ಅಬ್ಬಾ!!! ಮರಗೆಣಸು ಬೇಯಿಸಿ ತಿಂದರೆ ನಿಜಕ್ಕೂ ಇಷ್ಟೊಂದು ಪ್ರಯೋಜನಗಳು ಸಿಗುತ್ತವೆಯೇ??? ಹೌದು ಇಲ್ಲಿದೆ ನೋಡಿ.

ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ಮಾರುಕಟ್ಟೆಯಲ್ಲಿ ಮರಗೆಣಸು ದೊರೆಯುವುದು ಬೆರಳಣಿಕೆಯಷ್ಟು. ಹೌದು ಇದು ಸಿಗುವುದು ತುಂಬಾನೇ ಅಪರೂಪ ಅಂತ ಹೇಳಬಹುದು. ಆದರೆ ಇದು ನಿಮಗೆ ಅಪ್ಪಿ ತಪ್ಪಿ ಕಣ್ಣಿಗೆ ಕಾಣಿಸಿದರೆ ಮನೆಗೆ ತೆಗೆದುಕೊಂಡು ಸೇವನೆ ಮಾಡುವುದನ್ನು ಮರೆಯಬೇಡಿ. ಮರಗೆಣಸು ಬೇಯಿಸಿದ ನಂತರ ತುಂಬಾ ರುಚಿಕರವಾಗಿ ಮತ್ತು ಅಷ್ಟೇ ಆರೋಗ್ಯ ಭರಿತವಾಗಿ ನಮಗೆ ಒಳ್ಳೆಯ ಪ್ರಯೋಜನಗಳನ್ನು ತಂದು ಕೊಡುತ್ತವೆ ಅಂತ ಹೇಳಿದರೆ ತಪ್ಪಾಗಲಾರದು. ಹೌದು ಮರಗೆಣಸು ಮೊದಲಿನ ಕಾಲದಲ್ಲಿ ಜನರು ತುಂಬಾನೇ ಸೇವನೆ ಮಾಡುತ್ತಿದ್ದರು. ನಾವು ಪುಸ್ತಕದಲ್ಲಿ ಓದಿರಬಹುದು ಹಾಗೂ ಶಿಕ್ಷಕರಿಂದ ಕೇಳಿರಬಹುದು ಮೊದಲಿನ ಕಾಲದ ಜನರು ಗಡ್ಡೆ ಗೆಣಸುಗಳನ್ನು ತಿಂದು ಜೀವನ ಮಾಡುತ್ತಿದ್ದರು.
ಹಾಗೂ ಅವರಿಗೆ ಯಾವುದೇ ರೀತಿಯ ರೋಗಗಳು ಕಾಯಿಲೆಗಳು ಅನಾರೋಗ್ಯದ ಸಮಸ್ಯೆಗಳು ಹತ್ತಿರ ಕೂಡ ಸುಳಿಯುತ್ತಿರಲಿಲ್ಲ. ಅಷ್ಟೊಂದು ಶಕ್ತಿಯುತವಾಗಿದ್ದರೂ ಮೊದಲಿನ ಕಾಲದ ಜನರು. ಕಾರಣ ಈ ಗಡ್ಡೆ ಗೆಣಸುಗಳ ಸೇವನೆ ಹಣ್ಣು ಹಂಪಲುಗಳ ಸೇವನೆಯೇ ಕಾರಣ ಅಂತ ಹೇಳಬಹುದು. ಇನ್ನು ತಮ್ಮ ದೇಹ ಸದೃಢತೆಯ ವಿಚಾರದಲ್ಲಿ ಸಹ ನಮಗೆ ಹೋಲಿಸಿದರೆ ತುಂಬಾ ಶಕ್ತಿವಂತರಾಗಿ ಕಾಣುತ್ತಿದ್ದರು.ಆದರೆ ಈಗಿನ ಆಧುನಿಕ ಕಾಲದ ಜೀವನ ಶೈಲಿ ಆಹಾರ ಪದ್ಧತಿ ಎಲ್ಲವೂ ಬದಲಾಗಿದೆ. ಅಷ್ಟೇ ಅಲ್ಲದೇ ಇದು ನಮ್ಮ ಅರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ವಿಷಯ ನಮಗೆ ಗೊತ್ತಿದ್ದರೂ ಕೂಡ ನಾವು ಅವುಗಳತ್ತ ಮೊರೆ ಹೋಗುತ್ತೇವೆ.

 

ಇದು ಈಗಿನ ಯುವಜನತೆ ಮಾಡುವ ದೊಡ್ಡದಾದ ತಪ್ಪು ಅಂತ ಹೇಳಬಹುದು. ಇಂದು ಹಲವಾರು ರೋಗ ರುಜಿನಗಳು ಚಿಕ್ಕ ವಯಸ್ಸಿಗೆ ಬಂದು ಮನುಷ್ಯರ ಇರುವ ಆಯಸ್ಸನ್ನು ಕಡಿಮೆ ಮಾಡುತ್ತಿವೆ. ನಮ್ಮ ಹಿರಿಯರು ಸೇವನೆ ಮಾಡಿಕೊಂಡು ಬಂದಿರುವ ಆಹಾರವನ್ನು ನಾವು ಈಗಲೂ ಕೂಡ ನಮ್ಮ ಆಹಾರದಲ್ಲಿ ಅಳವಡಿಸಿಕೊಂಡರೆ ನಮ್ಮ ಆರೋಗ್ಯಕ್ಕೆ ಯಾವುದೇ ಹಾನಿ ಆಗುವುದಿಲ್ಲ. ಹಾಗೂ ಅವುಗಳಿಂದ ಯಾವುದೇ ಅಡ್ಡ ಪರಿಣಾಮಗಳು ಕೂಡ ಬೀರುವುದಿಲ್ಲ. ಅಂಥಹ ಅದ್ಭುತವಾದ ಆಹಾರದಲ್ಲಿ ಮರಗೆಣಸು ಕೂಡ ಒಂದು ಹೇಳಬಹುದು. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಮರಗೆಣಸು ಸೇವನೆಯಿಂದಾಗುವ ನೂರೆಂಟು ಪ್ರಯೋಜನಗಳನ್ನು ತಿಳಿಸಿಕೊಡುತ್ತೇವೆ ಬನ್ನಿ. ಮೊದಲನೆಯ ಪ್ರಯೋಜನ ಕಣ್ಣಿನ ಆರೋಗ್ಯಕ್ಕೆ ಬಹಳ ಉತ್ತಮ. ಹೇಗೆಂದರೆ ಮರಗೆಣಸನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಒಳ್ಳೆಯದು. ಇದರಲ್ಲಿ ವಿಟಮಿನ್ ಎ ಅಂಶ ಅಧಿಕವಾಗಿರುವುದರಿಂದ ಕಣ್ಣು ಮಂಜಾಗುವ ಸಮಸ್ಯೆ ದೂರವಾಗುತ್ತದೆ. ಇನ್ನೂ ಹೊಟ್ಟೆ ಹಸಿವು ಹೆಚ್ಚುತ್ತದೆ.

 

ಕೆಲವರು ಹೆಚ್ಚಾಗಿ ಆಹಾರವನ್ನು ಸೇವನೆ ಮಾಡುವುದರಿಂದ ಗ್ಯಾಸ್ಟ್ರಿಕ್ ಅಸಿಡಿಟಿ ಸಮಸ್ಯೆ ಎದುರಾಗಿ ಮಲಬದ್ಧತೆ ಸಮಸ್ಯೆ ಉಂಟಾಗಿ ಅವರಿಗೆ ಹಸಿವು ಅನ್ನುವುದೇ ಆಗುವುದಿಲ್ಲ. ಆಹಾರ ಸೇವನೆ ಮಾಡಬೇಕೆಂದು ಅನ್ನಿಸುವುದಿಲ್ಲ. ಅಂಥವರು ಆಹಾರದಲ್ಲಿ ಮರಗೆಣಸು ಚಿಕ್ಕ ಚಿಕ್ಕ ತುಂಡುಗಳನ್ನು ಸೇರಿಸಿಕೊಂಡರೆ ಈ ಎಲ್ಲ ಸಮಸ್ಯೆಗಳಿಂದ ಪಾರಾಗಬಹುದು. ಇದು ಜೀರ್ಣಶಕ್ತಿ ಹೆಚ್ಚಾಗಿ ಹೊಟ್ಟೆ ಹಸಿವು ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ. ಮೈಗರೆನ್ ಸಮಸ್ಯೆಯನ್ನು ಹೋಗಲಾಡಿಸಲು ಮರಗೆಣಸು ತುಂಬಾನೇ ಸಹಾಯ ಮಾಡುತ್ತದೆ. ತಲೆನೋವು ಬಂದರೂ ಅಂದರೆ ಯಾಕಪ್ಪಾ ಈ ತಲೆನೋವು ಬಂತು ಅಂತ ಅನ್ನಿಸುತ್ತದೆ ಅದರ ನೋವು ಅನುಭವಿಸಿದವರಿಗೆ ಮಾತ್ರ ಗೊತ್ತು ಗೆಳೆಯರೇ ಅಲ್ಲವೇ! ಅಧ್ಯಯನದ ಪ್ರಕಾರ, ಆಗಾಗ ಕಾಡುವ ತಲೆ ನೋವಿನ ಸಮಸ್ಯೆ ಇದ್ದವರು ಮರಗೆಣಸನ್ನು ಬೇಯಿಸಿ ಸೇವನೆ ಮಾಡಿದರೆ ಅದರಿಂದ ಪರಿಹಾರ ಕಾಣಬಹುದು ಎಂದು ಹೇಳಲಾಗಿದೆ. ಇನ್ನೂ ಕೊನೆಯದಾಗಿ ದೇಹದ ತೂಕವನ್ನು ಇಳಿಸಿಕೊಳ್ಳಲು ಮರಗೆಣಸು ತುಂಬಾನೇ ಸಹಾಯ ಮಾಡುತ್ತದೆ.ಇದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ. ನಿಜಕ್ಕೂ ಮರಗೆಣಸು ತಿನ್ನುವುದರಿಂದ ನಮಗೆ ಹಲವಾರು ಬಗೆಯ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಹೌದು ಮಾರುಕಟ್ಟೆಯಲ್ಲಿ ಸಿಕ್ಕರೆ ಮಿಸ್ ಮಾಡದೇ ಸೇವನೆ ಮಾಡಿ. ಶುಭದಿನ.

Leave a Reply

Your email address will not be published. Required fields are marked *