ನೀವೇನಾದ್ರು ಒಂದು ಬಾರಿಯಾದ್ರು ಕಾಡು ಕೊತ್ತಂಬರಿ ಸೊಪ್ಪನ್ನು ಉಪಯೋಗಿಸಿದ್ದೀರಾ? ಹಾಗಾದ್ರೆ ಈ ರೋಗಗಳು ನಿಮ್ಮ ಹತ್ತಿರ ಸುಳಿಯಲ್ಲ!!!

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ಕೊತ್ತಂಬರಿ ಸೊಪ್ಪು ಸಾಮಾನ್ಯವಾಗಿ ನೀವು ಕೇಳಿರಬಹುದು. ಆದರೆ ಕಾಡು ಕೊತ್ತಂಬರಿ ಅನ್ನುವುದನ್ನು ನೀವು ಬಹುಶಃ ಕೇಳಿರಲಿಲ್ಲ ಬಹುದು ಗೆಳೆಯರೇ, ನಿಮಗೇನಾದರೂ ಕಾಡು ಕೊತ್ತಂಬರಿ ಸಿಕ್ಕರೆ ಬಿಡಬೇಡಿ. ಇದರಲ್ಲಿ ಅಡಗಿರುವ ಆರೋಗ್ಯದ ಗುಟ್ಟು ತಿಳಿದುಕೊಂಡರೆ ಅಚ್ಚರಿ ಪಡುವಿರಿ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಕಾಡು ಕೊತ್ತಂಬರಿ ಹೇಗೆ ಇರುತ್ತದೆ ಅದರ ಆರೋಗ್ಯಕರ ಗುಣಗಳ ಬಗ್ಗೆ ತಿಳಿಸಿಕೊಡುತ್ತೇವೆ ಬನ್ನಿ. ಕಾಡು ಕೊತ್ತಂಬರಿ ಹಳ್ಳಿಗಳಲ್ಲಿ ಈ ಸೊಪ್ಪನ್ನು ಯಾರೂ ಬೆಳೆಯುವುದು ಬೇಡ, ಅದೇ ನೆಲದಲ್ಲಿ ಬೆಳೆದಿರುತ್ತದೆ. ಕಾಡು ಕೊತ್ತಂಬರಿ ಗಿಡ ಹೆಚ್ಚಾಗಿ ಪಶ್ಚಿಮ ಘಟ್ಟದಲ್ಲಿ ಹಾಗೂ ಕರಾವಳಿ ಭಾಗದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದು ಕೊತ್ತಂಬರಿ ಸೊಪ್ಪಿಗಿಂತಲೂ ಅಧಿಕ ಸುವಾಸನೆ ಬೀರುವುದರಿಂದ ಇದನ್ನು ಬಿರಿಯಾನಿ, ಪಲಾವ್‌ ಮುಂತಾದ ಅಡುಗೆಯಲ್ಲಿ ಬಳಸುತ್ತಾರೆ. ಈ ಕಾಡು ಕೊತ್ತಂಬರಿ ಗಿಡದಲ್ಲಿ ತುಂಬಾನೇ ಆರೋಗ್ಯಕರ ಗುಣಗಳನ್ನು ಹೊಂದಿವೆ. ಕಾಡು ಕೊತ್ತಂಬರಿ ಸೊಪ್ಪಿನ ಔಷಧೀಯ ಗುಣಗಳು, ಇದನ್ನು ಬಳಸುವುದರಿಂದ ಏನಾದರೂ ಅಡ್ಡ ಪರಿಣಾಮವಿದೆಯೇ ಎಂದು ನೀವು ಭಯ ಪಡುವ ಅಗತ್ಯವಿಲ್ಲ. ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಬೀರುವುದಿಲ್ಲ. ಮೊದಲನೆಯದಾಗಿ ಈ ಕಾಡು ಕೊತ್ತಂಬರಿ ಗಿಡದಲ್ಲಿ ಆಂಟಿ ಆಕ್ಸಿಡೆಂಟ್ ಇರುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮತ್ತು

 

ಇದರಲ್ಲಿ ಆಂಟಿ ಫಂಗಲ್ ಮತ್ತು ಆಂಟಿ ಇನ್ಫ್ಲಾಮೆಟರಿ ಹಾಗೂ ಆಂಟಿ ಬಯೋಟಿಕ್ ಹಾಗೂ ಆಂಟಿ ವೈರಲ್ ಗುಣಗಳು ಇರುವುದರಿಂದ ಇದು ನಮ್ಮ ಅರೋಗ್ಯದ ದೃಷ್ಟಿಯಿಂದ ಬಹಳ ಉತ್ತಮದಾಯಕ ಅಂತ ಹೇಳಬಹುದು. ಇನ್ನೂ ಕಾಡು ಕೊತ್ತಂಬರಿ ಸೊಪ್ಪು ಸೋಂಕು ನಿವಾರಣೆಗೆ ಬಳಸಲಾಗುವುದು. ಒಂದು ಪ್ರಕಟವಾದ ವರದಿ ಪ್ರಕಾರ ಇದು ಗ್ರಾಮ್‌ ನೆಗೆಟಿವ್ ಮತ್ತು ಗ್ರಾಮ್‌ ಪಾಸಿಟಿವ್ ಬ್ಯಾಕ್ಟಿರಿಯಾ, ಕೆಲವೊಂದು ವೈರಸ್‌ಗಳು, ಯೀಸ್ಟ್‌ಗಳು ಇವುಗಳ ವಿರುದ್ಧ ಹೋರಾಡುತ್ತದೆ. ಅಲ್ಲದೆ ಇದು ಮನುಷ್ಯನ ದೇಹದಲ್ಲಿ ಆ್ಯಂಟಿಬಾಡಿ ಶಕ್ತಿಯನ್ನು ಹೆಚ್ಚಿಸುತ್ತದೆ. ಇನ್ನೂ ಈ ಕಾಡು ಕೊತ್ತಂಬರಿ ಯಾವ ಆಹಾರದಲ್ಲಿ ಬಳಸಬಹುದು ಅಂತ ಹೇಳುವುದಾದರೆ ನಾವು ಈ ಒಂದು ಕಾಡು ಕೊತ್ತಂಬರಿ ಗಿಡವನ್ನು ನಾವು ಮಸಾಲೆ ಮಜ್ಜಿಗೆಯನ್ನು ಮಾಡಬೇಕಾದರೆ ಕಾಡು ಕೊತ್ತಂಬರಿ ಶುಂಠಿ, ಮೆಣಸನ್ನು ಹಾಕಿ ಮಸಾಲೆ ಮಜ್ಜಿಗೆಯನ್ನು ಮಾಡಿ ಕುಡಿಯುತ್ತಾ ಬಂದರೆ ನಿಮ್ಮ ದೇಹವನ್ನು ತಂಪಾಗಿಡುತ್ತದೆ. ಇನ್ನೂ ಮುಖ್ಯವಾಗಿ ಹೇಳಬೇಕೆಂದರೆ, ಯೂರಿನ್ ಇನ್ಫೆಕ್ಷನ್ ಹಾಗೂ ಮೂತ್ರಕೋಶದ ಸಮಸ್ಯೆ ಮತ್ತು ಜಂತು ಹುಳುಗಳು ನಾಶ, ಕಿಡ್ನಿ ಸ್ಟೋನ್ ವೈಫಲ್ಯ ಎಲ್ಲವನ್ನು ನಿವಾರಿಸುವ ಗುಣಗಳನ್ನು ಈ ಕಾಡು ಕೊತ್ತಂಬರಿ ತುಂಬಾನೇ ಸಹಾಯ ಮಾಡುತ್ತದೆ. ಕಾಡು ಕೊತ್ತಂಬರಿ ಎಲೆ ಮತ್ತು ಬಾರ್ಲೆ ನೀರನ್ನು ಮಿಕ್ಸ್ ಮಾಡಿ ಕುಡಿದರೆ ಕಿಡ್ನಿ ಸ್ಟೋನ್ ಕಡಿಮೆ ಆಗುತ್ತದೆ. ಈ ಕಾಡು ಕೊತ್ತಂಬರಿ ಗಿಡವನ್ನು ಹಳ್ಳಿಗಳಲ್ಲಿ ಚಟ್ನಿ ಮಾಡುವಾಗ ಒಂದೆರಡು ಎಲೆಗಳನ್ನು ಹಾಕಿ ಚಟ್ನಿ ಮಾಡಿ ಸೇವನೆ ಮಾಡುತ್ತಾರೆ.

 

ಹಾಗೂ ಈ ಗಿಡವೂ ಹೆಚ್ಚು ತೇವಾಂಶ ಇರುವ ಜಾಗದಲ್ಲಿ ಹೆಚ್ಚು ಬೆಳೆಯುತ್ತದೆ. ನಿಮ್ಮ ದೇಹವನ್ನು ಇದು ತಂಪಾಗಿ ಇಡಲು ಸಹಾಯವನ್ನು ಮಾಡುತ್ತದೆ. ಹಾಗೆಯೇ ಕೆಲವರಿಗೆ ಮೂತ್ರಕೋಶದ ಸಮಸ್ಯೆ ಏನಾದರೂ ಇದ್ದರೆ ಮತ್ತು ಹೊಟ್ಟೆಯಲ್ಲಿ ಜಂತುಹುಳುಗಳ ಇದ್ದರೆ ಈ ಒಂದು ಸೊಪ್ಪಿನಿಂದ ಜ್ಯೂಸನ್ನು ಮಾಡಿ ಕುಡಿಯುವುದರಿಂದ ನಿಮ್ಮ ಮೂತ್ರಕೋಶದ ಸಮಸ್ಯೆ ಹಾಗೂ ಯೂರಿನ್ ಇನ್ಫೆಕ್ಷನ್ ಮತ್ತು ಜಂತು ಹುಳುಗಳನ್ನು ಕೂಡ ನಾಶ ಮಾಡುವ ಬೆಳೆಯುತ್ತದೆ ಕಾಡು ಕೊತ್ತಂಬರಿ ಗಿಡವನ್ನು ಒಂದು ಗಿಡ ನೆಟ್ಟರೆ ಸಾಕು ಇದು ಹಲವಾರು ಗಿಡಗಳಾಗಿ ಹಬ್ಬುತ್ತದೆ ಎಂದು ಹೇಳಬಹುದು. ಈ ಒಂದು ಕಾಡು ಕೊತ್ತಂಬರಿ ಗಿಡದಲ್ಲಿ ಬೀಜವು ಒಣಗಿ ಕೆಳಗೆ ಬಿದ್ದಾಗ ಆ ಬೀಜದಿಂದಲೇ ಮತ್ತೆ ಇನ್ನೊಂದು ಗಿಡ ಹುಟ್ಟುತ್ತದೆ ಎಂದು ಹೇಳಬಹುದು. ಕೆಲವರಿಗೆ ಬಾಯಿ ದುರ್ವಾಸನೆ ಬೀರುವ ಸಮಸ್ಯೆ ಇರುತ್ತದೆ. ಅದನ್ನು ಹೋಗಲಾಡಿಸಲು ಕೂಡ ಇದು ತುಂಬಾ ಸಹಕಾರಿ. ದಿನಾ ಬೆಳಗ್ಗೆ ಇದರ ಒಂದು ಎಸಳು ಜಗಿದರೆ ಸಾಕು, ಬಾಯಿ ದುರ್ವಾಸನೆ ಬೀರುವುದಿಲ್ಲ. ಇದರ ಸೊಪ್ಪು ತಿಂದಾಗ ಇದು ಬಾಯಿಯಲ್ಲಿರುವ ಸಲ್ಫರ್‌ ಅಂಶ ಹೋಗಲಾಡಿಸುವುದರಿಂದ ಬಾಯಿ ದುರ್ವಾಸನೆ ಬೀರುವುದಿಲ್ಲ. ಕಾಡು ಕೊತ್ತಂಬರಿ ಸೊಪ್ಪು ಬಳಸಿ ಅಸ್ತಮಾ ಕಾಯಿಲೆ ಉಲ್ಬಣವಾಗುವುದನ್ನು ತಡೆಗಟ್ಟಬಹುದು. ಇದನ್ನು ತುಳಸಿ, ಲೆಮನ್‌ಗ್ರಾಸ್‌, ನಕ್ಷತ್ರಮೊಗ್ಗು ಇವುಗಳ ಜೊತೆ ನೀರಿನಲ್ಲಿ ಹಾಕಿ ಕುದಿಸಿ ಕುಡಿದರೆ ತುಂಬಾ ಒಳ್ಳೆಯದು.

Leave a Reply

Your email address will not be published. Required fields are marked *