ಸೊಂಟ ನೋವು,ಬೆನ್ನು ನೋವು,ಋತುಮತಿಯಾದ ಹೆಣ್ಣು ಮಕ್ಕಳಿಗೆ, ಬಾಣಂತಿಯರಿಗೆ, ರಕ್ತ ಹೀನತೆಗೆ ಶಕ್ತಿಶಾಲಿ ರಾಮಾಬಾಣ. ಅದು ಯಾವುದು ಗೊತ್ತೇ???

ಆರೋಗ್ಯ

ನಮಸ್ತೇ ಪ್ರಿಯ ಮಿತ್ರರೇ, ಅಳವಿ ಕಾಳುಗಳನ್ನು ಅಳವಿ ಬೀಜಗಳು ಎಂದು ಕರೆಯುತ್ತಾರೆ. ಇದು ನೋಡಲು ಎಳ್ಳಿನಂತೆ ಕಾಣುತ್ತದೆ. ಇದು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಈ ಒಂದು ಅಳವಿಯನ್ನು ಹಿಂದಿನ ಕಾಲದಲ್ಲಿ ಹಳ್ಳಿಗಳಲ್ಲಿ ಹೆಣ್ಣುಮಕ್ಕಳು ಮೈನೆರೆದಾಗ ಪಾಯಸ ಮಾಡಿಕೊಡುತ್ತಿದ್ದರು. ಹಾಗೂ ಬಾಣಂತಿಯರಿಗೂ ಕೂಡ ಇದನ್ನು ಸೇರಿಸಲು ಕೊಡುತ್ತಾರೆ. ಅಳವಿ ಬೀಜವನ್ನು ಪ್ರಾಚೀನ ಕಾಲದಿಂದಲೂ ಬಳಸುತ್ತಿದ್ದರು, ಮೊದಲಿನಿಂದಲೇ ಇದಕ್ಕೆ ಉತ್ತಮ ಸ್ಥಾನವನ್ನು ಕೊಡಲಾಗಿದೆ. ಉತ್ತರ ಕರ್ನಾಟಕದಲ್ಲಿ ಇದನ್ನು ಹೆಚ್ಚು ಉಪಯೋಗಿಸುತ್ತಾರೆ, ಮಹಿಳೆಯರಿಗೆ ಇದು ಹೆಚ್ಚು ಉಪಯುಕ್ತವಾಗಿದೆ. ಈ ಅಳವಿ ಬೀಜದಲ್ಲಿ ಅನೇಕ ಬಗೆಯ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಸಿ, ವಿಟಮಿನ್ ಎ, ಮತ್ತು ವಿಟಮಿನ್ ಡಿ ಗಳಿವೆ. ಇವುಗಳು ನಮ್ಮ ಆರೋಗ್ಯಕರ ಮುಖ್ಯವಾಗಿ ಬೇಕಾಗಿರುವ ಪೋಷಕಾಂಶಗಳು. ನೀವು ಯೋಚನೆ ಮಾಡಬಹುದು ಈ ಅಳವಿ ಬೀಜಗಳು ಎಲ್ಲಿ ಸಿಗುತ್ತದೆ ಎಂದು. ಈ ಅಳವಿ ಬೀಜವು ಗಿರಾಣಿ ಅಂಗಡಿಗಳಲ್ಲಿ ಹಾಗೂ ಆಯುರ್ವೇದ ಅಂಗಡಿಗಳಲ್ಲಿ ದೊರೆಯುತ್ತದೆ. ಹಾಗೂ ಅಳವಿ ಬೀಜವನ್ನು ಇಂಗ್ಲಿಷ್ನಲ್ಲಿ ಗಾರ್ಡನ್  ಸೀಡ್ಸ್  ಎಂದು ಕರೆಯುತ್ತಾರೆ. ಈ ಅಳವಿ ಪಾಯಸವನ್ನು ತಯಾರಿಸುವ ವಿಧಾನ ಹಾಗೂ ಸೇವಿಸುವ ವಿಧಾನ ಮತ್ತು ಇದರಿಂದ ಆಗುವ ಉಪಯೋಗಗಳನ್ನು ಒಂದು ಲೇಖನದಲ್ಲಿ ತಿಳಿಸಿಕೊಡುತ್ತೇವೆ ಬನ್ನಿ. ಹಾಗಾದ್ರೆ ಈ ಪಾಯಸವನ್ನು ಹೇಗೆ ತಯಾರಿಸುವುದು ಹಾಗೂ ಇದನ್ನು ಯಾರಿಗೆ ಕೊಡುತ್ತಿದ್ದರು ಮತ್ತು ಇದರಿಂದಾಗುವ ಲಾಭಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಬನ್ನಿ.

ಮೊದಲಿಗೆ ಪಾಯಸ ಹೇಗೆ ಮಾಡುವುದು ಅಂತ ಹೇಳುವುದಾದರೆ, ಮೊದಲಿಗೆ ಇದನ್ನು ಸಿದ್ದ ಪಡಿಸಲು ಇದಕ್ಕೆ ಬೇಕಾಗುವ ಸಾಮಗ್ರಿಗಳು ಒಂದು ಒಂದು ಲೋಟ ನೀರಿಗೆ ಒಂದು ಚಮಚ ಅಳವಿ ಬೀಜ ಮತ್ತು ಎರಡು ಚಮಚ ಬೆಲ್ಲ. ಮೊದಲಿಗೆ ಒಂದು ಪಾತ್ರೆಯಲ್ಲಿ ಒಂದು ಲೋಟ ನೀರು ಹಾಕಿ ಚೆನ್ನಾಗಿ ಕುದಿಸಿ. ಅದರಲ್ಲಿ ಅಳವಿ ಬೀಜವನ್ನು ಹಾಕಿ ಚೆನ್ನಾಗಿ ಕುದಿಸಿ ಅದು ಚೆನ್ನಾಗಿ ಬೆಂದು ಹೋದ ಮೇಲೆ ಅದರಲ್ಲಿ ಬೆಲ್ಲವನ್ನು ಹಾಕಿ. ಬಳಿಕ ಅದರಲ್ಲಿ ಶುಂಠಿ ಹಾಗೂ ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಎಲ್ಲವನ್ನು ಮಿಕ್ಸ್ ಮಾಡಿ ಸ್ವಲ್ಪ ಕಡಿಮೆ ಉರಿಯಲ್ಲಿ ಬೇಯಿಸಿ. ಈ ಎಲ್ಲ ಸಾಮಗ್ರಿಗಳು ಹೊಂದಿಕೊಂಡ ನಂತರ ಅಳವಿ ಬೀಜಗಳು ಅರಳುತ್ತವೆ. ಈ ಅಳವಿ ಬೀಜದಲ್ಲಿ 30%ರಷ್ಟು ಒಮೆಗಾ 3 ಕೊಬ್ಬಿನಾಂಶವಿದೆ ಮತ್ತು ಸಾಕಷ್ಟು ಕರಗದ ನಾರುಗಳಿವೆ.

 

ಈ ಪಾಯಸವನ್ನು ಮೊದಲಿನ ಕಾಲದಲ್ಲಿ ಮೈ ನೆರೆದ ಹೆಣ್ಣು ಮಕ್ಕಳಿಗೆ ಕೊಡುತ್ತಿದ್ದರು. ಹೆಣ್ಣು ಮಕ್ಕಳು ಋತುಮತಿ ಆದಾಗ ಅವರಲ್ಲಿ ಆಗುವ ಹೊಟ್ಟೆ ನೋವು ಅಧಿಕವಾದ ರಕ್ತಸ್ರಾವ ತಡೆಯಲು ಈ ಅಳವಿ ಪಾಯಸವನ್ನು ಮಾಡಿ ಕೊಡುತ್ತಿದ್ದರು. ಅಷ್ಟೇ ಅಲ್ಲದೇ ಬಾನಂತಿರಯರಿಗೆ ಕೂಡ ಕೊಡುತ್ತಿದ್ದರು. ಜೊತೆಗೆ ಇದು ಬೆನ್ನು ನೋವು ಸೊಂಟ ನೋವು ಮೈಕೈ ನೋವು ಎಲ್ಲವನ್ನು ತಡೆಯುವಲ್ಲಿ ಈ ಅಳವಿ ಬೀಜದ ಪಾಯಸ ತುಂಬಾನೇ ಸಹಾಯ ಮಾಡುತ್ತದೆ. ಅದರಲ್ಲಿ ಮುಖ್ಯವಾಗಿ ಮಹಿಳೆಯರಲ್ಲಿ ಆಗುವ ರಕ್ತಸ್ರಾವವನ್ನು ತಡೆಯುತ್ತದೆ. ಈ ಪಾಯಸವನ್ನು ಬೆಳಿಗ್ಗೆ ಸಂಜೆ ಎರಡು ತಿಂಗಳುವರೆಗೆ ಒಂದು ಲೋಟ ಸೇವನೆ ಮಾಡಬೇಕು. ಅಷ್ಟೇ ಅಲ್ಲದೇ ಈ ಪಾಯಸ ಸೇವನೆ ಇಂದ ಮಕ್ಕಳ ಬುದ್ಧಿಶಕ್ತಿ ಕೂಡ ಹೆಚ್ಚುತ್ತದೆ. ಚರ್ಮ ಸುಕ್ಕುಗಟ್ಟುವಿಕೆ ತಡೆಯುತ್ತದೆ ನೋಡಿದ್ರಲಾ ಅಳವಿ ಬೀಜದ ಉಪಯೋಗಗಳನ್ನು ಮಾಹಿತಿ ನಿಮಗೆ ಇಷ್ಟವಾದ ಅಳವಿ ಬೀಜವನ್ನು ಸೇವನೆ ಮಾಡಿ.
ಶುಭದಿನ.

Leave a Reply

Your email address will not be published. Required fields are marked *