ನಮಸ್ತೆ ಪ್ರಿಯ ಓದುಗರೇ, ಈ ದೇವಿಯನ್ನು ಬೆಟ್ಟದ ದೇವಿ ಎಂದೂ ಕರೆಯುತ್ತಾರೆ. ಈ ದೇವಾಲಯದ ಮೇಲೆ 7 ಚಿನ್ನ ಲೇಪಿತ ಕಲಶಗಳನ್ನು ಇವೆ. 18 ನೇ ಶತಮಾನಕ್ಕೂ ಮೊದಲು ಈ ಶಕ್ತಿ ದೇವತೆಗೆ ಪ್ರಾಣಿ ಬಲಿಯನ್ನು ಕೊಡಲಾಗುತ್ತಿತ್ತು. ಹೌದು ಸ್ನೇಹಿತರೆ ಕರ್ನಾಟಕದ ಆ ಮಹಾನ್ ಶಕ್ತಿ ದೇವತೆಯೇ ಮೈಸೂರಿನ ಚಾಮುಂಡೇಶ್ವರಿ. ಬನ್ನಿ ಹಾಗಾದರೆ ಇಂದಿನ ಲೇಖನದಲ್ಲಿ ನಿಮಗೆ ಚಾಮುಂಡೇಶ್ವರಿ ದೇವಸ್ಥಾನದ ಹಲವಾರು ಕುತೂಹಲಕಾರಿ ವಿಷಯಗಳನ್ನು ತಿಳಿಯೋಣ. ಕರ್ನಾಟಕದ ಹಾಗೂ ನಾಡ ಆದಿ ದೇವತೆ ಎಂದೇ ನಾವೆಲ್ಲರೂ ಪೂಜಿಸಲ್ಪಡುವ ಚಾಮುಂಡೇಶ್ವರಿ ತಾಯಿಯ ಅವತಾರ ಇರುವುದು ಮೈಸೂರಿನ ಚಾಮುಂಡೇಶ್ವರಿ ದೇವಾಲಯದಲ್ಲಿ. ಸುಮಾರು 13 ಕಿಮೀ ದೂರದಲ್ಲಿರುವ ಚಾಮುಂಡೇಶ್ವರಿ ಬೆಟ್ಟದಲ್ಲಿ ಆಕೆಯ ವೈಭವ ನೋಡುವುದೇ ಚೆಂದ. ಪುರಾಣದ ಇತಿಹಾಸ ಪ್ರಸಿದ್ದ ಕ್ಷೇತ್ರವಾಗಿರುವ ಚಾಮುಂಡಿ ಬೆಟ್ಟ ತಾಯಿಯು ನೆಲೆಸಿರುವ ಒಂದು ಪುಣ್ಯ ಕ್ಷೇತ್ರವಾಗಿದೆ. ಚಾಮುಂಡೇಶ್ವರಿ ದೇವಸ್ಥಾನ ಒಂದು ಅದ್ಭುತ ಶಕ್ತಿ ಪೀಠ. ಇದನ್ನು ಕ್ರೌಂಚ ಪೀಠ ಎಂದು ಕೂಡ ಕರೆಯುತ್ತಾರೆ.
ಮೈಸೂರು ಸಂಸ್ಥಾನದ ಅರಸರು ಗತ ಕಾಲದಿಂದ ಸಹ ಈ ದೇವಿಯನ್ನು ಆರಾಧಿಸುತ್ತಾ ಬರುತ್ತಿದ್ದಾರೆ. ರಂಬ ಎಂಬ ಅಸುರ ಮಹಿಷಿ ಎಂಬ ರೂಪದ ರಾಕ್ಷಸೀ ನ ನೋಡಿ ಮೋಹಗೊಂಡ ಅವಳನ್ನು ಮದುವೆ ಆಗುತ್ತಾನೆ. ಇವರಿಬ್ಬರ ಮಿಲನದಿಂದ ಹುಟ್ಟಿದವನು ಆ ಮಹಿಷಾಸುರ. ಬಲಶಾಲಿ ಆದ ಮಹಿಷಾಸುರನನ್ನು ಕಂಡು ಲೋಕದ ಜನರು ಮಹಿಷಾಸುರ ನಿಂದಾ ನರಕ ಯಾತನೆ ಅನುಭವಿಸುತ್ತಿದ್ದರು. ಕೊನೆಗೆ ಎಲ್ಲಾ ದೇವತೆಗಳು ತ್ರಿಮೂರ್ತಿಗಳ ಬಳಿ ಸೇರಿ ವಾಸ್ತವ ಸ್ಥಿತಿ ತಿಳಿಸಿದಾಗ ಎಲ್ಲಾ ಶಕ್ತಿಯನ್ನು ಒಂದೆಡೆ ಧಾರೆ ಎರೆಯುತ್ತಾರೆ. ಆ ಶಕ್ತಿಯಿಂದ ಪ್ರತ್ಯಕ್ಷಳಾದ ದೇವತೆಯೇ ಆ ಚಾಮುಂಡಿ ದೇವಿ. ಹೀಗೆ ಪ್ರತ್ಯಕ್ಷಳಾದ ಚಾಮುಂಡಿ ಮಹಿಷಾಸುರ ಬಳಿ ತೆರಳಿ ಭೀಕರ ಯುದ್ಧ ಮಾಡಿ ಸತತ 9 ದಿನಗಳ ಕಾಲ ಯುದ್ಧ ನಡೆದು ಕೊನೆಗೆ ಚಾಮುಂಡಿ ದೇವಿ ಮಹಿಷಾಸುರನನ್ನು ವಿಜಯದಶಮಿ ದಿನ ಸಂಹಾರ ಮಾಡುತ್ತಾಳೆ. ಆದ್ದರಿಂದ ನವರಾತ್ರಿ ಹಬ್ಬವನ್ನು ಇಲ್ಲಿ ವಿಜೃಭನೆ ಇಂದ ಆಚರಿಸುತ್ತಾರೆ. ಈ ಯುದ್ಧ ಚಾಮುಂಡಿ ಬೆಟ್ಟದಲ್ಲಿ ಜರಿಗಿರುವ ಪರಿಣಾಮ ಈ ಬೆಟ್ಟವನ್ನು ಆಯ್ಕೆ ಮಾಡಿ ಅಲ್ಲಿ ಶಾಶ್ವತವಾಗಿ ದೇವಿ ನೆಲೆಸಿದಳು ಎಂದು ಪುರಾಣ ಸಾರುತ್ತದೆ. ಚಾಮುಂಡೇಶ್ವರಿ ಈ ದೇವಾಲಯ ಹೊಯ್ಸಳ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ. ಹೊಯ್ಸಳರ ದೊರೆ ವಿಷ್ಣುವರ್ಧನ ನಿಂದಾ ನಿರ್ಮಿಸಲಾಗಿದೆ. ವಿಜಯನಗರ ಸಾಮ್ರಾಜ್ಯ ಹಾಗೂ ಮೈಸೂರು ಅರಸರಿಂದ ಇದು ಮತ್ತಷ್ಟು ನವಿನಿಕರಣ ಮಾಡಲಾಗುತ್ತೆ. ಚಾಮುಂಡೇಶ್ವರಿ ದೇವಿ ಪೌರಾಣಿಕ ಹಿನ್ನೆಲೆಯುಳ್ಳ ದೇವತೆ ಆಗಿದ್ದು, ದೇವಿ ಮಹಾತ್ಮೆ ಮೂಲಕ ದೇವತೆ ಆಗಿದ್ದಾಳೆ. ಸ್ಕಂದ ಪುರಾಣ, ಮತ್ತಿತರ ಪ್ರಾಚೀನ ಕೃತಿಗಳು 8 ಬೆಟ್ಟಗಳಿಂದ ಸುತ್ತುವರಿದ ಕ್ಷೇತ್ರ ಎಂಬ ಪವಿತ್ರ ಕ್ಷೇತ್ರವನ್ನು ಉಲ್ಲೇಖಿಸುತ್ತದೆ. ಅದರ ಪಶ್ಚಿಮ ಭಾಗದಲ್ಲಿ ಇರುವ ಚಾಮುಂಡಿ ಬೆಟ್ಟ 8 ಬೆಟ್ಟಗಳ ಪೈಕಿ ಒಂದಾಗಿದೆ. ನವರಾತ್ರಿ ಬಂದ್ರೆ ಸಾಕು ಇಡೀ ಮೈಸೂರು ನಗರ ಸಡಗರ ಹಾಗೊ ಸಂಬ್ರಮ ಹೊಲನಿನಲ್ಲಿ ತೇಲುತ್ತದೆ. ಇನ್ನೂ ಶಕ್ತಿ ದೇವಿಯ ಆರಾಧನೆ ನಡೆಯುವ ಈ 9 ದಿನಗಳಲ್ಲಿ ಚಾಮುಂಡಿ ಬೆಟ್ಟಕ್ಕೆ ಭಕ್ತರು ಅಪಾರ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.
ಸಮುದ್ರ ಮಟ್ಟದಿಂದ ಸುಮಾರು 3000 ಸಾವಿರ ಅಡಿಗಳಿಗಿಂತ ಎತ್ತರ ಇರುವ ಬೆಟ್ಟದ ಮೇಲೆ ನೆಲೆಸಿರುವ ಚಾಮುಂಡಿ ದೇವಿಯ ಮೈಸೂರು ಸಂಸ್ಥಾನದ ಆದಿ ದೇವತೆ ಆಗಿದ್ದಾಳೆ. ಈ ಮಾತೆಯನ್ನು ಬೆಟ್ಟದ ತಾಯಿ ಎಂದು ಜನ ಕರೆಯುತ್ತಾರೆ. ಇತಿಹಾಸ ಹಾಗೂ ಶಾಸನಗಳ ಅಧ್ಯಯನ ಮಾಡಿದಾಗ ಈ ಪ್ರದೇಶದ ಮಾಹಿತಿ ದೊರೆಯುತ್ತದೆ. ಅವುಗಳ ಪ್ರಕಾರ 10 ನೇ ಶತಮಾನದಲ್ಲಿ ಈ ಕ್ಷೇತ್ರ ನಾಡಿನ ಪುಣ್ಯ ಕ್ಷೇತ್ರವೂ ಆಗಿತ್ತು. ಆಗ ಈ ಕ್ಷೇತ್ರವನ್ನು ಮಬ್ಬಳದ ಕ್ಷೇತ್ರ ಹಾಗೂ ಅರ್ಬಳದ ಕ್ಷೇತ್ರ ಎಂದು ಕರೆಯಲಾಗುತ್ತಿತ್ತು. ಕಾರಣ ಈ ಕ್ಷೇತ್ರದ ಮಹಾಬಲೇಶ್ವರ ದೇವಸ್ಥಾನ. ಕಾಲಾಂತರದಲ್ಲಿ ಮೈಸೂರು ಒಡೆಯರು ಈ ಬೆಟ್ಟದ ಮೇಲೆ ನೆಲೆಸಿರುವ ದೇವಿಯನ್ನು ಅಂದ್ರೆ ಮಹಿಷಾಸುರ ಮರ್ಧಿನಿ ನ ತಮ್ಮ ಕುಲ ದೇವತೆಯಾಗಿ ಸ್ವೀಕಾರ ಮಾಡುತ್ತಾರೆ. ಮೈಸೂರು ಅರಸರು ಆಕೆಯನ್ನು ಕುಲ ದೈವವಾಗಿ ಸ್ವೀಕರಿಸಿದ ನಂತರ ಮಾತೆ ಚಾಮುಂಡೇಶ್ವರಿ ಇಡೀ ನಾಡನ್ನು ಸಲಹುವ ಮಾತೆ ಆಗುತ್ತಾಳೆ. ನಂತರ ಮೈಸೂರಿನ ಅರಸರು ದಸರಾ ಉತ್ಸವ ಆರಂಭಿಸಿದಾಗ ಮೊದಲ ಪೂಜೆ ಈ ದೇವಿಗೆ ಇದೇ ಬೆಟ್ಟದಲ್ಲಿ ದಸರಾ ಉತ್ಸವಕ್ಕೆ ಚಾಲನೆ ನಡೆಯುತ್ತದೆ. ಇದೆ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿದ್ದು ಇಂದಿಗೂ ಸಹ ದಸರಾ ಉತ್ಸವ ಚಾಲನೆ ಬೆಟ್ಟದ ತಾಯಿಯ ಆರಾಧನೆ ನಂತರವೇ ಆರಂಭ ಆಗುತ್ತೆ. ಇನ್ನೂ ಈ ಬೆಟ್ಟಕ್ಕೆ ಹೋಗುತ್ತಿದ್ದ ಭಕ್ತರಿಗೆ ನಡೆದು ಹೋಗಲು ಕಷ್ಟವನ್ನು ಅರಿತ ಅಂದಿನ ಒಡೆಯರು ದೊಡ್ಡ ದೇವರಾಜ ಒಡೆಯರು ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲುಗಳನ್ನು ನಿರ್ಮಿಸಿ ಕಾಲ್ನಡಿಗೆಯಲ್ಲಿ ಹೋಗುವ ಭಕ್ತರಿಗೆ ಅನುಕೂಲ ಮಾಡಿಕೊಟ್ಟರು. ಮೈಸೂರು ಒಡೆಯರು ಮೂಲ ದೇಗುಲಕ್ಕೆ ಗೋಪುರ ನಿರ್ಮಾಣ ಮಾಡಿಸಿದ್ದಾರೆ. ಸಾಧ್ಯವಾದರೆ ಒಮ್ಮೆ ನಿಮ್ಮ ಜೀವನದಲ್ಲಿ ಈ ಚಾಮುಂಡಿ ದೇಗುಲಕ್ಕೆ ಭೇಟಿ ನೀಡಿ ತಾಯಿಯ ಕೃಪೆಗೆ ಪಾತ್ರರಾಗಿ. ಶುಭದಿನ.