ಉರಿ ಮೂತ್ರ ಸಮಸ್ಯೆ ಹಳದಿ ಮೂತ್ರ ಸಮಸ್ಯೆಗೆ ಅರಳಿ ಮರದ ಕಷಾಯವನ್ನು ಮಾಡಿ ಕುಡಿಯಿರಿ ಈ ಹತ್ತು ರೋಗಗಳಿಗೂ ರಾಮಬಾಣ ಇಲ್ಲಿದೆ ಮಾಹಿತಿ

ಆರೋಗ್ಯ

ನಮಸ್ತೇ ಆತ್ಮೀಯ ಗೆಳೆಯರೇ, ಅರಳಿ ಮರ ಅಂದರೆ ದೇವಾನು ದೇವತೆಗಳ ದೇವರು ಎಂದು ನಮ್ಮ ಹಿಂದೂ ಸಂಪ್ರದಾಯದಲ್ಲಿ ಪೂಜೆಯನ್ನು ಮಾಡುತ್ತಾರೆ. ಅಷ್ಟೇ ಅಲ್ಲದೇ ಹಿಂದೂ ಧರ್ಮದಲ್ಲಿ ಇನ್ನಿತರ ಮರಗಳಿಗೆ ಪೂಜನೀಯ ಸ್ಥಾನವನ್ನು ನೀಡಲಾಗಿದೆ. ಎಲ್ಲ ಧರ್ಮಗಳಿಗಿಂತ ನಮ್ಮ ಹಿಂದೂ ಧರ್ಮದಲ್ಲಿ ದೇವರುಗಳ ಸಂಖ್ಯೆ ಹೆಚ್ಚಿದೆ ಎಂದು. ಇನ್ನೂ ನಾವು ಆಲದ ಮರವನ್ನು, ಬೇವಿನ ಮರವನ್ನು, ಬೇಲದ ಮರವನ್ನು, ಬಾಳೆ ಮರವನ್ನು, ತುಳಸಿ ಸಸ್ಯವನ್ನು, ಅಶೋಕ ಮರವನ್ನು, ಬಿದಿರಿನ ಮರವನ್ನು, ಶ್ರೀಗಂಧದ ಮರವನ್ನು, ತೆಂಗಿನ ಮರವನ್ನು, ಮಾವಿನ ಮರವನ್ನು ಮತ್ತು ಕೆಂಪು ಶ್ರೀಗಂಧದ ಮರವನ್ನು ಇತ್ಯಾದಿಗಳನ್ನು ಪೂಜಿಸಲಾಗುತ್ತದೆ. ಅದರಲ್ಲಿ ಅರಳಿ ಮರವೂ ಕೂಡ ಒಂದಾಗಿದೆ. ಅರಳಿ ಮರವನ್ನು ಅಶ್ವಥ್ ಮರವೆಂದು ಕೂಡ ಕರೆಯುತ್ತಾರೆ.

ಅರಳಿ ಮರದಿಂದ ಅನೇಕ ಬಗೆಯ ಕಾಯಿಲೆಯಿಂದ ದೂರವಿರಬಹುದು. ಹಾಗೂ ಅರಳಿ ಮರದ ಗಾಳಿಯನ್ನು ಸೇವನೆ ಮಾಡಿದರೆ ನಮ್ಮ ಆರೋಗ್ಯದಲ್ಲಿ ಬಹಳಷ್ಟು ಚೇತರಿಕೆ ಕಂಡು ಬರುತ್ತದೆ. ಹಾಗೂ ಆರೋಗ್ಯವೂ ಸದಾ ಕಾಲ ಚೆನ್ನಾಗಿರುತ್ತದೆ. ಮೊದಲಿನ ಕಾಲದಲ್ಲಿ ಜನರು ಈ ಗಿಡದ ಎಲೆಗಳನ್ನು ತೆಗೆದುಕೊಂಡು ಕಾಯಿಲೆಗಳನ್ನು ವಾಸಿ ಮಾಡುತ್ತಿದ್ದರು ಆದರೆ ಈಗಿನ ಕಾಲದಲ್ಲಿ ಮಾನವ ತನ್ನ ಆಸೆಗಾಗಿ ಮರಗಳನ್ನು ಗಿಡಗಳನ್ನು ಕಡಿದು ಹಾಕುತ್ತಿದ್ದಾನೆ. ಇಂತಹ ಗಿಡ ಮರಗಳಲ್ಲಿ ಅರಳಿ ಮರವೂ ಕೂಡ ನಶಿಸಿ ಹೋಗುತ್ತಿದೆ.

ಅರಳಿ ಮರದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರ ವಾಸ ಮಾಡುತ್ತಾರೆ ಹಾಗೂ ಅರಳಿ ಮರದ ಪ್ರತಿ ಎಲೆಗಳಲ್ಲಿ ಮುಕ್ಕೋಟಿ ದೇವಾನು ದೇವತೆಗಳು ವಾಸ ಮಾಡುತ್ತಾರೆ. ಅದಕ್ಕಾಗಿ ದೇವಾಲಯ ಬಳಿ ಇರುವ ಅರಳಿ ಮರಕ್ಕೆ ಪ್ರದಕ್ಷಿಣೆ ಹಾಕುವುದನ್ನು ನೀವು ನೋಡಿರಬಹುದು. ಹಾಗೂ ಮುತ್ತೈದೆಯರು ಅರಳಿ ಮರದ ಪೂಜೆಯನ್ನು ಮಾಡುತ್ತಾರೆ. ನಿಮಗೆ ಗೊತ್ತೇ ಅರಳಿ ಮರ ಕೇವಲ ಪೂಜೆ ಪುರಸ್ಕಾರಕ್ಕೇ ಮಾತ್ರವಲ್ಲದೆ ಆರೋಗ್ಯಕ್ಕೆ ಎಷ್ಟೊಂದು ಲಾಭವನ್ನು ಒದಗಿಸಿ ಕೊಡುತ್ತದೆ ಎಂದು. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಅರಳಿ ಮರದ ಪ್ರತಿ ರೆಂಬೇ ಕೊಂಬೆ ಎಲೆ ಬೇರು ಕಾಂಡ ವನ್ನು ಯಾವೆಲ್ಲ ಕಾಯಿಲೆಗಳಿಗೆ ಉಪಯೋಗಿಸುತ್ತಾರೆ ಅಂತ ತಿಳಿಸಿಕೊಡುತ್ತೇವೆ ಬನ್ನಿ.

ತುರಿಕೆ ಮತ್ತು ಚರ್ಮದ ಸಮಸ್ಯೆಗಳನ್ನು ನಿವಾರಿಸಲು ಅರಳಿ ಮರದ ತೊಗಟೆ ತುಂಬಾ ಪ್ರಯೋಜನಕಾರಿ. ಈ ತೊಗಟೆಯನ್ನು ಪುಡಿ ಮಾಡಿ ತುರಿಕೆ ಇರುವ ಜಾಗದಲ್ಲಿ ಹಚ್ಚುವುದರಿಂದ ಸಮಸ್ಯೆ ನಿವಾರಿಸಿಕೊಳ್ಳಬಹುದು. ಇನ್ನೂ ನೀವು ಬಿದ್ದು ಪೆಟ್ಟು ಮಾಡಿಕೊಂಡು ಗಾಯವನ್ನು ಮಾಡಿಕೊಂಡಿದ್ದರೆ ಈ ಅರಳಿ ಮರದ ಎಲೆಗಳ ಪೇಸ್ಟ್ ಅನ್ನು ಗಾಯದ ಮೇಲೆ ಹಚ್ಚಿದರೆ ಗಾಯವು ಉಪಶಮನ ಆಗುತ್ತದೆ. ಹಾಗೂ ರಕ್ತಸ್ರಾವ ನಿಲ್ಲುತ್ತದೆ. ಇನ್ನೂ ಅಸ್ತಮಾ ಸಮಸ್ಯೆ ಇರುವವರು ಮತ್ತು ಉಸಿರಾಟದ ಸಮಸ್ಯೆ ಇರುವವರು ಅರಳಿ ಮರದ ಉಪಯೋಗ ಮಾಡಲಾಗುತ್ತದೆ.

ಈ ಮರದ ತೊಗಟೆಯನ್ನು ತೆಗೆದುಕೊಂಡು ಅದನ್ನು ಒಣಗಿಸಿ ಪುಡಿ ಮಾಡಿ ನೀರಿನಲ್ಲಿ ಹಾಕಿ ಸೇವನೆ ಮಾಡುವುದರಿಂದ ಉಸಿರಾಟದ ಸಮಸ್ಯೆ ಹತೋಟಿಗೆ ಬರುತ್ತದೆ. ಇನ್ನೂ ಅಸ್ತಮಾ ರೋಗಿಗಳಿಗೆ ಈ ಗಿಡದ ಎಲೆಗಳನ್ನು ಹಾಲಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಕುಡಿಯುವುದರಿಂದ ಅಸ್ತಮಾ ಕಾಯಿಲೆ ನಿವಾರಣೆ ಆಗುತ್ತದೆ. ಇನ್ನೂ ನಿಮಗೆ ಉರಿ ಮೂತ್ರ ಸಮಸ್ಯೆ ಇದ್ದಾರೆ ಮೂತ್ರವು ಹಳದಿ ಬಣ್ಣದಲ್ಲಿ ಆಗುತ್ತಿದ್ದರೆ ಅರಳಿ ಮರದ ತೊಗಟೆಯನ್ನು ತೆಗೆದುಕೊಂಡು ಕಷಾಯ ಮಾಡಿ ಅದರಲ್ಲಿ ಜೇನುತುಪ್ಪವನ್ನು ಹಾಕಿ ಕುಡಿಯಿರಿ ಇದರಿಂದ ಉರಿಮೂತ್ರ ಸಮಸ್ಯೆ ನಿವಾರಣೆ ಆಗುತ್ತದೆ. ಹಾಗೂ ಮೂತ್ರಕ್ಕೆ ಸಂಭಂದ ಪಟ್ಟ

ಹಾಗೂ ಹೊಟ್ಟೆಗೆ ಸಂಭಂದ ಪಟ್ಟ ಎಲ್ಲ ಕಾಯಿಲೆಗಳನ್ನು ಅರಳಿ ಮರ ನೈಸರ್ಗಿಕವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಬೀದಿ ಬದಿಯ ಆಹಾರವನ್ನು ಹಾಗೂ ಪಾಸ್ಟ್ ಫುಡ್ ಜಂಕ್ ಫುಡ್ ಸೇವನೆ ಮಾಡುವುದರಿಂದ ಮಲಬದ್ಧತೆ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆ ಶುರು ಆಗುತ್ತದೆ. ಅದಕ್ಕಾಗಿ ನೀವು ಗ್ಯಾಸ್ಟ್ರಿಕ್ ಹಾಗೂ ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸಲು ಅರಳಿ ಮರದ ರಸವನ್ನು ಬೆಳಿಗ್ಗೆ ಮ್ಟ್ಟು ಸಂಜೆ ಕುಡಿಯಿರಿ. ಇದರಿಂದ ಇವೆರಡೂ ಸಮಸ್ಯೆಗಳು ಮಾಯವಾಗುತ್ತದೆ. ಜೊತೆಗೆ ಎದೆಯಲ್ಲಿ ಕಫ ಗಟ್ಟಿದ್ದರೇ ಅದು ಕೂಡ ನಿವಾರಣೆ ಆಗುತ್ತದೆ.ಇನ್ನೂ ಬಿರುಕು ಬಿಟ್ಟ ಪಾದಗಳಿಗೆ ಅರಳಿ ಮರದ ಎಲೆಗಳ ಹಾಲನ್ನು ಹಚ್ಚಿರಿ. ಇದರಿಂದ ಬಿರುಕು ಆದಷ್ಟು ಸೇರಿಕೊಳ್ಳುತ್ತವೆ. ಹಾಗೂ ಉರಿ ಕೆರೆತ ರಕ್ತಸ್ರಾವ ಕೂಡ ಕಡಿಮೆ ಆಗುತ್ತದೆ.

Leave a Reply

Your email address will not be published. Required fields are marked *