ನಮಸ್ತೇ ಪ್ರಿಯ ಓದುಗರೇ ದಾಂಪತ್ಯ ಜೀವನದಲ್ಲಿ ನೆಮ್ಮದಿ ಇಲ್ಲವೆನ್ನಿಸುತ್ತಿದೆಯೇ ಹಾಗಾದರೆ ಇವುಗಳನ್ನು ಮಾಡಿ. ನಮಸ್ತೇ ಪ್ರಿಯ ಓದುಗರೇ, ಸಂಸಾರ ಜೀವನ ಬದುಕು ಅನ್ನುವುದು ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಸಂಸಾರ ಅಂದರೆ ಜಗಳಗಳು ಮನಸ್ತಾಪಗಳು ಬೇಜಾರು ಅಸೂಹೆ ಕೋಪ ತಾಪ ಬರುವುದು ಸಹಜ. ಆದರೆ ಅವುಗಳು ಅತಿರೇಕ್ಕೇ ತಲುಪಿದಾಗ ಸಂಭಂದಗಳು ಒಡೆದು ಹೋಗುತ್ತವೆ. ಮನಸ್ಸುಗಳು ಚೂರು ಚೂರಾಗುತ್ತವೆ.
ಮದುವೆ ಆಗಿ ಕೇವಲ ಮೂರು ನಾಲ್ಕು ತಿಂಗಳು ಅಥವಾ ವರ್ಷ ಚೆನ್ನಾಗಿದ್ದು ಮನೆಯಲ್ಲಿ ಗಂಡ ಹೆಂಡತಿಯ ಮಾತನ್ನು ಕೇಳದೆ ಹೆಂಡತಿ ಗಂಡನ ಮಾತನ್ನು ಕೇಳದೆ ಮಾತಿಗೆ ಮಾತು ಬೆಳೆಯುತ್ತಿದೆಯೆ ಮನೆಯಲ್ಲಿ ಗಂಡ ಹೆಂಡತಿಯನ್ನು ಇಷ್ಟ ಬಂದ ಹಾಗೆ ಹೊಡೆಯುತ್ತಿದ್ದಾನೆಯೇ, ಹಾಗೂ ಬೈಯುತ್ತಿದ್ದಾರೆಯೇ ಜೂಜಾಟಕ್ಕೆ ಸಿಲುಕಿ ಜೀವನವನ್ನೂ ಮಾಡಿಕೊಳ್ಳುತ್ತಾರೆಯೆ ಕೆಟ್ಟ ಚಟಗಳಾದ ಮಧ್ಯಪಾನ ಧೂಮಪಾನಕ್ಕೆ ಸಿಲುಕಿ ಹಣವನ್ನು ಹಾಳು ಮಾಡುತ್ತಿದ್ದಾರೆಯೇ ಪರಸ್ತ್ರೀ ಸಹವಾಸ ಹೆಚ್ಚಾಗಿದೆಯೇ ದಿನವೂ ಮನೆಗೆ ಕುಡಿದುಕೊಂಡು ಬರುತ್ತಿದ್ದಾರೆಯೇ ಮನೆಯಲ್ಲಿ ನೆಮ್ಮದಿ ಅನ್ನುವುದೇ ಇಲ್ಲವೇ, ಸಾಂಸಾರಿಕ ಜೀವನವೇ ಬೇಡ ಅನ್ನಿಸುತ್ತಿದೆಯೆ ಚಿಂತೆ ಬೇಡ ಗೆಳೆಯರೇ ಇಂದಿನ ಲೇಖನದಲ್ಲಿ ನಾವು ನಿಮಗೆ ಇವುಗಳಿಂದ ಸಂಪೂರ್ಣವಾಗಿ ಮುಕ್ತಿ ಹೊಂದಲು ಒಂದು ಒಳ್ಳೆಯ ತಂತ್ರವನ್ನು ತಿಳಿಸಿಕೊಡುತ್ತೇವೆ ಬನ್ನಿ.
ಆ ತಂತ್ರ ಯಾವುದು ಅಂದರೆ ಮೊದಲಿಗೆ ಹದಿನಾರು ನಿಂಬೆ ಹಣ್ಣುಗಳನ್ನು ತೆಗೆದುಕೊಳ್ಳಿ. ಈ ಒಂದು ವಿಧಾನವನ್ನು ಮಂಗಳವಾರ ಮಾಡಿದರೆ ಬಹಳ ಪ್ರಯೋಜನಕಾರಿ ಹಾಗೂ ಲಾಭಗಳು ಉಂಟಾಗುತ್ತವೆ. ನಿಮ್ಮ ಸಾಂಸಾರಿಕ ಜೀವನದಲ್ಲಿ ಇಷ್ಟೊಂದು ಬದಲಾವಣೆ ಆಗುತ್ತದೆ ಅಂದರೆ ನೀವೇ ನಂಬಲು ಸಾಧ್ಯವೇ ಆಗುವುದಿಲ್ಲ. ನಿಮ್ಮ ದಾಂಪತ್ಯ ಜೀವನ ಸುಖದಲ್ಲಿ ತೇಲಾಡುತ್ತದೆ. ನಿಮ್ಮ ಸುಖವಾದ ಸಂಸಾರವನ್ನು ನೋಡಿ ನಾಲ್ಕು ಜನರು ಮೆಚ್ಚಿಕೊಳ್ಳಬೇಕು. ಹಾಗೂ ಭಾವಿ ದಂಪತಿಗಳಿಗೆ ನಿಮ್ಮ ಸಂಸಾರ ಮಾದರಿ ಆಗಬೇಕು. ಹಾಗಾದರೆ ಅದಕ್ಕಾಗಿ ನೀವು ಈ ತಂತ್ರವನ್ನು ಪ್ರಯೋಗ ಮಾಡಿ. ನಿಂಬೆ ಹಣ್ಣು ಬಹಳ ಪ್ರಭಾವ ಶಾಲಿ ಶಕ್ತಿಶಾಲಿ ಗುಣಗಳನ್ನು ಹೊಂದಿದೆ. ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದ್ದಲ್ಲದೇ ಮಾಟ ಮಂತ್ರ ತಂತ್ರ ಯಂತ್ರಗಳಲ್ಲಿ ಕೂಡ ಇದನ್ನು ಹೆಚ್ಚಾಗಿ ಬಳಸುತ್ತಾರೆ. ಅಷ್ಟೊಂದು ಶಕ್ತಿ ಈ ನಿಂಬೆ ಹಣ್ಣಿಗಿದೆ ಗೆಳೆಯರೇ.
ನಿಂಬೆ ಹಣ್ಣಿನ ಮಾಲೆಯನ್ನು ಧರಿಸಿರುವ ದುರ್ಗಾ ಮಾತೆಯನ್ನು ನೀವು ನೋಡಿರಬಹುದು. ನಿಂಬೆ ಹಣ್ಣು ಅಂದರೆ ದುರ್ಗಾ ಮಾತೆಯ ಬಲು ಪ್ರಿಯ. ಹಾಗೂ ಈ ಕೆಲಸವನ್ನು ಮಂಗಳವಾರ ಮಾಡಿದರೆ ಹೆಚ್ಚು ಪರಿಣಾಮಕಾರಿ. ಈ ಹದಿನಾರು ನಿಂಬೆ ಹಣ್ಣುಗಳನ್ನು ಕೆಂಪು ದಾರವನ್ನು ತೆಗೆದುಕೊಂಡು ಒಂದು ಮಾಲೆಯ ರೀತಿಯಾಗಿ ಸಿದ್ದ ಪಡಿಸಿಕೊಳ್ಳಿ. ತದ ನಂತರ ಅದನ್ನು ನಿಮ್ಮ ಊರಿನ ಗ್ರಾಮ ದೇವತೆಗೆ ಅಥವಾ ದುರ್ಗಾ ಪರಮೇಶ್ವರಿ ಮಾತೆಗೆ ಅರ್ಪಿಸಬೇಕು.
ಆಮೇಲೆ ದೇವರಲ್ಲಿ ನಿಮ್ಮ ಎಲ್ಲ ಕಷ್ಟಗಳನ್ನು ಹೇಳುತ್ತಾ ಸಂಕಲ್ಪ ಮಾಡಿಕೊಂಡು ಕಳ ಕಳಿಯಿಂದ ಬೇಡಿಕೊಳ್ಳಬೇಕು. ಹೇಗೆ ಪ್ರಾರ್ಥನೆಯನ್ನು ಮಾಡಿಕೊಳ್ಳಬೇಕು ಅಂದರೆ ನನ್ನ ಗಂಡ ಮನೆಯಲ್ಲಿ ಚೆನ್ನಾಗಿರಬೇಕು. ಅನವಶ್ಯಕ ಹೊಡೆಯಬಾರದು ಬೈಯಬಾರದು ಅಂತ ಕೇಳಿಕೊಳ್ಳಬೇಕು ಕೆಟ್ಟ ಚಟಗಳಿಗೆ ಮೊರೆ ಹೋಗಬಾರದು ಅಂತ ಬೇಡಿಕೊಳ್ಳಬೇಕೂ. ಮನೆಯಲ್ಲಿ ಶಾಂತವಾಗಿ ಸಮಾಧಾನವಾಗಿ ಇರಬೇಕು. ಒಟ್ಟಾರೆಯಾಗಿ ನನ್ನ ಸಾಂಸಾರಿಕ ಜೀವನವೂ ಸುಖವಾಗಿ ಸಂತೋಷವಾಗಿ ಆಗಬೇಕು ಅಂತ ಬೇಡಿಕೊಳ್ಳಬೇಕು.
ತದ ನಂತರ ಆ ದೇವಿಯ ಹತ್ತಿರ ಇರುವ ಅರಿಶಿನ ಕುಂಕುಮವನ್ನು ಮನೆಗೆ ತೆಗೆದುಕೊಂಡು ಬಂದು ನೀವು ಮುತ್ತೈದೆಯರು ನಿತ್ಯವೂ ಅದನ್ನು ನಿಮ್ಮ ಹಣೆಗೆ ಇಡುತ್ತಾ ಬರಬೇಕು. ಅದು ಖಾಲಿ ಆಗುವವರೆಗೂ ಈ ರೀತಿ ಮಾಡಬೇಕು. ಹೀಗೆ ಮಾಡುವುದರಿಂದ ಗಂಡ ಹೆಂಡತಿಯ ನಡುವೆ ಇದ್ದ ಎಲ್ಲ ಸಮಸ್ಯೆಗಳು ಮಂಗ ಮಾಯವಾಗುತ್ತದೆ ಎಲ್ಲ ಬಗೆಯ ಭಿನ್ನಾಭಿಪ್ರಾಯಗಳು ಕಡಿಮೆ ಆಗುತ್ತವೆ. ನಿಮ್ಮ ಸಾಂಸಾರಿಕ ಜೀವನ ಸುಖಮಯವಾಗುತ್ತದೆ. ಹೀಗೆ ಮಾಡಿ. ದುರ್ಗಾದೇವಿಗೆ ನಿಂಬೆ ಹಣ್ಣಿನ ಮಾಲೆಯನ್ನು ಅರ್ಪಣೆ ಮಾಡಿ ಅರಿಶಿನ ಕುಂಕುಮ ನಿಮ್ಮ ಹಣೆಯ ಮೇಲೆ ತಿಲಕವಾಗಿ ಇಡುತ್ತಾ ಬನ್ನಿ. ದುರ್ಗಾ ಮಾತೆಯ ಜಪವನ್ನು ಮಾಡಿ. ಇದರಿಂದ ಗಂಡ ಹೆಂಡತಿಯ ನಡುವೆ ಉಂಟಾಗುವ ಎಲ್ಲ ಕಲಹಗಳು ದೂರವಾಗುತ್ತವೆ. ಶುಭದಿನ.