ಮೊಸರಿನಲ್ಲಿ ಸಕ್ಕರೆ ಬೆರೆಸಬೇಕೇ? ಅಥವಾ ಉಪ್ಪು ಬೆರೆಸಬೇಕೇ? ಯಾವುದು ಉತ್ತಮ ಗೊತ್ತಾ

ಆರೋಗ್ಯ

ನಮಸ್ತೇ ಆತ್ಮೀಯ ಗೆಳೆಯರೇ, ಯಾವುದೇ ಒಂದು ಶುಭ ಕಾರ್ಯಕ್ಕೆ ಹೋಗಬೇಕಾದರೆ ಮಕ್ಕಳು ಪರೀಕ್ಷೆಗೆ ಹೋಗಬೇಕಾದರೆ ದೊಡ್ಡವರು ನಮಗೆ ಮೊಸರು ಸಕ್ಕರೆ ಮಿಶ್ರಣ ಮಾಡಿ ಅಥವಾ ಬೆಲ್ಲವನ್ನು ನಮಗೆ ತಿನ್ನಿಸಿ ಕಳುಹಿಸುತ್ತಾರೆ. ಏಕೆಂದ್ರೆ ಆ ದಿನದಲ್ಲಿ ನಾವು ಅಂದುಕೊಂಡ ಕೆಲಸ ಕಾರ್ಯಗಳು ಯಶಸ್ಸು ಕಾಣಲಿ ಎಂದು. ಮೊಸರು ಅಂದರೆ ಎಲ್ಲರೂ ಸಾಮಾನ್ಯವಾಗಿ ಇಷ್ಟವಾಗುತ್ತದೆ ಹಾಗೂ ಅದನ್ನು ಸೇವನೆ ಕೂಡ ಅಷ್ಟೇ ಇಷ್ಟ ಪಟ್ಟು ಮಾಡುತ್ತಾರೆ. ಕೆಲವರು ಮೊಸರನ್ನು ಹಾಗೆ ತಿಂದರೆ ಇನ್ನೂ ಕೆಲವು ಜನರು ಮೊಸರಿನಲ್ಲಿ ಸಕ್ಕರೆಯನ್ನು ಬೆರೆಸಿ ತಿನ್ನುತ್ತಾರೆ. ಇನ್ನೂ ಕೆಲವರು ಮೊಸರಿನಲ್ಲಿ ಉಪ್ಪು ಹಾಕಿ ಸೇವನೆ ಮಾಡುತ್ತಾರೆ.

ಇದು ಅವರ ಬಾಯಿ ರುಚಿಗೆ ಸಂಭಂದ ಪಟ್ಟ ವಿಷಯವಾಗಿದೆ. ಹೌದು ಆದರೆ ನಾವು ನಿಮಗೆ ಇಂದಿನ ಲೇಖನದಲ್ಲಿ ಮೊಸರಲ್ಲಿ ಸಕ್ಕರೆಯನ್ನು ಬೆರೆಸಬೇಕೇ? ಅಥವಾ ಉಪ್ಪು ಬೆರೆಸಿ ಸೇವನೆ ಮಾಡಬೇಕು? ಯಾವುದನ್ನು ಸೇರಿಸಿ ಸೇವನೆ ಮಾಡಿದರೆ ಲಾಭಗಳು ನಷ್ಟಗಳು ಆಗುತ್ತವೆ ಅಂತ ವೈಜ್ಞಾನಿಕವಾಗಿ ವಿವರವಾಗಿ ತಿಳಿಸಿ ಕೊಡುತ್ತೇವೆ ಬನ್ನಿ. ಆಯುರ್ವೇದದಲ್ಲಿ ಸಕ್ಕರೆ ಮತ್ತು ಮೊಸರು ಮಿಶ್ರಣ ಮಾಡಿ ಸೇವನೆ ಮಾಡುವುದರ ಹಿಂದೆ ಒಂದು ಲಾಜಿಕ್ ಇದೆ ಗೆಳೆಯರೇ. ಅದುವೇ ಮೊಸರು ಸಕ್ಕರೆ ಮಿಶ್ರಣ ತಿಂದರೆ ಬೇಗನೆ ಹಸಿವು ಆಗುವುದಿಲ್ಲ. ಹೀಗಾಗೀ ಮಾಡುವ ಕೆಲಸದಲ್ಲಿ ಗಮನ ಹರಿಸಬಹುದು. ಏಕಾಗ್ರತೆಯಿಂದ ಮಾಡಬಹುದು. ಸುಸ್ತು ಆಯಾಸ ಬಳಲಿಕೆ ಉಂಟಾಗುವುದಿಲ್ಲ. ಹಾಗೂ ಮಕ್ಕಳಿಗೆ ಪರೀಕ್ಷೆ ಮಧ್ಯದಲ್ಲಿ ಹಸಿವು ಆಗುತ್ತಿರಲಿಲ್ಲ. ಹೀಗಾಗಿ ಅವರು ಪರೀಕ್ಷೆಯನ್ನು ಆರಾಮವಾಗಿ ಬರೆಯುತ್ತಿದ್ದರು ಅವರಿಗೆ ಹಸಿವಿನ ಭಾಸವಾಗದಂತೆ ಮೊಸರು ಮತ್ತು ಸಕ್ಕರೆಯ ಮಿಶ್ರಣವು ತಡೆಯುತ್ತಿತ್ತು.

ಅದಕ್ಕಾಗಿ ಹಿರಿಯರು ಚಿಕ್ಕ ಮಕ್ಕಳಿಗೆ ಈ ರೀತಿ ತಿನ್ನೀಸಿ ಕಳುಹಿಸುತ್ತಿದ್ದರು. ಬೇಸಿಗೆಯಲ್ಲಿ ದೇಹವು ಖನಿಜಾಂಶ ಅಂತ್ತು ನೀರಿನ ಅಂಶವನ್ನು ಕಳೆದುಕೊಂಡಿರುತ್ತದೆ. ದೇಹವು ಸಂಪೂರ್ಣವಾಗಿ ನಿರ್ಜಲೀಕರಣ ಆಗಿರುತ್ತದೆ. ಸುಸ್ತು ಆಯಾಸದಿಂದ ಸಾಕಷ್ಟು ದೇಹವು ದಣಿದು ಬಂದಿರುತ್ತದೆ ದಾಹ ಹೆಚ್ಚುತ್ತದೆ. ಅಂಥಹ ಸಮಯದಲ್ಲಿ ಮೊಸರು ಮತ್ತು ಸಕ್ಕರೆಯನ್ನು ಬೆರೆಸಿ ತಿನ್ನಬಹುದು. ಇದರಿಂದ ಆಯಾಸ ಸುಸ್ತು ದಾಹ ಕಡಿಮೆ ಆಗುತ್ತದೆ.

ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಕಾಡುವ ತೀವ್ರವಾದ ಸಮಸ್ಯೆ ಅಂದರೆ ಅದು ಉರಿ ಮೂತ್ರದ ಸಮಸ್ಯೆ. ಇದು ದೇಹ ನಿರ್ಜಲೀಕರಣ ಆದಾಗ ಸಮಸ್ಯೆ ಕಂಡು ಬರುತ್ತದೆ. ಅಂತಹವರು ದೇಹದಲ್ಲಿ ಉರಿ ಮೂತ್ರ ಸಮಸ್ಯೆ ಬರದರೆ ತಡೆಯಲು ಮೊಸರು ಮತ್ತು ಸಕ್ಕರೆಯನ್ನು ಬೆರೆಸಿ ಸೇವನೆ ಮಾಡಿರಿ. ದೇಹದಲ್ಲಿ ತಕ್ಷಣವೇ ಗ್ಲೂಕೋಸ್ ಮಟ್ಟವನ್ನು ಹೆಚ್ಚು ಮಾಡುತ್ತದೆ. ಹೊಟ್ಟೆಯ ಎಲ್ಲ ಸಮಸ್ಯೆಗಳನ್ನೂ ಉಪಶಮನ ನೀಡುತ್ತದೆ. ಹಾಗೂ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಬೇಸಿಗೆಯಲ್ಲಿ ಕರುಳಿನ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ ಎಂದು ಆಯುರ್ವೇದದಲ್ಲಿ ತಿಳಿಸಿದ್ದಾರೆ.

ಆದರೆ ಮಧುಮೇಹಿಗಳು ಇದನ್ನು ಸೇವನೆ ಮಾಡಬಾರದು. ಹಾಲಿನಲ್ಲಿ ಅಧಿಕವಾದ ಪ್ರೊಟೀನ್ ಇರುತ್ತದೆ ಆದರೆ ಅದು ತಕ್ಷಣವೇ ಕರಗುವುದಿಲ್ಲ ಆದರೆ ಮೊಸರಿನಲ್ಲಿ ಇರುವ ಪ್ರೊಟೀನ್ ಗಳು ಬೇಗನೆ ಕರಗುತ್ತವೆ. ಹೀಗಾಗಿ ನಿಮ್ಮ ಜೀರ್ಣಾಂಗ ವ್ಯವಸ್ಥೆ ಕಾರ್ಯವು ಸರಿಯಾಗಿ ಕೆಲಸ ಮಾಡುತ್ತದೆ. ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ ಜೊತೆಗೆ ನ್ಯೂಮಿರೋ ದೌರ್ಬಲ್ಯವನ್ನು ಕೂಡ ಕಡಿಮೆ ಮಾಡುತ್ತದೆ.

ಅಷ್ಟೇ ಅಲ್ಲದೇ ಪುರುಷರಿಗೆ ಇದು ಹೇಳಿ ಮಾಡಿಸಿದ ಸೂಪರ್ ಫುಡ್ ಅಂತ ಹೇಳಬಹುದು. ಪುರುಷರು ನಿಯಮಿತವಾಗಿ ಮೊಸರು ಸೇವನೆ ಮಾಡಿದ್ರೆ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ ಅದರ ಪ್ರಮಾಣವನ್ನು ಕೂಡ ಅಧಿಕಗೊಳಿಸುತ್ತದೆ.

Leave a Reply

Your email address will not be published. Required fields are marked *