ನಮಸ್ತೇ ಪ್ರಿಯ ಓದುಗರೇ, ಕಣ್ಣುಗಳು ಆರೋಗ್ಯವಾಗಿ ಹಾಗೂ ಕಣ್ಣಿನ ದೃಷ್ಟಿ ತೀಕ್ಷ್ಣವಾಗಿ ಇದ್ದರೇ ನಾವು ಎಲ್ಲವನ್ನೂ ಕಾಣಬಹುದು. ಕಣ್ಣುಗಳು ಇಲ್ಲದೆ ಇದ್ದರೆ ಇಡೀ ಜಗತ್ತೇ ಕತ್ತಲು. ಇತ್ತೀಚಿನ ದಿನಗಳಲ್ಲಿ ಕಣ್ಣಿನ ಸಮಸ್ಯೆ ಅನ್ನುವುದು ಎಲ್ಲರಲ್ಲಿಯೂ ಕಾಡುವ ಸಮಸ್ಯೆ ಆಗಿದೆ. ಚಿಕ್ಕವರು ದೊಡ್ಡವರು ವಯಸ್ಸಿನ ಭೇದಭಾವ ಇಲ್ಲದೇ ಎಲ್ಲರಲ್ಲಿಯೂ ಕಾಡುವ ಸಮಸ್ಯೆಗಳಲ್ಲಿ ಒಂದಾಗಿದೆ. ಅದರಲ್ಲೂ ಚಿಕ್ಕ ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಕನ್ನಡಕ ಬರುತ್ತಿದೆ. ಹಾಗೂ ಕಣ್ಣಲ್ಲಿ ನೀರು ಬರುತ್ತದೆ. ಕಣ್ಣುಗಳು ಕೆಂಪು ಆಗುತ್ತವೆ. ಹೀಗೆ ಹಲವಾರು ಸಮಸ್ಯೆಗಳು ಕಣ್ಣಿನ ವಿಚಾರದಲ್ಲಿ ನಮ್ಮನ್ನು ಕಾಡುತ್ತವೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ಕಣ್ಣಿನ ಆರೋಗ್ಯದ ಬಗ್ಗೆ ಹಾಗೂ ಕನ್ನಡಕದಿಂದ ದೂರ ಉಳಿಯಲು ಹಾಗೂ ಕಣ್ಣಿನ ಇನ್ನಿತರ ಸಮಸ್ಯೆಗಳಿಂದ ಪಾರಾಗಲು ಈ ಮನೆಮದ್ದುಗಳನ್ನು ಉಪಯೋಗಿಸಿ. ಹೌದು ನಮ್ಮ ದೇಹದ ಪ್ರತಿಯೊಂದು ಅಂಗಗಳು ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ ಅದರಲ್ಲಿ ಕಣ್ಣುಗಳು ಕೂಡ ಒಂದಾಗಿವೆ. ಅವುಗಳನ್ನು ನಾವು ಕಾಪಾಡಿಕೊಂಡು ಹೋಗುವುದು ಉತ್ತಮ. ಅದಕ್ಕಾಗಿ ನೀವು ನಾವು ತಿಳಿಸುವ ಈ ಮನೆಮದ್ದುಗಳನ್ನು ಫಾಲೋ ಮಾಡಿದರೆ ಖಂಡಿತವಾಗಿ ನೀವು ಕಣ್ಣಿನ ದೃಷ್ಟಿ ಮಾಂಧ್ಯತೇ ಸಮಸ್ಯೆಯಿಂದ ಪಾರಾಗಬಹುದು. ಹಾಗಾದರೆ ಅವುಗಳನ್ನು ಒಂದೊಂದಾಗಿ ತಿಳಿಯೋಣ ಬನ್ನಿ.
ಮೊದಲಿಗೆ ಒಂದು ಬಟ್ಟಲಿನಲ್ಲಿ 5-6 ಬಾದಾಮಿಯನ್ನು ಹಾಕಿ. ಬಾದಾಮಿ ಬಗ್ಗೆ ಎಷ್ಟು ಹೇಳಿದರು ಸಾಲದು ಗೆಳೆಯರೇ, ಬಾದಾಮಿಯಲ್ಲಿ ಒಮೆಗಾ ತ್ರಿ ಫ್ಯಾಟಿ ಆಸಿಡ್ ಆಂಟಿ ಆಕ್ಸಿಡೆಂಟ್ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣಗಳು ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಆದರೆ ಮುಖ್ಯವಾಗಿ ಕಣ್ಣಿನ ಆರೋಗ್ಯವನ್ನು ಕಾಪಾಡಲು ಹಾಗೂ ಕಣ್ಣಿನ ಎಲ್ಲ ಸಮಸ್ಯೆಗಳನ್ನೂ ದೂರ ಮಾಡಲು ಬಾದಾಮಿ ತುಂಬಾನೇ ಸಹಾಯ ಮಾಡುತ್ತದೆ ಅಂತ ಹೇಳಿದರೆ ತಪ್ಪಾಗಲಾರದು.
ಎರಡನೆಯದಾಗಿ ಜೀರಿಗೆ ಪುಡಿ ಹಾಕಿಕೊಳ್ಳಿ. ಸಾಮಾನ್ಯವಾಗಿ ಜೀರಿಗೆ ಪ್ರತಿಯೊಬ್ಬರ ಮನೆಯಲ್ಲಿ ಸಿಗುತ್ತದೆ. ಇದು ಕಣ್ಣಿನ ಆರೋಗ್ಯವನ್ನು ಮತ್ತಷ್ಟು ವೃದ್ಧಿಸುತ್ತದೆ. ಜೀರಿಗೆಯಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿ ಅಡಗಿದೆ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ತದ ನಂತರ ಇದರಲ್ಲಿ ಒಂದು ಕಾಲು ಚಮಚದಷ್ಟು ಬಿಳಿ ಕಾಳು ಮೆಣಸು ಹಾಗೂ ಒಂದು ಕಾಲು ಸ್ಪೂನ್ ನಷ್ಟು ಸೋಂಪು ಕಾಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಸೋಂಪು ಕಾಳು ಜೀರ್ಣ ಕ್ರಿಯೆ ಉತ್ತೇಜನಕ್ಕೆ ಮಾತ್ರವಲ್ಲದೆ ಕಣ್ಣಿನ ಆರೋಗ್ಯಕ್ಕೆ ಕೂಡ ಸೂಕ್ತವಾಗಿದೆ. ಈ ಎಲ್ಲ ಸಾಮಗ್ರಿಗಳನ್ನು ಹಾಕಿ ಮಿಕ್ಸಿ ಜಾರಿಗೆ ಹಾಕಿ ಅವುಗಳನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಕೊನೆಯಲ್ಲಿ ಸ್ವಲ್ಪ ಬೆಲ್ಲವನ್ನು ಹಾಕಿ. ಈಗ ಇದು ಸಿದ್ಧವಾಗಿದೆ. ಇದನ್ನು ಹೇಗೆ ಸೇವನೆ ಮಾಡಬೇಕು ಅಂದರೆ, ಪ್ರತಿ ದಿನ ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲೀನಲ್ಲಿ ಈ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಎರಡು ಮೂರು ವಾರಗಳ ಕುಡಿಯುತ್ತಾ ಬನ್ನಿ. ನಿಮಗೆ ಗೊತ್ತಿಲ್ಲದ ಹಾಗೆ ನಿಮ್ಮ ಕಣ್ಣಿನ ಸಮಸ್ಯೆಗಳು ಬಹುಬೇಗನೆ ಮಂಗಮಾಯ ಆಗುತ್ತದೆ. ಸತತವಾಗಿ ಸೇವನೆ ಮಾಡುತ್ತಾ ಬನ್ನಿ ಒಂದು ತಿಂಗಳು ಅಥವಾ ಎರಡು ತಿಂಗಳ ವರೆಗೆ ನಿಮಗೆ ವ್ಯತ್ಯಾಸ ತಿಳಿದು ಬರುತ್ತವೆ. ಬಾದಾಮಿ ಜೀರಿಗೆ ಬೆಲ್ಲ ಸೋಂಪು ಕಾಳು ನಿಜಕ್ಕೂ ಕಣ್ಣಿನ ಆರೋಗ್ಯಕ್ಕೆ ದಿವ್ಯ ಔಷಧ ಗಳು ಅಂತ ಹೇಳಿದರೆ ತಪ್ಪಾಗಲಾರದು. ಇವೆಲ್ಲ ಸಾಮಗ್ರಿಗಳು ಮನೆಯಲ್ಲಿ ದೊರೆಯುವ ಸಾಮಗ್ರಿಗಳಾಗಿವೆ ನೀವು ಸುಲಭವಾಗಿ ಯಾವುದೇ ದುಡ್ಡು ಖರ್ಚು ಇಲ್ಲದೆ ಇದನ್ನು ಪುಡಿ ಮಾಡಿ ಸೇವನೆ ಮಾಡಿಕೊಂಡು ನಿಮ್ಮ ಕಣ್ಣುಗಳನ್ನು ಕನ್ನಡಕ ದಿಂದ ದೂರ ಉಳಿಸಿಕೊಳ್ಳಬಹುದು. ಶುಭದಿನ