ ಅದೆಷ್ಟೋ ಆನಂದ. ಮೊದಲಿನ ಕಾಲದ ಹಿರಿಯರು ಮನೆಯಲ್ಲಿ ರೊಟ್ಟಿಯನ್ನು ಮಾಡುತ್ತಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ, ಆನ್ಲೈನ್ ನಲ್ಲಿ ಕೂಡ ರೆಡಿಮೇಡ್ ರೊಟ್ಟಿ ದೊರೆಯುತ್ತದೆ ಅಂದರೆ ಇದರ ಮಹತ್ವವೂ ಮತ್ತಷ್ಟು ಹೆಚ್ಚಿದೆ ಅಂತ ಹೇಳಬಹುದು.
ಇದರಿಂದ ಉತ್ತರ ಕರ್ನಾಟಕದ ಸೊಗಡು ಎಲ್ಲರಿಗೂ ಪರಿಚಯ ಆಗುತ್ತದೆ. ಹಾಗಾದರೆ ಜೋಳದ ರೊಟ್ಟಿ ನಮಗೆ ಹೇಗೆ ಆರೋಗ್ಯವನ್ನು ವೃದ್ಧಿಸಿ ಕೊಡುತ್ತದೆ ಎಂದು ತಿಳಿಸಿ ಕೊಡುತ್ತೇವೆ ಬನ್ನಿ. ಜೋಳ ನಮ್ಮ ಎಲ್ಲ ಸಿರಿ ಧಾನ್ಯಗಳಲ್ಲಿ ಒಂದಾಗಿದೆ ಅಂತ ಹೇಳಬಹುದು. 8 ಸಾವಿರ ವರ್ಷಗಳ ಹಿಂದೆ ಈಜಿಪ್ತ್ ನಲ್ಲಿ ಜೋಳದ ರೊಟ್ಟಿ ಸೇವನೆ ಮಾಡುತ್ತಿದ್ದರು. ಜೋಳದಲ್ಲಿ ಹೇರಳವಾದ ಪ್ರೊಟೀನ್ ಸಲ್ಫರ್ ಫಾಸ್ಫರಸ್ ಪೊಟ್ಯಾಶಿಯಂ ಮ್ಯಾಗ್ನಿಷಿಯಂ ಕಬ್ಬಿಣ ಜಿಂಕ್ ಪ್ರೊಟೀನ್ ಕ್ಯಾಲ್ಷಿಯಂ ಅಮೈನೋ ಆಮ್ಲಗಳು ಇನ್ನಿತರ ಅಂಶಗಳು ಅಡಗಿವೆ.ಜೋಳದಲ್ಲಿ ನಮ್ಮ ದೇಹದಲ್ಲಿನ ವಿಷಕಾರಿ ಅಂಶಗಳನ್ನು ಕರಗಿಸುವ ಶಕ್ತಿ ಇದೆ.
ಇದರ ಜೊತೆಗೆ ನಮ್ಮ ದೇಹದಲ್ಲಿ ಕಂಡುಬರುವ ಕೊಲೆಸ್ಟ್ರಾಲ್ ಅಂಶವನ್ನು ತಗ್ಗಿಸಿ, ಮಧುಮೇಹ ಸಮಸ್ಯೆಯನ್ನು ನಿವಾರಣೆ ಮಾಡಿ, ರಕ್ತದ ಒತ್ತಡವನ್ನು ನಿಯಂತ್ರಣ ಮಾಡಿ ಹೃದಯದ ಕಾಯಿಲೆಗಳ ವಿರುದ್ಧ ರಕ್ಷಣೆ ನೀಡುತ್ತದೆ. ಇನ್ನೂ ಈ ಜೋಳದ ರೊಟ್ಟಿಯಲ್ಲಿ ನಾರಿನ ಅಂಶ ಅಧಿಕವಾಗಿ ಇರುವುದರಿಂದ ಆರೋಗ್ಯಕ್ಕೆ ಅಪಾರವಾದ ಲಾಭಗಳು ಸಿಗುತ್ತವೆ. ಅಷ್ಟೇ ಅಲ್ಲದೇ ದೇಹದಲ್ಲಿ ಕಂಡು ಬರುವ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ.
ಜೋಳದಲ್ಲಿ ಮೆಗ್ನೀಷಿಯಂ ಮತ್ತು ಕ್ಯಾಲ್ಸಿಯಂ ಅಂಶದ ಪ್ರಮಾಣ ಹೆಚ್ಚಾಗಿ ಸಿಗುತ್ತದೆ. ಇದರಿಂದ ಮೂಳೆಗಳಿಗೆ ಮತ್ತು ನಿಮ್ಮ ಹಲ್ಲುಗಳಿಗೆ ಹೆಚ್ಚು ಬಲ ಬರುತ್ತದೆ. ನಾರಿನ ಅಂಶ ಹೆಚ್ಚಾಗಿರುವುದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ ಜೊತೆಗೆ ನಿಮ್ಮ ಕರುಳಿನ ಆರೋಗ್ಯ ಕೂಡ ಅಭಿವೃದ್ಧಿಯಾಗುತ್ತದೆ. ಜೋಳದ ರೊಟ್ಟಿಯನ್ನು ನಿಯಮಿತವಾಗಿ ತಿಂದರೆ ತೂಕ ಇಳಿಯುವುದರಲ್ಲಿ ಸಂಶಯವಿಲ್ಲ. ಜೊತೆಗೆ ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ ಮತ್ತು ಇದರಲ್ಲಿ ನಾರಿನ ಅಂಶವು ಬಹಳ ಅಧಿಕವಾಗಿ ಕಾಣಬಹುದು ಹೀಗಾಗಿ ಮಲಬದ್ಧತೆಯನ್ನು ನಿವಾರಿಸುತ್ತದೆ. ಮತ್ತು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಹೃದ್ರೋಗದ ಎಲ್ಲ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ ಈ ಜೋಳದ ರೊಟ್ಟಿ.
ಜೋಳದ ರೊಟ್ಟಿಯನ್ನು ಅಥವಾ ಆಹಾರ ಸೇವನೆ ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಹಾಗೂ ಚೈತನ್ಯದ ಮಟ್ಟವನ್ನು ನಿಯಂತ್ರಿಸುತ್ತದೆ. ಜೋಳದ ರೊಟ್ಟಿ ಸೇವನೆ ಮಾಡುವುದರಿಂದ ನಮ್ಮ ದೇಹದ ರಕ್ತಪರಿಚಲನೆಯನ್ನು ವೃದ್ಧಿಸುತ್ತದೆ. ರಕ್ತದ ಪರಿಚಲನೆ ಸರಾಗವಾಗಿ ನಡೆಯಲು ಸಹಕಾರಿ ಆಗುತ್ತದೆ. ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಕಾರಿ.ಕಿಡ್ನಿ ಲಿವರ್ ಸಮಸ್ಯೆಯನ್ನು ದೂರ ಮಾಡಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ . ಹಾಗೂ ಗ್ಯಾಸ್ಟ್ರಿಕ್ ಅಸಿಡಿಟಿ ನಿವಾರಿಸಲು ಕೂಡ ಜೋಳದ ಉತ್ತಮವಾದ ರಾಮಬಾಣ ಇದ್ದಂತೆ. ಅದಕ್ಕಾಗಿ ಜೋಳದ ರೊಟ್ಟಿ ತಿನ್ನಿ. ದಷ್ಟ ಪುಷ್ಟವಾದ ದೇಹವನ್ನು ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳಿ.