ಬಾಯಿ ಹುಣ್ಣು ಸಮಸ್ಯೆಯಿಂದ ತತ್ತರಿಸಿ ಹೋಗಿದ್ದೀರಾ??? ಚಿಂತೆ ಮಾಡಬೇಡಿ. ಇಲ್ಲಿದೆ ಬಹಳ ಸರಳವಾದ ಟಿಪ್ಸ್ ಗಳು.

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ಬಾಯಿ ಹುಣ್ಣು ಸಮಸ್ಯೆ ಬೇಸಿಗೆಯಲ್ಲಿ ಅತಿ ಹೆಚ್ಚು ಕಾಡುವ ಸಮಸ್ಯೆ ಆಗಿದೆ. ಬಾಯಿ ಹುಣ್ಣು ಸಮಸ್ಯೆಗೆ ಮುಖ್ಯ ಕಾರಣಗಳು ಏನು ಅಂತ ಹೇಳುವುದಾದರೆ, ದೇಹದಲ್ಲಿ ಅತಿಯಾದ ಉಷ್ಣತೆ ಹೆಚ್ಚಾದಾಗ ನೀರು ಕಡಿಮೆ ಕುಡಿದಾಗ ಮತ್ತು ಹಾರ್ಮೋನ್ ಬದಲಾವಣೆ ಆದಾಗ, ಹಾಗೂ ಕೆಲವೊಂದು ಔಷಧಗಳ ಸೇವನೆ ಪ್ರತಿನಿತ್ಯವೂ ಮಾಡುತ್ತಾ ಬರುವಾಗ ವಿಟಮಿನ್ ಬಿ 12 ಕೊರತೆ ಇಂದ ಹಾಗೂ ವೈರಸ್ ಸೋಂಕಿನಿಂದ ಕೂಡ ಬಾಯಿ ಹುಣ್ಣು ಕಾಣಿಸಿಕೊಳ್ಳುತ್ತೆ. ಸಾಮಾನ್ಯವಾಗಿ ಹೇಳಬೇಕೆಂದರೆ ದೇಹದ ಉಷ್ಣತೆಯನ್ನು ಬಾಯಿಯ ಹುಣ್ಣುಗಳ ಮೂಲಕ ಹೊರಗೆ ಹಾಕುವುದು ಇದರ ಸಾಮಾನ್ಯ ಅರ್ಥವಾಗಿದೆ. ಇನ್ನೂ ದೇಹದಲ್ಲಿ ವಿಟಮಿನ್ ಸಿ, ಬಿ ಕಬ್ಬಿನ ಅಂಶ ಅಸಿಡಿಟಿ ಕೊರತೆಯಿಂದ ಕೂಡ ಉಂಟಾಗಬಹುದು.

ಈ ಸಮಸ್ಯೆಯನ್ನು ಎದುರಿಸದವರು ಈ ಜಗತ್ತಿನಲ್ಲಿ ಇಲ್ಲದೆ ಇರುವವರು ಇಲ್ಲ. ಪ್ರತಿಯೊಬ್ಬರ ದೇಹದ ಉಷ್ಣತೆಯ ಆಧಾರದ ಮೇಲೆ ಈ ಬಾಯಿ ಹುಣ್ಣು ಕಾಣಿಸಿಕೊಳ್ಳುತ್ತದೆ. ಬಾಯಿ ಹುಣ್ಣು ನೋವಿನಿಂದ ಕೂಡಿರೋ ಕಾರಣ ಆಹಾರ ಸೇವನೆ ಕಷ್ಟವಾಗುತ್ತೆ. ಕೆಲವೊಮ್ಮೆನೀರು ಕುಡಿಯಲು ಕೂಡ ಸಾಧ್ಯವಾಗೋದಿಲ್ಲ. ಕೆಲವೊಂದು ಮನೆಮದ್ದುಗಳ ಮೂಲಕ ಬಾಯಿಹುಣ್ಣಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ದೇಹದಲ್ಲಿ ಉಷ್ಣತೆ ಹೆಚ್ಚಾದಾಗ ಕೆಲವರು ಈ ಸಮಸ್ಯೆಯನ್ನು ತಿಂಗಳಿಗೆ ಒಮ್ಮೆ ಅನುಭವಿಸಿದರೆ ಇನ್ನೂ ಕೆಲವರು ಆರು ತಿಂಗಳಿಗೆ ಅನುಭವಿಸುತ್ತಾರೆ ಇನ್ನೂ ಕೆಲವರು ಕಡಿಮೆ ಉಷ್ಣತೆ ಹೊಂದಿರುವವರು ವರ್ಷಕ್ಕೆ ಒಮ್ಮೆ ಅನುಭವಿಸುತ್ತಾರೆ.

ಬಾಯಿ ಹುಣ್ಣು ಸಮಸ್ಯೆಗೆ ಇಂಗ್ಲಿಷ್ ನಲ್ಲಿ ಅಲ್ಸರ್ ಎಂದು ಕರೆಯುತ್ತಾರೆ. ನಿಜಕ್ಕೂ ಈ ಸಮಸ್ಯೆ ಬಂದರೆ ಊಟವಲ್ಲ ನೀರು ಕುಡಿಯಲು ಕೂಡ ಬಲು ಕಷ್ಟವಾಗುತ್ತದೆ. ಇಂತಹ ಸಮಯದಲ್ಲಿ ನಾವು ಮೆಡಿಕಲ್ ಶಾಪ್ ಗೆ ಹೋಗಿ ಬಿ ಕಾಂಪ್ಲೆಕ್ಸ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ ಇನ್ನೂ ಕೆಲವರು ಜೆಲ್ ಹಚ್ಚಿಕೊಳ್ಳುತ್ತಾರೆ. ಆದರೆ ಅದು ಎಷ್ಟೇ ಮಾಡಿದರು ಈ ಬಾಯಿ ಹುಣ್ಣು ಸಮಸ್ಯೆ ಮತ್ತೆ ಮತ್ತೆ ಮರುಕಳಿಸುತ್ತದೆ. ಇದಕ್ಕೆಲ್ಲ ಇವುಗಳು ಶಾಶ್ವತ ಪರಿಹಾರವನ್ನು ನೀಡುವುದಿಲ್ಲ. ಅದಕ್ಕಾಗಿ ಕೆಲವೊಂದು ಮನೆಮದ್ದುಗಳನ್ನು ತಿಳಿಸಿಕೊಡುತ್ತೇವೆ ಬನ್ನಿ.

ಮೊದಲಿಗೆ ಅಲ್ಸರ್ ಸಮಸ್ಯೆ ಯಾವ ಕಾರಣಕ್ಕೆ ಬರುತ್ತದೆ ಅಂತ ತಿಳಿಯಬೇಕು ಅಂದರೆ ದೇಹದ ಉಷ್ಣತೆ ಹೆಚ್ಚಾದಾಗ ಅಥವಾ ಪೌಷ್ಟಿಕಾಂಶದ ಕೊರತೆಯಿಂದಾಗಿ ಅಂತ ತಿಳಿದುಕೊಳ್ಳಬೇಕು.  ದೇಹದಲ್ಲಿ ಉಷ್ಣತೆ ಹೆಚ್ಚಾದರೆ ತಂಪು ಇರುವ ಆಹಾರಗಳನ್ನು ಸೇವಿಸಬೇಕು ಇದರಿಂದ ದೇಹಕ್ಕೆ ತಂಪು ನೀಡುತ್ತದೆ ಹಾಗೂ ಬಾಯಿ ಹುಣ್ಣು ಸಮಸ್ಯೆ ಬರುವುದಿಲ್ಲ. ಇನ್ನೂ ಆಹಾರದ ಪೌಷ್ಟಿಕಾಂಶ ದ ಕೊರತೆ ಇಂದ ಬಾಯಿ ಹುಣ್ಣು ಸಮಸ್ಯೆ ಕಾಣುತ್ತಿದ್ದರೆ ವಿಟಮಿನ್ ಸಿ ಹಾಗೂ ಬಿ ಕಬ್ಬಿಣಾಂಶ ಇರುವ ಎಲ್ಲ ಬಗೆಯ ಆಹಾರಗಳನ್ನು ತರಕಾರಿ ಹಣ್ಣುಗಳನ್ನು ಸೇವನೆ ಮಾಡಬೇಕು. ಇನ್ನೂ ಮನೆಯಲ್ಲಿ ಸಿಗುವ ಪದಾರ್ಥಗಳನ್ನು ಬಳಕೆ ಮಾಡಿಕೊಂಡು ಕೂಡ ಅಲ್ಸರ್ ಸಮಸ್ಯೆಯನ್ನು ಹೋಗಲಾಡಿಸಬಹುದು.

ಮೊದಲಿಗೆ ಗಸಗಸೆ ಮತ್ತು ಒಣ ಕೊಬ್ಬರಿ ಬಾಯಿಯಲ್ಲಿ ಹಾಕಿ ಜಗಿದು ಅದರ ರಸವನ್ನು ಬಾಯಿಯಲ್ಲಿ ಸ್ವಲ್ಪ ಹೊತ್ತು ಹಾಗೆ ಇಟ್ಟುಕೊಳ್ಳಿ. ಈ ರೀತಿ ಮಾಡುವುದರಿಂದ ಬಾಯಿ ಹುಣ್ಣು ಶಮನವಾಗುತ್ತದೆ. ಇನ್ನೂ ಎರಡನೆಯದು ಎಳನೀರು ಕುಡಿಯಿರಿ. ಹೌದು ಎಳನೀರು ಕುಡಿಯುವುದ್ದರಿಂದ ಕೂಡ ಅಲ್ಸರ್ ಸಮಸ್ಯೆ ಮಾಯವಾಗುತ್ತದೆ. ಇನ್ನು ಜೇನುತುಪ್ಪ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಈ ಜೇನುತುಪ್ಪವನ್ನು ನೀವು ಸ್ವಲ್ಪ ನೆಲ್ಲಿಕಾಯಿ ಪುಡಿಯ ಜೊತೆಗೆ ಬೆರೆಸಿ ಬಾಯಿ ಹುಣ್ಣು ಆದ ಸ್ಥಳದಲ್ಲಿ ಸ್ವಲ್ಪ ಮೆತ್ತಗೆ ಸವರಿದರೆ ಬಾಯಿ ಹುಣ್ಣು ನಿವಾರಣೆ ಆಗುತ್ತದೆ. ಕೊನೆಯದಾಗಿ ಒಣ ಕೊಬ್ಬರಿ ಹಾಗೂ ಕಲ್ಲು ಸಕ್ಕರೆ ಮಿಶ್ರಣ ಮಾಡಿ ಸೇವನೆ ಮಾಡಿದರು ಕೂಡ ಅಲ್ಸರ್ ಸಮಸ್ಯೆ ಮಾಯವಾಗುತ್ತದೆ.

Leave a Reply

Your email address will not be published. Required fields are marked *