ನಮಸ್ತೇ ಪ್ರಿಯ ಓದುಗರೇ, ನಮ್ಮ ಆರೋಗ್ಯವೂ ಹದಗೆಟ್ಟಾಗ ನಾವು ವೈದ್ಯರ ಹತ್ತಿರ ತಪಾಸಣೆಗೆ ಹೋದಾಗ ಅವರು ಮಾತ್ರೆಗಳನ್ನು ನೀಡುವ ಮುನ್ನ ನೀವು ನಿತ್ಯವೂ ಬೆಳಿಗ್ಗೆ ವ್ಯಾಯಾಮವನ್ನು ಮಾಡಿ ಎಂದು ಹೇಳುತ್ತಾರೆ. ಹೌದು ವ್ಯಾಯಾಮ ಮಾಡುವುದರಿಂದ ಎಂಥಹ ಅನಾರೋಗ್ಯವನ್ನು ಕೂಡ ನಾವು ಮಾತ್ರೆಗಳು ಇಲ್ಲದೆ ಕಡಿಮೆ ಮಾಡಿಕೊಳ್ಳಬಹುದು. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಬೆಳಿಗ್ಗೆ ವಾಕಿಂಗ್ ಮಾಡುವುದರಿಂದ ಆಗುವ ಲಾಭಗಳ ಬಗ್ಗೆ ತಿಳಿಸಿ ಕೊಡುತ್ತೇವೆ ಬನ್ನಿ.
ಪ್ರಕೃತಿ ಹಾಗೂ ಹಿರಿಯರು ವೈದ್ಯರು ಹೇಳುವ ಮಾತಿದು ಬೇಗನೆ ಮಲಗಿ ಬೇಗನೆ ಏಳುವುದು. ಹಾಗೂ ಕೆಲವು ಧರ್ಮಗಳು ಬೆಳಿಗ್ಗೆ ಬೇಗನೆ ಎದ್ದು ದೇವರಿಗೆ ಪೂಜೆ ಮಾಡುವುದು ಕೂಡ ಉಂಟು. ಆದರೆ ನಮ್ಮ ಯುವಜನತೆ ಇದರ ವಿರುದ್ಧ ಸಾಗುತ್ತಿದೆ. ರಾತ್ರಿವಿಡಿ ಲೇಟಾಗಿ ಎಚ್ಚರವಿದ್ದು ಬೆಳಿಗ್ಗೆ ಉತ್ತಮವಾದ ಆರೋಗ್ಯಕ್ಕೆ ಸೂರ್ಯನ ಬೆಳಕು ಕಾಣದೆ ಜಿಮ್ ಮಾಡಲು ಮುಂದಾಗುತ್ತಾರೆ. ಆದರೆ ಇದು ಕೊಂಚ ಅವರಿಗೆ ಸಮಾಧಾನ ನೀಡಿದರು ಕೂಡ ಮೂಲತಃ ಆರೋಗ್ಯವನ್ನು ವೃದ್ಧಿಸುವುದಿಲ್ಲ. ನಿಜವಾದ ಆರೋಗ್ಯವಂತರು ಪ್ರಕೃತಿಯ ಜೊತೆಗೆ ನಡೆಯುತ್ತಾರೆ. ಬೆಳಿಗ್ಗೆ ಸೂರ್ಯನ ಜೊತೆಗೆ ಬೆಳಿಗ್ಗೆ ನಡೆಯುವುದು ದೇಹಕ್ಕೆ ಸೊಗಸು ಮನಸ್ಸಿಗೆ ನೆಮ್ಮದಿ ಹಾಗೂ ಆರೋಗ್ಯಕ್ಕೆ ಒಳ್ಳೆಯದನ್ನು ನೀಡುವ ಉತ್ತಮವಾದ ಚಟುವಟಿಕೆ ಆಗಿದೆ.
ಹೌದು ನಮ್ಮ ಆರೋಗ್ಯ ನಮ್ಮ ನಡಿಗೆಯಲ್ಲಿ ಇದೆ. ನಾವು ನಡೆಯುವುದರಿಂದ ನಮ್ಮ ಸ್ನಾಯುಗಳು ಬಲಗೊಳ್ಳುತ್ತವೆ. ಕಣ್ಣುಗಳು ಮತ್ತು ತೊಡೆಗಳು ಸಧೃಡ ಆಗುತ್ತವೆ. ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಹಾಗೂ ಚೈತನ್ಯವನ್ನು ತುಂಬಿಸುತ್ತದೆ. ಹಾಗೂ ಮುಖ್ಯವಾಗಿ ಹೃದಯಕ್ಕೆ ರಕ್ತ ಸಂಚಾರ ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತವೆ. ಹಾಗೂ ಹೃದಯದ ಬಡಿತ ಮತ್ತು ಪಂಪ್ ಮಾಡಲು ಸಹಾಯ ಮಾಡುತ್ತದೆ. ನರಗಳು ಹಿಗ್ಗುವುದು ಕುಗ್ಗುಗುದು ಸರಿಯಾಗಿ ನಡೆಯುತ್ತವೆ. ಹೃದಯದ ಆರೋಗ್ಯವನ್ನು ವೃದ್ಧಿಸುತ್ತದೆ. ಹೌದು ನಾವು ವಾಕಿಂಗ್ ಮಾಡುವಾಗ ದೀರ್ಘವಾದ ಶ್ವಾಸ ವನ್ನು ತೆಗೆದುಕೊಳ್ಳುತ್ತೇವೆ. ಇದರಿಂದ ನಮಗೆ ಶುದ್ದವಾದ ಆಮ್ಲಜನಕ ಪೂರೈಕೆ ಆಗುತ್ತದೆ. ದೈಹಿಕ ಆರೋಗ್ಯ ಮಾನಸಿಕ ಆರೋಗ್ಯ ಮತ್ತು ಭಾವನಾತ್ಮಕ ಆರೋಗ್ಯದಿಂದ ಹೊರಗಡೆ ಬರಬಹುದು. ಇವೆಲ್ಲವನ್ನೂ ಸಮತೋಲನದಲ್ಲಿ ಇಡಲು ಸಹಾಯ ಮಾಡುತ್ತದೆ. ಬೆಳಗಿನ ವಾಕಿಂಗ್ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ರಕ್ತನಾಳಗಳಿಗೆ ಆಮ್ಲಜನಕ ಚೆನ್ನಾಗಿ ದೊರೆತು ರಕ್ತನಾಳಗಳಿಗೆ ವಿಶ್ರಾಂತಿ ಸಿಗುತ್ತದೆ. ಸಕ್ಕರೆ ಕಾಯಿಲೆ ಇರುವವರಿಗೆ ವಾಕಿಂಗ್ ಮಾಡುವುದು ಒಂದು ಉತ್ತಮ ಹವ್ಯಾಸ.
ಇದು ಸಕ್ಕರೆಯ ಪ್ರಮಾಣವನ್ನು ಕಡಿಮೆ ಆಗುತ್ತದೆ. ವಾಕಿಂಗ್ ಮಾಡುವುದು ಮಧುಮೇಹಿಗಳಿಗೆ ನಿಜಕ್ಕೂ ಸೂಕ್ತ. ಮಾತ್ರೆಗಳು ಇಲ್ಲದೇ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಅಷ್ಟೊಂದು ಪವರ್ ಫುಲ್ ಶಕ್ತಿ ಈ ವಾಕಿಂಗ್ ನಲ್ಲಿ ಅಡಗಿದೆ. ಆದ್ದರಿಂದ ನಿಯಮಿತವಾಗಿ ವಾಕಿಂಗ್ ಮಾಡುವುದು ಒಳ್ಳೆಯದು. ಆದ್ದರಿಂದ ವೈದ್ಯರು ಮಧುಮೇಹಿಗಳಿಗೆ ವಾಕಿಂಗ್ ಮಾಡು ಅಂತ ಸಲಹೆಯನ್ನು ನೀಡುತ್ತಾರೆ. ನಮ್ಮ ದೇಹವು ಫೀಟ್ ಆಗಿ ಇರಲು ತುಂಬಾನೇ ಸಹಾಯ ಮಾಡುತ್ತದೆ. ತೂಕ ಕಡಿಮೆ ಮಾಡಿಕೊಳ್ಳುವುದು ಎಷ್ಟು ಕಠಿಣವೋ ಅಷ್ಟೇ ಅದನ್ನು ಏರಿಸಿ ಕೊಳ್ಳುವುದು ಕೂಡ ಅಷ್ಟೇ ದೊಡ್ಡದಾದ ಕೆಲಸವಾಗಿದೆ. ವಾಕಿಂಗ್ ಮಾಡುವುದರಿಂದ ಹೊಟ್ಟೆಯ ಸುತ್ತ ಶೇಖರಣೆ ಆದ ಕೊಬ್ಬನ್ನು ಕರಗಿಸುತ್ತದೆ.ಪ್ರತಿ ನಿತ್ಯವೂ ವಾಕಿಂಗ್ ಮಾಡುವುದರಿಂದ ಜಿಮ್ ಮಾಡುವುದು ವಾಕಿಂಗ್ ಮಾಡುವುದು ಸೈಕ್ಲಿಂಗ್ ಮಾಡುವುದು ಒಳ್ಳೆಯದು. ವಾಕಿಂಗ್ ಅನ್ನುವುದು ದೀರ್ಘಾಯುಷ್ಯದ ಗುಟ್ಟು ಆಗಿದೆ. ಅದರಿಂದ ಬೆಳಿಗ್ಗೆ ಸೂರ್ಯನ ಕಿರಣಗಳು ನೇರವಾಗಿ ನಡೆಯಿರಿ ಇದರಿಂದ ವಿಟಮಿನ್ ಡಿ ಕೂಡ ಸಿಗುತ್ತದೆ. ವಾಕಿಂಗ್ ಅನ್ನುವುದು ಮಾನಸಿಕವಾಗಿ ದೈಹಿಕವಾಗಿ ಆರೋಗ್ಯವನ್ನು ವೃದ್ಧಿಸುತ್ತದೆ.