ನಮಸ್ತೇ ಪ್ರಿಯ ಓದುಗರೇ, ನಿಮ್ಮ ಮುಖ ಎಣ್ಣೆಯುಕ್ತದಿಂದ ಕೂಡಿದೆಯೇ? ಹಾಗಾದರೆ ನಾವು ತಿಳಿಸುವ ಈ ಮನೆಮದ್ದುಗಳನ್ನು ಉಪಯೋಗಿಸಿ ನೋಡಿ ಖಂಡಿತವಾಗಿ ನಿಮ್ಮ ಮುಖದಲ್ಲಿ ಎಣ್ಣೆ ಪ್ರಮಾಣ ಕಡಿಮೆ ಆಗುತ್ತದೆ ಜೊತೆಗೆ ನಿಮ್ಮ ಮುಖ ಕಳೆ-ಕಳೆಯಾಗಿ ಕಾಣಲು ಶುರು ಆಗುತ್ತದೆ. ಎಣ್ಣೆ ಮುಖ ಇದ್ದರೆ ನಾವು ಎಷ್ಟೇ ಮೇಕಪ್ ಮಾಡಿಕೊಂಡರು ಕೂಡ ಅದು ಜಾರಿ ಹೋಗುತ್ತದೆ. ಜೊತೆಗೆ ಮುಖವೂ ಸುಂದರವಾಗಿ ಕಾಣುವುದಿಲ್ಲ. ಆಯಿಲ್ ಸ್ಕಿನ್ ಇದ್ದರೆ ಅದರ ಪಜೀತಿ ಎಣ್ಣೆ ಮುಖವನ್ನು ಹೊಂದಿರುವವರಿಗೆ ಮಾತ್ರ ಗೊತ್ತಿರುತ್ತದೆ. ಕೆಲವರು ಹಾಸ್ಯವನ್ನು ಮಾಡುತ್ತಾರೆ ನಿನ್ನ ಮುಖವೂ ಎಣ್ಣೆಯಿಂದ ಕೂಡಿರುವ ಉದ್ದಿನ ವಡೆ ಹಾಗೆ ಆಗಿದೆ ಎಂದು. ಇದರಿಂದ ಮನಸ್ಸಿಗೆ ಮುಜುಗರ ಆಗುತ್ತದೆ. ಹೊರಗಡೆ ಸ್ನೇಹಿತರೊಂದಿಗೆ ಓಡಾಡಲು ಮನಸ್ಸು ಕೂಡ ಆಗುವುದಿಲ್ಲ. ಜೊತೆಗೆ ಸ್ನೇಹಿತರ ಜೊತೆಗೆ ಹೋದಾಗ ಪದೇ ಪದೇ ಫೇಸ್ ವಾಶ್ ಮಾಡಿಕೊಳ್ಳಬೇಕಾಗುತ್ತದೆ. ಇದರಿಂದ ತುಂಬಾನೇ ಕಿರಿಕಿರಿ ಅನ್ನಿಸುತ್ತದೆ. ಹಾಗಾದ್ರೆ ಇವುಗಳಿಗೆಲ್ಲವು ಒಂದು ಫುಲ್ ಸ್ಟಾಪ್ ಇಡಲು ನಾವು ನಿಮಗೆ ತುಂಬಾನೇ ಸರಳವಾದ ಮನೆಯಲ್ಲಿ ಮಾಡಿಕೊಳ್ಳುವ ಮನೆಮದ್ದು ತಿಳಿಸಿಕೊಡುತ್ತೇವೆ ಬನ್ನಿ.
ಬೆಳಿಗ್ಗೆ ಎದ್ದು ತಕ್ಷಣ ನೀವು ಸುಂದರವಾಗಿ ಕಾಣಲು ರೆಡಿ ಆಗಿತ್ತೀರಿ ಫ್ರೆಶ್ ಆಗಿ ಕಾಣುತ್ತೀರಿ ಆದರೆ ಸ್ವಲ್ಪ ಸಮಯದ ಬಳಿಕ ನಿಮ್ಮ ಮುಖವೂ ಎಣ್ಣೆಯಿಂದ ಕೂಡಿರುತ್ತದೆ. ಇಷ್ಟೇ ಅಲ್ಲದೇ ಎಣ್ಣೆ ಅಂಶವಿರುವ ಮುಖವೂ ಮತ್ತಷ್ಟು ಹಾನಿಗೆ ಒಳಗಾಗುತ್ತದೆ. ಅವರ ಮುಖದ ಮೇಲೆ ಪದೇ ಪದೇ ಗುಳ್ಳೆಗಳು ಆಗುತ್ತವೆ. ಗುಳ್ಳೆಗಳು ಮೂಡುತ್ತವೆ ಹಾಗೂ ಅವುಗಳು ಒಡೆದು ಕಲೆಗಳು ಹಾಗೆ ಉಳಿದು ಬಿಡುತ್ತವೆ. ಮೊದಲನೆಯ ಮನೆಮದ್ದು ಬಗ್ಗೆ ಹೇಳುವುದಾದರೆ, ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ತೆಗೆದು ಅದನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ. ಅದರಲ್ಲಿ ಕಡಲೆ ಹಿಟ್ಟು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಕಿತ್ತಳೆ ಒಣಗಿದ ಪುಡಿ ಸಿಗದೇ ಇದ್ದರೇ ಅದರ ರಸವನ್ನು ತೆಗೆದುಕೊಳ್ಳಿ ಅಥವಾ ಹಣ್ಣಿನ ಪೇಸ್ಟ್ ಮಾಡಿ ಉಪಯೋಗಿಸಿ. ಬಳಿಕ ನಿಮ್ಮ ಮುಖವನ್ನು ಚೆನ್ನಾಗಿ ತೊಳೆದು ಕೊಳ್ಳಿ. ತದ ನಂತರ ಈ ಪೇಸ್ಟ್ ಅನ್ನು ನಿಮ್ಮ ಮುಖದ ಮೇಲೆ ಲೇಪಿಸಿಕೊಳ್ಳಿ.
ಇಪ್ಪತ್ತು ನಿಮಿಷಗಳ ಕಾಲ ಹಾಗೆ ಒಣಗಲು ಬಿಡಿ ಆಮೇಲೆ ತಣ್ಣೀರಿನಿಂದ ಮುಖವನ್ನು ತೊಳೆದುಕೊಂಡು ರೋಸ್ ವಾಟರ್ ಅನ್ನು ಹಚ್ಚಿಕೊಳ್ಳಿ. ಈ ರೀತಿ ಮಾಡಿದರೆ ಮುಖದಲ್ಲಿ ಆಗುವ ಬದಲಾವಣೆ ಅನ್ನು ನೀವೇ ಕಾಣುವಿರಿ. ಹೌದು ಇದು ನಿಮ್ಮ ಆಯಿಲ್ ಸ್ಕಿನ್ ಅನ್ನು ತೆಗೆದು ಹಾಕುತ್ತದೆ. ಇನ್ನೂ ಎರಡನೆಯದು ಮುಲ್ತಾನಿ ಮಿಟ್ಟಿ. ಹೌದು ಇದು ಎಣ್ಣೆ ಚರ್ಮಕ್ಕೆ ತುಂಬಾನೇ ಅದ್ಭುತವಾದ ಮನೆಮದ್ದು. ಇದು ತಕ್ಷಣವೇ ಆಯಿಲ್ ಸ್ಕಿನ್ ಅನ್ನು ಡ್ರೈ ಸ್ಕಿನ್ ಆಗಿ ಮಾಡುತ್ತದೆ. ಈ ಮುಲ್ತಾನಿ ಮಿಟ್ಟಿ ನಲ್ಲಿ ಸ್ವಲ್ಪ ರೋಸ್ ವಾಟರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅದನ್ನು ನಿಮ್ಮ ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. ನಂತರ ತನ್ನೀರಿಣಿಂದ ತೊಳೆಯಿರಿ ಇದರಿಂದ. ನಿಮ್ಮ ಮುಖವೂ ಸಂಪೂರ್ಣವಾಗಿ ಎಣ್ಣೆ ಮುಕ್ತವಾಗುತ್ತದೆ. ನಿಮ್ಮ ಮುಖದ ಸೌಂದರ್ಯವು ಹೆಚ್ಚುತ್ತದೆ. ಎಣ್ಣೆ ಚರ್ಮ ತೆಗೆದು ಹಾಕುವುದರಿಂದ ಮುಖದ ಮೇಲೆ ಮೊಡವೆ ಗಳು ಕೂಡ ಮೂಡುವುದಿಲ್ಲ. ಅಷ್ಟೊಂದು ಪರಿಣಾಮಕಾರಿ ಈ ಎರಡು ಮನೆಮದ್ದು ಗಳು ನಿಮಗೆ ಯಾವುದು ಸುಲಭ ಅನ್ನಿಸುತ್ತದೆ ಆ ಮನೆಮದ್ದು ಟ್ರೈ ಮಾಡಿ ಶುಭದಿನ.