ಮದುವೆ ಆದ ಒಂದೇ ತಿಂಗಳಿನಲ್ಲಿ ಗುಡ್ ನ್ಯೂಸ್ ಕೊಡಲು ಇಷ್ಟ ಪಡುವ ನವ ದಂಪತಿಗಳಿಗೆ ಇಲ್ಲಿದೆ ಸೂಪರ್ ಇನ್ಫರ್ಮೇಷನ್!!!

ಉಪಯುಕ್ತ ಮಾಹಿತಿ

ನಮಸ್ತೇ ಪ್ರಿಯ ಓದುಗರೇ, ಪ್ರತಿಯೊಂದು ಹೆಣ್ಣೂ ಮದುವೆ ಆದ ಮೇಲೆ ತಾನು ತಾಯಿಯಾಗಬೇಕು ಅಂತ ಆಸೆ ಪಡುತ್ತಾಳೆ. ಹೆಣ್ಣಿನ ಜೀವನದಲ್ಲಿ ಇದೊಂದು ಪ್ರಮುಖವಾದ ಘಟ್ಟ ಅಂತ ಹೇಳಬಹುದು. ತಾಯ್ತನ ಅನ್ನುವುದು ದೇವರು ಪ್ರಾಕೃತಿಕವಾಗಿ ನೀಡಿರುವ ಒಂದು ದಿವ್ಯ ಶಕ್ತಿ ಅಂತ ಹೇಳಿದರೆ ತಪ್ಪಾಗಲಾರದು. ನಿಮ್ಮ ಜೀವನದಲ್ಲಿ ಇದೊಂದು ಹೊಸದಾದ ಅನುಭವ ಅಂತ ಹೇಳಬಹುದು. ಮಗು ಮಾಡಿಕೊಳ್ಳುವುದಕ್ಕೆ ಪೂರ್ಣವಾದ ಸಮ್ಮತಿ ಇರಬೇಕು ಜೊತೆಗೆ ಸ್ವೀಕಾರ ಕೂಡ ಇರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಮದುವೆ ಆದ ದಂಪತಿಗಳು ಫ್ಯಾಮಿಲಿ ಪ್ಲಾನಿಂಗ್ ಅಂತ ಮಾಡಿಕೊಳ್ಳುತ್ತಾರೆ. ಮದುವೆ ಆದ ತಕ್ಷಣವೇ ಮಕ್ಕಳು ಬೇಡ ಅಂತ ಕೆಲ ದಂಪತಿಗಳು ಮುಂದೆ ಹಾಕುತ್ತಾರೆ. ಆದರೆ ಅದೇ ಮುಂದೆ ದೊಡ್ಡ ಸಮಸ್ಯೆ ಆಗಿ ಪರಿಣಮಿಸುತ್ತದೆ. ಆದರೆ ಮೊದಲಿನ ಕಾಲದಲ್ಲಿ ಈ ರೀತಿ ಇರಲಿಲ್ಲ ಗೆಳೆಯರೇ, ಮದುವೆ ಆದ ಕೂಡಲೇ ಹೆಣ್ಣು ಮಕ್ಕಳು ಬಸುರಿ ಆಗುತ್ತಿದ್ದರು. ತನ್ನಿಂದ ತಾನೇ ಮಕ್ಕಳು ಹುಟ್ಟುತ್ತಿದ್ದವು ಆಸ್ಪತ್ರೆಯ ವೈದ್ಯರ ಅವಶ್ಯಕತೆಯೂ ಇರುತ್ತಿರಲಿಲ್ಲ. ಆದರೆ ಈಗಿನ ಕಾಲ ಬದಲಾಗಿದೆ. ಮೊದಲಿನ ಕಾಲದಂತೆ ಇಲ್ಲ ಗೆಳೆಯರೇ. ಇನ್ನೂ ಕೆಲವರಿಗೆ ಮಕ್ಕಳು ಬೇಗನೆ ಮಾಡಿಕೊಳ್ಳುವ ಆಸೆ ಇರುತ್ತದೆ ಆದರೆ ಅವರು ಬೇಗನೆ ಕನ್ಸೀವ್ ಆಗುವುದಿಲ್ಲ. ಹೀಗಾಗಿ ದಂಪತಿಗಳು ಬಹಳ ನಿರಾಸೆ ಆಗುತ್ತಾರೆ. ಅದಕ್ಕೆ ಅಷ್ಟೊಂದು ಚಿಂತೆ ಮಾಡುವ ಅಗತ್ಯವಿಲ್ಲ ಗೆಳೆಯರೇ. ನಾವು ತಿಳಿಸುವ ಹಾಗೆ ನೀವು ಸರಿಯಾದ ರೀತಿಯಲ್ಲಿ ಮಾಡಿಕೊಂಡು ಬಂದರೆ ಖಂಡಿತವಾಗಿ ನೀವು ತಾಯಿಯಾಗಬಹುದು. ಬಹಳ ಬೇಗನೆ ನಿಮ್ಮ ಜೀವನದಲ್ಲಿ ಹೊಸ ವ್ಯಕ್ತಿಯ ಆಗಮನ ಮಾಡಿಕೊಳ್ಳಬಹುದು ಅದು ಹೇಗೆ ಅಂತೀರಾ ಹಾಗಾದರೆ ಇಂದಿನ ಲೇಖನದಲ್ಲಿ ತಿಳಿಯೋಣ ಬನ್ನಿ.

 

ಹೆಣ್ಣಿನ ಸೃಷ್ಟಿ ಅನ್ನುವುದು ದೇವರು ಮಾಡಿದ ಒಂದು ಅದ್ಭುತವಾದ ಕಲೆ ಅಂತ ಹೇಳಬಹುದು. ಎಲ್ಲ ನೋವುಗಳನ್ನು ತಡೆದುಕೊಳ್ಳುವ ಶಕ್ತಿಯನ್ನು ಆಕೆಯಲ್ಲಿ ತುಂಬಿ ಸೃಷ್ಟಿ ಮಾಡಿದ್ದಾನೆ ದೇವರು. ಹೆಣ್ಣು ಕೆಲವು ಆಂತರಿಕ ಸಮಸ್ಯೆಗಳಿಂದ ಗರ್ಭ ಧಾರಣೆ ಮಾಡಲು ಸಾಧ್ಯವಾಗುವುದಿಲ್ಲ. ಕೆಲವರಂತೂ ಮೂರು ನಾಲ್ಕು ವರ್ಷವಾದರೂ ಕೂಡ ಗರ್ಭಿಣಿ ಆಗಿರುವುದಿಲ್ಲ. ಇಂತಹ ಸಮಸ್ಯೆ ಹೆಣ್ಣಿಗೆ ಬಂದರೆ ಅವಳನ್ನು ಸಮಾಜವೂ ಬಹಳ ಕೀಳಾಗಿ ನೋಡುತ್ತದೆ. ಮನೆಯ ಜನರಿಂದ ಹಾಗೂ ನೆರೆ ಹೊರೆಯ ಜನರಿಂದ ಏನೆಲ್ಲ ಅನ್ನಿಸಿಕೊಳ್ಳಬೇಕಾಗುತ್ತದೆ. ಹಾಗೂ ಕೇಳಿಸಿಕೊಳ್ಳಬೇಕಾಗುತ್ತದೆ. ಜೊತೆಗೆ ಯಾಕೆ ಹೀಗೆ ಅಂತ ನಿಮ್ಮ ಮೇಲೆ ನಿಮಗೆ ಕೋಪ ಬೇಜಾರು ಜಿಗುಪ್ಸೆ ಮನಸ್ತಾಪ ಬರುತ್ತದೆ. ನಿಮ್ಮಲ್ಲಿ ಕೂಡ ಈ ಸಮಸ್ಯೆ ಕಂಡು ಬಂದರೆ ಚಿಂತೆ ಮಾಡಬೇಡಿ. ಇವುಗಳನ್ನು ಪಾಲನೆ ಮಾಡಿ ಖಂಡಿತವಾಗಿ ಗರ್ಭಧಾರೆಯನ್ನು ಹೊಂದುವಿರಿ.

 

ಮೊದಲಿಗೆ ನಿಮ್ಮ ಪೀರಿಯಡ್ ಆದ ಹತ್ತು ದಿನಗಳ ನಂತರ ಅಂದರೆ ಅಂಡಾನೋತ್ಪತ್ತಿ ಆಗುವ ವೇಳೆಯಲ್ಲಿ ಅಥವಾ ಒವ್ಯುಲೇಶನ್ ಆಗುವ ಸಮಯದಲ್ಲಿ ಸೇರುವುದು ಬಹಳ ಸೂಕ್ತ. ಏಕೆಂದರೆ ನಿಮ್ಮ ಸಂಗಾತಿಯ ವೀರ್ಯಾಣು ನಿಮ್ಮ ಅಂಡಾವಿನೊಂದಿಗೆ ಸೇರಿಕೊಳ್ಳುವ ಅವಕಾಶಗಳು ಬಹಳ ಇರುತ್ತದೆ. ಮತ್ತು ಆರೋಗ್ಯಕರ ಡಯೆಟ್ ಅನ್ನು ಪಾಲನೆ ಮಾಡಿ. ಸಕ್ಕರೆ ಎಣ್ಣೆ ಕೊಬ್ಬು ಫ್ಯಾಟ್ ಇರುವ ಆಹಾರವನ್ನು ಆದಷ್ಟು ಕಡಿಮೆ ಮಾಡಿ. ನಿಮ್ಮ ಹಾರ್ಮೋನ್ ಪ್ರಮಾಣ ಕ್ರಮೇಣ ಹೆಚ್ಚುವಂತೆ ನೋಡಿಕೊಳ್ಳಿ.ಮುಖ್ಯವಾಗಿ ಹೇಳಬೇಕೆಂದರೆ ನಿಮ್ಮ ಗರ್ಭಕೋಶಕ್ಕೆ ರಕ್ತ ಸಂಚಾರ ಸರಿಯಾಗಿ ಆಗಲು ನೀವು ದಿನಕ್ಕೆ ಕನಿಷ್ಠ ಎಂಟು ಲೋಟ ನೀರು ಕುಡಿಯಿರಿ. ಅಂಡಾಣು ಉತ್ಪತ್ತಿ ಆಗಲು ಹಾಗೂ ಹಾರ್ಮೋನ್ ಗಳ ಉತ್ಪಾದನೆ ಆಗಲು ಕ್ಯಾರೆಟ್ ಜ್ಯೂಸ್ ಹಾಗೂ ಕಿತ್ತಳೆ ಜ್ಯೂಸ್ ಕುಡಿಯಿರಿ.ಇವುಗಳ ಪ್ರಮಾಣ ಹೆಚ್ಚಿದಷ್ಟೂ ಗುಪ್ತಚರ ಆಸಕ್ತಿ ಹಾರ್ಮೋನ್ ಗಳು ಹೆಚ್ಚು ಹೆಚ್ಚು ಬಿಡುಗಡೆ ಆಗುತ್ತವೆ ಇದರಿಂದ ಬೇಗನೆ ಗರ್ಭ ಧರಿಸಬಹುದು. ಇನ್ನೂ ನಿಮ್ಮ ತೂಕದ ಮೇಲೆ ಆದಷ್ಟು ಹೆಚ್ಚು ಗಮನ ಹರಿಸಿ. ಏಕೆಂದ್ರೆ ಅತಿಯಾದ ತೂಕ ಹೊಂದಿರುವವರು ಗರ್ಭ ಧರಿಸಲು ಬಲು ಕಷ್ಟವಾಗುತ್ತದೆ ಆದ್ದರಿಂದ ನೀವು ಆರೋಗ್ಯಯುತ ಡಯೆಟ್ ಪಾಲನೆ ಮಾಡಿ.

Leave a Reply

Your email address will not be published. Required fields are marked *