ಶವ ಯಾತ್ರೆಯನ್ನು ನೋಡುವುದರಿಂದ ನಿಜಕ್ಕೂ ಶುಭವಾಗುತ್ತದೆಯೇ? ಯಾವುದೇ ರೀತಿಯ ಋಣಾತ್ಮಕ ಶಕ್ತಿಗಳು ಬೆನ್ನಟ್ಟುವುದಿಲ್ಲವೇ ಇಲ್ಲಿದೆ ಮಾಹಿತಿ

ಇತರೆ

ನಮಸ್ತೇ ಆತ್ಮೀಯ ಗೆಳೆಯರೇ, ಸತ್ತ ಮೇಲೆ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಸತ್ತ ಶವದ ಮೆರವಣಿಗೆ ಮಾಡುತ್ತಾರೆ. ಹೌದು ಇದು ಒಂದು ನಮ್ಮ ಹಿಂದೂ ಸಂಪ್ರದಾಯದಲ್ಲಿ ಸತ್ತವರಿಗೆ ನೀಡುವ ಗೌರವ ಅಂತ ಹೇಳಿದರೆ ತಪ್ಪಾಗಲಾರದು. ಶವ ಯಾತ್ರೆಯನ್ನು ನೋಡುವುದರಿಂದ ಲಾಭವಾದರೂ ಏನು. ನಿಜಕ್ಕೂ ಇದರಿಂದ ಲಾಭವಾಗುತ್ತದೆಯೇ.

ಆಕಸ್ಮಿಕವಾಗಿ ನೀವು ಹೊರಗಡೆ ಹೋಗುವಾಗ ಅಥವಾ ದಾರಿಯಲ್ಲಿ ಹೋಗುವಾಗ ಶವದ ಯಾತ್ರೆಯನ್ನು ನೋಡಿರಬಹುದು. ಕೆಲವರು ಧೈರ್ಯದಿಂದ ನೋಡಿ ಅದಕ್ಕೆ ನಮಸ್ಕಾರ ಮಾಡುತ್ತಾರೆ. ಇನ್ನೂ ಕೆಲವರು ಭಯ ಪಟ್ಟು ಅದರ ಕಡೆಗೆ ಕಣ್ಣೆತ್ತಿ ಕೂಡ ನೋಡುವುದಿಲ್ಲ. ಶವ ಅಂದರೆ ಭಯ ಆತಂಕ. ಏಕೆಂದ್ರೆ ಸತ್ತವರ ಹೆಣವನ್ನು ನೋಡುವುದರಿಂದ ಏನಾದರೂ ತೊಂದರೆ ಆಗುತ್ತದೆಯೇ ಅಥವಾ ಋಣಾತ್ಮಕ ಶಕ್ತಿಗಳ ಪ್ರಭಾವ ಬೀರುತ್ತದೆ ಅಂತ ಆಲೋಚನೆ ಮಾಡುತ್ತಾರೆ. ಸತ್ತ ಹೆಣವನ್ನು ನೋಡುವುದರಿಂದ ನಮಗೆ ಕೆಟ್ಟದ್ದಾಗುತ್ತದೆ ಅಂತ ಹಲವಾರು ಜನರ ಮನಸ್ಸಿನಲ್ಲಿ ಕುಳಿತು ಬಿಟ್ಟಿದ್ದೆ. ಅವರ ಆತ್ಮ ನಮ್ಮನ್ನು ರಾತ್ರಿ ಮಗಿರುವಾಗ ಬಂದು ಕಾಡುತ್ತದೆ ಹಾಗೆ ಹೀಗೆ ಎಂಬ ಆಲೋಚನೆಗಳು ಬರಲು ಶುರು ಆಗುತ್ತದೆ.

ಆದರೆ ನಿಮಗೆ ಗೊತ್ತೇ ಗೆಳೆಯರೇ ನಂಬಿಕೆಯ ಪ್ರಕಾರ ಶಾಸ್ತ್ರಗಳ ಪ್ರಕಾರ ಶವ ಯಾತ್ರೆ ನೋಡುವುದರಿಂದ ಪ್ರಯೋಜನ ಆಗುತ್ತದೆ ಅಂತ ತಿಳಿಯಲಾಗಿದೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ಸಾಮಾನ್ಯವಾಗಿ ಕೆಲವರು ಹಾಗೂ ದೊಡ್ಡವರು ಶವದ ಮೆರವಣಿಗೆ ನೋಡಿದಾಗ ಅದಕ್ಕೆ ನಮಸ್ಕಾರ ಮಾಡಿ ಶಿವನ ಜಪವನ್ನು ಮಾಡುತ್ತಾರೆ ಹೌದು, ಇದರಿಂದ ನಮಸ್ಕಾರ ಮಾಡಿದ ವ್ಯಕ್ತಿಯ ಎಲ್ಲ ಕಷ್ಟಗಳು ದುಃಖಗಳು ನೋವುಗಳು ಆ ಸತ್ತ ವ್ಯಕ್ತಿಯ ಜೊತೆಗೆ ಹೋಗುತ್ತವೆ ಎಂಬ ನಂಬಿಕೆ ಉಂಟು. ಜೊತೆಗೆ ಮೃತ ವ್ಯಕ್ತಿಯ ದೇಹಕ್ಕೆ ಶಾಂತಿ ಸಿಗಲೆಂದು ಶವವನ್ನು ನೋಡಿ ಸ್ವಲ್ಪ ಕಾಲ ಅಲ್ಲಿಯೇ ನಿಂತು ನಮಸ್ಕಾರ ಮಾಡಿದರೆ ಹೀಗೆ ಅವರಿಗೆ ಶಾಂತಿ ದಕ್ಕುತ್ತದೆ ಅಂತ ಶಾಸ್ತ್ರದಲ್ಲಿ ತಿಳಿಸಿದ್ದಾರೆ. ಇನ್ನೂ ನಾವು ಜ್ಯೋತಿಷ್ಯ ಶಾಸ್ತ್ರದಲ್ಲಿ ಏನು ಹೇಳುತ್ತಾರೆ ಅಂತ ತಿಳಿವುದಾದರೆ ಶವದ ಯಾತ್ರೆಯನ್ನು ನೋಡುವುದು ಒಳ್ಳೆಯದು ಹಾಗೂ ಶುಭಕರ ಅಂತ ತಿಳಿಯಲಾಗಿದೆ.

ಹೌದು ಇದು ನಿಜವಾದ ಮಾತು. ಶವದ ಮೆರವಣಿಗೆ ನೋಡುವುದರಿಂದ ಅಂದುಕೊಂಡ ಎಲ್ಲ ಕೆಲಸಗಳು ಯಶಸ್ವಿ ಆಗುತ್ತವೆ. ಅರ್ಧಕ್ಕೆ ನಿಂತ ಕೆಲಸಗಳು ಸಂಪೂರ್ಣ ಆಗುತ್ತವೆ. ದುಃಖಗಳು ದುಮ್ಮಾನಗಳು ಪೂರ್ತಿಯಾಗುತ್ತವೆ. ಬಯಕೆಗಳು ಆಸೆಗಳು ಈಡೇರುತ್ತವೆ. ಇನ್ನೂ ಶಾಸ್ತ್ರದಲ್ಲಿ ಒಬ್ಬ ಬ್ರಾಹ್ಮಣ ಇನ್ನೊಬ್ಬ ಬ್ರಾಹ್ಮಣ ಶವವನ್ನು ದುಡ್ಡಿಗಾಗಿ ಮೆರವಣಿಗೆ ಮಾಡಲು ಮುಂದಾದರೆ ಆತನು ಹತ್ತು ದಿನಗಳ ಕಾಲ ಅಶುದ್ಧವಾಗಿರುತ್ತಾನೆ ಅಂತ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿದ್ದಾರೆ. ಆದ್ದರಿಂದ ಶವವನ್ನು ನೋಡುವುದು ಶುಭ ಅಂತ ತಿಳಿಸಿದ್ದಾರೆ. ಎಲ್ಲಿಯಾದರೂ ನಿಮಗೆ ಶವದ ಮೆರವಣಿಗೆ ಕಾಣಿಸಿದರೆ ಒಂದು ನಿಮಿಷಗಳ ಕಾಲ ಅಲ್ಲಿಯೇ ನಿಂತು ಶಿವನ ಜಪವನ್ನು ಮಾಡಿರಿ. ಇದರಿಂದ ಸತ್ತವರ ಆತ್ಮಕ್ಕೆ ಕೂಡ ಶಾಂತಿ ಸಿಗುತ್ತದೆ ಜೊತೆ ಜೊತೆಗೆ ನಿಮ್ಮ ಬಯಕೆಗಳು ಕೂಡ ಪೂರೈಸುತ್ತವೆ. ದೇವರು ಪ್ರತಿಯೊಂದು ಜೀವಿಗೆ ಜೀವವನ್ನು ತುಂಬಿದ್ದಾನೆ ಅಂದರೆ ಅದಕ್ಕೆ ಮರಣವು ಆತನೇ ಸೃಷ್ಟಿ ಮಾಡಿರುತ್ತಾನೆ. ಹೌದು ಹುಟ್ಟು ಹೇಗೆ ಸಹಜವೋ ಹಾಗೆ ಸಾವು ಕೂಡ ಖಚಿತ. ಪ್ರತಿಯೊಬ್ಬರಿಗೂ ಸಾವು ಅನ್ನುವುದು ಒಂದಲ್ಲ ಒಂದು ರೀತಿಯಲ್ಲಿ ಬರುತ್ತದೆ. ಪ್ರತಿ ಜೀವಿಗಳು ಸಾವನ್ನಪ್ಪಲೆ ಬೇಕು ಗೆಳೆಯರೇ. ಹೀಗಾಗಿ ಸತ್ತ ಶವವನ್ನು ನೋಡಿ ಹೆದರುವ ಅಗತ್ಯವಿಲ್ಲ. ಬದಲಾಗಿ ನಮಸ್ಕಾರ ಮಾಡಿ ಶಿವನ ಜಪವನ್ನು ಮಾಡಿ. ಇದರಿಂದ ನಿಮ್ಮ ಬಯಕೆಗಳು ಪೂರ್ಣಗೊಳ್ಳುತ್ತದೆ. ಶುಭದಿನ.

Leave a Reply

Your email address will not be published. Required fields are marked *