ನಿಮ್ಮ ಮುಖ ಫಳ ಫಳ ಹೊಳೆಯುವಂತೆ ಮಾಡಿಕೊಳ್ಳಬೇಕಾದರೆ ಇಂತಹ ಸ್ಕ್ರಬ್ ಗಳನ್ನೂ ಮನೆಯಲ್ಲಿಯೇ ಮಾಡಿ.

ಆರೋಗ್ಯ

ನಮಸ್ತೇ ಆತ್ಮೀಯ ಗೆಳೆಯರೇ, ಪ್ರತಿದಿನ ಈ ಕೆಲಸವನ್ನು ಮಾಡಿದರೆ ಸುಂದರವಾದ ತ್ವಚೆ ನಿಮ್ಮದಾಗುತ್ತದೆ. ಟೀನೇಜರ್ ನಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆ ಅಂದರೆ ಅದು ಮುಖದಲ್ಲಿ ಕಪ್ಪು ಕಲೆಗಳು ಡಾರ್ಕ್ ಸರ್ಕಲ್ ಬ್ಲಾಕ್ ಹೆಡ್ಸ್ ವೈಟ್ ಹೆಡ್ಸ್ ಕಾಣಿಸಿಕೊಳ್ಳುವುದು. ನಾವು ಇವುಗಳಿಗೆ ದುಬಾರಿ ಕ್ರೀಮ್ ಗಳನ್ನು ಹಚ್ಚಿದರು ಕೂಡ ಅವುಗಳು ಮುಖದಲ್ಲಿ ಪದೇ ಪದೇ ಮೂಡುವುದು ತಪ್ಪುವುದಿಲ್ಲ. ಹಾಗಂತ ಬ್ಯೂಟಿ ಪಾರ್ಲರ್ ಗೆ ಕೂಡ ಪದೇ ಪದೇ ಹೋಗುವುದು ಹಾಗೂ ದುಡ್ಡು ಖರ್ಚು ಮಾಡುವುದು ನಿಜಕ್ಕೂ ವ್ಯರ್ಥದ ಕೆಲಸ ಹಾಗೂ ಸಮಯವೂ ಕೂಡ ಹಾಳಾಗುತ್ತದೆ. ಪ್ರತಿಯೊಬ್ಬರಿಗೂ ತಾವು ಸುಂದರವಾಗಿ ಕಾಣಬೇಕು ಎಂಬ ಬಯಕೆ ಇದ್ದೇ ಇರುತ್ತದೆ. ಆದರೆ ಈಗಿನ ಕಾಲದಲ್ಲಿ ಕೆಲಸದ ಒತ್ತಡದಿಂದಾಗಿ ನಿಮಗಾಗಿ ನೀವು ಸಮಯ ಕೊಡುವುದು ಬಹಳ ಕಷ್ಟದಾಯಕ ಆಗಿದೆ. ಅದರಲ್ಲೂ ಚರ್ಮದ ಆರೈಕೆಗೆ ಸಮಯವೇ ಸಿಗುವುದಿಲ್ಲ. ಇದರಿಂದ ತ್ವಚೆಯು ಹಾಳಾಗುತ್ತದೆ.
ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಕೊಂಚ ಸಮಯದಲ್ಲಿ ತ್ವಚೆಯ ಹೊಳಪನ್ನು ಹೆಚ್ಚಸುವುದು ಹೇಗೆ ಅಂತ ತಿಳಿಸಿ ಕೊಡುತ್ತೇವೆ ಬನ್ನಿ.

ಮನೆಯಲ್ಲಿ ತಯಾರಿಸುವ ಫೇಶಿಯಲ್ ಗಳು ಬಜೆಟ್ ಸ್ನೇಹಿ, ನೈಸರ್ಗಿಕ, ಯಾವಾಗಲೂ ತಾಜಾ, ಸಂಪೂರ್ಣವಾಗಿ ರಾಸಾಯನಿಕ ಮುಕ್ತವಾಗಿರುತ್ತವೆ. ಅವುಗಳನ್ನು ಹೇಗೆ ತಯಾರಿಸುವುದು? ಅಂತ ಹೇಳುವುದಾದರೆ, ಮೊದಲಿಗೆ ಒಂದು ಬಟ್ಟಲಿನಲ್ಲಿ ನಿಂಬೆ ರಸವನ್ನು ತೆಗೆದುಕೊಳ್ಳಿ. ಅದರಲ್ಲಿ, ಒಂದು ಚಮಚ ಜೇನುತುಪ್ಪ ಹಾಗೂ ಒಂದು ಚಮಚ ಓಟ್ಸ್ ಅನ್ನು ಸೇರಿಸಿ. ಮಿಶ್ರಣ ಮಾಡಿ ಅದನ್ನು ನಿಮ್ಮ ಮುಖಕ್ಕೆ ಲೇಪನ ಮಾಡಿಕೊಂಡು ಐದು ನಿಮಿಷಗಳ ಕಾಲ ನಿಮ್ಮ ಮುಖದಲ್ಲಿ ಈ ಮಿಶ್ರಣ ಹಾಗೆ ಇರುವಂತೆ ನೋಡಿಕೊಳ್ಳಿ. ಸ್ವಲ್ಪ ನಿಧಾನವಾಗಿ ಮಸಾಜ್ ಮಾಡಿ. ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಿ. ಆಮೇಲೆ ಐಸ್ ನಿಂದ ಮುಖವನ್ನು ಮಸಾಜ್ ಮಾಡಿಕೊಳ್ಳಿ. ಐಸ್ ನಿಮ್ಮ ಮುಖದಲ್ಲಿ ಇರುವ ರಂಧ್ರಗಳು ಮುಚ್ಚಿ ಹೋಗಲು ಸಹಾಯ ಮಾಡುತ್ತದೆ. ಇನ್ನೂ ಒಣಗಿದ ಚರ್ಮಕ್ಕೆ ನೀವು ನಿಂಬೆ ಹಣ್ಣಿನ ರಸದ ಬದಲು ಸೌತೆಕಾಯಿ ಸ್ಕ್ರಬ್ ಬಳಕೆ ಮಾಡಿಕೊಳ್ಳಬಹುದು. ನಿಂಬೆ ಹಣ್ಣು ಮುಖದಲ್ಲಿ ಎಣ್ಣೆಯ ಅಂಶವನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.

ಒಣ ಚರ್ಮಕ್ಕೆ ನಿಂಬೆ ಹಣ್ಣು ಸೂಕ್ತವಲ್ಲ. ಅದಕ್ಕಾಗಿ ಅದನ್ನು ಒಣ ಚರ್ಮ ಇರುವವರು ಬಳಕೆ ಮಾಡಬೇಡಿ. ಬದಲಾಗಿ ತಂಪುಕಾರಕ ಅಂಶವುಳ್ಳ ಸೌತೆಕಾಯಿ ಮುಖಕ್ಕೆ ಹಚ್ಚಿಕೊಳ್ಳಿ. ಇನ್ನೂ ನಿಮ್ಮ ಮುಖದ ಚರ್ಮವೂ ಆಯಿಲಿ ಸ್ಕಿನ್ ಆಗಿದ್ದರೆ ಎಣ್ಣೆಯುಕ್ತ ಚರ್ಮ ಆಗಿದ್ದರೆ ಸೌತೆಕಾಯಿ ರಸ ಮತ್ತು ಆ್ಯಪಲ್ ಸೈಡರ್ ವಿನೆಗರ್ ಮಿಶ್ರಣ ಮಾಡಿ ಬಳಕೆ ಮಾಡಬಹುದು. ಇವುಗಳ ಮಿಶ್ರಣ ಮಾಡಿ ನೇರವಾಗಿ ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ಮುಖವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಿ ನಂತರ ತಣ್ಣೀರಿನಿಂದ ತೊಳೆಯಿರಿ. ಕೊನೆಯದಾಗಿ ಮುಖದ ಮೇಲೆ ವಿಟಮಿನ್ ಸಿ ಇರುವ ಕೆನೆ ಹಚ್ಚಿಕೊಳ್ಳಿ. ಅಥವಾ ವಿಟಮಿನ್ ಸಿ ಇರುವ ಮಾತ್ರೆಗಳನ್ನು ನೀವು ಮುಖಕ್ಕೆ ಹಚ್ಚಿ ಸ್ವಲ್ಪ ಮಸಾಜ್ ಮಾಡಬಹುದು. ಇದು ಮುಖವನ್ನು ಎಣ್ಣೆಯುಕ್ತ ಮಾಡುವುದಿಲ್ಲ ಜೊತೆಗೆ ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಇನ್ನೂ ಮನೆಯಲ್ಲಿ ಸಿಗುವ ಬಾಳೆಹಣ್ಣಿನ ಸ್ಕ್ರಬ್ ಮಾಡಿಕೊಂಡು ಮುಖದ ಹೊಳಪನ್ನು ಹೆಚ್ಚಿಸಿಕೊಳ್ಳಿ. ಎರಡು ಹಣ್ಣಾದ ಬಾಳೆಹಣ್ಣು ತೆಗೆದುಕೊಂಡು, ಅದಕ್ಕೆ ಸಕ್ಕರೆ ಹಾಕಿ, ತೇವಾಂಶಕ್ಕಾಗಿ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ. ಈ ಮೃದುವಾದ ಪರಿಮಳಯುಕ್ತ ತಿರುಳನ್ನು ಐದು ನಿಮಿಷಗಳ ಕಾಲ ಮುಖಕ್ಕೆ ಹಚ್ಚಿ ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ. ನೋಡಿದ್ರಲಾ ತುಂಬಾನೇ ಸರಳವಾದ ಸುಲಭವಾದ ನೈಸರ್ಗಿಕ ಮನೆಮದ್ದು ಇವಾಗಿವೆ. ನೀವು ಕೂಡ ಟ್ರೈ ಮಾಡಿ.

Leave a Reply

Your email address will not be published. Required fields are marked *