ಇಂತಹ ಸಸ್ಯಗಳನ್ನು ಬೆಳೆಸುವುದರಿಂದ ಕೀಟಗಳು ಸೊಳ್ಳೆಗಳು ಓಡಿ ಹೋಗುತ್ತವೆ. ಅವು ಯಾವುವು ಅಂತೀರಾ??? ಇಲ್ಲಿದೆ ಅದರ ಸಂಪೂರ್ಣ ಮಾಹಿತಿ.

ಉಪಯುಕ್ತ ಮಾಹಿತಿ

ನಮಸ್ತೇ ಪ್ರಿಯ ಓದುಗರೇ, ನಮ್ಮ ಸುತ್ತ ಮುತ್ತಲೂ ವಾತಾವರಣ ಚೆನ್ನಾಗಿದ್ದರೆ ಹಾಗೂ ಪರಿಸರ ಹಚ್ಚ ಹಸಿರು ಆಗಿದ್ದರೆ ತುಂಬಾನೇ ಸಂತೋಷವಾಗುತ್ತದೆ ಜೊತೆಗೆ ನಾವು ಆರೋಗ್ಯಕರವಾಗಿ ಕೂಡ ಇರುತ್ತದೆ. ಅಷ್ಟೇ ಅಲ್ಲದೇ ಸುತ್ತ ಮುತ್ತಲಿನ ಪರಿಸರ ಚೆನ್ನಾಗಿದ್ದರೆ ಸೊಳ್ಳೆ ಕೀಟಗಳ ಕಾಟವೂ ಕೂಡ ಇರುವುದಿಲ್ಲ. ಹೌದು ನಮ್ಮ ಪ್ರಕೃತಿಯಲ್ಲಿ ಬಹಳ ವಿಸ್ಮಯ ಹಾಗೂ ವಿಚಿತ್ರವಾದ ಮತ್ತು ರಹಸ್ಯಮಯ ಗಿಡಗಳು ಇವೆ. ಅವುಗಳಿಂದ ನಮಗೆ ಸಾಕಷ್ಟು ಪ್ರಯೋಜನಗಳು ಆಗುತ್ತವೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಮನೆಯ ಸುತ್ತ ಮುತ್ತಲು ಯಾವ ಗಿಡಗಳನ್ನು ಬೆಳೆಸಿದರೆ ಕೀಟಗಳಿಂದ ಸೊಳ್ಳೆಗಳಿಂದ ಮುಕ್ತಿ ಪಡೆಯಬಹುದು ಎಂದು. ಮೊದಲಿಗೆ ತುಳಸಿ ಸಸ್ಯ. ನಮ್ಮ ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ಬಹಳ ಪವಿತ್ರವಾದ ಸ್ಥಾನವಿದೆ. ಹೌದು ಹಿಂದೂಗಳ ಮನೆಯಲ್ಲಿ ತುಳಸಿ ಗಿಡವಿಲ್ಲದೆ ಮನೆಗಳಿಲ್ಲ ಅಂತ ಹೇಳಿದರೆ ತಪ್ಪಾಗಲಾರದು ಹೌದು ನಾವು ತುಳಸಿ ಮಾತೆಯನ್ನು ಪ್ರತಿನಿತ್ಯವೂ ಪೂಜೆಯನ್ನು ಮಾಡುತ್ತೇವೆ. ಆದರೆ ನಿಮಗೆ ಗೊತ್ತೇ ಈ ತುಳಸಿ ಗಿಡವೂ ಪೂಜೆಗೆ ಮಾತ್ರವಲ್ಲದೆ ಆರೋಗ್ಯಕ್ಕೆ ಕೂಡ ಒಳ್ಳೆಯದು ಎಂದು. ಹಾಗೂ ಸೊಳ್ಳೆಗಳ ಕಾಟವೂ ಕೂಡ ತಪ್ಪುತ್ತದೆ ಅಂತ ಹೇಳಲಾಗುತ್ತದೆ. ತುಳಸಿ ಗಿಡದ ಎಲೆಗಳನ್ನು ನೋಡಿ ಸೊಳ್ಳೆಗಳು ಓಡಿ ಹೋಗುತ್ತವೆ.

 

ತದ ನಂತರ ಈರುಳ್ಳಿ ಹಾಗೂ ಬೆಳ್ಳುಳ್ಳಿ. ಈ ಎರಡು ಸಸ್ಯಗಳನ್ನು ಮನೆಯ ಮುಂದೆ ಬೆಳೆಯುವುದರಿಂದ ಸೊಳ್ಳೆಗಳ ಕಾಟ ತಪ್ಪುತ್ತದೆ. ಯಾಕೆಂದರೆ ಬೆಳ್ಳುಳ್ಳಿ ಮತ್ತು ಈರುಳ್ಳಿ ಬಲು ಗಾಢವಾದ ದೂರ್ವಾಸನೆ ಹೊಂದಿರುತ್ತದೆ. ಹೀಗಾಗಿ ಇವುಗಳ ವಾಸನೆಯನ್ನು ಸೊಳ್ಳೆಗಳು ಕೀಟಗಳು ಸಹಿಸುವುದಿಲ್ಲ. ಒಂದು ವೇಳೆ ಮನೆಯ ಮುಂದೆ ಜಾಗವಿಲ್ಲವೆಂದರೆ, ಈರುಳ್ಳಿ ಮತ್ತು ಬೆಳ್ಳುಳ್ಳಿ ಕತ್ತರಿಸಿ ಎಸಳುಗಳನ್ನು ಸೊಳ್ಳೆ ಕೀಟಗಳು ಇರುವ ಜಾಗದಲ್ಲಿ ಇಡುವುದರಿಂದ ಸೊಳ್ಳೆಗಳು ಕೀಟಗಳು ಮನೆಯ ಹತ್ತಿರ ಸುಳಿಯುವುದಿಲ್ಲ. ಇನ್ನೂ ನಿಂಬೆ ಹಣ್ಣಿನ ಗಿಡ. ಹೌದು ಎಲ್ಲ ಗಿಡಗಳಲ್ಲಿ ನಿಂಬೆ ಹಣ್ಣು ಸುವಾಸನೆಗೆ ಬಹಳ ಹೆಸರು ವಾಸಿಯಾದ ಗಿಡಗಾಗಿದೆ ಅಂತ ಹೇಳಿದರೆ ತಪ್ಪಾಗಲಾರದು. ಇದು ನಿಮ್ಮ ಮನೆಯ ಮುಂದೆ ಇದ್ದರೆ ನಿಮ್ಮ ಆರೋಗ್ಯಕ್ಕೆ ಕೂಡ ಒಳ್ಳೆಯದು ಜೊತೆಗೆ ಕೀಟಗಳನ್ನು ಸೊಳ್ಳೆಗಳನ್ನು ಹೋಗಲಾಡಿಸಲು ದಿವ್ಯ ಔಷಧ. ಅಥವಾ ನಿಮ್ಮ ಮನೆಯ ಮುಂದೆ ಗಿಡ ಬೆಳೆಸಲು ನಿರ್ಧಿಷ್ಟವಾದ ಸ್ಥಳ ಇಲ್ಲವಾದರೆ ನಿಂಬೆ ಹಣ್ಣು ಎರಡು ಹೊಳು ಮಾಡಿ ಅದರಲ್ಲಿ ಎಷ್ಟು ಸಾಧ್ಯ ಅಷ್ಟು ಲವಂಗ ಚುಚ್ಚಿ ಸೊಳ್ಳೆಗಳು ಇರುವ ಜಾಗದಲ್ಲಿ ಇರಿಸಿ.

 

ಇನ್ನೂ ಸೊಳ್ಳೆಗಳನ್ನು ಹೋಗಲಾಡಿಸಲು ರೋಜಮರಿ ಸಸ್ಯ ನಿವಾರಕ ಅಂತ ಹೇಳಬಹುದು. ಇನ್ನೂ ಪುದೀನಾ ಸಸ್ಯ. ಹೌದು ಇದು ಹಚ್ಚ ಹಸಿರು ಆಗಿ ಅತಿ ಬೇಗನೆ ಬೆಳೆಯುವ ಸಸ್ಯವಾಗಿದೆ. ಹೀಗಾಗಿ ಇದರ ಆರೈಕೆ ಬಹಳ ಉತ್ತಮ. ಆದರೆ ಇದರ ವಾಸನೆ ತುಂಬಾನೇ ಸುಮಧುರ ಆಗಿರುತ್ತದೆ. ಇದರ ವಾಸನೆ ಸೊಳ್ಳೆಗಳಿಗೆ ಆಗಿ ಬರುವುದಿಲ್ಲ. ಈ ಸಸ್ಯ ಇದ್ದ ಕಡೆಗೆ ಸೊಳ್ಳೆಗಳು ಕೀಟಗಳು ಹತ್ತಿರ ಕೂಡ ಬರುವುದಿಲ್ಲ. ಸಾಧ್ಯವಾದರೆ ನಿಮ್ಮ ಮನೆಯ ಮುಂದೆ ಸ್ವಲ್ಪ ಮಟ್ಟಿಗೆ ಸ್ವಲ್ಪ ಜಾಗದಲ್ಲಿ ಬೆಳೆಸಬಹುದು. ಜೊತೆಗೆ ಲವಂಗ ಗಿಡವೂ ಕೂಡ ಸೊಳ್ಳೆ ನಿವಾರಕ ಗಿಡ ಅಂತ ಹೇಳಬಹುದು ಏಕೆಂದರೆ ಲವಂಗ ಹಾಗೂ ಅದರ ಎಲೆ ಮತ್ತು ಮೊಗ್ಗುಗಳಲ್ಲಿ ಭಾರೀ ಪ್ರಮಾಣದ ವಾಸನೆ ಅಡಗಿರುತ್ತದೆ. ಹೀಗಾಗಿ ಮನೆಯ ಮುಂದೆ ಲವಂಗದ ಸಸ್ಯ ಬೆಳೆಸಿ ಇದರಿಂದ ಸೊಳ್ಳೆಗಳು ಬರುವುದಿಲ್ಲ.

Leave a Reply

Your email address will not be published. Required fields are marked *